AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೇಬಿ ಬೆಟ್ಟದ ಗಣಿಗಾರಿಕೆ ನಿಲ್ಲಬೇಕು, ಜೆಡಿಎಸ್ ಮಾಜಿ ಸಚಿವರೂ ಕೂಡ ಇದಕ್ಕೆ ಸಾಥ್ ಕೊಡ್ತಿದ್ದಾರೆ -ಸಚಿವ ನಾರಾಯಣಗೌಡ

ಶಿವಮೊಗ್ಗ ಸ್ಪೋಟದ ತರಹ ಇಲ್ಲಿ ನಡೆದರೆ ನಮ್ಮ ಡ್ಯಾಂಗೆ ಎಫೆಕ್ಟ್ ಆಗತ್ತೆ ಎಂಬ ಭಯದ ವಾತಾವರಣ ಇದೆ. ಬೇಬಿ ಬೆಟ್ಟದಲ್ಲಿ ಗಣಿಗಾರಿಕೆ ಬೇಡವೇ ಬೇಡ. ಟೋಟಲ್ ಆಗಿ ಬೇಬಿ ಬೆಟ್ಟದ ಗಣಿಗಾರಿಕೆ ಸ್ಟಾಪ್ ಆಗಬೇಕು. ಇಲ್ಲಿ ಯಾರದ್ದಾದ್ರೂ ಪಾತ್ರ ಇರಲಿ ಅದು ನಿಲ್ಲಬೇಕು. ಜೆಡಿಎಸ್ ಮಾಜಿ ಸಚಿವರೂ ಕೂಡ ಇದಕ್ಕೆ ಸಾಥ್ ಕೊಡ್ತಿದ್ದಾರೆ...

ಬೇಬಿ ಬೆಟ್ಟದ ಗಣಿಗಾರಿಕೆ ನಿಲ್ಲಬೇಕು, ಜೆಡಿಎಸ್ ಮಾಜಿ ಸಚಿವರೂ ಕೂಡ ಇದಕ್ಕೆ ಸಾಥ್ ಕೊಡ್ತಿದ್ದಾರೆ -ಸಚಿವ ನಾರಾಯಣಗೌಡ
ಸಚಿವ ನಾರಾಯಣಗೌಡ
TV9 Web
| Edited By: |

Updated on: Jul 14, 2021 | 10:20 AM

Share

ಮಂಡ್ಯ: ಕೆಆರ್ಎಸ್ ಡ್ಯಾಂ ಬಿರುಕು ಬಿಟ್ಟಿದೆ. ಮಂಡ್ಯದಲ್ಲಿ ಗಣಿಗಾರಿಕೆ ನಡೆಯುತ್ತಿದೆ ಎಂದು ಸಂಸದೆ ಸುಮಲತಾ ಹೇಳಿದಾಗಿನಿಂದ ಮಂಡ್ಯದಲ್ಲಿ ಸುಮಲತಾ-ಜೆಡಿಎಸ್ ನಾಯಕರ ನಡುವೆ ದೊಡ್ಡ ಕದನ ಸೃಷ್ಟಿಯಾಗಿದೆ. ಪ್ರತಿ ದಿನ ಒಂದಲೊಂದು ಬೆಳವಣಿಗೆಗಳು ನಡುತ್ತಿವೆ. ಇನ್ನು ಈ ಬಗ್ಗೆ ಮಂಡ್ಯ ಉಸ್ತುವಾರಿ ಸಚಿವ ನಾರಾಯಣಗೌಡ ಟಿವಿ9 ಜೊತೆ ಮಾತನಾಡಿದ್ದಾರೆ.

ಅಕ್ರಮ ಗಣಿಗಾರಿಕೆ ಕಳೆದ ಎರಡೂವರೆ ತಿಂಗಳಿಂದ ನಡೆದಿದೆ ಅಂತ ಜ‌ನ ಹೇಳ್ತಿದ್ದಾರೆ. ಎಲ್ಲ ಅಧಿಕಾರಿಗಳನ್ನು ಕರೆದು ವಾರ್ನಿಂಗ್ ಮಾಡಿದ್ದೇನೆ. ಬೇಬಿ ಬೆಟ್ಟದ ತಲೆ‌ನೋವೇ ಬೇಡ ಅಂತ ಹೇಳಿದ್ದೇವೆ. ಅಲ್ಲಿ ಇರುವ ಎರಡು ಮೂರು ಗಣಿಗೆ ಬೇರೆ ಕಡೆ ಫ್ರಿ ಆಫ್ ಕಾಸ್ಟ್ ಅವಕಾಶ ಕೊಡಿ ಅಂತ ಡಿಸಿಯವರಿಗೆ ಹೇಳಿದ್ದೇನೆ. ಗಣಿಗಾರಿಕೆ ನಡೆಯಲೇಬೇಕು ಕಲ್ಲು ಜಲ್ಲಿ ಎಂ ಸ್ಯಾಂಡ್ ಬೇಕೇ ಬೇಕಾಗುತ್ತದೆ. ಅಧಿಕೃತವಾಗಿ ಅನುಮತಿ ಪಡೆದುಕೊಂಡವರು ಕ್ರಮ ಬದ್ದವಾಗಿ ನಡೆಸಲಿ. ಹಲವರು ರಾಯಲ್ಟಿ ಕಟ್ಟುತ್ತಿಲ್ಲ, ರಾಯಲ್ಟಿ ಕರೆಕ್ಟಾಗಿ ಕಟ್ಟಿಕೊಂಡು ಹೋಗಬೇಕು ಎಂದು ನಾರಾಯಣಗೌಡ ಹೇಳಿದ್ರು.

ಕೆಆರ್​ಎಸ್ ಡ್ಯಾಂ ಬಿರುಕು ಬಿಟ್ಟಿಲ್ಲ ಜಿಲ್ಲೆಯ ಅಭಿವೃದ್ಧಿಗೆ ಸರ್ಕಾರಕ್ಕೂ ಅನುಕೂಲ. ಅದನ್ನು ಖಡಾಖಂಡಿತವಾಗಿ ಹೇಳಿದ್ದೇವೆ. ನೂರು ಲಾರಿ ಜಲ್ಲಿ ಹೊಡೆದು ಐದು ಹತ್ತು ಲಾರಿಗೆ ರಾಯಲ್ಟಿ ಕಟ್ಟೋದು ತಪ್ಪು. ರಸ್ತೆಗಳು, ಪರಿಸರ ಹಾಳಾಗ್ತಿದೆ. ಎಸ್.ಪಿ ಮಟ್ಟದ ಅಧಿಕಾರಿಗಳಿಗೂ ಅಕ್ರಮ ಗಣಿ ನಡಿತಾ ಇದ್ರೆ ಕ್ರಮ ತೆಗೆದುಕೊಳ್ಳೋದಕ್ಕೆ ಹೇಳಿದ್ದೇವೆ. ಏನಾದ್ರೂ ಮುಂದೆ ಆ ರೀತಿ ಕಂಡು ಬಂದರೆ ನಾನೇ ಸೀಜ್ ಮಾಡಿಸ್ತೇನೆ. ಕೆಆರ್ಎಸ್ ಡ್ಯಾಂ ಬಿರುಕು ಬಿಟ್ಟಿಲ್ಲ ಎನ್ನುವ ವರದಿ ನಮ್ಮ ಬಳಿ ಇದೆ. ಸುಮಲತಾ ಮೇಡಂಗೆ ಯಾರೋ ರಾಂಗ್ ಇನ್ಫಾರ್ಮೇಶನ್ ಕೊಟ್ಟಿದ್ದಾರೆ. ಮೇಡಂ ಆಫೀಸಿಗೂ ಆ ವರದಿಯನ್ನು ಕಳಿಸಿಕೊಡ್ತೇವೆ. ಅದರ ಬಗ್ಗೆ ಮೇಡಂ ಅವರಿಗೆ ಚಿಂತೆ ಬೇಡ. ಆದ್ರೆ ಅಕ್ರಮ ಗಣಿಗಾರಿಕೆ ಸ್ಟೆಪ್ಗೆ ಸುಮಲಾತಾಗೆ ಸಾಥ್ ಕೊಡ್ತೇವೆ ಎಂದರು.

ಇನ್ನು ಶಿವಮೊಗ್ಗ ಸ್ಪೋಟದ ತರಹ ಇಲ್ಲಿ ನಡೆದರೆ ನಮ್ಮ ಡ್ಯಾಂಗೆ ಎಫೆಕ್ಟ್ ಆಗತ್ತೆ ಎಂಬ ಭಯದ ವಾತಾವರಣ ಇದೆ. ಬೇಬಿ ಬೆಟ್ಟದಲ್ಲಿ ಗಣಿಗಾರಿಕೆ ಬೇಡವೇ ಬೇಡ. ಟೋಟಲ್ ಆಗಿ ಬೇಬಿ ಬೆಟ್ಟದ ಗಣಿಗಾರಿಕೆ ಸ್ಟಾಪ್ ಆಗಬೇಕು. ಇಲ್ಲಿ ಯಾರದ್ದಾದ್ರೂ ಪಾತ್ರ ಇರಲಿ ಅದು ನಿಲ್ಲಬೇಕು. ಜೆಡಿಎಸ್ ಮಾಜಿ ಸಚಿವರೂ ಕೂಡ ಇದಕ್ಕೆ ಸಾಥ್ ಕೊಡ್ತಿದ್ದಾರೆ. ಜೆಡಿಎಸ್ ನವರು ಅಕ್ರಮ ಗಣಿಗಾರಿಕೆ ಸ್ಟಾಪ್ ಮಾಡಿ ಅಂದಿದ್ದಾರೆ. ಇದೇ ಮಾತನ್ನು ಜೆಡಿಎಸ್ ನವರು ಮುಂದುವರೆಸಿಕೊಂಡು ಹೋಗಬೇಕು. ಯಾವ ಕಾರಣಕ್ಕೂ ಜೆಡಿಎಸ್ ನವರು ಈ ಮಾತಿನಿಂದ ಹಿಂದೆ ಸರಿಬಾರದು. ಡ್ಯಾಂ ಭಾಗದಲ್ಲಿ ಎಲ್ಲಿಯೂ ಗಣಿಗಾರಿಕೆ ನಡೆಯಲೇಬಾರದು. ಡ್ಯಾಂ ರಕ್ಷಣೆ‌ ಮಾಡುವುದು ನಮ್ಮ ಕರ್ತವ್ಯ. ಟೀಕೆ-ಟಿಪ್ಪಣಿ, ವಾದ-ವಿವಾದ ನಡೆಯಲಿ. ಆದರೆ ಲ್ಯಾಂಗ್ವೇಜ್ ನ‌ ಹಿಡಿತ ಇರಬೇಕು ಎನ್ನೋ ಮನವಿ ಮಾಡ್ತೇನೆ ಎಂದು ಸಚಿವ ನಾರಾಯಣಗೌಡ ಟಿವಿ9 ಜೊತೆ ಮಾತನಾಡುತ್ತ ಹೇಳಿದರು.

ಇದನ್ನೂ ಓದಿ: ಬೇಬಿಬೆಟ್ಟ, ಕೆಆರ್​ಎಸ್ ಜಲಾಶಯಕ್ಕೆ ಇಂದು ಸುಮಲತಾ ಭೇಟಿ: ಪೊಲೀಸರಿಗೆ ಎಚ್ಚರಿಕೆಯ ಪತ್ರ ನೀಡಿದ ಗ್ರಾಮ ಪಂಚಾಯ್ತಿ ಅಧ್ಯಕ್ಷ

ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್​​​ ಭೇಟಿ ಬಗ್ಗೆ ಕೆಎನ್​ ರಾಜಣ್ಣ ಸ್ಫೋಟಕ ಹೇಳಿಕೆ
ಡಿಕೆ ಶಿವಕುಮಾರ್​​​ ಭೇಟಿ ಬಗ್ಗೆ ಕೆಎನ್​ ರಾಜಣ್ಣ ಸ್ಫೋಟಕ ಹೇಳಿಕೆ
Ashes 2025: ಮೂರಕ್ಕೆ ಮೂರು... ಆಸ್ಟ್ರೇಲಿಯಾ ಪಾಲಾದ ಆ್ಯಶಸ್
Ashes 2025: ಮೂರಕ್ಕೆ ಮೂರು... ಆಸ್ಟ್ರೇಲಿಯಾ ಪಾಲಾದ ಆ್ಯಶಸ್
ಶೆಟ್ಟಿ ಗ್ಯಾಂಗ್ ಬಿರುಕು? ಮೊದಲ ಬಾರಿಗೆ ಮೌನ ಮುರಿದ ಪ್ರಮೋದ್ ಶೆಟ್ಟಿ
ಶೆಟ್ಟಿ ಗ್ಯಾಂಗ್ ಬಿರುಕು? ಮೊದಲ ಬಾರಿಗೆ ಮೌನ ಮುರಿದ ಪ್ರಮೋದ್ ಶೆಟ್ಟಿ