ವಿಧಾನಸೌಧದಲ್ಲಿ ನಿಲ್ಲದ ‘ಬ್ಲೂ ಬಾಯ್ಸ್’ ಕ್ವಾಟ್ಲೆ: ವಿಧಾನ ಪರಿಷತ್ನಲ್ಲಿ ಕಾಂಗ್ರೆಸ್ ಸದಸ್ಯನಿಂದ ನೀಲಿ ಚಿತ್ರ ವೀಕ್ಷಣೆ
ಕಳೆದ ಕೆಲವು ವರ್ಷಗಳ ಹಿಂದೆ ಸದನದಲ್ಲಿ ಕೆಲ ಶಾಸಕರು ನೀಲಿ ಚಿತ್ರ ವೀಕ್ಷಿಸಿದ್ದ ಪ್ರಸಂಗ ರಾಜ್ಯಾದ್ಯಂತ ಭಾರಿ ಆಕ್ರೋಶಕ್ಕೆ ಗುರಿಯಾಗಿತ್ತು. ಇದೀಗ, ಅಂಥದ್ದೇ ಮತ್ತೊಂದು ಪ್ರಸಂಗ ಇಂದು ಬೆಳಕಿಗೆ ಬಂದಿದೆ.
ಬೆಂಗಳೂರು: ಕೆಲವು ವರ್ಷಗಳ ಹಿಂದೆ ಸದನದಲ್ಲಿ ಕೆಲ ಶಾಸಕರು ನೀಲಿ ಚಿತ್ರ ವೀಕ್ಷಿಸಿದ್ದ ಪ್ರಸಂಗ ರಾಜ್ಯಾದ್ಯಂತ ಭಾರಿ ಆಕ್ರೋಶಕ್ಕೆ ಗುರಿಯಾಗಿತ್ತು. ಇದೀಗ, ಅಂಥದ್ದೇ ಮತ್ತೊಂದು ಪ್ರಸಂಗ ಇಂದು ಬೆಳಕಿಗೆ ಬಂದಿದೆ.
ಹೌದು, ಈ ಬಾರಿ ವಿಧಾನಪರಿಷತ್ನಲ್ಲಿ ಕಲಾಪದ ವೇಳೆ ಕಾಂಗ್ರೆಸ್ ಪಕ್ಷದ MLC ಪ್ರಕಾಶ್ ರಾಥೋಡ್ ಅಶ್ಲೀಲ ಚಿತ್ರಗಳನ್ನು ವೀಕ್ಷಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸದನದ ಕಾರ್ಯಕಲಾಪದ ವೇಳೆ, ವಿಧಾನಪರಿಷತ್ ಸದಸ್ಯ ಪ್ರಕಾಶ್ ರಾಥೋಡ್ ತಮ್ಮ ಮೊಬೈಲ್ನ ಗ್ಯಾಲರಿಯಲ್ಲಿದ್ದ ಕೆಲ ಅಶ್ಲೀಲ ಚಿತ್ರಗಳನ್ನು ವೀಕ್ಷಿಸಿದರು ಎಂದು ಹೇಳಲಾಗಿದೆ.
ತಮ್ಮ ಗ್ಯಾಲರಿಯಲ್ಲಿದ್ದ ಫೋಟೋಗಳನ್ನು ಡಿಲೀಟ್ ಮಾಡ್ತಿದ್ದ ವೇಳೆ ಪ್ರಕಾಶ್ ರಾಥೋಡ್ ಈ ಚಿತ್ರಗಳನ್ನು ವೀಕ್ಷಿಸಿದರು ಎಂದು ತಿಳಿದುಬಂದಿದೆ. ಇದೀಗ, ವಿಧಾನಪರಿಷತ್ ಸದಸ್ಯರ ನಡೆಗೆ ಸಾರ್ವಜನಿಕರಿಂದ ಭಾರಿ ಆಕ್ರೋಶ ವ್ಯಕ್ತವಾಗಿದೆ.
ಮೊಬೈಲ್ನಲ್ಲಿ ಫೋಟೋ ಡಿಲೀಟ್ ಮಾಡ್ತಿದ್ದೆ ಅಷ್ಟೇ.. ಬೇರೆ ತರಹ ದಯವಿಟ್ಟು ಬಿಂಬಿಸಬೇಡಿ: MLC ಪ್ರಕಾಶ್ ರಾಥೋಡ್
Published On - 5:09 pm, Fri, 29 January 21