ಚಿಕ್ಕಬಳ್ಳಾಪುರ: ಡಿಸೆಂಬರ್ 5ರಂದು ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆ ಹಿನ್ನೆಲೆ ಮೋದಿ ಅಭಿಮಾನಿಯಿಂದ ಬಿಜೆಪಿ ಅಭ್ಯರ್ಥಿಗಳಿಗೆ ಭರ್ಜರಿ ಆಫರ್ ಷೋಷಣೆಯಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲೂಕಿನ ಚಿನ್ನಕಾಯಲಪಲ್ಲಿ ನಿವಾಸಿ ರಾಮಕೃಷ್ಣಾರೆಡ್ಡಿ ಎಂಬುವವರು ಬಿಜೆಪಿಯಿಂದ ಸ್ಪರ್ಧಿಸುವವರಿಗೆ 10 ಸಾವಿರ ರೂ. ಚುನಾವಣಾ ಠೇವಣಿ ಮಾಡುವುದಾಗಿ ಆಫರ್ ನೀಡಿದ್ದಾರೆ. ಹಾಗೂ ಬಿಜೆಪಿ ಅಭ್ಯರ್ಥಿಗಳ ಹೆಸರಿನಲ್ಲಿ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಪೂಜೆಸಲ್ಲಿಸಿದ್ದಾರೆ.
ಈಗಾಗಲೇ ಚಿಕ್ಕಬಳ್ಳಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಕೈಗೆ ಕೆಂಪು ಅರಿಶಿಣ ದಾರ ಕಟ್ಟಿ 10,000 ರೂ. ನೀಡಿದ್ದಾರೆ. 15 ಕ್ಷೇತ್ರಗಳ 15 ಮಂದಿ ಅಭ್ಯರ್ಥಿಗಳ ಠೇವಣಿ ಮೊತ್ತ ಭರಿಸುವುದಾಗಿ ಹೇಳಿದ್ದಾರೆ.