ಇಬ್ಬರು ವಕೀಲರೊಂದಿಗೆ ಲೋಕಾಯುಕ್ತ ಅಧಿಕಾರಿಗಳ ಮುಂದೆ ಹಾಜರಾದ ಸಚಿವ ಜಮೀರ್ ಅಹ್ಮದ್
ಐಎಂಎಗೆ ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಜಮೀರ್ ಮನೆ ಮೇಲೆ ದಾಳಿ ನಡೆಸಿ ಅಕ್ರಮ ಆಸ್ತಿಯ ಬಗ್ಗೆ ಮಾಹಿತಿ ನೀಡಿತ್ತು. ಅದೇ ಮಾಹಿತಿ ಆಧಾರದ ಮೇಲೆ ಆಗಿನ ಎಸಿಬಿ 2022 ರಲ್ಲಿ ಪ್ರತ್ಯೇಕ ಪ್ರಕರಣವೊಂದನ್ನು ದಾಖಲಿಸಿಕೊಂಡು ಸಚಿವನ ಮನೆ ಮತ್ತು ಕಚೇರಿ ಮೇಲೆ ದಾಳಿ ನಡೆಸಿತ್ತು.
ಬೆಂಗಳೂರು: ವಸತಿ ಮತ್ತು ವಕ್ಪ್ ಖಾತೆ ಸಚಿವ ಬಿಜೆಡ್ ಜಮೀರ್ ಅಹ್ಮದ್ ಖಾನ್ ಇಂದು ತಮ್ಮ ವಕೀಲರು ಮತ್ತು ಸಂಬಂಧಪಟ್ಟ ಕಾಗದಪತ್ರಗಳೊಂದಿಗೆ ಲೋಕಾಯುಕ್ತ ಅಧಿಕಾರಿಗಳ ಮುಂದೆ ಹಾಜರಾದರು. ಅದಾಯಕ್ಕೆ ಮೀರಿದ ಆಸ್ತಿ ಹೊಂದಿರುವ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಕಚೇರಿಯು ಸಚಿವನಿಗೆ ಸಮನ್ಸ್ ಜಾರಿ ಮಾಡಿತ್ತು. ಇದಕ್ಕೆ ಮುನ್ನ ಎರಡು ಬಾರಿ ಕಚೇರಿಗೆ ಬರುವಂತೆ ಅವರಿಗೆ ಲೋಕಾಯುಕ್ತ ನೋಟೀಸ್ ನೀಡಿದ್ದರೂ ಸಚಿವ ದಿವ್ಯ ನಿರ್ಲಕ್ಷ್ಯ ಪ್ರದರ್ಶಿಸಿದ್ದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ನಾನು ಮಠದಲ್ಲಿ ಬೆಳೆದವರನು, ಒಕ್ಕಲಿಗರ ವಿರುದ್ಧ ಮಾತಾಡುವುದು ಸಾಧ್ಯವಿಲ್ಲ: ಜಮೀರ್ ಅಹ್ಮದ್ ಖಾನ್