ರೂಪಾಂತರಿತ ವೈರಸ್ಗೆ ಹೆಚ್ಚು ಶಕ್ತಿಯಿಲ್ಲ: ಉಪಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ್
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನಲ್ಲಿ ಮಾತನಾಡಿದ ಅಶ್ವತ್ಥ್ ನಾರಾಯಣ, ರೂಪಾಂತರ ವೈರಸ್ ಬಹಳ ಬೇಗನೇ ಹರಡುತ್ತದೆ. ಆದರೆ, ಈ ವೈರಸ್ ಅಷ್ಟೇನೂ ಪರಿಣಾಮಕಾರಿ ಅಲ್ಲ ಎಂದರು.
ಬೆಂಗಳೂರು: ಇಂಗ್ಲೆಂಡ್ನಲ್ಲಿ ರೂಪಾಂತರಿತ ಕೊರೊನಾ ವೈರಸ್ ಕಾಣಿಸಿಕೊಂಡ ನಂತರ ವಿಶ್ವದೆಲ್ಲೆಡೆ ಕಟ್ಟೆಚ್ಚರ ವಹಿಸಲಾಗುತ್ತಿದೆ. ಕೆಲವರು ಈ ವೈರಸ್ ಹೆಚ್ಚು ಹಾನಿ ಮಾಡಲಿದೆ ಎನ್ನುವ ವಾದವನ್ನು ಮುಂದಿಟ್ಟಿದ್ದರು. ಇದರಿಂದ ನಮ್ಮ ರಾಜ್ಯದ ಜನತೆಯಲ್ಲಿ ಭಾರೀ ಆತಂಕ ಸೃಷ್ಟಿಯಾಗಿತ್ತು. ಈ ಆತಂಕವನ್ನು ಉಪಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ್ ದೂರ ಮಾಡಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದಲ್ಲಿರುವ ಇತಿಹಾಸ ಪ್ರಸಿದ್ಧ ಚನ್ನಕೇಶವಸ್ವಾಮಿ ದೇವಾಲಯಕ್ಕೆ ಡಿಸಿಎಂ ಅಶ್ವತ್ಥ್ ನಾರಾಯಣ್ ಕುಟುಂಬ ಸಮೇತ ಭೇಟಿ ನೀಡಿದರು. ದೇವಾಲಯದ ಪಕ್ಕದಲ್ಲಿ ಬ್ರಾಹ್ಮಣ ಟ್ರಸ್ಟ್ ನಿರ್ಮಿಸಿರುವ ಕೇಶವ ಭವನದ ಲಿಫ್ಟ್ ಉದ್ಘಾಟನೆ ಕೂಡ ಮಾಡಿದರು. ನಂತರ ಮಾಧ್ಯಮದ ಜೊತೆ ಮಾತನಾಡಿದ ಅವರು, ರೂಪಾಂತರಿತ ವೈರಸ್ ಬಹಳ ಬೇಗನೇ ಹರಡುತ್ತದೆ. ಆದರೆ, ಈ ವೈರಸ್ ಅಷ್ಟೇನೂ ಪರಿಣಾಮಕಾರಿ ಅಲ್ಲ. ಮುಂಬರುವ ದಿನಗಳಲ್ಲಿ ವೈರಸ್ ಶಕ್ತಿ ಮತ್ತಷ್ಟು ಕುಗ್ಗಲಿದೆ ಎಂದರು.
ಬ್ರಿಟನ್ನಲ್ಲಿ ಕೊರೊನಾ ವೈರಾಣು ಹೊಸ ಅವತಾರ ತಾಳಿತ್ತು. ಈ ಮೂಲಕ 2ನೇ ಅಲೆಯ ಭೀತಿಯಿಂದ ಬ್ರಿಟನ್ ಮತ್ತೆ ಲಾಕ್ಡೌನ್ ಮೊರೆ ಹೋಗುವ ಅನಿವಾರ್ಯತೆ ಸೃಷ್ಟಿಯಾಗಿದೆ. ಕೊರೊನಾ ಮೊದಲ ಅಲೆಗಿಂತಲೂ 2ನೇ ಅಲೆ ಭೀಕರ ಮತ್ತು ಅಪಾಯಕಾರಿ ಎಂಬ ವಾದಗಳು ಕೇಳಿ ಬಂದಿದ್ದವು. ಹೀಗಾಗಿ, ಇತರೆ ದೇಶಗಳಿಂದ ಬ್ರಿಟನ್ನಿಗೆ ಹೋಗುವ ಮತ್ತು ಅಲ್ಲಿಂದ ಬರುವ ವಿಮಾನಯಾನ ಸ್ಥಗಿತಗೊಳಿಸಲಾಗಿದೆ.
Published On - 8:53 pm, Mon, 28 December 20