Tumkur News: ಕರ್ತವ್ಯ ಲೋಪದ ಕಾರಣಕ್ಕೆ ಒಂದು ಇಲಾಖೆಯಲ್ಲಿ ಸಸ್ಪೆಂಡ್, ಅದೇ ಅಧಿಕಾರಿ ಮತ್ತೊಂದು ಇಲಾಖೆಯ ಹುದ್ದೆಗೆ ನೇಮಕ
ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರ ನಡುವೆ ಮುಸುಕಿನ ಗುದ್ದಾಟ ಶುರುವಾಗಿದೆಯಾ ಎಂಬ ಅನುಮಾನ ವ್ಯಕ್ತವಾಗಿದೆ. ಹೌದು ಅಕ್ರಮ ಎಸಗಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅಮಾನತು ಮಾಡಿದ್ದ ಅಧಿಕಾರಿಗೆ ಸಚಿವ ಸತೀಶ್ ಜಾರಕಿಹೊಳಿ ತಮ್ಮ ಇಲಾಖೆಯ ಹುದ್ದೆಗೆ ನೇಮಕ ಮಾಡಿಕೊಂಡಿದ್ದಾರೆ.
ತುಮಕೂರು ಜು.22: ಕಾಂಗ್ರೆಸ್ ಸರ್ಕಾರದಲ್ಲಿ (Congress Government) ಸಚಿವರ ನಡುವೆ ಮುಸುಕಿನ ಗುದ್ದಾಟ ಶುರುವಾಗಿದೆಯಾ ಎಂಬ ಅನುಮಾನ ವ್ಯಕ್ತವಾಗಿದೆ. ಹೌದು ಅಕ್ರಮ ಎಸಗಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಅವರು ಅಮಾನತು ಮಾಡಿದ್ದ ಅಧಿಕಾರಿಯು ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಅವರ ಲೋಕೋಪಯೋಗಿ ಇಲಾಖೆಗೆ ನೇಮಕವಾಗಿದ್ದಾರೆ. ಇದು ಸಚಿವರ ಕಾರ್ಯವೈಖರಿ ಬಗ್ಗೆ ಅನುಮಾನ ಮೂಡಿಸಿದೆ.
ತುಮಕೂರು ವಿಭಾಗದ ಪಂಚಾಯತ್ ರಾಜ್ ಇಲಾಖೆಯ ಕಾರ್ಯಪಾಲಕರ ಇಂಜಿನಿಯರ್ ಎಸ್.ಆರ್ ಹರೀಶ್ ಟೆಂಡರ್ ಕರೆಯುವಲ್ಲಿ ವಿಳಂಬ ಮಾಡಿದ್ದರು. ಇದರಿಂದ ಸರ್ಕಾರದ ಬೊಕ್ಕಸಕ್ಕೆ 2 ಕೋಟಿ 76 ಲಕ್ಷ ನಷ್ಟವಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅಧಿಕಾರಿಯನ್ನು ಅಮಾನತು ಮಾಡಿ ಇಲಾಖಾ ತನಿಖೆಗೆ ವಹಿಸಿದ್ದರು. ಆದರೆ ಅಮಾನತು ಮಾಡಿ ಒಂದು ತಿಂಗಳು ಕಳೆಯುವದರೊಳಗೆ ಅಧಿಕಾರಿ ಎಸ್.ಆರ್ ಹರೀಶ್ ಅವರು ತುಮಕೂರು ವಿಭಾಗದಲ್ಲೇ ಲೋಕೋಪಯೋಗಿ ಕಾರ್ಯಪಾಲಕ ಇಂಜಿನಿಯರ್ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಹುದ್ದೆಯನ್ನು ಸಚಿವ ಸತೀಶ್ ಜಾರಕಿಹೊಳಿ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: 361 ಪ್ರೌಢಶಾಲೆಗಳ ಮೇಲ್ದರ್ಜೆಗೆ ತಡೆ: ಕರ್ನಾಟಕ ಸರ್ಕಾರ
ಕರ್ತವ್ಯ ಲೋಪದ ಕಾರಣಕ್ಕೆ ಒಂದು ಇಲಾಖೆಯಲ್ಲಿ ಸಸ್ಪೆಂಡ್ ಮಾಡಲಾಗಿದ್ದ ಅಧಿಕಾರಿಗೆ ಮತ್ತೊಂದು ಇಲಾಖೆಯ ಹುದ್ದೆಗೆ ನೇಮಕ ಮಾಡಿದ್ದು ಸಚಿವರ ಕಾರ್ಯವೈಖರಿ ಬಗ್ಗೆ ಅನುಮಾನ ಶುರುವಾಗಿದೆ. ಮತ್ತು ಹೀಗಾದರೆ ಭ್ರಷ್ಟ ಅಧಿಕಾರಿಗಳಿಗೆ ಕಡಿವಾಣ ಹಾಕುವುದು ಹೇಗೆ ಎಂಬ ಪ್ರಶ್ನೆ ಜನರಲ್ಲಿ ಉದ್ಭವವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:27 pm, Sat, 22 July 23