ನೀರಿನ ಟ್ಯಾಂಕರ್ನಲ್ಲಿ ಕ್ರಿಮಿನಾಶಕ ಹಾಕಿದ ಕಿಡಿಗೇಡಿಗಳು.. ಸಮಯ ಪ್ರಜ್ಞೆಯಿಂದ ತಪ್ಪಿದ ಅನಾಹುತ
ಗ್ರಾಮದ ಜನರಿಗೆ ಕುಡಿಯಲು ನೀರಿನ ವ್ಯವಸ್ಥೆಗಾಗಿ ನಿರ್ಮಿಸಿದ್ದ ನೀರಿನ ಟ್ಯಾಂಕರ್ನಲ್ಲಿ ಕಿಡಿಗೇಡಿಗಳು ವಿಷ ಹಾಕಿದ್ದಾರೆ. ಟ್ಯಾಂಕರ್ ಒಳಗೆ ಮೆಕ್ಕೆಜೋಳಕ್ಕೆ ಹೊಡೆಯುವ ಕ್ರೀಮಿನಾಶಕ ಬಾಟಲ್ ಪತ್ತೆಯಾಗಿದೆ. ಹಾಗೂ ಟ್ಯಾಂಕರ್ನ ಹೊರಗೆ ವಿಷದ ಪ್ಯಾಕೆಟ್ಗಳು ಪತ್ತೆಯಾಗಿವೆ.
ದಾವಣಗೆರೆ: ಕುಡಿಯುವ ನೀರಿನ ಟ್ಯಾಂಕರ್ನಲ್ಲಿ ಕಿಡಿಗೇಡಿಗಳು ಕ್ರಿಮಿನಾಶಕ ಹಾಕಿದ್ದು, ಸಮಯ ಪ್ರಜ್ಞೆಯಿಂದ ಭಾರಿ ಅನಾಹುತವೊಂದು ತಪ್ಪಿದ ಘಟನೆ ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ಚಿಗಟೇರಿ ಗ್ರಾಮದಲ್ಲಿ ನಡೆದಿದೆ. ಕುಡಿಯುವ ನೀರು ಟ್ಯಾಂಕರ್ನಲ್ಲಿ ಕ್ರಿಮಿನಾಶಕ ಬಾಟಲ್ ಪತ್ತೆಯಾಗಿದೆ. ಇದನ್ನು ಕಂಡ ಗ್ರಾಮಸ್ಥರು ಆತಂಕದಲ್ಲಿದ್ದಾರೆ.
ಗ್ರಾಮದ ಜನರಿಗೆ ಕುಡಿಯಲು ನೀರಿನ ವ್ಯವಸ್ಥೆಗಾಗಿ ನಿರ್ಮಿಸಿದ್ದ ನೀರಿನ ಟ್ಯಾಂಕರ್ನಲ್ಲಿ ಕಿಡಿಗೇಡಿಗಳು ವಿಷ ಹಾಕಿದ್ದಾರೆ. ಟ್ಯಾಂಕರ್ ಒಳಗೆ ಮೆಕ್ಕೆಜೋಳಕ್ಕೆ ಹೊಡೆಯುವ ಕ್ರೀಮಿನಾಶಕ ಬಾಟಲ್ ಪತ್ತೆಯಾಗಿದೆ. ಹಾಗೂ ಟ್ಯಾಂಕರ್ನ ಹೊರಗೆ ವಿಷದ ಪ್ಯಾಕೆಟ್ಗಳು ಪತ್ತೆಯಾಗಿವೆ. ಸದ್ಯ ನೀರಗಂಟಿಯ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತವೊಂದು ತಪ್ಪಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸದ್ಯ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಶಾಸಕ ಕರುಣಾಕರ ರೆಡ್ಡಿ ಸೂಚಿಸಿದ್ದಾರೆ. ಹಾಗೂ ತಹಶೀಲ್ದಾರ್ ನಂದೀಶ್ ಟ್ಯಾಂಕರ್ನ ನೀರನ್ನು ಪರೀಕ್ಷೆಗೆ ಕಳುಹಿಸಿದ್ದಾರೆ. ಚಿಗಟೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ:ಸುಳ್ವಾಡಿ ವಿಷ ಪ್ರಸಾದ: ಪ್ರಮುಖ ಆರೋಪಿಗೆ ಜಾಮೀನು ನಿರಾಕರಿಸಿದ ಸುಪ್ರೀಂಕೋರ್ಟ್
(Miscreants Mix Poison to Water Tank in Davangere)