ಜೈಲಿನಲ್ಲಿ ಮೊಬೈಲ್, ಮಾದಕ ವಸ್ತು ಹಿಡಿದು ಕೊಟ್ಟರೆ ಕೈದಿಗಳ ಶಿಕ್ಷೆ ಕಡಿತ: ಗೃಹಸಚಿವ ಅರಗ ಜ್ಞಾನೇಂದ್ರ

ಹರ್ಷ ಕೊಲೆ ಪ್ರಕರಣದ ಆರೋಪಿಗಳು ಮೊಬೈಲ್ ಬಳಕೆ ಮಾಡುತ್ತಿದ್ದ ಬಗ್ಗೆ ತನಿಖೆ ನಡೆಯುತ್ತಿದೆ. ಆರೋಪಿಗಳಿಗೆ ಸಹಕರಿಸಿದ ಓರ್ವನನ್ನು ವಶಕ್ಕೆ ಪಡೆಯಲಾಗಿದೆ ಎಂದು ಗೃಹಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಜೈಲಿನಲ್ಲಿ ಮೊಬೈಲ್, ಮಾದಕ ವಸ್ತು ಹಿಡಿದು ಕೊಟ್ಟರೆ ಕೈದಿಗಳ ಶಿಕ್ಷೆ ಕಡಿತ: ಗೃಹಸಚಿವ ಅರಗ ಜ್ಞಾನೇಂದ್ರ
ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಗೃಹಸಚಿವರು
Follow us
TV9 Web
| Updated By: Rakesh Nayak Manchi

Updated on:Jul 12, 2022 | 3:27 PM

ಬೆಂಗಳೂರು: ಹರ್ಷ ಕೊಲೆ ಪ್ರಕರಣದ ಆರೋಪಿಗಳು ಜೈಲಿನಲ್ಲಿ ಆರಾಮವಾಗಿದ್ದರು, ಮೊಬೈಲ್​ನಲ್ಲಿ ವಿಡಿಯೋಕಾಲ್​ ಮಾಡಿಕೊಂಡು ಜಾಲಿಯಾಗಿದ್ದರು. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ತನಿಖಾ ವರದಿ ಬಂದ ನಂತರ ಎಲ್ಲರ ಹೆಸರೂ ಹೊರಬರುತ್ತದೆ ಎಂದು ಗೃಹ ಖಾತೆ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ. ಕೈದಿಗಳು ಜೈಲಿನಲ್ಲಿ ಮೊಬೈಲ್ ಬಳಕೆ ಮಾಡುತ್ತಿರುವ ಆರೋಪ ಸಂಬಂಧ ದಿಡೀರ್ ಆಗಿ ಕಾರಾಗೃಹಕ್ಕೆ ಭೇಟಿ ನೀಡಿದ ಗೃಹಸಚಿವರು ಪರಿಶೀಲನೆ ನಡೆಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಜೈಲಿನ ಅಧೀಕ್ಷಕರು ಸೇರಿದಂತೆ ಎಲ್ಲರೂ ಹೊಸಬರು ಇದ್ದಾರೆ. ಸರ್ಕಾರಕ್ಕೆ ಮುಜುಗರವಾಗುವಂತಹ ಘಟನೆಗಳನ್ನ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಜೈಲಿನಲ್ಲಿ ಮೊಬೈಲ್, ಮಾದಕ ವಸ್ತು ಹಿಡಿದುಕೊಟ್ಟರೆ ಅಂತಹ ಕೈದಿಗಳಿಗೆ ಶಿಕ್ಷೆ ಪ್ರಮಾಣ ಕಡಿತಗೊಳಿಸಲಾಗುವುದು. ಜೈಲಿನ ಸಿಬ್ಬಂದಿ ಹಿಡಿದುಕೊಟ್ಟರೆ ಅವರಿಗೆ ಬಹುಮಾನ ಕೊಡಲಾಗುತ್ತದೆ ಎಂದು ಹೇಳಿದರು.

ಇದನ್ನೂ ಓದಿ: ಹರ್ಷ ಹಂತಕರಿಗೆ ರಾಜಾಥಿತ್ಯ ಆರೋಪ: ಪರಪ್ಪನ ಅಗ್ರಹಾರ ಜೈಲಿನ 35 ಸಿಬ್ಬಂದಿಗಳು ಅಮಾನತು

ಪರಪ್ಪನ ಅಗ್ರಹಾರ ಸೆಂಟ್ರಲ್​ ಜೈಲಿನಲ್ಲಿ ತಪಾಸಣೆ ನಡೆಸಿದ್ದು, ಡಿಐಜಿ ಸಹಿತ 35 ಸಿಬ್ಬಂದಿ ವರ್ಗಾವಣೆ ಮಾಡಲಾಗಿದೆ. ಮುರುಗನ್ ವರದಿಯಲ್ಲಿ ಹೆಸರಿದ್ದವರನ್ನ ಸಸ್ಪೆಂಡ್ ಮಾಡುತ್ತಿದ್ದೇವೆ. ಕೇಂದ್ರ ಕಾರಗೃಹದ 15 ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲಾಗಿದೆ. 3800 ವಿಚಾರಾದೀನ ಖೈದಿ, 1800 ಸಜಾ ಖೈದಿಗಳು ಜೈಲಲ್ಲಿದ್ದಾರೆ. ಯಾವ ಕೈದಿಗಳ ಬಳಿ ಮಾದಕ ವಸ್ತು, ಫೋನ್ ಸಿಕ್ಕಿದೆ ಎಂಬ ಮಾಹಿತಿ ತಿಳಿಸಿದವರಿಗೆ ಕನ್ವಿಕ್ಷನ್ ಆಗುತ್ತದೆ. ಕೈದಿಗಳಿಗೆ ಸಹಾಯ ಮಾಡುತ್ತಿದ್ದ ಸಿಬ್ಬಂದಿಗಳ ಮೇಲೆ ಎಫ್ಐಆರ್ ಮಾಡಿ ಕ್ರಿಮಿನಲ್ ಕೇಸ್ ಹಾಕಲಾಗುತ್ತದೆ ಎಂದರು.

ಸರ್ಕಾರಕ್ಕೆ ಮುಜುಗರವಾಗುವಂತಹ ಯಾವುದೇ ಘಟನೆ ನಡೆದರೂ ಯಾರಿಗೂ ಕರುಣೆ ತೋರಿಸುವುದಿಲ್ಲ, ಕಾನೂನು ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಲಾಗಿದೆ. ಸದ್ಯ 3G ಹಾಗೂ 2ಜಿ ಜಾಮರ್ ಅಳವಡಿಸಲಾಗಿದೆ. 4ಜಿ ಜಾಮರ್ ಸದ್ಯದಲ್ಲೇ ಅಳವಡಿಸಲಾಗುತ್ತದೆ. ಜೈಲಿನ ಒಳಗಡೆಯೇ ಅಪರಾಧ ಮಾಡುತ್ತಾರೆ ಎಂದರೆ ಅದು ಬಹುದೊಡ್ಡ ಅಪರಾಧ. ಜೈಲು ದ್ವಾರದ ಬಳಿಯಲ್ಲಿ ಹಣ ಪಡೆಯುತ್ತಿದ್ದ ಬಗ್ಗೆ ನನ್ನ ಗಮನಕ್ಕೆ ಬಂದಿದೆ. ಜೈಲಿನ ಒಳಗೆ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳಿಗೆ ಬಾಡಿ ವೋರ್ನ್ ಕ್ಯಾಮೆರಾ ನೀಡಲಾಗುತ್ತದೆ ಎಂದರು.

ಇದನ್ನೂ ಓದಿ: Crime News: ಯುವಕನ ಮರ್ಮಾಂಗಕ್ಕೆ ಪೆಟ್ರೋಲ್ ಸುರಿದು, ನಗ್ನ ವಿಡಿಯೋ ರೆಕಾರ್ಡ್​ ಮಾಡಿದ ಮಾಲೀಕ

ಹರ್ಷ ಹಂತಕರಿಗೆ ಮೊಬೈಲ್ ಬಳಕೆಗೆ ಸಹಕಾರ ನೀಡಿದಾತ ವಶಕ್ಕೆ

ಜೈಲಿನ ಬಗ್ಗೆ ಸಾಕಷ್ಟು ಸುದ್ದಿಗಳು ವರದಿ ಆಗಿವೆ, ಈ ನಿಟ್ಟಿನಲ್ಲಿ ಹೊಸ ಕಾಯ್ದೆ ಜಾರಿಗೆ ತಂದಿದ್ದೇವೆ. ತಪ್ಪು ಮಾಡಿದವರಿಗೆ ಮತ್ತೆ ಜೈಲು ವಾಸ ಮುಂದುವರೆಯಲಿದ್ದು, ಎರಡೆರಡು ಶಿಕ್ಷೆ ಅನುಭವಿಸಬೇಕಾಗುತ್ತದೆ. ಕೈದಿಗಳಿಗೆ ಸಹಕಾರ ನೀಡಿದರೆ ಬ್ಯಾರಾಕ್ ಇಂಚಾರ್ಜ ಮೇಲೆಯೂ ಕೇಸು ದಾಖಲಿಸಲಾಗುತ್ತದೆ. ಹರ್ಷ ಕೊಲೆ ಮೊಬೈಲ್ ಬಳಕೆಗೆ ಸಹಕಾರ ನೀಡಿದ ಓರ್ವನನ್ನು ವಶಕ್ಕೆ ಪಡೆದಿದ್ದೇವೆ. ಹೊರಗೆ ಒಬ್ಬ ತಪ್ಪಿಸಿಕೊಂಡಿದ್ದಾನೆ. ಎಲ್ಲರ‌ ಮೇಲೂ ಕೇಸು ದಾಖಲಾಗುತ್ತದೆ ಎಂದರು.

ಅಕ್ರಮ ತಡೆಗಟ್ಟಲು 4G ಜಾಮರ್ ಅಳವಡಿಕೆಗೆ ನಿರ್ಧಾರ

ಜೈಲಿನಲ್ಲಿ ಅಕ್ರಮಗಳನ್ನು ತಡೆಯಲು 4G ಜಾಮರ್ ಅಳವಡಿಕೆ ಮಾಡಲು ಗೃಹ ಇಲಾಖೆ ನಿರ್ಧಾರಿಸಿದೆ. ಈ ಹಿಂದೆ ಕೇವಲ 2g ಮತ್ತು 3g ಜಾಮರ್ ಅಳವಡಿಕೆ ಮಾಡಲಾಗಿತ್ತು. ಇದೀಗ 4G ಜಾಮರ್ ಅಳವಡಿಕೆಗೆ ನಿರ್ಧರಿಸಲಾಗಿದೆ. ಇದಲ್ಲದೆ ಅಕ್ರಮ ತಡೆಗಟ್ಟಲು ಜೈಲಿನ‌ ಸಿಬ್ಬಂದಿಗೆ ಬಾಡಿ ಕ್ಯಾಮೆರ ಅಳವಡಿಕೆಗೆ ನಿರ್ಧಾರಿಸಲಾಗಿದೆ.

ಇದನ್ನೂ ಓದಿ: ಬಕ್ರೀದ್ ಹಬ್ಬದಂದು ಗೋಹತ್ಯೆ ನಿಷೇಧ ಕಾಯ್ದೆ ಉಲ್ಲಂಘನೆ: 707 ಜಾನುವಾರು ರಕ್ಷಣೆ, 67 ಮಂದಿ ಅರೆಸ್ಟ್

Published On - 3:26 pm, Tue, 12 July 22

ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಸರ್ಕಾರೀ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲು ಸಿಎಸ್​ಗೆ ಸಿಎಂ ಸೂಚನೆ
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು