ಇಂದು ರಾತ್ರಿ ಮೇಲುಕೋಟೆ ವೈರಮುಡಿ ಉತ್ಸವ: ವಜ್ರ ಖಚಿತ ಕಿರೀಟದ ಬಳಿ ಕೂರುವ ವಿಚಾರಕ್ಕೆ ಜಗಳ

ವಜ್ರ ಖಚಿತ ಕಿರೀಟದ ಬಳಿ ಕೂರುವ ವಿಚಾರಕ್ಕೆ ಜಗಳ ಉಂಟಾಗಿದ್ದು, ಕಿರೀಟದ ಬಳಿ 4ನೇ ಸ್ಥಾನಿಕರು ಕೂರಬಾರದು ಎಂದು ಮೊದಲ ಸ್ಥಾನಿಕ ನಾರಾಯಣ ಅಯ್ಯಂಗಾರ್, 4ನೇ ಸ್ಥಾನಿಕ ಶ್ರೀನಿವಾಸ್ ಗುರೂಜಿ ಜೊತೆ ಜಗಳ ಮಾಡಿದ್ದಾರೆ.

ಇಂದು ರಾತ್ರಿ ಮೇಲುಕೋಟೆ ವೈರಮುಡಿ ಉತ್ಸವ: ವಜ್ರ ಖಚಿತ ಕಿರೀಟದ ಬಳಿ ಕೂರುವ ವಿಚಾರಕ್ಕೆ ಜಗಳ
ಮೇಲುಕೋಟೆ ವೈರಮುಡಿ ಉತ್ಸವ
Follow us
| Updated By: ಸಾಧು ಶ್ರೀನಾಥ್​

Updated on: Mar 24, 2021 | 1:19 PM

ಮಂಡ್ಯ: ಇಂದು ಮೇಲುಕೋಟೆ ವೈರಮುಡಿ ಉತ್ಸವ ನಡೆಯಲ್ಲಿದ್ದು, ಈ ಹಿನ್ನೆಲೆಯಲ್ಲಿ ಬೆಳಗ್ಗೆ 7 ಗಂಟೆ ಸುಮಾರಿಗೆ ಜಿಲ್ಲಾ ಖಜಾನೆಯಲ್ಲಿರುವ ವಜ್ರ ಖಚಿತ ಕಿರೀಟವನ್ನ ಹೊರ ತೆಗೆಯಲಾಯಿತು. ಖಜಾನೆಯಿಂದ ತೆರಳಿ ಮಂಡ್ಯದ ಲಕ್ಷ್ಮಿ ಜನಾರ್ಧನ ಸ್ವಾಮಿ ದೇವಾಲಯದಲ್ಲಿ ಪೂಜೆ ನಡೆಸಿದ ಬಳಿಕ ಅಲ್ಲಿಂದ ಬೆಂಗಳೂರು ಮೈಸೂರು ಹೆದ್ದಾರಿ ಮೂಲಕ ಮಂಡ್ಯ ತಾಲೂಕಿನ ಇಂಡುವಾಳು‌, ಶ್ರೀರಂಗಪಟ್ಟಣ ತಾಲೂಕಿನ ಕಡೆಗೆ ಸಾಗಿಸಲಾಗುತ್ತದೆ.

ಪಾಂಡವಪುರ ಮಾರ್ಗವಾಗಿ ನಾಗಮಂಗಲ ಪಾಂಡವಪುರ ರಸ್ತೆ ಮೂಲಕ ಮೇಲುಕೋಟೆಗೆ ಕಿರೋಟವನ್ನು ತೆಗೆದುಕೊಂಡು ಹೋಗಲಾಗುತ್ತದೆ. ಈ ಮಾರ್ಗದಲ್ಲಿ ಸಿಗುವ ಪ್ರತಿಯೊಂದು ಊರುಗಳಲ್ಲೂ ಕಿರೀಟಕ್ಕೆ ಪೂಜೆ ಜನರು ಪೂಜೆ ಸಲ್ಲಿಸಿದ್ದಾರೆ ಮತ್ತು ಪೂಜೆ ಬಳಿಕ ಪ್ರಸಾದವನ್ನು ವಿತರಿಸಲಾಯಿತು. ಬೆಳಿಗ್ಗೆ ಮಂಡ್ಯದಿಂದ ಹೊರಟ ಈ ಕಿರೀಟ ಸಂಜೆ ವೇಳೆಗೆ ಮೇಲುಕೋಟೆಗೆ ಆಗಮಿಸಲಿದೆ.

ಸಂಜೆ ದೇವಾಲಯದ ಒಳಭಾಗದಲ್ಲಿ ಜಿಲ್ಲಾಧಿಕಾರಿ ಸೇರಿದಂತೆ ಇತರೇ ಅಧಿಕಾರಿಗಳ ಸಮ್ಮುಖದಲ್ಲಿ ಆಭರಣಗಳ ಪರ್ಕಾವಣೆ ಅಥವಾ ಪರಿಶೀಲನೆ ನಡೆಸಲಾಗುತ್ತದೆ. ನಂತರ ಆಭರಣಗಳನ್ನ ದೇವಾಲಯದ ಸಿಬ್ಬಂದಿಗೆ ಜಿಲ್ಲಾಡಳಿತ ಹಸ್ತಾಂತರಿಸಲಿದೆ.

vairamudi utsava

ಕಿರೀಟ ಸಾಗಿಸಲು ಸಿದ್ಧಗೊಂಡ ವಾಹನ

ರಾತ್ರಿ 8.30 ರ ಸುಮಾರಿಗೆ ಉತ್ಸವ ಆರಂಭವಾಗಲಿದ್ದು, ದೇವಾಲಯದ ಸಿಬ್ಬಂದಿ ಆಭರಣಗಳನ್ನ ಉತ್ಸವ ಮೂರ್ತಿಗೆ ಅಲಂಕರಿಸಲಿದ್ದಾರೆ. ಕೋವಿಡ್ ಹಿನ್ನೆಲೆಯಲ್ಲಿ ಹೊರ ರಾಜ್ಯದವರಿಗೆ, ಹೊರ ಜಿಲ್ಲೆಯ ಭಕ್ತರಿಗೆ ಉತ್ಸವಕ್ಕೆ ಬರುವುದಕ್ಕೆ ಜಿಲ್ಲಾಡಳಿತ ನಿಷೇಧ ಹೇರಿದೆ. ದೇವಾಲಯದ ಸುತ್ತಮುತ್ತಲ ಪ್ರದೇಶದಲ್ಲಿ ಕೇವಲ 2 ಸಾವಿರ ಜನರಿಗಷ್ಟೇ ಅವಕಾಶ ನೀಡಲು ನಿರ್ಧರಿಸಲಾಗಿದೆ.

vairamudi utsava

ಲಕ್ಷ್ಮಿ ಜನಾರ್ಧನ ಸ್ವಾಮಿ ದೇವಾಲಯದಲ್ಲಿ ಪೂಜೆ

ಇನ್ನು ದೇವಾಲಯದ ಒಳಗೆ 50 ರಿಂದ 100 ಜನರಿಗಷ್ಟೇ ಅವಕಾಶ ಕಲ್ಪಿಸಲಾಗಿದೆ. ಈ ಉತ್ಸವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಹಲವು ಜನ ರಾಜಕಾರಣಿಗಳು ಭಾಗವಹಿಸುವ ಸಾಧ್ಯತೆ ಇದೆ. ಕೋವಿಡ್ ಹಿನ್ನಲೆಯಲ್ಲಿ ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಶ್ರೀ ಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ನಡೆಯುವ ಈ ಉತ್ಸವ ಮುಗಿಸಲು ಜಿಲ್ಲಾಡಳಿತ ನಿರ್ಧರಿಸಿದೆ. ಜಿಲ್ಲಾ ಖಜಾನೆಯಿಂದ ವಜ್ರಖಚಿತ ಕಿರೀಟ ಹೊರಟಿದ್ದು, ಜಿಲ್ಲಾಧಿಕಾರಿ ಅಶ್ವಥಿ ನೇತೃತ್ವದಲ್ಲಿ ಪೂಜೆ ಸಲ್ಲಿಸಿದ ಬಳಿಕ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಮೇಲುಕೋಟೆ ಕಡೆಗೆ ಪಯಣ ನಡೆಸಿದೆ.

vairamudi utsava

ದೇವಾಲಯದ ಸುತ್ತಮುತ್ತಲ ಪ್ರದೇಶದಲ್ಲಿ ಕೇವಲ 2 ಸಾವಿರ ಜನರಿಗಷ್ಟೇ ಅವಕಾಶ ನೀಡಲು ನಿರ್ಧಾರ

ವಜ್ರ ಖಚಿತ ಕಿರೀಟದ ಬಳಿ ಕೂರುವ ವಿಚಾರಕ್ಕೆ ಜಗಳ: ವಜ್ರ ಖಚಿತ ಕಿರೀಟದ ಬಳಿ ಕೂರುವ ವಿಚಾರಕ್ಕೆ ಜಗಳ ಉಂಟಾಗಿದ್ದು, ಕಿರೀಟದ ಬಳಿ 4ನೇ ಸ್ಥಾನಿಕರು ಕೂರಬಾರದು ಎಂದು ಮೊದಲ ಸ್ಥಾನಿಕ ನಾರಾಯಣ ಅಯ್ಯಂಗಾರ್, 4ನೇ ಸ್ಥಾನಿಕ ಶ್ರೀನಿವಾಸ್ ಗುರೂಜಿ ಜೊತೆ ಜಗಳ ಮಾಡಿದ್ದಾರೆ.

ಮೇಲುಕೋಟೆಯಲ್ಲಿ ವೈರಮುಡಿ ಉತ್ಸವ ಹಿನ್ನೆಲೆಯಲ್ಲಿ ಜಿಲ್ಲಾ ಖಜಾನೆಯಿಂದ ವಜ್ರ ಖಚಿತ ಕಿರೀಟ ಸಾಗಿಸಲಾಗ್ತಿತ್ತು ಈ ವೆಳೆ ಕಿರೀಟ ಸಾಗಿಸುವ ವಾಹನದಲ್ಲಿ ಮೊದಲ ಸ್ಥಾನಿಕರಿಗಷ್ಟೇ ಅವಕಾಶವೆಂದು ಅಯ್ಯಂಗಾರ್ ಜಗಳವಾಡಿದ್ದಾರೆ. ನಮಗು ಕೂರಲು ಹಕ್ಕಿದೆ ಎಂದು ಶ್ರೀನಿವಾಸನ್​​ ಗುರೂಜಿ ಹೇಳಿದ್ದಾರೆ. ನಂತರ ಕೈ ಮುಗಿದು ಶ್ರೀನಿವಾಸನ್ ಗುರೂಜೀಯನ್ನ ಕೆಳಗೆ ಮೊದಲ ಸ್ಥಾನೀಕರ ಪುತ್ರ ಕೆಳಗೆ ಇಳಿಸಿದ್ದಾರೆ. ಬಳಿಕ ಶ್ರೀನಿವಾಸನ್ ಗುರೂಜಿಯವರನ್ನ ಅದೇ ವಾಹನದ ಮುಂಭಾಗದಲ್ಲಿ ಅಧಿಕಾರಿಗಳು ಕೂರಿಸಿದ್ದಾರೆ.

ಇದನ್ನೂ ಓದಿ:

ದಾವಣಗೆರೆಯಲ್ಲಿ ವೀರಭದ್ರ ದೇವರ ಉತ್ಸವ: ಪ್ರತಿಯೊಬ್ಬರೂ ಪಾಲ್ಗೊಳ್ಳಬೇಕು ಎಂಬ ಅಲಿಖಿತ ನಿಯಮ; ಹರಿದು ಬಂದ ಭಕ್ತ ಸಾಗರ

ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ