ಹಸಿರ ಸಿರಿಯ ನಡುವೆ ಶ್ವೇತ ಸುಂದರಿಯ ಕಲರವ: ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ ಅಬ್ಬಿ ಫಾಲ್ಸ್

ಸಕಲೇಶಪುರದಿಂದ 20 ಕಿಲೋಮೀಟರ್ ಮೂಡಗೆರೆ ರಸ್ತೆಯಲ್ಲಿ ಸಾಗಿದರೆ ಹಾನುಬಾಳು ಸಮೀಪ ಸಿಗೋ ಅಬ್ಬಿ ಜಲಪಾತ ನಿಮ್ಮನ್ನ ಮೂಕವಿಸ್ಮಿಗೊಳಿಸುತ್ತೆ. ಸುತ್ತಲೂ ಹಸಿರಿನಿಂದ ಕಂಗೊಳಿಸುವ ಕಾನನದ ನಡುವೆ ಹೊಸದೊಂದು ಸಂಗೀತ ಲೋಕವನ್ನೇ ಸೃಷ್ಟಿಸಿ ಹರಿಯುತ್ತಿರೋ ಜಲಪಾತಕ್ಕೆ ಬರುವ ಪ್ರವಾಸಿಗರು ನಿಸರ್ಗದ ಮಡಿಲಿನಲ್ಲಿ ಕಳೆದು ಹೋಗುತ್ತಾರೆ.

ಹಸಿರ ಸಿರಿಯ ನಡುವೆ ಶ್ವೇತ ಸುಂದರಿಯ ಕಲರವ: ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ ಅಬ್ಬಿ ಫಾಲ್ಸ್
ಹಸಿರ ಸಿರಿಯ ನಡುವೆ ಶ್ವೇತ ಸುಂದರಿಯ ಕಲರವ: ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ ಅಬ್ಬಿ ಫಾಲ್ಸ್
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Sep 08, 2024 | 9:46 PM

ಹಾಸನ, ಸೆಪ್ಟೆಂಬರ್​ 08: ಪ್ರಕೃತಿಯೇ ಹಾಗೆ ನಿಸರ್ಗದ (nature) ಮಡಿನಲ್ಲಿ ಕಳೆದು ಹೋಗುವುದಕ್ಕೆ ನಾವು ರೆಡಿ ಇದ್ದರೆ ನಮ್ಮೆಲ್ಲ ನೋವನ್ನ ಮರೆಸಿ ಮನಸ್ಸಿಗೆ ಮುದ ನೀಡುವುದಕ್ಕೆ ಸದಾ ಸಿದ್ದವಿರುತ್ತೆ. ದಣಿದ ಮನಕ್ಕೆ ಹೊಸ ಜೀವನೋತ್ಸಾಹ ನೀಡುವ ಪ್ರಕೃತಿಯ ಸಿರಿ ಎಂತಹವನ್ನು ಪುಳಕಗೊಳ್ಳುವಂತೆ ಮಾಡುತ್ತೆ. ಹಾಗಿರುವಾಗ ಮಳೆಗಾಲದಲ್ಲಿ ಕೇಳಬೇಕಾ. ಮುಂಗಾರಿನ ಅಭಿಷೇಕಕ್ಕೆ ಹಚ್ಚ ಹಸಿರಿನಿಂದ ಕಂಗೊಳಿಸುವ ನಿಸರ್ಗದ ನಡುವೆ ವರಣನ ಆರ್ಭಟಕ್ಕೆ ಅಬ್ಬರಿಸಿ ಧುಮ್ಮಿಕ್ಕೋ ಜಲಧಾರೆಗಳಂತೂ ಭೂಮಿಗೆ ಸರ್ಗವೇ ಇಳಿದಿದೆಯೇನೋ ಎನ್ನೋ ವಾತಾವರಣ ನಿರ್ಮಿಸಿ ಬಿಡುತ್ತೆ ಪಶ್ಚಿಮಘಟ್ಟದ ಮಡಿನಲ್ಲಿ ಹರಿಯೋ ಅಬ್ಬಿ ಜಲಪಾತ (Abbi Falls) ಮಳೆಗಾಲದಲ್ಲಿ ಪ್ರಕೃತಿ ಸೌಂದರ್ಯ ಕಣ್ತುಂಬಿಕೊಳ್ಳೋರಿಗೆ ಹೇಳಿ ಮಾಡಿಸಿದಂತಿದ್ದು ನಿಸರ್ಗ ಪ್ರಿಯರನ್ನು ಕೈಬೀಸಿ ಕರೆಯುತ್ತಿದೆ.

ಈ ವರ್ಷ ಉತ್ತಮ ಮುಂಗಾರು ನಿಸರ್ಗ ಸಿರಿಯನ್ನ ಇಮ್ಮಡಿಗೊಳಿಸಿದೆ. ವರುಣನ ಸಿಂಚನಕ್ಕೆ ಹೊಸ ಚೈತನ್ಯದಿಂದ ಕಂಗೊಳಿಸುವ ಗಿರಿಕಾನನಗಳು ಪ್ರಕೃತಿ ಪ್ರಿಯರನ್ನ ಕೈ ಬೀಸಿ ಕರೆಯುತ್ತಿದೆ. ಅದರಲ್ಲೂ ಪಶ್ಚಿಮಘಟ್ಟ ಶ್ರೇಣಿಯ ಸಕಲೇಶಪುರದಲ್ಲಂತೂ ಈಗ ಸ್ವರ್ಗವೇ ಧರೆಗಿಳಿದ ವಾತಾವರಣ ನಿರ್ಮಾಣವಾಗಿದೆ. ಕಣ್ಣು ಹಾಯಿಸಿದಲ್ಲೆಲ್ಲಾ ಹಸಿರ ಸಿರಿ, ಹಸಿರು ಸಿರೆಯುಟ್ಟು ಕೈಬೀಸಿ ಕರೆಯುತ್ತಿರುವ ಬೆಟ್ಟಗುಡ್ಡಗಳ ಪರ್ವತಶ್ರೇಣಿ ಇವುಗಳ ನಡುವೆ ಶ್ವೇತವರ್ಣೆಯರಾಗಿ ಜುಳು ಜುಳು ನಾದ ಮಾಡುತ್ತಾ ಧುಮ್ಮಿಕ್ಕೋ ಜಲಪಾತಗಳ ಸೊಬಗು ವರ್ಣಿಸಲು ಶಬ್ದಗಳಿಗೆ ನಿಲಕದ್ದು.

ಸಕಲೇಶಪುರದಿಂದ 20 ಕಿಲೋಮೀಟರ್ ಮೂಡಗೆರೆ ರಸ್ತೆಯಲ್ಲಿ ಸಾಗಿದರೆ ಹಾನುಬಾಳು ಸಮೀಪ ಸಿಗೋ ಅಬ್ಬಿ ಜಲಪಾತ ನಿಮ್ಮನ್ನ ಮೂಕವಿಸ್ಮಿಗೊಳಿಸುತ್ತೆ. ಸುತ್ತಲೂ ಹಸಿರಿನಿಂದ ಕಂಗೊಳಿಸುವ ಕಾನನದ ನಡುವೆ ಹೊಸದೊಂದು ಸಂಗೀತ ಲೋಕವನ್ನೇ ಸೃಷ್ಟಿಸಿ ಹರಿಯುತ್ತಿರೋ ಜಲಪಾತಕ್ಕೆ ಬರುವ ಪ್ರವಾಸಿಗರು ನಿಸರ್ಗದ ಮಡಿಲಿನಲ್ಲಿ ಕಳೆದು ಹೋಗುತ್ತಾರೆ. ಮೈಗೆ ತಾಗೋ ತಂಗಾಳಿ, ಚುಮು ಚುಮು ಚಳಿಯ ನಡುವೆ ಜಲಪಾತದ ಅಂದವನ್ನ ಕಣ್ತುಂಬಿಕೊಳ್ಳುತ್ತಾ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಾ ನಿಸರ್ಗದ ಸವಿಯನ್ನ ಆನಂದಿಸುತ್ತಾರೆ.

ಇದನ್ನೂ ಓದಿ: ಮೋದಕ ಪ್ರಿಯ ಗಣೇಶನಿಗೆ ಮಾಂಸದ ನೈವೇದ್ಯ: ಗದಗಿನಲ್ಲಿ ವಿಶಿಷ್ಟ ಆಚರಣೆ

ಅತ್ಯಂತ ಸುಂದರ ರುದ್ರ ರಮಣೀಯವಾದ ಅಬ್ಬಿ ಜಲಪಾತ ಪಶ್ಚಿಮಘಟ್ಟದ ಸುಂದರ ಪ್ರವಾಸಿ ತಾಣಗಳಲ್ಲಿ ಒಂದು. ಸುತ್ತಲೂ ಹಸಿರು, ರಸ್ತೆ ಸಮೀಪವೇ ಬೋರ್ಗರೆಯುತ್ತಾ ಹತ್ತಾರು ಅಡಿ ಎತ್ತರದಿಂದ ವಿಶಾಲ ಪ್ರದೇಶದಲ್ಲಿ ಧುಮ್ಮಿಕ್ಕೋ ಜಲರಾಣಿ ಮನಸ್ಸಿಗೆ ಮುದ ನೀಡುತ್ತೆ. ಬೋರ್ಗರೆಯುತ್ತಾ ಹರಿಯೋ ಜಲರಾಶಿ ಕಣ್ತುಂಬಿಕೊಳ್ಳಲು ನಿತ್ಯವೂ ನೂರಾರು ಸಂಖ್ಯೆಯಲ್ಲಿ ಆಗಮಿಸೋ ಜನರು ಜಲಪಾತದ ಅಂದ ನೋಡುತ್ತಾ ಮೈಮರೆಯುತ್ತಾರೆ.

ಸಾಮಾನ್ಯವಾಗಿ ಜೂನ್​ನಿಂದ ಡಿಸೆಂಬರ್​ವರೆಗೂ ತುಂಬಿ ಹರಿಯೋ ಜಲಪಾತಕ್ಕೆ ಸರಿಯಾದ ಸೌಲಭ್ಯ ಇಲ್ಲಾ ಎನ್ನೋದೆ ದುರಂತ. ರಸ್ತೆ ಬದಿಯಲ್ಲೇ ಜಲಪಾತ ಇದೆ, ನೂರಾರು ಸಂಖ್ಯೆಯಲ್ಲಿರೊ ರೆಸಾರ್ಟ್ ಹೋಂ ಸ್ಟೇಗಳಿಗೆ ಹೋಗೋ ಸಾವಿರಾರು ಪ್ರವಾರಿಗರಿಗೆ ಇದೊಂದು ಅಚ್ಚು ಮೆಚ್ಚಿನ ತಾಣ. ಆದರೆ ಪ್ರವಾಸೋದ್ಯಮ ಇಲಾಖೆ ಇದಕ್ಕೆ ಸರಿಯಾದ ಸೌಲಭ್ಯ ನೀಡಿಲ್ಲ. ಮಳೆಗಾಲದಲ್ಲಿ ಸಕಲೇಶಪುರಕ್ಕೆ ಭೇಟಿ ನೀಡುವವರ ಹಾಟ್ ಸ್ಪಾಟ್ ಆಗಿರುವ ಅಬ್ಬಿ ಜಲಪಾತಕ್ಕೆ ಸರಿಯಾದ ಸೌಲಭ್ಯ ಸಿಗಬೇಕಿದೆ.

ಸದಾಕಾಲ ಹಚ್ಚ ಹರಿಸಿರಿನಿಂದ ಕಂಗೊಳಿಸುವ ಪಶ್ಚಿಮಘಟ್ಟದ ಶ್ರೇಣಿ ಮುಂಗಾರಿನಲ್ಲಿ ತನ್ನ ಸೌಂದರ್ಯವನ್ನ ಇಮ್ಮಡಿಗೊಳಿಸಿಕೊಂಡು ಎಲ್ಲರನ್ನ ಕೈಬೀಸಿ ಕರೆಯುತ್ತೆ. ಈ ವರ್ಷ ಎರಡು ತಿಂಗಳು ನಿರಂತರವಾಗಿ ಸುರಿದ ಮಳೆಯಿಂದ ಈ ಭಾಗದ ಜಲಪಾತಗಳಿಗೆ ಜೀವಕಳೆ ಬಂದಿದ್ದು, ಹಸಿರ ಸಿರಿಯ ನಡುವೆ ಹರಿಯೋ ಶ್ವೇತ ಸುಂದರಿಯನ್ನ ಕಣ್ತುಂಬಿಕೊಳ್ಳಲು ಪ್ರವಾಸಿಗರು ಮುಗಿಬೀಳುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.