ಪಂಜಾಬ್: ನಾಪತ್ತೆಯಾಗಿದ್ದ ಮೂವರು ಸಹೋದರಿಯರ ಶವ ಕಬ್ಬಿಣದ ಟ್ರಂಕ್‌ನಲ್ಲಿ ಪತ್ತೆ
ಕೂಲಿ ಕಾರ್ಮಿಕರ ಮೂವರು ಹೆಣ್ಣುಮಕ್ಕಳ ಶವ ಕಬ್ಬಿಣದ ಟ್ರಂಕ್‌ನಲ್ಲಿ ಪತ್ತೆಯಾಗಿದೆ. ಭಾನುವಾರ ರಾತ್ರಿಯಿಂದ ಮೂವರು ಸಹೋದರಿಯರು ನಾಪತ್ತೆಯಾಗಿದ್ದರು, ಮನೆಯಲ್ಲಿಯೇ ಶವ ಸಿಕ್ಕಿದೆ. ಜಲಂಧರ್‌ನ ಮಕ್ಸೂದನ್‌ನಲ್ಲಿರುವ ಅವರ ಮನೆಯಲ್ಲಿ ಶೋಧ ನಡೆಸಿದಾಗ 4 ರಿಂದ 9 ವರ್ಷ ವಯಸ್ಸಿನ ಬಾಲಕಿಯರ ಶವಗಳನ್ನು ಕಬ್ಬಿಣದ ಟ್ರಂಕ್‌ನಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೂಲಿ ಕಾರ್ಮಿಕರ ಮೂವರು ಹೆಣ್ಣುಮಕ್ಕಳ ಶವ ಕಬ್ಬಿಣದ ಟ್ರಂಕ್‌ನಲ್ಲಿ ಪತ್ತೆಯಾಗಿದೆ. ಭಾನುವಾರ ರಾತ್ರಿಯಿಂದ ಮೂವರು ಸಹೋದರಿಯರು ನಾಪತ್ತೆಯಾಗಿದ್ದರು, ಮನೆಯಲ್ಲಿಯೇ ಶವ ಸಿಕ್ಕಿದೆ. ಜಲಂಧರ್‌ನ ಮಕ್ಸೂದನ್‌ನಲ್ಲಿರುವ ಅವರ ಮನೆಯಲ್ಲಿ ಶೋಧ ನಡೆಸಿದಾಗ 4 ರಿಂದ 9 ವರ್ಷ ವಯಸ್ಸಿನ ಬಾಲಕಿಯರ ಶವಗಳನ್ನು ಕಬ್ಬಿಣದ ಟ್ರಂಕ್‌ನಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಮೃತಾ ಕುಮಾರಿ, 9, ಶಕ್ತಿ ಕುಮಾರಿ, 7, ಮತ್ತು ಕಾಂಚನ್ ಕುಮಾರಿ, 4 ಭಾನುವಾರ ಸಂಜೆಯಿಂದ ಕಾಣೆಯಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಅವರ ಪೋಷಕರು ರಾತ್ರಿ 8.15 ಕ್ಕೆ ಅವರನ್ನು ಹುಡುಕಲು ಪ್ರಾರಂಭಿಸಿದರು ಮತ್ತು ರಾತ್ರಿ 11 ಗಂಟೆಗೆ ಪೊಲೀಸರಿಗೆ ಮಾಹಿತಿ ನೀಡಿದರು ನಂತರ ಪ್ರಕರಣ ದಾಖಲಿಸಲಾಗಿದೆ.
ಜಲಂಧರ್ (ಗ್ರಾಮೀಣ) ಪೊಲೀಸ್ ಅಧೀಕ್ಷಕ ಮನ್‌ಪ್ರೀತ್ ಸಿಂಗ್ ಮಾತನಾಡಿ, ಈ ಪ್ರಕರಣ ತನಿಖೆಯಲ್ಲಿದೆ ಮತ್ತು ಕುಟುಂಬದ ನೆರೆಹೊರೆಯವರ ವಿಚಾರಣೆ ನಡೆಸಲಾಗುತ್ತಿದೆ. ಮೂರು ಸಹೋದರಿಯರು ಆಟವಾಡುವಾಗ ಟ್ರಂಕ್‌ನಲ್ಲಿ ಅಡಗಿಕೊಂಡಂತೆ ತೋರುತ್ತಿದೆ, ಉಸಿರುಗಟ್ಟಿ ಸಾವನ್ನಪ್ಪಿರಬಹುದು ಎಂದಿದ್ದಾರೆ.
ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ದೇಹದ ಮೇಲೆ ಯಾವುದೇ ಗಾಯದ ಗುರುತುಗಳಿಲ್ಲ. ಮನೆಯ ಹೊರಗೆ ಟ್ರಂಕ್ ಅನ್ನು ನೋಡಿದಾಗ ಕೆಲವರಿಗೆ ಅನುಮಾನ ಬಂದಿತ್ತು. ಟ್ರಂಕ್ ತೆರೆದು ನೋಡಿದಾಗ ಜನ ಪ್ರಜ್ಞೆ ಕಳೆದುಕೊಂಡಿದ್ದರು. ಸುಶೀಲ್ ಮಂಡಲ್ ಮತ್ತು ಮಂಜು ಮಂಡಲ್ ಅವರಿಗೆ 5 ಮಕ್ಕಳಿದ್ದಾರೆ ಎಂದು ಮಕ್ಸೂದ್ ಪೊಲೀಸ್ ಠಾಣೆಯ ಎಎಸ್‌ಐ ಹರ್ಬನ್ಸ್ ಸಿಂಗ್ ಹೇಳಿದ್ದಾರೆ.
ಭಾನುವಾರ ಇಬ್ಬರೂ ಕೆಲಸಕ್ಕೆ ಹೋಗಿದ್ದರು. ರಾತ್ರಿ 8 ಗಂಟೆಗೆ ಮನೆಗೆ ಹಿಂದಿರುಗಿದಾಗ ಬಾಲಕಿಯರು ಕಾಣಲಿಲ್ಲ. ರಾತ್ರಿಯಿಡೀ ಹುಡುಕಾಡಿದರೂ ಪತ್ತೆಯಾಗಲಿಲ್ಲ. ಬಳಿಕ ಪೊಲೀಸರಿಗೆ ದೂರು ನೀಡಿದ್ದರು. ಬೆಳಗ್ಗೆ 8ರಿಂದ ರಾತ್ರಿ 8ರವರೆಗೆ ಕೆಲಸಕ್ಕೆ ಹೋಗುತ್ತಿದ್ದರು ಎಂದು ತಂದೆ ತಿಳಿಸಿದ್ದಾರೆ. ಮೃತ ಬಾಲಕಿಯರ ತಂದೆ ಮಾದಕ ವ್ಯಸನಿಯಾಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಮತ್ತಷ್ಟು ಓದಿ: ಬೆಂಗಳೂರು: ಒಂಟಿಯಾಗಿ ಓಡಾಡುವ ಯುವತಿಯರನ್ನೇ ಟಾರ್ಗೆಟ್ ಮಾಡಿ ಖಾಸಗಿ ಅಂಗ ಮುಟ್ಟಿ ಅಸಭ್ಯ ವರ್ತನೆ, ಕಾಮುಕ ಅರೆಸ್ಟ್
ಕುಡಿದ ಮತ್ತಿನಲ್ಲಿ ತನ್ನ ಸ್ವಂತ ಹೆಣ್ಣು ಮಕ್ಕಳನ್ನು ಕೊಂದಿದ್ದಾನೆ ಎಂದು ಜನರು ಆರೋಪಿಸಿದ್ದಾರೆ. ಸದ್ಯ ಪೊಲೀಸರು ಬಾಲಕಿಯ ತಂದೆಯನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ. ಹಾಗೂ ಮೂವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಘಟನೆ ಹೇಗೆ ನಡೆದಿದೆ ಎಂಬುದರ ಬಗ್ಗೆ ಏನನ್ನೂ ಹೇಳಲಾಗದು ಎಂದು ತನಿಖಾಧಿಕಾರಿ ಹೇಳಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಅವರ ಸಾವಿಗೆ ಕಾರಣದ ಬಗ್ಗೆ ಮಾಹಿತಿ ನೀಡಲಿದೆ.
ಮೃತ ಬಾಲಕಿಯರ ದೇಹದಲ್ಲಿ ಯಾವುದೇ ಗಾಯದ ಗುರುತು ಇರಲಿಲ್ಲ. ಪ್ರಾಥಮಿಕ ತನಿಖೆಯ ಪ್ರಕಾರ ಇದೊಂದು ಕೊಲೆಯಾಗಿ ಕಾಣುತ್ತಿಲ್ಲ ಎಂದರು. ಮನೆಯಲ್ಲಿ ಹುಡುಗಿಯರು ಒಬ್ಬರೇ ಇದ್ದು ಆಟವಾಡುತ್ತಿದ್ದರಂತೆ ಎಂದು ಎಸ್ಪಿ ಹೇಳಿದ್ದಾರೆ.
ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ