ಚಕ್ರತೀರ್ಥ ಅಧ್ಯಕ್ಷತೆಯ ಪಠ್ಯ ವಾಪಸ್ ಪಡೆಯುವ ಮಾತೇ ಇಲ್ಲ ಎಂದ ಸಚಿವ ನಾಗೇಶ್; ಇದು ಕಾಂಗ್ರೆಸ್ ಕೃಪಾಪೋಷಿತ ಸಾಹಿತಿಗಳ ಬಳಗಕ್ಕೆ ಶಾಕ್ ಎಂದ ಡಾ. ಅಶ್ವತ್ಥ್ ನಾರಾಯಣ
Dr. Ashwathnarayan CN: ಸುಳ್ಳಿನ ಕಥೆ ಹಣೆಯುವಲ್ಲಿ ಪಳಗಿರುವ ಕಾಂಗ್ರೆಸ್ ಕೃಪಾಪೋಷಿತ ಸಾಹಿತಿಗಳ ಬಳಗವಿಂದು ತಮ್ಮ ಬೇಳೆ ಬೇಯಿಸಿಕೊಳ್ಳಲಾಗದೇ ಕಂಪಿಸುತ್ತಿದೆ. #ToolkitResignation ತಂತ್ರ ಬಳಸಿ ಸಿಂಪತಿ ಗಿಟ್ಟಿಸಿಕೊಳ್ಳಬಯಸುವ ಇಂಥವರ ಬಗ್ಗೆ ಸರ್ಕಾರಕ್ಕೆ ಯಾವುದೇ ಮರುಕವಿಲ್ಲ.
ಬೆಂಗಳೂರು: ಕೊರೊನಾ ಪೆಡಂಭೂತದ ಕಾಟ ಮುಗಿದು ಶಾಲಾ ಮಕ್ಕಳು 2 ವರ್ಷಗಳ ಬಳಿಕ ಶಾಲಾ ಹೊಸ್ತಿಲು ತುಳಿಯುತ್ತಿರುವ ಈ ಸಂದರ್ಭದಲ್ಲಿ ಶಾಲಾ ಪಠ್ಯ ರಾಜಕೀಯ ಕಾರಣಗಳಿಗಾಗಿ ಕೆಲವರಿಗೆ ಅಪಥ್ಯವಾಗಿ ಕಂಡುಬಂದಿದೆ. ಈ ಸಂದರ್ಭದಲ್ಲಿ ರೋಹಿತ್ ಚಕ್ರತೀರ್ಥ ಅಧ್ಯಕ್ಷ ಸಮಿತಿಯ ಪಠ್ಯ ಪರಿಷ್ಕರಣೆ (Karnataka textbook revision committee chairman Rohit Chakratirtha) ವಿವಾದದ ಕುರಿತು ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ್ ನಾರಾಯಣ (Dr. Ashwathnarayan CN) ಟ್ವೀಟ್ ಮಾಡಿದ್ದಾರೆ. ಕಾಂಗ್ರೆಸ್ ಕೃಪಾಪೋಷಿತ ಸಾಹಿತಿಗಳ ಬಳಗ ಕಂಪಿಸುತ್ತಿದೆ. ತಮ್ಮ ಬೇಳೆ ಬೇಯಿಸಿಕೊಳ್ಳಲಾಗದೇ ಕಂಪಿಸುತ್ತಿದೆ. ಟೂಲ್ ಕಿಟ್ ರಾಜೀನಾಮೆ ತಂತ್ರವನ್ನು ಬಳಸಿ ಸಿಂಪತಿ ಗಿಟ್ಟಿಸಿಕೊಳ್ಳಬಯಸುವ ಇಂಥವರ ಬಗ್ಗೆ ಮರುಕವಿಲ್ಲ. ಇಂತಹವರ ಬಗ್ಗೆ ಬಿಜೆಪಿ ಸರ್ಕಾರಕ್ಕೆ ಯಾವುದೇ ಮರುಕವಿಲ್ಲ. ಇವರಿಗೆ ನೂತನ ಪಠ್ಯ ಪಥ್ಯವಾಗದ್ದಕ್ಕೆ ಬದಲಾಯಿಸಲಾಗದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ್ ನಾರಾಯಣ ಟ್ವೀಟ್ ನಲ್ಲಿ ನೇರ ನುಡಿಗಳಲ್ಲಿ ಹೇಳಿದ್ದಾರೆ. ಇದಕ್ಕೂ ಮುನ್ನ, ಶಿಕ್ಷಣ ಸಚಿವ ಬಿಸಿ ನಾಗೇಶ್ ಇಂದು ಮಧ್ಯಾಹ್ನ ಸುದ್ದಿಗೋಷ್ಠಿ ನಡೆಸಿ, ರೋಹಿತ್ ಚಕ್ರತೀರ್ಥ ಸಾರಥ್ಯದಲ್ಲಿ ನಡೆದ ಪಠ್ಯ ಪರಿಷ್ಕರಣೆಯನ್ನು ವಾಪಸ್ ಪಡೆಯುವ ಪ್ರಶ್ನೆಯೇ ಇಲ್ಲ ಎಂದು ಸಷ್ಟಪಡಿಸಿದ್ದರು (Textbook Row).
ಉನ್ನತ ಶಿಕ್ಷಣ ಖಾತೆ ಸಚಿವ ಡಾಕ್ಟರ್ ಅಶ್ವಥ್ ನಾರಾಯಣ್ ಟ್ವೀಟ್ ಸಾರಾಂಶ ಹೀಗಿದೆ.. ಸುಳ್ಳಿನ ಕಥೆ ಹಣೆಯುವಲ್ಲಿ ಪಳಗಿರುವ ಕಾಂಗ್ರೆಸ್ ಕೃಪಾಪೋಷಿತ ಸಾಹಿತಿಗಳ ಬಳಗವಿಂದು ತಮ್ಮ ಬೇಳೆ ಬೇಯಿಸಿಕೊಳ್ಳಲಾಗದೇ ಕಂಪಿಸುತ್ತಿದೆ. #ToolkitResignation ತಂತ್ರ ಬಳಸಿ ಸಿಂಪತಿ ಗಿಟ್ಟಿಸಿಕೊಳ್ಳಬಯಸುವ ಇಂಥವರ ಬಗ್ಗೆ @BJP4Karnataka ಸರ್ಕಾರಕ್ಕೆ ಯಾವುದೇ ಮರುಕವಿಲ್ಲ. ಇವರಿಗೆ ನೂತನ ಪಠ್ಯಕ್ರಮ ಪಥ್ಯವಾಗದ ಮಾತ್ರಕ್ಕೆ ಬದಲಾಯಿಸಲಾಗದು.
ಸುಳ್ಳಿನ ಕಥೆ ಹಣೆಯುವಲ್ಲಿ ಪಳಗಿರುವ ಕಾಂಗ್ರೆಸ್ ಕೃಪಾಪೋಷಿತ ಸಾಹಿತಿಗಳ ಬಳಗವಿಂದು ತಮ್ಮ ಬೇಳೆ ಬೇಯಿಸಿಕೊಳ್ಳಲಾಗದೇ ಕಂಪಿಸುತ್ತಿದೆ.#ToolkitResignation ತಂತ್ರ ಬಳಸಿ ಸಿಂಪತಿ ಗಿಟ್ಟಿಸಿಕೊಳ್ಳಬಯಸುವ ಇಂಥವರ ಬಗ್ಗೆ @BJP4Karnataka ಸರ್ಕಾರಕ್ಕೆ ಯಾವುದೇ ಮರುಕವಿಲ್ಲ. ಇವರಿಗೆ ನೂತನ ಪಠ್ಯಕ್ರಮ ಪಥ್ಯವಾಗದ ಮಾತ್ರಕ್ಕೆ ಬದಲಾಯಿಸಲಾಗದು.
— Dr. Ashwathnarayan C. N. (@drashwathcn) May 31, 2022
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Also Read: iQOO Neo 6: ಭಾರತಕ್ಕೆ ಬಂದೇ ಬಿಡ್ತು ಐಕ್ಯೂ ನಿಯೋ 6 5G: ಇಷ್ಟು ಕಡಿಮೆ ಬೆಲೆಗೆ ಎಂಥಾ ಸ್ಮಾರ್ಟ್ಫೋನ್
Also Read:
ಪವನ್ ಕಲ್ಯಾಣ್ ಜತೆ ಸಿನಿಮಾ ಮಾಡಲಿದ್ದಾರೆ ರಾಜಮೌಳಿ; ಸೆಟ್ಟೇರೋದು ಯಾವಾಗ?
Published On - 6:19 pm, Tue, 31 May 22