ಚಾಮರಾಜನಗರದಲ್ಲಿ‌ ಮತ್ತೆ ಆಕ್ಟಿವ್: ಗೋ ಬ್ಯಾಕ್ ಅಭಿಯಾನ ಡ್ಯಾಮೇಜ್ ಕಂಟ್ರೋಲ್​ಗೆ ಮುಂದಾದ ಸಚಿವ ಸೋಮಣ್ಣ

|

Updated on: Mar 26, 2023 | 10:35 AM

ಸಚಿವ ಸೋಮಣ್ಣ ಚಾಮರಾಜನಗರದಲ್ಲಿ‌ ಮತ್ತೆ ಆಕ್ಟಿವ್ ಆಗಿದ್ದು. ತಮ್ಮ ವಿರುದ್ಧ ಗೋ ಬ್ಯಾಕ್ ಅಭಿಯಾನ ಡ್ಯಾಮೇಜ್ ಕಂಟ್ರೋಲ್‌ ಗೆ ಮುಂದಾಗಿದ್ದಾರೆ.

ಚಾಮರಾಜನಗರದಲ್ಲಿ‌ ಮತ್ತೆ ಆಕ್ಟಿವ್:  ಗೋ ಬ್ಯಾಕ್ ಅಭಿಯಾನ ಡ್ಯಾಮೇಜ್ ಕಂಟ್ರೋಲ್​ಗೆ ಮುಂದಾದ ಸಚಿವ ಸೋಮಣ್ಣ
ಸಚಿವ ವಿ.ಸೋಮಣ್ಣ ವಿರುದ್ದ ಗ್ರಾಮಸ್ಥರ ಅಭಿಯಾನ
Follow us on

ಚಾಮರಾಜನಗರ: ಚುನಾವಣೆ ಹೊಸ್ತಿಲಲ್ಲಿ ತಮ್ಮ ವಿರುದ್ಧ ಚಾಮರಾಜನಗರದಲ್ಲಿ (Chamarajnagar) ಗೋ ಬ್ಯಾಕ್ (Go Back Somanna) ಪ್ರತಿಭಟನೆ ಎಚ್ಚರಿಕೆ ಬೆನ್ನಲ್ಲೇ ವಸತಿ ಸಚಿವ ವಿ.ಸೋಮಣ್ಣ(V Somanna) ಎಚ್ಚೆತ್ತುಕೊಂಡಿದ್ದಾರೆ. ಹೈಕಮಾಂಡ್​ ನಾಯಕರು ಸಮಾಧಾನ ಮಾಡಿದ ಬೆನ್ನಲೇ ಸೋಮಣ್ಣ ತಮ್ಮ ಉಸ್ತುವಾರಿ ಜಿಲ್ಲೆ ಚಾಮರಾಜನಗರದಲ್ಲಿ ಆ್ಯಕ್ಟೀವ್ ಆಗಿದ್ದು, ಗೋ ಬ್ಯಾಕ್ ಅಭಿಯಾನ ಡ್ಯಾಮೇಜ್ ಕಂಟ್ರೋಲ್​ ಮುಂದಾಗಿದ್ದಾರೆ. ವೀರಭದ್ರೇಶ್ವರ ದೇವಸ್ಥಾನ ಜೀರ್ಣೋದ್ಧಾರ ಮತ್ತು ಹೊಸ ತೇರು ನಿರ್ಮಾಣ ಮಾಡಿಕೊಡುವುದಾಗಿ ಕೊಟ್ಟಿದ್ದ ಮಾತು ತಪ್ಪಿದ್ದರು, ಈ ಹಿನ್ನೆಲೆಯಲ್ಲಿ ಸೋಮಣ್ಣ ವಿರುದ್ಧ ಚಾಮರಾಜನಗರ ಜಲ್ಲೆಯ ಚನ್ನಪ್ಪನಪುರ ಗ್ರಾಮಸ್ಥರು ‘ಗೋ ಬ್ಯಾಕ್ ಸೋಮಣ್ಣʼ ಅಭಿಯಾನ ನಡೆಸಿ ಆಕ್ರೋಶ ಹೊರಹಾಕಿದ್ದರು. ಇದರ ಬೆನ್ನಲ್ಲೇ ಎಚ್ಚೆತ್ತ ಸೋಮಣ್ಣ ಗ್ರಾಮಸ್ಥರೊಂದಿಗೆ ಸಭೆ ಮಾಡಲು ಮುಂದಾಗಿದ್ದಾರೆ.

ಇದನ್ನೂ ಓದಿ: ಮುರಿದ ರಥ ನಿರ್ಮಾಣ ಮಾಡಿ ಕೊಡುವುದಾಗಿ ಹೇಳಿ ಮಾತು ತಪ್ಪಿದ ಸೋಮಣ್ಣ; ಸಚಿವರ ವಿರುದ್ಧ ಗೋ ಬ್ಯಾಕ್​ ಅಭಿಯಾನ

ಹೌದು…ಇದೇ ಮಾರ್ಚ್​ 26 ಇಲ್ಲವೇ 27 ಕ್ಕೆ ಸಚಿವ ಸೋಮಣ್ಣ ಗ್ರಾಮದ ದೇಗುಲಕ್ಕೆ ಬಂದು ಕೊಟ್ಟ ಮಾತಿನಂತೆ ರಥ ನಿರ್ಮಿಸಿಕೊಡಬೇಕು ಇಲ್ಲದಿದ್ದರೇ ಗೋ ಬ್ಯಾಕ್ ಸೋಮಣ್ಣ ಹೋರಾಟ ಮಾಡುತ್ತೇವೆ‌. ಜೊತೆಗೆ, ಚುನಾವಣೆಯನ್ನೂ ಬಹಿಷ್ಕರಿಸುತ್ತೇವೆ ಎಂದು ಗ್ರಾಮದ ಮುಖಂಡರುಗಳು ಎಚ್ಚರಿಕೆ ನೀಡಿದ್ದರು. ಇದರ ಬೆನ್ನಲ್ಲೇ ಸೋಮಣ್ಣ ಇದೀಗ ದಿಢೀರ್​ ಚಾಮರಾಜನಗರ ಜಿಲ್ಲಾ ಪ್ರವಾಸ ಕೈಗೊಂಡಿದ್ದು, ಚನ್ನಪ್ಪನಪುರ ಗ್ರಾಮದ ವಿವಿಧ ಸಮುದಾಯಗಳ ಮಖಂಡರ ಜೊತೆ ಮಾತುಕತೆ ನಡೆಸಲಿದ್ದಾರೆ.

ಇಂದು(ಮಾರ್ಚ್ 26) ಮಧ್ಯಾಹ್ನ 2 ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಇದರೊಂದಿಗೆ ಅಸಮಾಧಾನಿತರನ್ನ ಸಮಾಧಾನ ಮಾಡುವ ಪ್ಲಾನ್ ಮಾಡಿದ್ದಾರೆ. ಅಲ್ಲದೇ ತಮ್ಮ ವಿರುದ್ಧ ಗೋ ಬ್ಯಾಕ್​ ಅಭಿಯಾನ ಡ್ಯಾಮೇಜ್​ ಕಂಟ್ರೋಲ್​ಗೆ ಕಸರತ್ತು ನಡೆಸಿದ್ದಾರೆ.

ಆಗಿದ್ದೇನು?

ಚಾಮರಾಜನಗರ ತಾಲೂಕಿನ ಚೆನ್ನಪ್ಪನಪುರ ಗ್ರಾಮದಲ್ಲಿ 400 ವರ್ಷ ಪುರಾತನವಾದ ವೀರಭದ್ರೇಶ್ವರ ಸ್ವಾಮಿ ದೇಗುಲವಿದೆ. ಈ ಐತಿಹಾಸಿಕ ದೇವಾಲಯ ಶಿಥಿಲಗೊಂಡಿದ್ದು ರಥವೂ ಕೂಡ ಹಾಳಾಗಿದೆ. ಗ್ರಾಮಕ್ಕೆ ಸಚಿವ ಸೋಮಣ್ಣ ಬಂದಿದ್ದ ವೇಳೆ ದೇಗುಲ ಜೀರ್ಣೋದ್ಧಾರ ಮಾಡಲು ಕ್ರಮ ವಹಿಸುತ್ತೇನೆ ಜೊತೆಗೆ ರಥ ಮಾಡಿಸಿಕೊಡುತ್ತೇನೆ ಎಂದು ಸೋಮಣ್ಣ ಭರವಸೆ ಕೊಟ್ಟಿದ್ದರು. ಆದರೆ, ಸುತ್ತಮುತ್ತಲಿನ ಗ್ರಾಮದ ಒಟ್ಟು 24 ಕೋಮುಗಳ ಮುಖಂಡರು ಸೋಮಣ್ಣ ಅವರನ್ನು ನಗರದಲ್ಲಿ ಮತ್ತು ಬೆಂಗಳೂರಿನಲ್ಲಿ ಭೇಟಿ ಮಾಡಿದ್ದ ವೇಳೆ ಅಸೌಜನ್ಯದಿಂದ ನಡೆದುಕೊಂಡು ತಿರಸ್ಕಾರದಿಂದ ಕಂಡರು ಎಂಬುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಸೋಮಣ್ಣ ನಡೆ ಖಂಡಿಸಿ ಗ್ರಾಮದ ಮುಖಂಡರುಗಳು ಸಭೆ ಸೇರಿ ನಿರ್ಣಯ ಕೈಗೊಂಡಿದ್ದು ಇದೇ 26 ಇಲ್ಲವೇ 27ಕ್ಕೆ ಸೋಮಣ್ಣ ದೇವಾಲಯಕ್ಕೆ ಬಂದು ಭರವಸೆ ಹಾಗೂ ಅವರ ಅಭಿಪ್ರಾಯ ತಿಳಿಸಬೇಕು, ಇಲ್ಲದಿದ್ದರೇ ಗೋ ಬ್ಯಾಕ್ ಸೋಮಣ್ಣ ಹೋರಾಟ ಮಾಡುತ್ತೇವೆ ಎಚ್ಚರಿಸಿದ್ದರು.