AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೆಗ್ಗಾನ್​ ಆಸ್ಪತ್ರೆಯಲ್ಲಿದ್ದ ತಾಯಿಯ ಸಹಾಯಕ್ಕೆ ಬಂದ ಅಪ್ರಾಪ್ತೆ ಮೇಲೆ ಸಿಬ್ಬಂದಿಯಿಂದ ಅತ್ಯಾಚಾರ

ಜಿಲ್ಲೆಯ ಪ್ರತಿಷ್ಠಿತ ಮೆಗ್ಗಾನ್ ಆಸ್ಪತ್ರೆಯಲ್ಲಿ ತನ್ನ ತಾಯಿ ಜೊತೆಗಿದ್ದ 16 ವರ್ಷದ ಬಾಲಕಿಯ ಮೇಲೆ ಆಸ್ಪತ್ರೆಯ D ದರ್ಜೆ ಸಿಬ್ಬಂದಿ ಮತ್ತು ಆತನ ಮೂವರು ಸ್ನೇಹಿತರು ಅತ್ಯಾಚಾರ ಎಸಗಿರುವ ಘಟನೆ ವರದಿಯಾಗಿದೆ.

ಮೆಗ್ಗಾನ್​ ಆಸ್ಪತ್ರೆಯಲ್ಲಿದ್ದ ತಾಯಿಯ ಸಹಾಯಕ್ಕೆ ಬಂದ ಅಪ್ರಾಪ್ತೆ ಮೇಲೆ ಸಿಬ್ಬಂದಿಯಿಂದ ಅತ್ಯಾಚಾರ
ದಾರುಣ: ಕಳ್ಳರಿಬ್ಬರಿಂದ ವೃದ್ಧೆ ಕತ್ತು ಹಿಸುಕಿ ಕೊಲೆಗೆ ಯತ್ನ.. ಚಿಕಿತ್ಸೆ ಫಲಕಾರಿಯಾಗದೆ ವೃದ್ಧೆ ಸಾವು
guruganesh bhat
| Edited By: |

Updated on: Dec 06, 2020 | 2:22 PM

Share

ಶಿವಮೊಗ್ಗ: ಜಿಲ್ಲೆಯ ಪ್ರತಿಷ್ಠಿತ ಮೆಗ್ಗಾನ್ ಆಸ್ಪತ್ರೆಯಲ್ಲಿ ತನ್ನ ತಾಯಿ ಜೊತೆಗಿದ್ದ 16 ವರ್ಷದ ಬಾಲಕಿಯ ಮೇಲೆ ಆಸ್ಪತ್ರೆಯ D ದರ್ಜೆ ಸಿಬ್ಬಂದಿ ಮತ್ತು ಆತನ ಮೂವರು ಸ್ನೇಹಿತರು ಅತ್ಯಾಚಾರ ಎಸಗಿರುವ ಘಟನೆ ವರದಿಯಾಗಿದೆ.

ಅಪ್ರಾಪ್ತೆಯ ತಾಯಿ ಅನಾರೋಗ್ಯದ ಹಿನ್ನೆಲೆಯಲ್ಲಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ, ಬಾಲಕಿ ತನ್ನ ತಾಯಿಯ ಜೊತೆಗಿದ್ದು ನೆರವಾಗುತ್ತಿದ್ದಳು. ಈ ನಡುವೆ, ನಿನ್ನೆ ರಾತ್ರಿ ಬಾಲಕಿಯನ್ನು ಪುಸಲಾಯಿಸಿ ನಗರದ ಹೊರವಲಯಕ್ಕೆ ಕರೆದೊಯ್ದ ಆರೋಪಿಗಳು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ತಿಳಿದುಬಂದಿದೆ.

ಇದೀಗ, ಪೋಕ್ಸೋ ಕಾಯ್ದೆಯಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೃತ್ಯ ಎಸಗಿದ D ದರ್ಜೆ ನೌಕರನನ್ನು ಬಂಧಿಸಲಾಗಿದೆ. ಉಳಿದ ಮೂರು ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ. ಇದೀಗ, ಈ  ಹೇಯ ಕೃತ್ಯ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗುವ ರೋಗಿಗಳಲ್ಲಿ ತಲ್ಲಣ ಹುಟ್ಟಿಸಿದೆ.