ಗದಗ, ಸೆಪ್ಟೆಂಬರ್ 08: ದೇಶದೆಲ್ಲೆಡೆ ಗಣೇಶ ಚತುರ್ಥಿ (Ganesh Chaturthi) ಹಬ್ಬದ ಸಡಗರ ಜೋರಾಗಿದೆ. ಮೋದಕ ನೈವೇದ್ಯ ಅಂದ್ರೆ ವಿಘ್ನವಿನಾಯಕನಿಗೆ ಬಲು ಇಷ್ಟ. ಹೀಗಾಗಿ ಎಲ್ಲಡೇ ಲಂಭೋದರನಿಗೆ ಇಷ್ಟವಾದ ಮೋದಕ ನೈವೇದ್ಯ ಅರ್ಪಿಸ್ತಾರೆ. ಆದರೆ ಈ ನಗರದಲ್ಲಿ ಕೆಲ ಕುಟುಂಬಗಳು ಗಣೇಶನಿಗೆ ನಾನ್ ವೆಜ್ ನೈವೇದ್ಯ ಅರ್ಪಿಸುವ ಮೂಲಕ ಭಕ್ತಿ ಮೆರೆದಿದ್ದಾರೆ. ಮಟನ್ ಕೈಮಾ ಸೇರಿದಂತೆ ಮಟನ್, ಚಿಕನ್ ಪದಾರ್ಥ ಮಾಡಿ ವಿನಾಯಕನಿಗೆ ಅರ್ಪಿಸಿದ್ದಾರೆ.
ಹೌದು ಎಸ್.ಎಸ್.ಕೆ ಸಮಾಜದ ಕುಟುಂಬಗಳಿಂದ ಗಣೇಶನಿಗೆ ನಾನ್ ವೆಜ್ ನೈವೇದ್ಯ ಅರ್ಪಿಸಲಾಗುತ್ತೆ. ಈ ವಿಶಿಷ್ಠ ಆಚರಣೆ ಕಂಡು ಬಂದಿದ್ದು, ಗದಗ ನಗರದ ಕಾನತೋಟ್ ಓಣಿಯ ಪರಶುರಾಮಸಾ ಪವಾರ, ನಾರಾಯಣಸಾ ಪವಾರ ಮನೆಗಳಲ್ಲಿ. ಗಣೇಶ ಚತುರ್ಥಿಯಂದು ಎಸ್.ಎಸ್.ಕೆ ಸಮಾಜ ಬಾಂಧವರ ಮನೆಗಳಲ್ಲಿ ವಿನಾಯಕನ್ನು ಪ್ರತಿಷ್ಠಾಪಿಸಲಾಗುತ್ತೆ. ಎರಡನೇ ದಿನವಾದ ಇಂದು ಇಲಿ ಹಬ್ಬ ಅಂತ ಆಚರಣೆ ಮಾಡುತ್ತಾರೆ.
ಇದನ್ನೂ ಓದಿ: ರಾಜ್ಯಾದ್ಯಂತ ಸಂಭ್ರಮದ ಗಣೇಶೋತ್ಸವ; ಪ್ರಮುಖ ದೇವಸ್ಥಾನಗಳಲ್ಲಿ ಹೇಗಿತ್ತು ವಿಘ್ನ ನಿವಾರಕನ ಪೂಜೆ
ಏಕದಂತನಿಗೆ ಮೋದಕ, ವಿವಿಧ ನಮೂನೆಯ ಖ್ಯಾದ್ಯಗಳ ನೈವೇದ್ಯ ಅರ್ಪಿಸಿ ಪೂಜೆ ಮಾಡ್ತಾರೆ. ಆದ್ರೆ, ಗದಗಲ್ಲೊಂದು ಕುಟುಂಬ ವಿಘ್ನೇಶ್ವರನಿಗೆ ನಾನ್ ವೆಜ್ ನೈವೇದ್ಯ ಅರ್ಪಿಸ್ತಾರೆ. ಗಣೇಶನಿಗೆ ಭರ್ಜರಿ ನಾನ್ ವೆಜ್ ನೈವೇದ್ಯ ಅರ್ಪಿಸಿ ಭಕ್ತಿ ತೋರ್ತಾರೆ. ಎಸ್.ಎಸ್.ಕೆ ಸಮಾಜದ ಈ ಮನೆಗಳಲ್ಲಿ ತಲತಲಾಂತರದಿಂದ ಆಚರಣೆ ಮಾಡಿಕೊಂಡು ಬರಲಾಗುತ್ತಿದೆಯಂತೆ. ಎರಡನೇ ದಿನವಾದ ಇಂದು ಇಲಿ ಹಬ್ಬದ ನಿಮಿತ್ಯ ಮನೆಗಳಲ್ಲಿ ಮಟನ್, ಚಿಕನ್ ಖ್ಯಾದ್ಯಗಳು ಮಾಡಿ ನೈವೇದ್ಯ ಅರ್ಪಿಸುತ್ತಾರೆ. ಮಹಿಳೆಯರು ಇಂದು ಬೆಳ್ಳಗ್ಗೆ ಎದ್ದು ಮಟನ್, ಚಿಕನ್ ಐಟಂಗಳು ಮಾಡುತ್ತಾರೆ. ವಿಶೇಷ ಅಂದ್ರೆ ಮಟನ್ನಲ್ಲಿ ತಯಾರಿಸಿದ ಖ್ಯಾದ್ಯದಲ್ಲಿ ದೀಪ ಹಚ್ಚಿ ಗಣೇಶನಿಗೆ ಆರತಿ ಮಾಡುತ್ತಾರೆ.
ಶ್ರಾವಣ ಮಾಸದ ಆರಂಭಕ್ಕೂ ಮುನ್ನ ಈ ಕುಟುಂಬಗಳಲ್ಲಿ ನಾನ್ ವೆಜ್ ಸೇವನೆ ತ್ಯಾಗ ಮಾಡ್ತಾರೆ. ಶ್ರಾವಣ ಮಾಸ ಕಟ್ಟುನಿಟ್ಟಾಗಿ ಪಾಲನೆ ಮಾಡ್ತಾರಂತೆ. ಗಣೇಶ ಚತುರ್ಥಿಯಿಂದ ಗಣೇಶನ ಪ್ರತಿಷ್ಠಾಪನೆ ಮಾಡ್ತಾರೆ. ಅಂದು ಮೋದಕ, ವಿವಿಧ ನಮೂನೆಯ ಲಾಡು ತಯಾರಿಸಿ ನೈವೇದ್ಯ ಅರ್ಪಿಸ್ತಾರೆ. ಮರುದಿನ ಇಲಿ ಹಬ್ಬ ಅಂತ ಆ ಚರಣೆ ಮಾಡ್ತಾರೆ. ಇಂದು ಗಣೇಶನ ವಾಹನ ಇಲಿಗೆ ಪೂಜೆ ಮಾಡ್ತಾರೆ. ಇಲಿಗೆ ಪಂಚ ಫಳಾರ ಅರ್ಪಿಸ್ತಾರೆ. ಗಣೇಶನಿಗೆ ನಾನ್ ವೆಜ್ ನೈವೇದ್ಯ ಅರ್ಪಿಸುವ ಮೂಲಕ ಒಂದು ತಿಂಗಳ ಶ್ರಾವಣ ವ್ರತಕ್ಕೆ ಇಂದು ಬ್ರೇಕ್ ಹಾಕ್ತಾರೆ.
ಇದನ್ನೂ ಓದಿ: ವಿಜಯಪುರ ಪಾಲಿಕೆ ಕಟ್ಟಡದಲ್ಲಿ ಮಧ್ಯರಾತ್ರಿ ಗಣೇಶ ಪ್ರತಿಷ್ಠಾಪನೆ, ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ದೌಡು
ಮನೆಗಳಲ್ಲಿ ಇಂದು ಮಟನ್ ಕೈಮಾ ಸೇರಿದಂತೆ ವಿವಿಧ ನಾನ್ ವೆಜ್ ಐಟಂಗಳು ತಯಾರಿಸಿದರೆ. ಇಡೀ ಓಣಿಯಲ್ಲಿ ಘಮಘಮಿಸುತ್ತಿತ್ತು. ಅಡುಗೆ ಬಳಿಕ ಎಲ್ಲ ವಿವಿಧ ನಾನ್ ವೆಜ್ ಖ್ಯಾದ್ಯಗಳು ಗಣೇಶನಿಗೆ ನೈವೇದ್ಯವಾಗಿ ಅರ್ಪಿಸ್ತಾರೆ. ಮನೆ ಮಂದಿಯಲ್ಲಾ ಸೇರಿ ಗಣೇಶನಿಗೆ ಮಂಗಳಾರತಿ ಮಾಡ್ತಾರೆ. ಶತಮಾನಗಳಿಂದ ನಮ್ಮ ಹಿರಿಯರು ಆಚರಿಸಿಕೊಂಡು ಬಂದ ಸಂಪ್ರದಾಯ ನಾವು ಮಾಡ್ತಾಯಿದ್ದೇವೆ ಅಂತ ಹಿರಿಯರು ಹೇಳುತ್ತಾರೆ.
ಇಂದು ಮಾಡಿದ ಮಾಂಸದೂಟದ ರುಚಿಯೇ ಸಖತ್ ಆಗಿ ಇರುತ್ತೆ. ಇವತ್ತಿನ ದಿನ ಹೊಸದಾಗಿ ಮದುವೆಯಾದ ಮನೆ ಮಗಳು ಹಾಗೂ ಅಳಿಯನಿಗೆ ಮನೆಗೆ ಕರೆಸಿ ಊಟ ಮಾಡಿಸುವ ಸಂಪ್ರದಾಯ ಸಮೂಹಿಕವಾಗಿ ಕಟುಂಬಸ್ಥರು ಕುಳಿತು ವೆರೈಟಿ ನಾನ್ ವೆಜ್ ಖ್ಯಾದ್ಯಗಳು ಸವಿಯುತ್ತಾರೆ. ಈ ದಿನ ಅಂದ್ರೆ ಮನೆಯ ಹೆಣ್ಣು ಮಕ್ಕಳಿಗೆ ಎಲ್ಲಿಲ್ಲದ ಖುಷಿ. ಯಾವಾಗ ಇಲಿ ಹಬ್ಬ ಬರುತ್ತೆ. ಯಾವಾಗ ತವರು ಮನೆಗೆ ಹೋಗ್ತೀವಿ. ಯಾವಾಗ ಇಲಿ ಹಬ್ಬ ಮಾಡಿ ಮಾಂಸದೂಟ ಸವಿಯಬೇಕು ಅಂತ ತುದಿಗಾಲ ಮೇಲೆ ನಿಂತಿರ್ತಾರೆ ಅಂತ ಗೃಹಿಣಿಯರು ಹೇಳ್ತಾರೆ. ಏನೇ ಇರಲಿ ಎಲ್ಲೆಡೆ ಮೋದಕ ನೈವೇದ್ಯ ಅರ್ಪಿಸಿದ್ದಾರೆ. ಇಲ್ಲಿ ಮಾತ್ರ ನಾನ್ ವೆಜ್ ನೈವೇದ್ಯ ಅರ್ಪಿಸುವ ಆಚರಣೆ ಮಾತ್ರ ವಿಶೇಷವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.