ಬಳಸಿ ಬಿಸಾಡಿದ ಪ್ಲಾಸ್ಟಿಕ್​ನಿಂದ ಕಣ್ಮನ ಸೆಳೆಯುವ ಗೃಹಾಲಂಕಾರ ವಸ್ತುಗಳ ತಯಾರಿಕೆ

ಆಧುನಿಕ ಪ್ರಪಂಚಕ್ಕೆ ವರವು ಹೌದು, ಶಾಪವೂ ಹೌದು ಎನ್ನುವ ಏಕೈಕ ವಸ್ತು ಅದು ಪ್ಲಾಸ್ಟಿಕ್. ಇದರಿಂದ ಬಹುತೇಕ ಗ್ರಹ ಬಳಕೆಯ ವಸ್ತುಗಳ ತಯಾರಿ ನಡೆದರೂ ಕೂಡ ಅದರ ವಿಲೇವಾರಿ ಮಾತ್ರ ಬಲು ಕಷ್ಟದ ವಿಚಾರ ಎನ್ನುವುದು ಎಲ್ಲರಿಗೂ ತಿಳಿದಿದೆ. ಪ್ಲಾಸ್ಟಿಕ್ ಮರುಬಳಕೆ ದೊಡ್ಡ ಪರಿಹಾರ ಎನ್ನುವ ಕಾಲಘಟ್ಟದಲ್ಲಿ, ಇಲ್ಲಿ ಓರ್ವ ಮಹಿಳೆ ಮನೆಯಲ್ಲಿ ಬಳಸಿ ಎಸೆಯಲು ಸಿದ್ಧವಾಗಿರುವ ಪ್ಲಾಸ್ಟಿಕ್ ಇನ್ನಿತರ ವಸ್ತುಗಳನ್ನೇ ಬಳಸಿಕೊಂಡು ಗೃಹಾಲಂಕಾರ ವಸ್ತುಗಳ ತಯಾರಿಸುವ ಮೂಲಕ ಪರಿಸರದ ಮೇಲಾಗುತ್ತಿರುವ ದೌರ್ಜನ್ಯವನ್ನು ಕಡಿಮೆ ಮಾಡುತ್ತಿದ್ದಾರೆ.

|

Updated on: Sep 08, 2024 | 7:03 PM

ಬೆಳೆಯುತ್ತಿರುವ ನಗರಗಳಿಗೆ ಅತಿ ದೊಡ್ಡ ಸಮಸ್ಯೆ ಎಂದರೆ ಅದು ಕಸ ವಿಲೇವಾರಿ. ಈ ಕಸಗಳ ಸಾಲಿನಲ್ಲಿ ದೊಡ್ಡ ಸಮಸ್ಯೆಯಾಗಿ ಕಾಡುವುದು ಪ್ಲಾಸ್ಟಿಕ್​ನಿಂದ ತಯಾರಾಗಿರುವ ವಸ್ತುಗಳು. ಇಂದು ಮನೆಗೆ ಬಳಸುವ ಶಾಂಪು, ಸೋಪು, ಪೇಸ್ಟ್ ಬ್ರಶ್​ನಿಂದ ಹಿಡಿದು ಬಹುತೇಕ ವಸ್ತುಗಳು ಪ್ಲಾಸ್ಟಿಕ್​​ನಿಂದ ಮಾಡಿರುವ ಹಿನ್ನೆಲೆಯಲ್ಲಿ ಅವುಗಳನ್ನ ವಿಲೇವಾರಿ ಮಾಡುವುದು ದೊಡ್ಡ ತಲೆನೋವು.

1 / 6
ಅದರಲ್ಲೂ ಒಂದು ವೇಳೆ ಅವುಗಳನ್ನ ಸುಟ್ಟರೆ ಅದು ಪರಿಸರಕ್ಕೆ ದೊಡ್ಡ ಮಟ್ಟದ ಹಾನಿ ಮಾಡುವ ವಿಷಕಾರಕ ಅನಿಲಗಳನ್ನು ಬಿಡುಗಡೆ ಮಾಡುವುದರಿಂದ ಅನಿವಾರ್ಯವಾಗಿ ಅವುಗಳನ್ನ ಮರುಬಳಕೆಗೆ ಬಳಸಿಕೊಳ್ಳಬೇಕಾದ ಅನಿವಾರ್ಯತೆ ಇದೆ.

2 / 6
ಇಂದು ಒಂದೊಂದು ಮನೆಯಿಂದ ದಿನಕ್ಕೆ ಇಂತಿಷ್ಟು ಪ್ಲಾಸ್ಟಿಕ್ ಎಂದರು ವಾರಕ್ಕೆ ಕೆ.ಜಿಗಟ್ಟಲೆ ಪ್ಲಾಸ್ಟಿಕ್ ತ್ಯಾಜ್ಯ ಸಿಗುತ್ತದೆ. ಸದ್ಯ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿ ಗೃಹಿಣಿ ಪ್ಲಾಸ್ಟಿಕ್ ಮತ್ತು ಮನೆಯಲ್ಲಿ ಬಳಸಿ ಹೊರಗೆ ಎಸೆಯುತ್ತಿರುವ ವಸ್ತುಗಳನ್ನ ಮರುಬಳಕೆ ಮಾಡಿ ಗೃಹಾಲಂಕಾರ ವಸ್ತುಗಳನ್ನಾಗಿ ಪರಿವರ್ತಿಸುವ ಕಾಯಕದಲ್ಲಿ ತೊಡಗಿದ್ದಾರೆ.

3 / 6
ಕಾರ್ಕಳದ ಜ್ಯೋತಿ ಅವರು ದಿನನಿತ್ಯ ಮನೆಯಲ್ಲಿ ಸಾಕಷ್ಟು ತ್ಯಾಜ್ಯಗಳು ಹೊರಹೋಗುವುದನ್ನು ಗಮನಿಸಿದ್ದಾರೆ. ಬಹುತೇಕ ಪ್ಲಾಸ್ಟಿಕ್ ಸಂಬಂಧಿತ ವಸ್ತುಗಳ ಇರುವುದನ್ನು ನೋಡಿದ ಇವರು, ಪರಿಸರಕ್ಕೆ ನಾವು ಹೊರೆಯಾಗಿ ಪ್ಲಾಸ್ಟಿಕ್ ಇಡುತ್ತಿದ್ದೇವೆ ಎನ್ನುವುದನ್ನು ಅರಿತು ಸಾಮಾಜಿಕ ಜಾಲತಾಣ ಮತ್ತು ಯೂಟ್ಯೂಬ್ ಮೊದಲಾದ ಕಡೆಯಿಂದ ಈ ತ್ಯಾಜ್ಯಗಳನ್ನ ಸುಂದರವಾದ ವಸ್ತುಗಳನ್ನಾಗಿ ವರ್ತಿಸುವ ಮಾಹಿತಿ ಕಲೆ ಹಾಕಿದ್ದಾರೆ.

4 / 6
ಳೆದ ಐದು ವರ್ಷಗಳ ಹಿಂದೆ ಪ್ರಾರಂಭವಾದ ಇವರ ತ್ಯಾಜ್ಯ ಮರುಬಳಕೆ ಯೋಚನೆ ಸದ್ಯ ಮನೆಯ ಗೃಹಾಲಂಕಾರ ವಸ್ತುಗಳಾಗಿ ಮನೆಗೆ ಬರುವ ಅತಿಥಿಗಳನ್ನ ಸೆಳೆಯುತ್ತಿದೆ. ಪ್ಲಾಸ್ಟಿಕ್ ಬಾಟಲಿಗಳಿಂದ ಚಿಟ್ಟೆ, ಹಕ್ಕಿ, ಹೂವಿನ ಕುಂಡಗಳು, ಫ್ಯಾಬ್ರಿಕ್ ಕಂಡಿಷನರ್ ಬಾಟಲಿಗಳಿಂದ ಗಣೇಶ, ಆನೆಯ ಮೂರ್ತಿಗಳು, ಬಳಸಿ ಎಸೆಯಲು ಸಿದ್ಧವಾದ ಟವಲ್​ಗಳಿಂದ ಹೂವಿನ ಕುಂಡಗಳು, ಹಳೆಯ ಟೈಯರ್ನಿಂದ ಸುಂದರವಾದ ಗ್ರಹಲಂಕಾರ ವಸ್ತುಗಳು ನೂರಕ್ಕೂ ಅಧಿಕ ರೀತಿಯ ಗೃಹಲಂಕಾರ ವಸ್ತುಗಳನ್ನ ಜ್ಯೋತಿ ತಯಾರಿಸಿದ್ದಾರೆ.

5 / 6
ಇವರ ಈ ಕೆಲಸಗಳಲ್ಲಿ ಮನೆಯವರು ಕೂಡ ಸಹಕಾರ ನೀಡಿದ್ದು ಮನೆಗೆ ಭೇಟಿ ನೀಡುವ ಅತಿಥಿಗಳು ಮೂಗಿನ ಮೇಲೆ ಬೆರಳು ಇಟ್ಟು ನೋಡುತ್ತಿದ್ದಾರೆ. ಒಟ್ಟಾರೆಯಾಗಿ ಜ್ಯೋತಿಯವರಿಂದ ಮರುಬಳಕೆಯಾಗಿ ಸಿದ್ದಗೊಂಡಿರುವ ವಸ್ತುಗಳ ಕುರಿತು ಉಳಿದವರಿಗೂ ಆಸಕ್ತಿ ಹೆಚ್ಚಿದೆ‌. ಹೀಗಾಗಿ ಇವರ ಕಲಾಕೃತಿಗಳನ್ನು ನೋಡಲು ಮನೆಗೆ ಶಾಲಾ ವಿದ್ಯಾರ್ಥಿಗಳು, ಗೃಹಿಣಿಯರು ಭೇಟಿ ನೀಡುತ್ತಾರೆ. ಬಳಸಿ ಎಸೆಯಲು ಸಿದ್ಧವಾದ ವಸ್ತುಗಳಿಂದ ಗೃಹಲಂಕಾರ ಸಾಮಗ್ರಿಗಳು ಸಿದ್ಧವಾಗುತ್ತದೆ ಎನ್ನುವ ಕಲ್ಪನೆಗೆ ನಮ್ಮದೊಂದು ಹ್ಯಾಟ್ಸಾಫ್.

6 / 6
Follow us