Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೈಲು ಬಾಗಿಲಲ್ಲೇ ಬಂಧನ: ಠಾಣೆಯಲ್ಲೇ ಶಾಸಕ ಮುನಿರತ್ನಗೆ ಚಾಪೆ, ದಿಂಬು ವ್ಯವಸ್ಥೆ

ಜಾತಿ ನಿಂದನೆ, ಜೀವ ಬೆದರಿಕೆ ಎರಡು ಪ್ರಕರಣಗಳಲ್ಲಿ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾಗಿರುವ ಬಿಜೆಪಿ ಶಾಸಕ ಮುನಿರತ್ನ ಅವರಿಗೆ ಮೂರನೇ ಕೇಸ್​ ಸಂಕಷ್ಟ ತಂದಿಟ್ಟಿದೆ. ಅತ್ಯಾಚಾರದ ಆರೋಪದಲ್ಲಿ ಲಾಕ್ ಆಗಿದ್ದಾರೆ‌. ಜಾತಿನಿಂದನೆ ಹಾಗೂ ಬೆದರಿಕೆ ಪ್ರಕರಣದಿಂದ ಜಾಮೀನು ಪಡೆದು ಹೊರ ಬರುತ್ತಿದ್ದಂತೆ, ಮತ್ತೆ ಅರೆಸ್ಟ್ ಆಗಿದ್ದು, ಇಂದು ಇಡೀ ರಾತ್ರಿ ಕಗ್ಗಲೀಪುರ ಠಾಣೆಯಲ್ಲೇ ಕಳೆಯುವ ಸ್ಥಿತಿ ಎದುರಾಗಿದೆ. ಚಾಪೆ, ದಿಂಬಿನ ವ್ಯವಸ್ಥೆ ಮಾಡಲಾಗಿದೆ.

ಜೈಲು ಬಾಗಿಲಲ್ಲೇ ಬಂಧನ: ಠಾಣೆಯಲ್ಲೇ ಶಾಸಕ ಮುನಿರತ್ನಗೆ ಚಾಪೆ, ದಿಂಬು ವ್ಯವಸ್ಥೆ
ಜೈಲು ಬಾಗಿಲಲ್ಲೇ ಬಂಧನ: ಠಾಣೆಯಲ್ಲೇ ಶಾಸಕ ಮುನಿರತ್ನಗೆ ಚಾಪೆ, ದಿಂಬು ವ್ಯವಸ್ಥೆ
Follow us
Shivaprasad
| Updated By: ಗಂಗಾಧರ​ ಬ. ಸಾಬೋಜಿ

Updated on:Sep 20, 2024 | 9:13 PM

ಬೆಂಗಳೂರು, ಸೆಪ್ಟೆಂಬರ್​ 20: ಮಾಜಿ ಸಚಿವ ಮುನಿರತ್ನಗೆ (Munirathna) ಅತ್ಯಾಚಾರದ ಸಂಕೋಲೆ ಸುತ್ತಿಕೊಂಡಿದೆ. ಒಂದು ಕೇಸ್ ಮುಗಿಯಿತು ಅನ್ನೋಷ್ಟರಲ್ಲಿ ಈಗ ಇನ್ನೊಂದು ಕೇಸ್​ನಲ್ಲಿ ಲಾಕ್ ಆಗಿದ್ದು, ತನಿಖೆಯ ಬಿಸಿ ತಟ್ಟಿದೆ. ಕಗ್ಗಲೀಪುರ ಪೊಲೀಸರ ವಶದಲ್ಲಿರುವ ಮುನಿರತ್ನ ವಿಚಾರಣೆ ಎದುರಿಸಲಿದ್ದಾರೆ. ಹಾಗಾಗಿ ಇಂದು ಠಾಣೆಯಲ್ಲೇ ರಾತ್ರಿ ಕಳೆಯುವ ಸ್ಥಿತಿ ಬಂದಿದ್ದು, ಸಾಮಾನ್ಯ ಆರೋಪಿಗಳಂತೆ ಸೆಲ್​ನಲ್ಲಿಯೇ ಚಾಪೆ, ದಿಂಬಿನ ವ್ಯವಸ್ಥೆ ಮಾಡಲಾಗಿದೆ. ಹಾಗಾದರೆ ಇಂದು ಏನೇನೆಲ್ಲಾ ಆಯ್ತು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಜೈಲು ಬಾಗಿಲ ಬಳಿಯೇ ಮುನಿರತ್ನ ಬಂಧನ: ತೀವ್ರ ತನಿಖೆ

ಆರ್​.ಆರ್ ನಗರ ಕ್ಷೇತ್ರದ ಶಾಸಕ ಮುನಿರತ್ನಗೆ ಅತ್ಯಾಚಾರದ ಆರೋಪದಲ್ಲಿ ಲಾಕ್ ಆಗಿದ್ದಾರೆ‌. ಜಾತಿನಿಂದನೆ ಹಾಗೂ ಬೆದರಿಕೆ ಪ್ರಕರಣದಿಂದ ಜಾಮೀನು ಪಡೆದು ಹೊರ ಬರುತ್ತಿದ್ದಂತೆ, ಈಗ ಅತ್ಯಾಚಾರ ಪ್ರಕರಣದ ತನಿಖೆ ಎದುರಾಗಿದೆ. ಜಾತಿನಿಂದನೆ ಕೇಸ್​ಲ್ಲಿ ಜಾಮೀನು ಪಡೆದಿದ್ದ ಶಾಸಕ ಮುನಿರತ್ನ, ಇಂದು ಬೆಳಗ್ಗೆ ಜೈಲಿನಿಂದ ಬಿಡುಗಡೆ ಆಗಿದ್ದರು. ಜೈಲಿನಿಂದ ಬಿಡುಗಡೆಯಾಗಿ ಬರುತ್ತಿದ್ದಂತೆ ಜೈಲು ಬಾಗಿಲಿನಲ್ಲೇ ಕಾದಿದ್ದ ಕಗ್ಗಲಿಪುರ ಪೊಲೀಸರು ಜೈಲು ಬಳಿಯೇ ಬಂಧಿಸಿ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ.

ಇದನ್ನೂ ಓದಿ: ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಒಕ್ಕಲಿಗ ನಾಯಕರ ಮನವಿ

ಮುನಿರತ್ನ ಜಾಮೀನು ಪ್ರಕ್ರಿಯೆ ಕಳೆದ ರಾತ್ರಿಯೇ ಮುಗಿದಿತ್ತು. ರಾತ್ರಿ ಆಗಿದ್ದರಿಂದ ಮುನಿರತ್ನರನ್ನ ಬೆಳಗ್ಗೆ ಬಿಡುಗಡೆ ಮಾಡಲು ಅಧಿಕಾರಿಗಳು ಸಿದ್ದತೆ ನಡೆಸಿದ್ದರು. ವಿಚಾರ ತಿಳಿದ ಕಗ್ಗಲಿಪುರ ಪೊಲೀಸರು ಬೆಳಗ್ಗೆ 8 ಗಂಟೆ ಸುಮಾರಿಗೆ ಜೈಲು ಬಳಿ ದೌಡಾಯಿಸಿ ಶಾಸಕ ಮುನಿರತ್ನ ಜೈಲಿನಿಂದ ಹೊರ ಬರುತ್ತಿದ್ದಂತೆ ವಶಕ್ಕೆ ಪಡೆದು ಠಾಣೆಗೆ ಕರೆದುಕೊಂಡು ಹೋಗಿದ್ದರು.

ಪೊಲೀಸ್ ಠಾಣೆಯಲ್ಲಿ ಮುನಿರತ್ನ ಬಂಧನ ಪ್ರಕ್ರಿಯೆ ನಡೆಸಿದ ಡಿವೈಎಸ್​ಪಿ ದಿನಕರ್ ಶೆಟ್ಟಿ, 12 ಗಂಟೆ ವೇಳೆಗೆ ಮುನಿರತ್ನರನ್ನ ಹಾರೋಹಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದರು. ಸುಮಾರು ಒಂದೂವರೆ ಗಂಟೆಗಳ ಕಾಲ ವಿವಿಧ ಮಾದರಿಯ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ಪೊಲೀಸರು, ಪುನಃ ಕಗ್ಗಲಿಪುರ ಠಾಣೆಗೆ ಕರೆತಂದು ಮತ್ತೊಂದು ಸುತ್ತಿನ ವಿಚಾರಣೆ ನಡೆಸಿದ್ದಾರೆ. ಹೆಚ್ಚಿನ ವಿಚಾರಣೆಗೆ ಕಸ್ಟಡಿಗೆ ಪಡೆಯಲು‌ ಸಿದ್ದತೆ ಮಾಡಲಾಗಿದೆ.

ಮುನಿರತ್ನ ಜೊತೆಗೆ ಮಹಜರು, ತಡರಾತ್ರಿ ನ್ಯಾಯಾಧೀಶರ ಮನೆಗೆ ಹಾಜರು ಪಡಿಸುವ ಸಾಧ್ಯತೆ ಇದೆ. ವಿಚಾರಣೆ ಮುಗಿಯುತ್ತಿದ್ದಂತೆ, ಮುನಿರತ್ನರನ್ನ ಕೋರ್ಟ್​​ಗೆ ಹಾಜರು ಪಡಿಸಿ ಕಸ್ಟಡಿಗೆ ಪಡೆಯಲು ಪೊಲೀಸರು ಸಿದ್ದತೆ ನಡೆಸಿದ್ದಾರೆ.‌ ಮುನಿರತ್ನ ವಿರುದ್ದ ಅತ್ಯಾಚಾರ ಪ್ರಕರಣ ದಾಖಲಾಗಿದ್ದರಿಂದ ಆರೋಪಿಯ ಹೆಚ್ಚಿನ ವಿಚಾರಣೆ, ಕೃತ್ಯ ನಡೆದ ಸ್ಥಳ ಮಹಜರು, ವೈದ್ಯಕೀಯ ಪರೀಕ್ಷೆ ನಡೆಸುವ ಅಗತ್ಯವಿದ್ದು, ಸದ್ಯ ಬಂಧನ ಪ್ರಕ್ರಿಯೆ ಪೂರ್ಣಗೊಳಿಸಿರೋ ತಡ ರಾತ್ರಿ ನ್ಯಾಯಾಧೀಶರ ಮನೆಗೆ ಹಾಜರು ಪಡಿಸಿ ಪೊಲೀಸ್ ಕಸ್ಟಡಿಗೆ ಪಡೆಯಲು ನಿರ್ಧರಿಸಿದ್ದಾರೆ.

ಇದನ್ನೂ ಓದಿ: BJP MLA Munirathna: ಬಿಜೆಪಿ ಶಾಸಕ ಮುನಿರತ್ನ ಮತ್ತೆ ಅರೆಸ್ಟ್​

ಅದೇನೆ ಇರಲಿ ಜಾತಿನಿಂದನೆ ಕೇಸಲ್ಲಿ ಜೈಲು ಸೇರಿದ್ದ ಮುನಿರತ್ನ, ಬಿಡುಗಡೆಯಾದ ಮರು ಕ್ಷಣವೇ ಇನ್ನೊಂದು ಪ್ರಕರಣದಲ್ಲಿ ಬಂಧಿತನಾಗಿ ಪೊಲೀಸ್ ತನಿಖೆ ಎದುರಿಸಬೇಕಾಗಿದ್ದು, ತನಿಖೆ ವೇಳೆ ಯಾವ ರಹಸ್ಯಗಳು ಹೊರ ಬೀಳುತ್ತೇವೆ ಕಾದು ನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:10 pm, Fri, 20 September 24