ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರನ ವಿವಾಹದಲ್ಲಿ.. ಯುವತಿ ಜೊತೆ MLA ಸಂಗಮೇಶ್ವರ್ ಮಸ್ತ್ ಡ್ಯಾನ್ಸ್!
ಗೋವಾದಲ್ಲಿ ಏಪರ್ಡಿಸಲಾಗಿರುವ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರನ ಅದ್ಧೂರಿ ವಿವಾಹ ಸಮಾರಂಭದಲ್ಲಿ ಯುವತಿ ಜೊತೆ ಶಾಸಕ ಬಿ.ಕೆ.ಸಂಗಮೇಶ್ವರ ಮಸ್ತ್ ಮಸ್ತ್ ಡ್ಯಾನ್ಸ್ ಮಾಡಿರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ರೌಂಡ್ಸ್ ಹೊಡೀತಿದೆ.
ಪಣಜಿ: ಗೋವಾದಲ್ಲಿ ಏರ್ಪಡಿಸಲಾಗಿರುವ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರನ ಅದ್ಧೂರಿ ವಿವಾಹ ಸಮಾರಂಭದಲ್ಲಿ ಬೀಗರರಾದ ಶಾಸಕ ಬಿ.ಕೆ.ಸಂಗಮೇಶ್ವರ್ ಅವರು ಯುವತಿಯ ಜೊತೆ ಮಸ್ತ್ ಮಸ್ತ್ ಡ್ಯಾನ್ಸ್ ಮಾಡಿರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ರೌಂಡ್ಸ್ ಹೊಡೀತಿದೆ. ನಿನ್ನೆ ರಾತ್ರಿ ನಡೆದ ಆರತಕ್ಷತೆ ಕಾರ್ಯಕ್ರಮದಲ್ಲಿ ಯುವತಿ ಜೊತೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಕ್ಷೇತ್ರದ ಶಾಸಕ ಬಿ.ಕೆ.ಸಂಗಮೇಶ್ವರ ಬಿಂದಾಸ್ ಆಗಿ ಡ್ಯಾನ್ಸ್ ಮಾಡಿರುವ ವಿಡಿಯೋ ಫುಲ್ ವೈರಲ್ ಆಗಿದೆ. ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮಗನ ಮದುವೆ ನೋಡಲು ಗೋವಾಗೆ ಬಂದವರಿಗೆ ಭಾರೀ ನಿರಾಸೆ.. ಗೋವಾ ಬೀಚುಗಳೇ ಗತಿ!
ಅಂದ ಹಾಗೆ, ಶಾಸಕ ಬಿ.ಕೆ.ಸಂಗಮೇಶ್ವರ ಸಹೋದರನ ಮಗಳು ಡಾ.ಹಿತಾ ಜೊತೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ್ ವಿವಾಹವಾಗುತ್ತಿದ್ದಾರೆ. ಹಾಗಾಗಿ, ಶಾಸಕ ಸಂಗಮೇಶ್ವರ ಬಹಳ ಆಸಕ್ತಿ ವಹಿಸಿ ಸಮಾರಂಭದಲ್ಲಿ ಪಾಲ್ಗೊಂಡರು. ರಿಸೆಪ್ಷನ್ ಕಾರ್ಯಕ್ರಮದಲ್ಲಿ ಯುವತಿಯೊಬ್ಬಳ ಜೊತೆ ಡ್ಯಾನ್ಸ್ ಮಾಡಿದ ಶಾಸಕ ಬಿ.ಕೆ.ಸಂಗಮೇಶ್ವರ್ ಇಟ್ಸ್ ದ ಟೈಮ್ ಟು ಡಿಸ್ಕೋ ಎಂಬ ಹಿಂದಿ ಹಾಡಿಗೆ ಮಸ್ತ್ ಮಸ್ತ್ ಸ್ಟೆಪ್ಸ್ ಹಾಕಿ ಫುಲ್ ಎಂಜಾಯ್ ಮಾಡಿದರು. ಶಾಸಕರ ಡ್ಯಾನ್ಸ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮದುವೆ ಸಮಾರಂಭದಲ್ಲಿ ಡಿಕೆಶಿ, ಸಿದ್ದರಾಮಯ್ಯ ಭಾಗಿ ಇತ್ತ, ಇಂದು ನಡೆದ ವಿವಾಹ ಕಾರ್ಯಕ್ರಮಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಆಗಮಿಸಿ ವಧು ವರರಿಗೆ ಶುಭ ಕೋರಿದರು. ಇಬ್ಬರು ನಾಯಕರಿಗೆ ಮಾಜಿ ಸಚಿವರಾದ ಪ್ರಿಯಾಂಕ್ ಖರ್ಗೆ ಹಾಗೂ UT ಖಾದರ್ ಸಾಥ್ ಕೊಟ್ಟರು. ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಶಾಸಕಿ ಅಂಜಲಿ ನಿಂಬಾಳ್ಕರ್, ಮಾಜಿ ಶಾಸಕ ಅಶೋಕ್ ಪಟ್ಟಣ್ ಮತ್ತು ಇತರ ನಾಯಕರು ಸಹ ಮದುವೆಗೆ ಆಗಮಿಸಿದರು.
ವೇದಿಕೆಗೆ ಡಿ.ಕೆ ಶಿವಕುಮಾರ್ ಬರುತ್ತಿದ್ದಂತೆ ನವಜೋಡಿ ಅವರ ಕಾಲು ಮುಟ್ಟಿ ಆಶೀರ್ವಾದ ಪಡೆದರು. ಗೋವಾದ ಲೀಲಾ ಪ್ಯಾಲೇಸ್ ರೆಸಾರ್ಟ್ನಲ್ಲಿ ನಡೆಯುತ್ತಿರುವ ಸಮಾರಂಭದಲ್ಲಿ ನವಜೋಡಿಗೆ ಅಕ್ಷತೆ ಹಾಕಿ ಡಿ.ಕೆ ಶಿವಕುಮಾರ್ ಆಶೀರ್ವದಿಸಿದರು. ಈ ನಡುವೆ, ಡಾ.ಹಿತಾ ಸಂಬಂಧಿ ಅವರನ್ನು ವಧುವಿನತ್ತ ಕರೆದರು. ಆದರೆ, ಶಿವಕುಮಾರ್ ಡಾ.ಹಿತಾ ಪಕಕ್ಕೆ ಹೋಗದೆ ಮೃಣಾಲ್ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ಪಕ್ಕದಲ್ಲಿ ನಿಂತು ಫೋಟೋ ಕ್ಲಿಕ್ಕಿಸಿಕೊಂಡರು.
Published On - 3:46 pm, Fri, 27 November 20