AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಲಿಕಾನ್ ಸಿಟಿಯಲ್ಲಿ ಡೆಡ್ಲಿ ವ್ಹೀಲಿಂಗ್, ವಿಡಿಯೋ ಶೇರ್ ಮಾಡಿಕೊಂಡು ಸಿಕ್ಕಿಬಿದ್ದ

ಸಿಲಿಕಾನ್​ ಸಿಟಿಯಲ್ಲಿ ನಿಲ್ಲದ ಪುಂಡರ ಡೆಡ್ಲಿ ವ್ಹೀಲಿಂಗ್ ಹಾವಳಿ, ನಗರದ ಎರಡು ಪ್ರಮುಖ ರಸ್ತೆಗಳಲ್ಲಿ ತಮ್ಮ ಪಟಾಲಂನೊಂದಿಗೆ ವ್ಹೀಲಿಂಗ್ ಮಾಡುತ್ತಿದ್ದ ಪುಂಡರನ್ನ ಇದೀಗ ಪೊಲೀಸರು ಬಂಧಿಸಿದ್ದಾರೆ.

ಸಿಲಿಕಾನ್ ಸಿಟಿಯಲ್ಲಿ ಡೆಡ್ಲಿ ವ್ಹೀಲಿಂಗ್, ವಿಡಿಯೋ ಶೇರ್ ಮಾಡಿಕೊಂಡು ಸಿಕ್ಕಿಬಿದ್ದ
ಪುಂಡರ ಡೆಡ್ಲಿ ವ್ಹೀಲಿಂಗ್
ಕಿರಣ್ ಹನುಮಂತ್​ ಮಾದಾರ್
|

Updated on:Mar 26, 2023 | 10:00 AM

Share

ಬೆಂಗಳೂರು: ಸಿಲಿಕಾನ್​ ಸಿಟಿಯಲ್ಲಿ ನಿಲ್ಲದ ಪುಂಡರ ಡೆಡ್ಲಿ ವ್ಹೀಲಿಂಗ್ ಹಾವಳಿ, ನಗರದ ಎರಡು ಪ್ರಮುಖ ರಸ್ತೆಗಳಲ್ಲಿ ತಮ್ಮ ಪಟಾಲಂನೊಂದಿಗೆ ವ್ಹೀಲಿಂಗ್ ಮಾಡುತ್ತಿದ್ದ ಪುಂಡರನ್ನ ಇದೀಗ ಪೊಲೀಸರು ಬಂಧಿಸಿದ್ದಾರೆ. ಕೆಐಎಎಲ್ ಏರ್ಪೋರ್ಟ್ ರಸ್ತೆ ಹಾಗೂ ಹೊಸೂರು ರಸ್ತೆಯಲ್ಲಿ ಈ ಘಟನೆ ನಡೆದಿದೆ. ವಾಹನ ದಟ್ಟಣೆ ನಡುವೆಯೂ ಡೆಡ್ಲಿ ವ್ಹೀಲಿಂಗ್ ಮಾಡುತ್ತಾ, ವಿಡಿಯೋ  ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿ ಸೆಲೆಬ್ರೆಷನ್ ಮಾಡುತ್ತಿದ್ದರು. ಏರ್ಪೋರ್ಟ್ ರಸ್ತೆಯಲ್ಲಿ ರಾತ್ರಿಯಾದ್ರೆ ಇವರ ಹಾವಳಿ ತಾಳಲಾರದೇ ಸ್ಥಳೀಯರು ವೀಲ್ಹಿಂಗ್ ಬಗ್ಗೆ ಚಿಕ್ಕಜಾಲ ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದೀಗ ವ್ಹೀಲಿಂಗ್ ಮಾಡಿದ ವ್ಯಕ್ತಿಯನ್ನ ಪೊಲೀಸರು ಪತ್ತೆ ಹಚ್ಚಿ ಬೈಕ್​ನ್ನ ಜಪ್ತಿ ಮಾಡಿದ್ದಾರೆ.

ಹೊಸೂರು ರಸ್ತೆಯಲ್ಲಿ ಯುವಕರ ಡೆಡ್ಲಿ ಆಟ

ಹೌದು ಇದೇ ರೀತಿ ಮತ್ತೊಂದು ಘಟನೆ ಹೊಸೂರು ರಸ್ತೆಯಲ್ಲಿ ನಡೆದಿದೆ. ಸುಮಾರು ಎರಡು ಕಿ.ಮೀ ವರೆಗೆ ಪುಂಡರು ವ್ಹೀಲಿಂಗ್ ಮಾಡಿದ್ದಾರೆ. ಪುಂಡರ ಈ ಕೃತ್ಯವನ್ನ ರಸ್ತೆಯಲ್ಲಿ ಹೋಗುತ್ತಿದ್ದ ವಾಹನ ಸವಾರರು ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದಾರೆ. ಇನ್ನು ಡೇಂಜರಸ್ ಆಗಿ ಬೈಕ್ ಮೇಲೆ ಸ್ಟಂಟ್ ಮಾಡಿದ ಕಿಡಿಗೇಡಿ ಯುವಕರ ವರ್ತನೆಯಿಂದ ಹೈರಾಣಾದ ವಾಹನ ಸವಾರರು, ವ್ಹೀಲಿಂಗ್ ಮತ್ತು ಸ್ಟಂಟ್ ಬಗ್ಗೆ ಎಲೆಕ್ಟ್ರಾನಿಕ್ ಸಿಟಿ ಸಂಚಾರ ಪೊಲೀಸರಿಗೆ ದೂರು ನೀಡಿದ್ದಾರೆ. ಈ ವ್ಹೀಲಿಂಗ್ ಮಾಡಿದ ಪುಂಡರಿಗಾಗಿ ಎಲೆಕ್ಟ್ರಾನಿಕ್ ಸಿಟಿ ಸಂಚಾರಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಇದನ್ನೂ ಓದಿ:Viral Video: ಬೆಂಗಳೂರಿನಲ್ಲಿ ಹಿಂಬದಿಯಿಂದ ಬಂದು ಪಾದಚಾರಿಗಳನ್ನು ಭಯಗೊಳಿಸುವ ಬೈಕ್ ಸವಾರರು! ಇಬ್ಬರು ಅರೆಸ್ಟ್

ಕೆಲ ದಿನಗಳ ಹಿಂದೆ ಪಾದಚಾರಿಗಳನ್ನು ಭಯಗೊಳಿಸುತ್ತಿದ್ದ ಪುಂಡರನ್ನ ಅರೆಸ್ಟ್ ಮಾಡಿದ್ದ ಪೊಲೀಸ್​

ಇನ್ನು ಕೆಲದಿನಗಳ ಹಿಂದೆಯಷ್ಟೇ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಬ್ಬರು ಬೈಕ್ ಸವಾರರು, ಇನ್ನೊಬ್ಬರನ್ನು ಭಯಗೊಳಿಸಿ ವಿಕೃತ ಆನಂದ ಪಡೆಯುತ್ತಿದ್ದರು. ಬೈಕ್ ಚಲಾಯಿಸುತ್ತಾ ಮುಂದೆ ನಡೆದುಕೊಂಡು ಹೋಗುತ್ತಿದ್ದ ಸಾರ್ವಜನಿಕರ ಪಕ್ಕಕ್ಕೆ ಹೋಗಿ ಕರ್ಕಶವಾಗಿ ಕಿರುಚುವ ಮೂಲಕ ಭಯ ಹುಟ್ಟಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು, ಬಳಿಕ ಎಚ್ಚೆತ್ತ ಜಯನಗರ ಠಾಣಾ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 9:56 am, Sun, 26 March 23