ಶಾಕಿಂಗ್! ಹೆಂಡ್ತಿ ರೀಲ್ಸ್ ಹುಚ್ಚಾಟ ನೋಡಲಾಗದೇ ಹೊಡೆದು ಕೊಂದ ಗಂಡ
ಮದುವೆಯಾದ ಆರಂಭದಲ್ಲಿ ನವ ಜೋಡಿಗಳು ಎಂತೆಂಥ ಕನಸು ಕಂಡಿರುತ್ತಾರೆ. ಮದುವೆಯಾದ ಬಳಿಕವು ತಮ್ಮ ಕನಸ್ಸನ್ನು ನನಸು ಮಾಡಲು ಪ್ರಮಾಣಿಕವಾಗಿ ಪ್ರಯತ್ನ ಕೂಡ ಮಾಡುತ್ತಾರೆ. ಆದರೆ ಕಲವು ಮದುವೆಯಾದ ಸ್ವಲ್ಪ ದಿನದಲ್ಲಿ ಅದು ಏನಾಗತ್ತೋ ಏನೋ ಕೆಲವು ಬಂಧಗಳು ಮುರಿದು ಬೀಳುತ್ತೆ. ಇದು ಅಂತದ್ದೇ ಕಥೆ ಸಿಂಪಲ್ ಅಂತೂ ಅಲ್ಲ ಪತ್ನಿಯ ಭಯನಕ ಮರ್ಡರ್ ಹಿಸ್ಟರಿ.
ಉಡುಪಿ, (ಆಗಸ್ಟ್ 23): ಸೋಶಿಯಲ್ ಮೀಡಿಯಾ ಮಿತವಾಗಿ ಬಳಸಿದ್ರೆ ಒಳ್ಳೆಯದು. ಅದರ ಬಳಕೆ ಅತಿಯಾದ್ರೆ ಸಂಸಾರದಲ್ಲಿ ಯಾವ ರೀತಿ ವಿರಸ ಮೂಡಿ, ಅದು ಮಹಾ ಅನಾಹುತಕ್ಕೆ ಕಾರಣ ಆಗುತ್ತದೆ ಎನ್ನುವುದಕ್ಕೆ ಇದೊಂದು ಉದಾಹರಣೆ. ಉಡುಪಿಯಲ್ಲಿ ಗಂಡನೊಬ್ಬ ಹೆಂಡತಿಯನ್ನು ಹೊಡೆದು ಕೊಂದಿದ್ದಾನೆ. ಕಾರಣ ಆಕೆಯ ಸೋಶಿಯಲ್ ಮೀಡಿಯಾ ಹುಚ್ಚು. ಅದರಲ್ಲೂ ಇನ್ಸ್‌ಸ್ಟಾಗ್ರಾಮ್ ರೀಲ್ಸ್‌ನಲ್ಲಿ ಆಕೆ ಹೆಚ್ಚು ಸಮಯ ಕಳೆಯುತ್ತಿದ್ದಳು ಎನ್ನುವ ಕ್ಷುಲ್ಲಕ ಕಾರಣ. ಇನ್ಸ್‌ಸ್ಟಾಗ್ರಾಮ್‌ನಲ್ಲಿ ಕೇವಲ 16 ಫಾಲೋವರ್ಸ್ ಹೊಂದಿದ್ದ ಪತ್ನಿ ರೀಲ್ಸ್ ಹುಚ್ಚಿಗೆ ಸಾವಿನ ಮನೆ ಸೇರಿದ್ದಾಳೆ. ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕಾರ್ಕಡ ಪಡುಹೋಳಿ ಎಂಬಲ್ಲಿ ಘಟನೆ ನಡೆದಿದೆ. ಬೀದರ್ ಮೂಲದ ಜಯಶ್ರೀ, ತನ್ನ ಪತಿ ಕಿರಣ್ ಉಪಾಧ್ಯಾಯ ಕೈಯಲ್ಲೆ ಸಾವನ್ನಪ್ಪಿದ್ದು, ಈ ಸಂಬಂಧ ಪತಿಯನ್ನು ಕೋಟ ಪೊಲೀಸರು ಬಂಧಿಸಿದ್ದಾರೆ.
ರೀಲ್ಸ್ ದುನಿಯಾಗೆ ಬೇಕಾಗಿರೋದು ಅಂದ ಚೆಂದ ಬಳುಕು ಮೈಮಾಟ, ವೈಯ್ಯಾರ, ಇಷ್ಟಿದ್ದು ಚಿಟಿಕೆಯಷ್ಟು ಪ್ರತಿಭೆ ಇದ್ರೂ ಸಾಕು . ರೀಲ್ಸ್ ದುನಿಯಾದಲ್ಲಿ ಅವರು ಮಹಾರಾಣಿಯರೇ. ಈ ಎಲ್ಲಾ ವೈಯ್ಯಾರಗಳಿದ್ದು ರೀಲ್ಸ್‌ನಲ್ಲಿ ಮಿಂಚ್ದಿದ್ದ ಚೆಲುವೆ ಜಯಶ್ರೀ ಈಗ ಹೆಣವಾಗಿ ಹೋಗಿದ್ದಾಳೆ. ಆಕೆಯನ್ನು ಮುಗಿಸಿದವನು ಮದುವೆಯಾದ ಗಂಡನೇ ಹೆಸರು ಕಿರಣ್ ಉಪಾಧ್ಯಾಯ. ಮೊಬೈಲ್ ನಲ್ಲಿ ರೀಲ್ಸ್ ಮಾಡಿಕೊಂಡು ಜಾಲಿಯಾಗಿದ್ದ ನವ ಜೋಡಿಗಳಿಗೆ ಅದು ಏನಾಯಿತೋ ಗೊತ್ತಿಲ್ಲ. ನಿನ್ನೆ ರಾತ್ರಿ ಮೊಬೈಲ್ ಬಳಕೆ ವಿಚಾರವಾಗಿ ಪತಿ, ಪತ್ನಿ ಜಗಳವಾಡಿಕೊಂಡು ಗಲಾಟೆ ತಾರಕಕ್ಕೇರಿದ್ದಲ್ಲದೇ ಪತಿ ಪತ್ನಿಗೆ ಹೊಡೆದ ಪರಿಣಾಮ ಪತ್ನಿ ಸಾವನ್ನಪ್ಪಿದ ಘಟನೆ ಇಂದು ಬೆಳಿಗ್ಗೆ 4 ಗಂಟೆ ಸುಮಾರಿಗೆ ನಡೆದಿದೆ.
ಇದನ್ನೂ ಓದಿ: Shocking News: ತನ್ನ ಪ್ರಿಯಕರನ ಜೊತೆ ಮದುವೆಯಾದ ವಧುವಿನ ಕತ್ತು ಸೀಳಿದ ಯುವತಿ!
ಕಿರಣನ ಪತ್ನಿ ಜಯಶ್ರೀ ಇವರು ಮೂಲತ ಬೀದರ್ ಜಿಲ್ಲೆಯ ದಂಬಳಾಪುರದವರು. 9 ತಿಂಗಳ ಹಿಂದಷ್ಟೇ ಕಿರಣ ಉಪಾಧ್ಯಾಯ ಹಾಗೂ ಜಯಶ್ರೀ ಎಂಬುವರ ವಿವಾಹವಾಗಿತ್ತು. ಕಳೆದ ಮೂರು ತಿಂಗಳಿನಿಂದ ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕಾರ್ಕಡ ಪಡುಹೋಳಿಯ ಕಡಿದ ಹೆದ್ದಾರಿ ಎಂಬಲ್ಲಿ ತಾರಾನಾಥ ಹೊಳ್ಳ ಅವರ ಬಾಡಿಗೆ ಮನೆಯಲ್ಲಿ ವಾಸ ಮಾಡಿಕೊಂಡಿದ್ದರು. ಪತ್ನಿ ಜಯಶ್ರೀಗೆ ವಿಪರೀತ ಮೊಬೈಲ್ ನಲ್ಲಿ ರೀಲ್ಸ್ ಮಾಡುವ ಹುಚ್ಚು. ಇದಲ್ಲದೆ ಆನ್ಲೈನ್ ವ್ಯವಹಾರದಲ್ಲಿ ತೊಡಗಿದ್ದ ಪತ್ನಿಯಿಂದ ಬೇಸತ್ತ ಪತಿ ಇದನ್ನೇಲ್ಲ ನಿಲ್ಲಿಸುವಂತೆ ತಿಳಿಸಿದ್ದ ಎನ್ನಲಾಗಿದೆ.
ಇದೇ ವಿಚಾರವಾಗಿ ಪ್ರತೀ ದಿನ ಗಂಡ ಹೆಂಡತಿ ನಡುವೆ ಜಗಳ ನಡೆಯುತ್ತಿತ್ತು. ನಿನ್ನೆ ಗುರುವಾರ ರಾತ್ರಿ ಮತ್ತೆ ಇದೇ ವಿಚಾರವಾಗಿ ಶುರುವಾಗಿದ್ದ ಜಗಳ ಶುಕ್ರವಾರ ಮುಂಜಾನೆ ತನಕ ನಡೆದು ಪತಿ ಕತ್ತಿಯಿಂದ ಪತ್ನಿ ಹಲ್ಲೆ ಮೇಲೆ ಹಲ್ಲೆ ಮಾಡಿದ್ದಾನೆ. ಪರಿಣಾಮ ಜಯಶ್ರೀ ತಲೆಗೆ ಗಂಭೀರ ಗಾಯಗೊಂಡು ಸಾವನ್ನಪ್ಪಿದ್ದಾಳೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಕೋಟ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಶೀಲಿನ ನಡೆಸಿ ಆರೋಪಿ ಪತಿ ಕಿರಣ್ ನನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.
ಒಟ್ಟಾರೆಯಾಗಿ, ಪತ್ನಿಯ ಮೊಬೈಲ್ ಗೀಳು, ಗಂಡ ಸಿಟ್ಟು ಹತಾಶೆಯ ಪರಿಣಾಮವಾಗಿ ಒಂದು ಹೆಣ ಉರುಳಿದೆ. ಸದ್ಯ ಕೋಟ ಪೊಲೀಸರು ಈ ಪ್ರಕರಣದ ಕುರಿತು ತನಿಖೆ ನಡೆಸುತ್ತಿದ್ದಾರೆ. ಇಂತಹ ಘಟನೆಗಳನ್ನಾದರು ಗಮನಿಸಿ ಇಂದಿನ ಯುವ ಪೀಳಿಗೆಯ ಅನಗತ್ಯ ಮೊಬೈಲ್ ಬಳಕೆಯಿಂದ ದೂರವಾಗಲಿ ಎನ್ನುವುದು ನಮ್ಮ ಆಶಯ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ