ಶಿವಮೊಗ್ಗ, ಆಗಸ್ಟ್ 23: ಜಿಲ್ಲೆಯಲ್ಲಿ ಮೀಟರ್ ಬಡ್ಡಿ ದಂಧೆ ಜೋರಾಗಿ ನಡೆಯುತ್ತಿದೆ. ಬಡ್ಡಿಯಂಗೆ ಹಣ ಪಡೆದ ಜನರು ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತಿದ್ದಾರೆ. ಹಣ ಪಡೆದ ಮೇಲೆ ಮೀಟರ್ ಬಡ್ಡಿ ಕಟ್ಟಲು ಆಗದೇ ಪರದಾಡುತ್ತಿದ್ದಾರೆ. ಇದೇ ಮೀಟರ್ ಬಡ್ಡಿ ಟಾರ್ಚರ್ಗೆ ಯುವಕನೊಬ್ಬನು (b0y) ನೇಣಿಗೆ ಶರಣಾಗಿರುವಂತಹ (death) ಘಟನೆ ನಡೆದಿದೆ. ಭದ್ರಾವತಿಯ ಪೇಪರ್ ಟೌನ್ ಬಡಾವಣೆಯ ಸ್ಟಿವನ್ (24) ನೇಣಿಗೆ ಶರಣಾದ ಯುವಕ.
ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ. ಭದ್ರಾವತಿ ಬಿಟ್ಟು ಆಂಧ್ರಕ್ಕೆ ಹೋಗಿದ್ದ ತಂದೆ ಜೊಸೆಫ್ ಮತ್ತು ತಾಯಿ ಸುನಿತಾ ಇಬ್ಬರು ಮಗನ ಸಾವಿನ ಸುದ್ದಿ ಕೇಳಿ ವಾಪಸ್ ಆಗಿದ್ದಾರೆ. ಮಗನ ಸಾವು ನೋಡಿದ ತಂದೆ-ತಾಯಿ ಕಣ್ಣೀರು ಹಾಕುತ್ತಿದ್ದಾರೆ. ಮೀಟರ್ ಬಡ್ಡಿ ದಂಧೆಕೋರರ ವಿರುದ್ದ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಶಾಕಿಂಗ್! ಹೆಂಡ್ತಿ ರೀಲ್ಸ್ ಹುಚ್ಚಾಟ ನೋಡಲಾಗದೇ ಹೊಡೆದು ಕೊಂದ ಗಂಡ
ಕಳೆದ ಒಂದು ವರ್ಷದ ಹಿಂದೆ ಜೊಸೆಫ್ ಆರು ಲಕ್ಷ ರೂ. ಮೀಟರ್ ಬಡ್ಡಿಯಂಗೆ ಸಾಲ ಪಡೆದಿದ್ದನು. ಮೀಟರ್ ಬಡ್ಡಿ ತಿಂಗಳಿಗೆ ಕಟ್ಟಲು ಆಗದೇ ತಂದೆ ಜೊಸೇಫ್ ಮತ್ತು ಆತನ ಪತ್ನಿ ಸುನೀತಾ ಮನೆ ಬಿಟ್ಟು ಹೋಗಿದ್ದರು. ಪರಶುರಾಮ ಎನ್ನುವ ವ್ಯಕ್ತಿಯಿಂದ ಮೀಟರ್ ಬಡ್ಡಿ ಪಡೆದಿದ್ದರು. ಬಡ್ಡಿಗೆ ಚಕ್ರಬಡ್ಡಿ ಬೆಳೆದು ಸಾಲ ಹೆಚ್ಚಾಗುತ್ತಾ ಹೋಗಿದೆ. ತಂದೆ ತಾಯಿ ಅಸಲು ಮತ್ತು ಬಡ್ಡಿ ಕೊಟ್ಟಿರಲಿಲ್ಲ. ಇದರಿಂದ ನಾಪತ್ತೆಯಾಗಿದ್ದ ತಂದೆ-ತಾಯಿ ಬಿಟ್ಟು ಅವರ ಮಗ ಸ್ಟಿವನ್ ಹಿಂದೆ ಮೀಟರ್ ಬಿಡ್ಡಿ ದಂಧೆ ಮಾಡುತ್ತಿದ್ದ ಪರಶುರಾಮ ಬೆನ್ನುಬಿದ್ದಿದ್ದನು. ಬೆಂಗಳೂರಿನ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ ಸ್ಟಿವನ್ ಕಳೆದ ಮೂರು ದಿನಗಳ ಹಿಂದೆ ಭದ್ರಾವತಿಗೆ ಬಂದಿದ್ದನು. ಪರಶುರಾಮನ ಕಾಟ ತಾಳಲಾರದೇ ಸ್ಟಿವನ್ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಭದ್ರಾವತಿ ನಗರದಲ್ಲಿ ಮೀಟರ್ ಬಡ್ಡಿ ದಂಧೆ ಜೋರಾಗಿದೆ. ಬಡವರು ಕಷ್ಟ ಇದೆ ಅಂತಾ ಬಡ್ಡಿಯಂಗೆ ಹಣ ಪಡೆಯುತ್ತಾರೆ. ಹಣ ವಾಪಸ್ ಕಟ್ಟಲು ಆಗದೇ ಬಡ್ಡಿ ಮೀಟರ್ ಬಡ್ಡಿ ಕಟ್ಟಿ ಸುಸ್ತಾಗಿ ಹೋಗುತ್ತಾರೆ. ಈ ಬಡವರ ಆರ್ಥಿಕ ಸಮಸ್ಯೆ ಬಂಡವಾಳ ಮಾಡಿಕೊಂಡಿರುವ ಬಡ್ಡಿ ದಂಧೆಕೋರರು ಸುಲಿಗೆ ಮಾಡುತ್ತಿದ್ದಾರೆ. ತಂದೆ ಮಾಡಿದ ಸಾಲಕ್ಕೆ ಇಲ್ಲಿ ಮಗನು ಬಲಿಯಾಗಿದ್ದಾನೆ. ನಿರಂತರವಾಗಿ ಬಡ್ಡಿ ಮತ್ತು ಅಸಲಿಗೆ ಪರಶುರಾಮನು ಸ್ಟಿವನ್ ಮತ್ತು ಅವರ ಕುಟುಂಬದ ಮೇಲೆ ಒತ್ತಡ ಹಾಕುತ್ತಿದ್ದನು.
ಸಹೋದರಿಯು ಬೆಂಗಳೂರಿನಿಂದ ಬಂದ ಅಣ್ಣನ ಕೈಗೆ ರಾಖಿ ಕಟ್ಟಿದ್ದಳು. ಆದರೆ ಸ್ಟಿವನ್ ಭದ್ರಾವತಿಗೆ ಬಂದಿರುವ ಸಂಗತಿ ತಿಳಿದ ಬಡ್ಡಿ ದಂಧೆಕೋರ ಪರಶುರಾಮನು ಹಣಕ್ಕಾಗಿ ಪೀಡಿಸಿದ್ದಾನೆ. ತಂದೆ ಸಾಲ ಮಾಡಿ ಓಡಿಹೋಗಿದ್ದಾರೆ. ನೀನು ಸಾಲ ತೀರಸಬೇಕೆಂದು ಧಮ್ಕಿ ಹಾಕಿದ್ದಾರೆ. ಆರು ಲಕ್ಷ ರೂ. ಅಸಲು ಮತ್ತು ಎರಡು ವರ್ಷದ ಬಡ್ಡಿ ಇಷ್ಟೊಂದು ದುಡ್ಡು ಕಟ್ಟುವುದು ಹೇಗೆಂದು ಸ್ಟಿವನ್ ಅಘಾತಕ್ಕೊಳಗಾಗಿದ್ದ. ಹೀಗಾಗಿ ಮೀಟರ್ ಬಡ್ಡಿ ಕಾಟ ತಾಳಲಾರದೆ ನೇಣಿಗೆ ಶರಣಾಗಿದ್ದಾನೆ.
ಇದನ್ನೂ ಓದಿ: ಖಾಸಗಿ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿ ಸ್ನೇಹಿತೆಯಿಂದ 15 ಲಕ್ಷ ರೂ ಮೌಲ್ಯದ ಚಿನ್ನ ವಸೂಲಿ
ಶಿವಮೊಗ್ಗ ಮತ್ತು ಭದ್ರಾವತಿ ನಗರದಲ್ಲಿ ಎಗ್ಗಿಲ್ಲದೇ ಮೀಟರ್ ಬಡ್ಡಿ ದಂಧೆ ನಡೆಯುತ್ತಿದೆ. ಬಡವರ, ಬೀದಿ ವಾಪಾರಸ್ಥರಿಗೆ ಮೀಟರ್ ಬಡ್ಡಿಯಂತೆ ಹಣ ಕೊಟ್ಟು ಸುಲಿಗೆ ಮಾಡುತ್ತಿದ್ದಾರೆ. ಮೀಟರ್ ಬಡ್ಡಿ ದಂಧೆ ವಿರುದ್ಧ ಪೊಲೀಸರು ಕಠಿಣ ಕ್ರಮಕ್ಕೆ ಮುಂದಾಗಬೇಕಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.