ತುಮಕೂರು: ಜಿ.ಪಂ. ಕೆಡಿಪಿ ಸಭೆಯಲ್ಲಿ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡ ವೇಳೆ ಕೆಟ್ಟ ಪದ ಬಳಸಿದ್ದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ವಿಷಾದ ವ್ಯಕ್ತಪಡಿಸಿದ್ದಾರೆ.
ಸೆಪ್ಟೆಂಬರ್, ಅಕ್ಟೋಬರ್ನಲ್ಲಿ ಆಗಬೇಕಿದ್ದ ಕೆಲಸ ಇನ್ನೂ ಆಗಿಲ್ಲ. ಜಿಲ್ಲಾ ಪರಿಷತ್ ಇಂಜಿಯರ್ಗಳು ಯಾರೂ ಕೆಲಸ ಮಾಡಿಲ್ಲ. 600 ಕೋಟಿಯಷ್ಟು ಯೋಜನೆಯ ಕೆಲಸ ಆಗದಿದ್ದಕ್ಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡೆ. ಎಷ್ಟು ಅಂತಾ ಸಹಿಸಿಕೊಳ್ಳೋದು, ಕೆಟ್ಟ ಪದ ಬಳಸಿದ್ದೇನೆ, sorry ಎಂದು ಜೆ.ಸಿ.ಮಾಧುಸ್ವಾಮಿ ಕ್ಷಮೆ ಕೇಳಿ ವಿಷಾದ ವ್ಯಕ್ತಪಡಿಸಿದರು.
600 ಕೋಟಿಯಷ್ಟು ಯೋಜನೆಯ ಕೆಲಸ ಆಗಿಲ್ಲ. ಎಷ್ಟು ಸಾರಿ ಸಹಿಸಿಕೊಳ್ಳೋದು. Sorry, ಹಾಗಾಗಿ ಕೆಟ್ಟ ಪದ ಬಳಸಿದ್ದೇನೆ ಎಂದು ಹೇಳಿದರು. ಅಧಿಕಾರಿಗಳ ಮೇಲೆ ಌಕ್ಷನ್ ತೆಗೆದುಕೊಳ್ಳದೆ ಸಹಿಸಿಕೊಂಡು ಹೋದ್ರೆ ಅವರು ಅದನ್ನೇ ದೌರ್ಬಲ್ಯ ಎಂದುಕೊಳ್ತಾರೆ. SCP ಹಾಗೂ TSP ಯೋಜನೆಗಳಲ್ಲಿ ಕೆಲಸವೇ ಆಗಿಲ್ಲ. ಹೀಗಾದ್ರೇ ಏನು ಮಾಡಬೇಕು? 4 ನೇ ತಾರಿಕು ಹೇಳಿದ್ರೂ ಕೂಡ ಮಾಡಿಲ್ಲ ಎಂದು ಸಚಿವ ಮಾಧುಸ್ವಾಮಿ ಕ್ಷಮೆ ಕೇಳಿದ ಬಳಿಕ ಹೇಳಿದರು.
ಜಾಡಿಸಿ ಒದ್ದರೆ.. ಎಂದು AEEಗೆ ಬೈದ ಸಚಿವ ಮಾಧುಸ್ವಾಮಿ! ಅಧಿಕಾರಿ ಪತ್ನಿಗೂ ಬೈದ ಕಾನೂನು ಸಚಿವ!