ನಾಪತ್ತೆಯಾಗಿದ್ದ ಬೆಂಗಳೂರು ಮೂಲದ ವ್ಯಕ್ತಿ ಮನಾಲಿಯಲ್ಲಿ ಶವವಾಗಿ ಪತ್ತೆ
ದಟ್ಟ ಅರಣ್ಯಕ್ಕೆ ಚಾರಣಕ್ಕೆಂದು ತೆರಳಿದ್ದ ಬೆಂಗಳೂರು ಮೂಲದ ವ್ಯಕ್ತಿ ಸೆ.28 ರಂದು ನಾಪತ್ತೆಯಾಗಿದ್ದರು. ಕಾರ್ಯಾಚರಣೆ ವೇಳೆ ಹಿಮಾಚಲ ಪ್ರದೇಶದ ಮನಾಲಿಯ ಜೋಗಿನಿ ಜಲತಾದ ಬಳಿ ಮೊಬೈಲ್ ಪತ್ತೆಯಾಗಿದ್ದು, ತೀವ್ರ ಹುಡುಕಾಟ ನಡೆಸಿದಾಗ ಕಮರಿಯಲ್ಲಿ ಶವ ಪತ್ತೆಯಾಗಿದೆ.
ಕುಲು/ ಹಿಮಾಚಲ ಪ್ರದೇಶ, ಅ.5: ದಟ್ಟ ಅರಣ್ಯಕ್ಕೆ ಚಾರಣಕ್ಕೆಂದು ತೆರಳಿದ್ದ ಬೆಂಗಳೂರು (Bengaluru) ಮೂಲದ ವ್ಯಕ್ತಿ ಹಿಮಾಚಲ ಪ್ರದೇಶದ ಮನಾಲಿಯ (Manali) ಜೋಗಿನಿ ಜಲತಾದ ಬಳಿ ಶವವಾಗಿ ಪತ್ತೆಯಾಗಿದ್ದಾರೆ. ರಾಹುಲ್ ರಮೇಶ್ (35) ಮೃತ ವ್ಯಕ್ತಿ. ಸದ್ಯ ಮೃತದೇಹವನ್ನು ಜಲಪಾತದ ಕಮರಿಯಿಂದ ಹೊರತೆಗೆಯಲಾಗಿದೆ.
ರಮೇಶ್ ಅವರು ಸೆ.28ರಂದು ದಟ್ಟ ಅರಣ್ಯ ಪ್ರದೇಶಕ್ಕೆ ಚಾರಣಕ್ಕೆಂದು ತೆರಳಿದ್ದ ವೇಳೆ ನಾಪತ್ತೆಯಾಗಿದ್ದರು. ಮಾಹಿತಿಯ ಪ್ರಕಾರ, ಅದೃಷ್ಟದ ದಿನದಂದು ರಮೇಶ್ ಅವರನ್ನು ತಾಯಿ ಮತ್ತು ಸಹೋದರ ಟ್ರಕ್‌ನ ಪ್ರಾರಂಭದ ಸ್ಥಳದಲ್ಲಿ ಡ್ರಾಪ್ ಮಾಡಿದ್ದರು. ಅಂದು ಸಂಜೆ 5.30ರ ಸುಮಾರಿಗೆ ತಾನು ಕಾಡಿನಲ್ಲಿ ದಾರಿ ತಪ್ಪಿದ್ದಾಗಿ ತನ್ನ ಸಹೋದರನಿಗೆ ಸಂದೇಶ ಕಳುಹಿಸಿದ್ದರು.
ಮೆಸೆಜ್ ನೋಡಿದ ಸಹೋದರ ಮತ್ತು ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಕೂಡಲೇ ಅಟಲ್ ಬಿಹಾರಿ ವಾಜಪೇಯಿ ಇನ್‌ಸ್ಟಿಟ್ಯೂಟ್ ಆಫ್ ಮೌಂಟೇನಿಯರಿಂಗ್ ಮತ್ತು ಅಲೈಡ್ ಸ್ಪೋರ್ಟ್ಸ್‌ನ ಪರ್ವತಾರೋಹಿಗಳು ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಸಿಬ್ಬಂದಿ ಸೇರಿದಂತೆ ಶೋಧ ಕಾರ್ಯಾಚರಣೆ ಆರಂಭಿಸಿತ್ತು.
ಇದನ್ನೂ ಓದಿ: ಪಂಜಾಬ್: ನಾಪತ್ತೆಯಾಗಿದ್ದ ಮೂವರು ಸಹೋದರಿಯರ ಶವ ಕಬ್ಬಿಣದ ಟ್ರಂಕ್ನಲ್ಲಿ ಪತ್ತೆ
ಕಾರ್ಯಾಚರಣೆಯ ನೇತೃತ್ವವನ್ನು ಮನಾಲಿಯ ಉಪವಿಭಾಗದ ಪೊಲೀಸ್ ಅಧಿಕಾರಿ ಕ್ಷಮಾ ದತ್ ಶರ್ಮಾ ವಹಿಸಿದ್ದರು. ಭಾರತೀಯ ವಾಯುಪಡೆಯು 35 ವರ್ಷದ ವ್ಯಕ್ತಿಯನ್ನು ಪತ್ತೆಹಚ್ಚಲು ವೈಮಾನಿಕ ರೆಸಿಯನ್ನು ನಡೆಸಿತು. ಆದರೂ ಯಶಸ್ವಿಯಾಗಲಿಲ್ಲ.
ರಮೇಶ್ ನಾಪತ್ತೆಯಾಗಿದ್ದ ಒಂದು ದಿನದ ನಂತರ, ಅಂದಸರೆ ಸೆಪ್ಟೆಂಬರ್ 29 ರಂದು, ಜೋಗಿನಿ ಜಲಪಾತದ ಬಳಿ ಅವರ ಮೊಬೈಲ್ ಪತ್ತೆಯಾಗಿದೆ. ಹೀಗಾಗಿ ಶೋಧಕಾರ್ಯವನ್ನು ತೀವ್ರಗೊಳಿಸಿದಾಗ ಕಮರಿಯಲ್ಲಿ ಶವ ಪತ್ತೆಯಾಗಿದೆ.
it’s miserable to know That Rahul Ramesh was found dead and his body has been found 400 meters deep in the trench,
Thank you @himachalpolice for responding quick and conducting search operations https://t.co/BzzCTsJ6Kn
— Siddharth Bakaria (@SidBakaria) October 3, 2023
ಅರಣ್ಯ ಪ್ರದೇಶದಲ್ಲಿ ಸುಮಾರು 400 ಮೀಟರ್ ಆಳದಲ್ಲಿ ಕಮರಿಯಲ್ಲಿ ಶವ ಪತ್ತೆಯಾಗಿದೆ ಎಂದು ಎಸ್‌ಡಿಪಿಒ ಮನಾಲಿ ಕ್ಷಮಾ ದತ್ ಶರ್ಮಾ ತಿಳಿಸಿದ್ದಾರೆ. ಮಾಹಿತಿ ತಿಳಿದು ರಮೇಶ್ ಪತ್ನಿಯೂ ಮನಾಲಿಗೆ ಆಗಮಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ