ಜಲ್ಲಿ, ಕಲ್ಲು, M ಸ್ಯಾಂಡ್‌ಗೆ ಅಂತಾರಾಜ್ಯ ತೆರಿಗೆ ವಿಧಿಸುವ ಅಧಿಕಾರ ಸರ್ಕಾರಕ್ಕಿಲ್ಲ -ಹೈಕೋರ್ಟ್
ಜಲ್ಲಿ, ಕಲ್ಲು ಮತ್ತು M ಸ್ಯಾಂಡ್‌ಗೆ ಅಂತಾರಾಜ್ಯ ತೆರಿಗೆ ವಿಧಿಸಿದ್ದ ರಾಜ್ಯಸರ್ಕಾರದ ತಿದ್ದುಪಡಿಯನ್ನು ಹೈಕೋರ್ಟ್ ರದ್ದುಪಡಿಸಿದೆ. ಕರ್ನಾಟಕ ರಾಜ್ಯ ಸಣ್ಣ ಖನಿಜಗಳ ರಿಯಾಯಿತಿ ನಿಯಮ 42(7) ಅನ್ನು ಹೈಕೋರ್ಟ್ ರದ್ದುಪಡಿಸಿದೆ.
ಬೆಂಗಳೂರು: ಜಲ್ಲಿ, ಕಲ್ಲು ಮತ್ತು M ಸ್ಯಾಂಡ್‌ಗೆ ಅಂತಾರಾಜ್ಯ ತೆರಿಗೆ ವಿಧಿಸಿದ್ದ ರಾಜ್ಯಸರ್ಕಾರದ ತಿದ್ದುಪಡಿಯನ್ನು ಹೈಕೋರ್ಟ್ ರದ್ದುಪಡಿಸಿದೆ. ಕರ್ನಾಟಕ ರಾಜ್ಯ ಸಣ್ಣ ಖನಿಜಗಳ ರಿಯಾಯಿತಿ ನಿಯಮ 42(7) ಅನ್ನು ಹೈಕೋರ್ಟ್ ರದ್ದುಪಡಿಸಿದೆ.
ಈ ಹಿಂದೆ, ಇತರೆ ರಾಜ್ಯಗಳಿಂದ ಬರುತ್ತಿದ್ದ ಜಲ್ಲಿ, ಕಲ್ಲು ಮತ್ತು M ಸ್ಯಾಂಡ್‌ಗೆ ಮೆಟ್ರಿಕ್ ಟನ್‌ಗೆ ರೂ.70ರಂತೆ ತೆರಿಗೆ ನೀಡಬೇಕಿತ್ತು. 2020ರ ಜೂ.30ರಂದು ಈ ಬಗ್ಗೆ ಸರ್ಕಾರ ನಿಯಮಕ್ಕೆ ತಿದ್ದುಪಡಿ ಸಹ ತಂದಿತ್ತು.
ಹಾಗಾಗಿ, ತೆರಿಗೆ ಪ್ರಶ್ನಿಸಿ ಹಲವರಿಂದ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಕೆಯಾಗಿತ್ತು. ಹೀಗಾಗಿ, ಕಾನೂನಿನಡಿ ತೆಗೆದ ಖನಿಜಕ್ಕೆ ಅಂತಾರಾಜ್ಯ ತೆರಿಗೆಯಿಲ್ಲ. ಸರ್ಕಾರಕ್ಕೆ ತೆರಿಗೆ ವಿಧಿಸುವ ಅಧಿಕಾರವಿಲ್ಲವೆಂದು ಹೈಕೋರ್ಟ್ ತೀರ್ಪು ನೀಡಿದೆ. ಹೈಕೋರ್ಟ್ CJ ಎ.ಎಸ್.ಒಕಾ ಮತ್ತು ನ್ಯಾ.S.ವಿಶ್ವಜಿತ್ ಶೆಟ್ಟಿರವರಿದ್ದ ಪೀಠ ತೀರ್ಪು ನೀಡಿದೆ.
‘ದೆಹಲಿ ಚಲೋ ಕೊರೊನಾ ಹರಡುವಿಕೆಗೆ ಕಾರಣವಾಗುವುದಿಲ್ಲವೇ?‘ ಕೇಂದ್ರವನ್ನು ಪ್ರಶ್ನಿಸಿದ ಸುಪ್ರೀಂ ಕೋರ್ಟ್