Zameer Ahmed: ಸವಿತಾ ಸಮಾಜದ ಕ್ಷಮೆ ಕೋರಿದ ಶಾಸಕ ಜಮೀರ್ ಅಹ್ಮದ್
ವಿವಿಧ ಸಮುದಾಯಗಳಿಗೆ ಪರಿಹಾರ ಘೋಷಣೆ ಬಗ್ಗೆ ಸರ್ಕಾರಕ್ಕೆ ಸಲಹೆ ನೀಡುವ ವೇಳೆ ಶಾಸಕ ಜಮೀರ್ ಅಹ್ಮದ್ ಅವಹೇಳನಕಾರಿ ಪದಬಳಕೆ ಮಾಡಿದ್ದಾರೆ ಎಂದು ಸವಿತಾ ಸಮಾಜದವರು ಆಕ್ಷೇಪ ವ್ಯಕ್ತಪಡಿಸಿದ್ದರು.
ಬೆಂಗಳೂರು: ಸವಿತಾ ಸಮಾಜದ ಬಗ್ಗೆ ಅವಹೇಳನಕಾರಿ ಪದ ಬಳಸಿದ್ದಕ್ಕೆ ಶಾಸಕ ಜಮೀರ್ ಅಹ್ಮದ್ ಸವಿತಾ ಸಮಾಜದ ಕ್ಷಮೆ ಕೋರಿದ್ದಾರೆ. ನಾನು ಉದ್ದೇಶಪೂರ್ವಕವಾಗಿ ಆ ಪದವನ್ನು ಬಳಸಿಲ್ಲ. ಬಾಯಿತಪ್ಪಿ ನಾನು ಅವಹೇಳನಕಾರಿ ಪದವನ್ನ ಬಳಸಿದ್ದೇನೆ. ಆ ಪದ ಬಳಕೆಯಿಂದ ಮನಸ್ಸಿಗೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ ಎಂದು ಅವರು ವಿನಂತಿಸಿದ್ದಾರೆ.
ವಿವಿಧ ಸಮುದಾಯಗಳಿಗೆ ಪರಿಹಾರ ಘೋಷಣೆ ಬಗ್ಗೆ ಸರ್ಕಾರಕ್ಕೆ ಸಲಹೆ ನೀಡುವ ವೇಳೆ ಶಾಸಕ ಜಮೀರ್ ಅಹ್ಮದ್ ಅವಹೇಳನಕಾರಿ ಪದಬಳಕೆ ಮಾಡಿದ್ದಾರೆ ಎಂದು ಸವಿತಾ ಸಮಾಜದವರು ಆಕ್ಷೇಪ ವ್ಯಕ್ತಪಡಿಸಿದ್ದರು. ಶಾಸಕ ಜಮೀರ್ ಅಹ್ಮದ್ ಹೇಳಿಕೆಯನ್ನು ರಾಜ್ಯ ಸವಿತಾ ಸಮಾಜ ತೀವ್ರವಾಗಿ ಖಂಡಿಸಿ, ನಿಷೇಧಿತ ಪದವನ್ನು ವಾಪಸ್ ಪಡೆದು, ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಕಾನೂನಾತ್ಮಕ ಹೋರಾಟಕ್ಕೆ ಮುಂದಾಗುತ್ತೇವೆ ಎಂದು ಎಚ್ಚರಿಕೆ ನೀಡಿದ್ದರು. ಸವಿತಾ ಸಮಾಜ ಸಮುದಾಯದ ಆಕ್ರೋಶಕ್ಕೆ ಮಣಿದ, ಶಾಸಕ ಜಮೀರ್ ಅಹ್ಮದ್, ಬಾಯ್ತಪ್ಪಿನಿಂದ ಆ ಪದ ಬಳಕೆಯಾಗಿದೆ. ಬೇಕಂದೇ ಆ ಪದ ಬಳಕೆ ಮಾಡಿಲ್ಲ. ಆ ಪದ ಬಳಕೆಯಿಂದ ನನಗೂ ನೋವಾಗಿದೆ. ನಿಮ್ಮ ಮನಸ್ಸಿಗೆ ನೋವಾಗಿದ್ದರೆ , ಕ್ಷಮೆ ಕೇಳುತ್ತೇನೆ ಎಂದು ತಿಳಿಸಿದ್ದಾರೆ.
ಸದಾಶಿವನಗರ ಗೆಸ್ಟ್ಹೌಸ್ ಗೊಂದಲ: ಜಮೀರ್ ವಿರುದ್ಧ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ ಬೆಂಗಳೂರಿನ ಸದಾಶಿವನಗರ ಗೆಸ್ಟ್ಹೌಸ್ ದಾಂದಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತುಮಕೂರು ತಾಲ್ಲೂಕು ಹೆಬ್ಬೂರಿನಲ್ಲಿ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ಎರಡು ಬಾರಿ ಮುಖ್ಯಮಂತ್ರಿಯಾಗಿದ್ದವರು ಎಂಬುದನ್ನು ಮರೆತು ನಮ್ಮ ನಾಯಕರ ಬಗ್ಗೆ ಅವರು ಹಗುರವಾಗಿ ಮಾತಾಡಿದ್ದಾರೆ. ಇವತ್ತು ನಾವು ಎಲ್ಲಿಗೆ ಬಂದು ತಲುಪಿದ್ದೇವೆ ಎಂಬುದನ್ನು ಯೋಚಿಸಿದಾಗ ಮನಸ್ಸಿಗೆ ನೋವಾಗುತ್ತದೆ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.
ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ತಮ್ಮ ಆಪ್ತ ಸಹಾಯಕ ಫಾರೂಕ್ ಮೂಲಕ ಬೆಂಗಳೂರಿನ ಸದಾಶಿವ ನಗರ ಪೊಲೀಸ್ ಠಾಣೆಗೆ ಈಚೆಗೆ ದೂರು ನೀಡಿದ್ದರು. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಗ ನಿಖಿಲ್ ಕುಮಾರಸ್ವಾಮಿ ಗನ್ಮ್ಯಾನ್ಗಳು ಬೀಗ ಮುರಿದು ಒಳನುಗ್ಗಿದ್ದಾರೆ ಎಂದು ದೂರಿನಲ್ಲಿ ಹೇಳಿದ್ದರು.
ಕುಮಾರಸ್ವಾಮಿಗೆ ಸೇರಿದ ಅಗತ್ಯ ವಸ್ತುಗಳು ಅಲ್ಲಿದ್ದವು. ಗೆಸ್ಟ್ ಹೌಸ್ ಕೀಲಿ ಶಾಸಕ ಜಮೀರ್ ಅಹ್ಮದ್ ಬಳಿಯಿತ್ತು. ಜಮೀರ್ಗೆ ಭೋಜೇಗೌಡ ಕರೆ ಮಾಡಿ ಟೈಮ್ ಕೇಳಿದ್ದರು. ಗಲಾಟೆ ತಾರಕ್ಕೇರಿತ್ತು. ಹಾಗಾಗಿ, ನಿಖಿಲ್ ಕುಮಾರಸ್ವಾಮಿ ಗನ್ ಮ್ಯಾನ್ ಬೀಗ ಮುರಿದಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ.
ಸದಾಶಿವನಗರದ ಎಂದರೆ ಎಚ್.ಡಿ.ಕುಮಾರಸ್ವಾಮಿ ಅಥವಾ ಎಚ್.ಡಿ.ಕುಮಾರಸ್ವಾಮಿ ಎಂದರೆ ಸದಾಶಿವನಗರ ಎನ್ನುವ ಕಾಲವೊಂದಿತ್ತು. ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದಾಗ ಕುಮಾರಸ್ವಾಮಿಯವರಿಗೆ ಜಮೀರ್ ಬಹಳ ಆಪ್ತರಾಗಿದ್ದರು ಆಗ ಜಮೀನನ್ನು ಕುಮಾರಸ್ವಾಮಿಯವರಿಗೆ ಬಿಟ್ಟುಕೊಟ್ಟಿದ್ದರು. ಅದು ಎಷ್ಟರಮಟ್ಟಿಗೆ ಗುರುತಿಸಲ್ಪಟ್ಟಿತ್ತು ಎಂದರೆ ಗೆಸ್ಟ್ ಹೌಸ್ ಅನ್ನು ಕುಮಾರಸ್ವಾಮಿಯವರೇ ಕೊಂಡುಕೊಂಡಿದ್ದಾರೆ ಅವರ ಹೆಸರಿನಲ್ಲಿಯೇ ಇದೆ ಎಂದು ಜನ ನಂಬಿದ್ದರು ಆದರೆ ಕುಮಾರಸ್ವಾಮಿ ಮತ್ತು ಜಮೀರ್ ಅವರ ನಡುವೆ ಬಿರುಕು ಬಿಟ್ಟು ಕಾಂಗ್ರೆಸ್ಸಿಗೆ ಹೋಗಿದ್ದರೂ ಸಹ ವಿಚಾರ ಇಷ್ಟು ಕೆಳಕ್ಕೆ ಇದ್ದಿರಲಿಲ್ಲ ಬಿದ್ದಿರಲಿಲ್ಲ. ಇಷ್ಟೆಲ್ಲಾ ಬೆಳವಣಿಗೆಗಳ ನಂತರ ಸಂಧಾನ ನಡೆದು ಜಮೀರ್ ದೂರು ಹಿಂಪಡೆದಿದ್ದರು.
ಇದನ್ನೂ ಓದಿ: ನಿಖಿಲ್ ಶೂಟಿಂಗ್ ಸಾಮಾನ್ ಇದೆ ಅಂದ್ರೆ ನನಗೆ ಕೇಳ್ಬೇಕಿತ್ತು, ಮನೆ ಬಾಗಿಲು ಮುರಿಯೋದಾ ಕುಮಾರಸ್ವಾಮಿ: ಜಮೀರ್ ಅಹಮದ್ ಪ್ರಶ್ನೆ
Zameer Ahmed: ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಶಾಸಕ ಜಮೀರ್ ಅಹ್ಮದ್ ದೂರು; ಗೆಸ್ಟ್ಹೌಸ್ ಅತಿಕ್ರಮ ಪ್ರವೇಶ ಮಾಡಿದ್ದಾರೆಂದು ಆರೋಪ (MLA Zamir Ahmad apologized to Savita society for used banned world)