ನಾನು ಮಠದಲ್ಲಿ ಬೆಳೆದವರನು, ಒಕ್ಕಲಿಗರ ವಿರುದ್ಧ ಮಾತಾಡುವುದು ಸಾಧ್ಯವಿಲ್ಲ: ಜಮೀರ್ ಅಹ್ಮದ್ ಖಾನ್
ತಾನು ಕೇವಲ ಕುಮಾರಸ್ವಾಮಿ ವಿಷಯದಲ್ಲಿ ಮಾತಾಡಿದ್ದು, ಒಕ್ಕಲಿಗರ ಪ್ರಶ್ನೆಯೇ ಹುಟ್ಟುವುದಿಲ್ಲ, ತನಗೆ ಒಕ್ಕಲಿಗ ಸಮುದಾಯದ ಬಗ್ಗೆ ಅಪಾರ ಗೌರವವಿದೆ, ಯಾಕೆಂದರೆ ತಾನು ಬೆಳೆದಿದ್ದು ಆದಿಚುಂಚನಗಿರಿ ಮಠದಲ್ಲಿ, ಅಲ್ಲಿಗೆ ದೊಡ್ಡ ಸ್ವಾಮಿಗಳು ಶನಿವಾರದಂದು ಬಂದಾಗ ಅವರು ರಾತ್ರಿ ಮಲಗುವವರೆಗೆ ಅವರೊಂದಿಗಿರುತ್ತಿದ್ದೆ ಎಂದು ಜಮೀರ್ ಹೇಳಿದರು.
ಮಂಗಳೂರು: ಕುಮಾರಸ್ವಾಮಿ ತಮ್ಮ ಹೇಳಿಕೆಗಳನ್ನು ತಿರುಚುವಲ್ಲಿ ನಿಸ್ಸೀಮರು ಹಾಗಾಗೇ ಅವರನ್ನು ಯು-ಟರ್ನ್ ಕುಮಾರಸ್ವಾಮಿ ಅಂತ ಜನ ಕರೆಯೋದು, ಎಂದು ವಕ್ಫ್ ಸಚಿವ ಬಿಜೆಡ್ ಜಮೀರ್ ಅಹ್ಮದ್ ಖಾನ್ ಮಂಗಳೂರಲ್ಲಿ ಹೇಳಿದರು. ಜಮೀರ್ ಯಾವತ್ತೂ ತನ್ನನ್ನು ಕರಿಯ ಎಂದು ಕರೆದಿಲ್ಲ ಮತ್ತು ಅವರು ಯಾವತ್ತೂ ಜಮೀರ್ ಅವರನ್ನು ಕುಳ್ಳ ಅಂತ ಕರೆದಿಲ್ಲ ಎಂದು ಕುಮಾರಸ್ವಾಮಿ ಹೇಳಿರುವುದನ್ನು ಸಚಿವರ ಗಮನಕ್ಕೆ ತಂದಾಗ ಅವರು ಹೀಗೆ ಪ್ರತಿಕ್ರಿಯಿಸಿದರು.
ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ದೇವೇಗೌಡರ ಕುಟುಂಬವನ್ನು ಖರೀದಿಸುವ ಮಾತು ನಾನಾಡಿಲ್ಲ: ಜಮೀರ್ ಅಹ್ಮದ್ ಖಾನ್
Latest Videos