AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಖಿಲ್ ಶೂಟಿಂಗ್ ಸಾಮಾನ್ ಇದೆ ಅಂದ್ರೆ ನನಗೆ ಕೇಳ್ಬೇಕಿತ್ತು, ಮನೆ ಬಾಗಿಲು ಮುರಿಯೋದಾ ಕುಮಾರಸ್ವಾಮಿ: ಜಮೀರ್ ಅಹಮದ್​ ಪ್ರಶ್ನೆ

HD Kumaraswamy: ಟಿವಿ9 ಜೊತೆ ಮಾತನಾಡಿದ ಜಮೀರ್ ಅಹಮದ್ ಖಾನ್ ‘ಕುಮಾರಸ್ವಾಮಿ ಕಡೆಯವರ ಮೇಲೆ ಡಕಾಯತಿ ಕೇಸ್ ಹಾಕಬೇಕು ಅಂತಾ ಹೇಳಿದ್ದಾರೆ. ಮನೆ ಬೀಗ ಒಡೆದು ನುಗ್ಗಿದರೆ ಏನ್ ಮಾಡಬೇಕು ಹೇಳಿ? ನನ್ನ ಮನೆ, ನಾನು ಬೀಗ ಹಾಕಿಕೊಂಡರೆ ತಪ್ಪೇನು? ಎಂದು ನಿನ್ನೆಯ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ನಿಖಿಲ್ ಶೂಟಿಂಗ್ ಸಾಮಾನ್ ಇದೆ ಅಂದ್ರೆ ನನಗೆ ಕೇಳ್ಬೇಕಿತ್ತು, ಮನೆ ಬಾಗಿಲು ಮುರಿಯೋದಾ ಕುಮಾರಸ್ವಾಮಿ: ಜಮೀರ್ ಅಹಮದ್​ ಪ್ರಶ್ನೆ
ನಿಖಿಲ್ ಶೂಟಿಂಗ್ ಸಾಮಾನ್ ಇದೆ ಅಂದ್ರೆ ನನಗೆ ಕೇಳ್ಬೇಕಿತ್ತು, ಮನೆ ಬಾಗಿಲು ಮುರಿಯೋದಾ ಕುಮಾರಸ್ವಾಮಿ: ಜಮೀರ್ ಅಹಮದ್​ ಪ್ರಶ್ನೆ
TV9 Web
| Edited By: |

Updated on:Jun 10, 2021 | 1:29 PM

Share

ಚಡ್ಡಿ ದೋಸ್ತ್​​ಗಳಂತಿದ್ದ ಮಾಜಿ ಮುಖ್ಯಮಂತ್ರಿ, ಜೆಡಿಎಸ್​ ನಾಯಕ ಎಚ್​ಡಿ ಕುಮಾರಸ್ವಾಮಿ ಮತ್ತು ಮಾಜಿ ಮಂತ್ರಿ, ಕಾಂಗ್ರೆಸ್​ ಶಾಸಕ ಜಮೀರ್​ ಅಹಮದ್ ಖಾನ್​ ಅವರ ನಡುವಣ ಕಲಹ ಮತ್ತೊಂದು ಮಜಲಿಗೆ ಬಂದು ನಿಂತಿದೆ. ಜೆಡಿಎಸ್​ ನಾಯಕ ಎಚ್​ಡಿ ಕುಮಾರಸ್ವಾಮಿ ಯಾವ ಬಣ್ಣದ ಚಡ್ಡಿ ಹಾಕಿಕೊಂಡಿದ್ದರು ಅಂತಾ ನನಗೆ ಗೊತ್ತು ಎಂದು ಕಳೆದ ಸಾರ್ವತ್ರಿಕ ಚುನಾವಣೆ ಪ್ರಚಾರದ ವೇಳೆ ಸಾರ್ವತ್ರಿಕವಾಗಿ ಕೆಳ ಹಂತಕ್ಕೆ ಜಾರಿದ್ದ ಉಭಯ ನಾಯಕರ ನಡುವಣ ಕಾದಾಟ, ನಿನ್ನೆಯಿಂದ ದಿಢೀರನೆ ಮತ್ತೆ ಕಾಣಿಸಿಕೊಂಡಿದೆ.

ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಗನ್​ಮ್ಯಾನ್​ಗಳು ಬೀಗ ಮುರಿದು ಒಳನುಗ್ಗಿದ್ದಾರೆ. ಗೆಸ್ಟ್​ಹೌಸ್ ಅತಿಕ್ರಮ ಪ್ರವೇಶ ಮಾಡಿದ್ದಾರೆಂದು ಜಮೀರ್​ ದೂರು ನೀಡಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ್ದ ಕುಮಾರಸ್ವಾಮಿ ಅಲ್ಲಿ ತಮ್ಮ ಪುತ್ರನ ಶೂಟಿಂಗ್​ ಪರಿಕರಗಳು ಇದ್ದವು. ಅದನ್ನು ತೆಗೆದುಕೊಡು ಬರಲು ಹೋಗಿದ್ದರು ಅಷ್ಟೇ ಎಂದು ಸ್ಪಷ್ಟನೆ ನೀಡಿದ್ದರು.

ಆದರೆ ಇದಕ್ಕೆ ತಿರುಗೇಟು ನೀಡಿರುವ ಶಾಸಕ ಜಮೀರ್​ ಅಹಮದ್, ಕುಮಾರಸ್ವಾಮಿ ಅವರು ತಮ್ಮ ಪುತ್ರ, ನಟ ನಿಖಿಲ್ ಗೌಡ ಅವರ ಶೂಟಿಂಗ್ ಸಾಮಾನ್ ಗೆಸ್ಟ್​ ಹೌಸ್​ನಲ್ಲಿ ಇದೆ ಅಂತಾ ನನಗೆ ಕೇಳ್ಬೇಕಿತ್ತು. ಆಗ ನಾನೇ ನಿಂತು ಬಾಗಿಲು ತೆಗೆಸಿ ಅವರಿಗೆ ಸೇರಿದ ಸಾಮಾನು ತೆಗೆದುಕೊಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿನ್ನೆಯ ಪ್ರಕರಣದ ಬಗ್ಗೆ ಟಿವಿ9 ಜೊತೆ ಮಾತನಾಡಿದ ಜಮೀರ್ ಅಹಮದ್ ಖಾನ್ ‘ಕುಮಾರಸ್ವಾಮಿ ಕಡೆಯವರ ಮೇಲೆ ಡಕಾಯತಿ ಕೇಸ್ ಹಾಕಬೇಕು ಅಂತಾ ಹೇಳಿದ್ದಾರೆ. ಮನೆ ಬೀಗ ಒಡೆದು ನುಗ್ಗಿದರೆ ಏನ್ ಮಾಡಬೇಕು ಹೇಳಿ? ನನ್ನ ಮನೆ, ನಾನು ಬೀಗ ಹಾಕಿಕೊಂಡರೆ ತಪ್ಪೇನು? ಕುಮಾರಸ್ವಾಮಿಗೆ 2001ರಲ್ಲಿ ಕೂರಲು ಜಾಗ ಇರಲಿಲ್ಲ. ಆಗ ಸದಾಶಿವನಗರದಲ್ಲಿದ್ದ ನನ್ನ ಗೆಸ್ಟ್ ಹೌಸ್ ಹಾಗೂ ಯುಬಿ ಸಿಟಿಯಲ್ಲಿದ್ದ ನನ್ನ ಗೆಸ್ಟ್ ಹೌಸ್ ಗಳನ್ನು ನಾನೇ ಕೊಟ್ಟಿದ್ದು. ಆಗ ನಾನೇ ಕೊಟ್ಟಿದ್ದು, ಅವರಿಗೆ ಯಾರೂ ಇರಲಿಲ್ಲ ಆಗ, ಈಗ ಅವರು ದೊಡ್ಡವರಾಗಿದ್ದಾರೆ ಅಂತಾ ಜಮೀರ್​ ಆಕ್ರೋಶ, ಅಸಮಾಧಾನ ಹೊರಹಾಕಿದರು.

ಇದಕ್ಕೂ ಮುನ್ನ ನಿನ್ನೆ ಬುಧವಾರ ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ದೂರು ನೀಡಿದ್ದಾರೆ. ಆಪ್ತ ಸಹಾಯಕ ಫಾರೂಕ್ ಮೂಲಕ ಬೆಂಗಳೂರಿನ ಸದಾಶಿವ ನಗರ ಪೊಲೀಸ್​ ಠಾಣೆಗೆ ದೂರು ಸಲ್ಲಿಸಿದ್ದಾರೆ. ಸದಾಶಿವ ನಗರದ ಗೆಸ್ಟ್​​ಹೌಸ್ ಅತಿಕ್ರಮ ಪ್ರವೇಶ ಮಾಡಿದ್ದಾರೆ ಎಂಬುದು ದೂರು.

ಸದಾಶಿವ ನಗರದ ಗೆಸ್ಟ್​​ಹೌಸ್​​ಗೆ ಗನ್​ಮ್ಯಾನ್​ಗಳು ಪ್ರವೇಶ ಮಾಡಿದ್ದಾರೆ. ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಗನ್​ಮ್ಯಾನ್​ಗಳು ಬೀಗ ಮುರಿದು ಒಳನುಗ್ಗಿದ್ದಾರೆ. ಗೆಸ್ಟ್​ಹೌಸ್ ಅತಿಕ್ರಮ ಪ್ರವೇಶ ಮಾಡಿದ್ದಾರೆಂದು ದೂರು ಸಲ್ಲಿಸಲಾಗಿದೆ. ಅದರೆ ಕುಮಾರಸ್ವಾಮಿ ಅವರ ಆಪ್ತ ಭೋಜೇಗೌಡರು ಕ್ಷಮೆಯಾಚಿಸಿದ್ದರಿಂದ ದೂರು ನೀಡಿಲ್ಲ ಎಂದೂ ಜಮೀರ್​ ಅಹ್ಮದ್​ ಇದೇ ವೇಳೆ ಹೇಳಿದ್ದಾರೆ.

ಸದಾಶಿವನಗರದ ಎಂದರೆ ಹೆಚ್ ಡಿ ಕುಮಾರಸ್ವಾಮಿ ಅಥವಾ ಹೆಚ್ ಡಿ ಕುಮಾರಸ್ವಾಮಿ ಎಂದರೆ ಸದಾಶಿವನಗರ ಎನ್ನುವ ಕಾಲವೊಂದಿತ್ತು. ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದಾಗ ಕುಮಾರಸ್ವಾಮಿಯವರಿಗೆ ಜಮೀರ್ ಬಹಳ ಆಪ್ತರಾಗಿದ್ದರು ಆಗ ಜಮೀನನ್ನು ಕುಮಾರಸ್ವಾಮಿಯವರಿಗೆ ಬಿಟ್ಟುಕೊಟ್ಟಿದ್ದರು. ಅದು ಎಷ್ಟರ ಮಟ್ಟಿಗೆ ಗುರುತಿಸಲ್ಪಟ್ಟಿತ್ತು ಎಂದರೆ ಗೆಸ್ಟ್ ಹೌಸ್ ಅನ್ನು ಕುಮಾರಸ್ವಾಮಿಯವರೇ ಕೊಂಡುಕೊಂಡಿದ್ದಾರೆ ಅವರ ಹೆಸರಿನಲ್ಲಿಯೇ ಇದೆ ಎಂದು ಜನ ನಂಬಿದ್ದರು ಆದರೆ ಕುಮಾರಸ್ವಾಮಿ ಮತ್ತು ಜಮೀರ್ ಅವರ ನಡುವೆ ಬಿರುಕು ಬಿಟ್ಟು ಕಾಂಗ್ರೆಸ್ಸಿಗೆ ಹೋಗಿದ್ದರೂ ಸಹ ವಿಚಾರ ಇಷ್ಟು ಕೆಳಕ್ಕೆ ಇದ್ದಿರಲಿಲ್ಲ ಬಿದ್ದಿರಲಿಲ್ಲ. ಈಗ ಹಾಗೆ ಬಾಗಿಲು ಮುರಿದು ಒಳಗೆ ಹೋಗಲು ಯತ್ನಿಸಿದ್ದಾರೆ ಎಂಬ ಆರೋಪ ಬಂದಿರುವುದು ಒಂದು ವಿಚಿತ್ರ ಆದರೂ ಸತ್ಯ.

ಶಾಸಕ ಜಮೀರ್​ ಅಹಮದ್, ನಿನ್ನೆಯ ಪ್ರಕರಣದ ಬಗ್ಗೆ ಇನ್ನೂ ಏನು ಹೇಳಿದ್ದಾರೆ… ಈ ವಿಡಿಯೋ ನೋಡಿ:

ಕುಮಾರಸ್ವಾಮಿ ಉಲ್ಟಾ ಗಿರಾಕಿ ಅಂದಿದ್ದಕ್ಕೆ ಮನೆ ಬಾಗಿಲು ಮುರಿದ್ರು |Zameer ahmad|HDKumaraswamy

(congress mla Zameer ahmed khan questions HD Kumaraswamy motive behind barging in to his guest house in sadashivanagar)

Published On - 1:13 pm, Thu, 10 June 21

Follow Us
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
RCB ವಿರುದ್ಧ ಹೀರೋ SRH ವಿರುದ್ಧ ಝೀರೋ!
RCB ವಿರುದ್ಧ ಹೀರೋ SRH ವಿರುದ್ಧ ಝೀರೋ!
ಮೋದಿ ಬಗ್ಗೆ ಮಾತಾಡಿದ್ದ ಖರ್ಗೆಗೆ ಟಾಂಗ್​​ ಕೊಟ್ಟ ಉಪರಾಷ್ಟ್ರಪತಿ
ಮೋದಿ ಬಗ್ಗೆ ಮಾತಾಡಿದ್ದ ಖರ್ಗೆಗೆ ಟಾಂಗ್​​ ಕೊಟ್ಟ ಉಪರಾಷ್ಟ್ರಪತಿ
ಹೆಂಡ್ತಿ ರೆಡ್​ ಹ್ಯಾಂಡ್ ಸಿಕ್ಕಿಬಿದ್ದಾಗ ಬುದ್ದಿ ಹೇಳಿದ್ದೆ: ಪತಿ ಕಣ್ಣೀರು!
ಹೆಂಡ್ತಿ ರೆಡ್​ ಹ್ಯಾಂಡ್ ಸಿಕ್ಕಿಬಿದ್ದಾಗ ಬುದ್ದಿ ಹೇಳಿದ್ದೆ: ಪತಿ ಕಣ್ಣೀರು!
ಮಾಳು ಊರಲ್ಲಿ ಬೈಕ್​ ಅಲ್ಲಿ ಲಾಂಗ್ ಡ್ರೈವ್ ಹೋದ ರಕ್ಷಿತಾ ಶೆಟ್ಟಿ
ಮಾಳು ಊರಲ್ಲಿ ಬೈಕ್​ ಅಲ್ಲಿ ಲಾಂಗ್ ಡ್ರೈವ್ ಹೋದ ರಕ್ಷಿತಾ ಶೆಟ್ಟಿ
ಜೀವಜಲಕ್ಕಾಗಿ 2 ಕಿ.ಮೀ ನಡೆದುಕೊಂಡು ಹೋಗ್ಬೇಕು! ನರಲಗುಡ್ಡ ನಿವಾಸಿಗಳ ಪರದಾಟ!
ಜೀವಜಲಕ್ಕಾಗಿ 2 ಕಿ.ಮೀ ನಡೆದುಕೊಂಡು ಹೋಗ್ಬೇಕು! ನರಲಗುಡ್ಡ ನಿವಾಸಿಗಳ ಪರದಾಟ!