ಒಂದು ನೋಟು ಕೊಟ್ರೆ ಮೂರು ಪಟ್ಟು ಹಣ ವಾಪಸ್; ಮೋಸದ ಜಾಲ ಮಾಡುತ್ತಿದ್ದದ್ದೇನು? ಪೊಲೀಸರ ಬಲೆಗೆ ಸಿಕ್ಕಿ ಬಿದ್ದದ್ದು ಹೇಗೆ? ಇಲ್ಲಿದೆ ವಿವರ

| Updated By: ganapathi bhat

Updated on: Jul 13, 2021 | 10:09 PM

ಮನಿ ಡಬ್ಲಿಂಗ್ ಮಾಡುತ್ತೇವೆ ಎಂದು ವಂಚನೆಗೆ ಸಿದ್ದವಾಗಿದ್ದ ಮೂರು ಜನ ಐನಾತಿಗಳ ಗುಂಪು ನೆಲಮಂಗಲ ಗ್ರಾಮಾಂತರ ಪೊಲೀಸರಿಗೆ ಸೆರೆ ಸಿಕ್ಕಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಮಲ್ಲರಬಾಣವಾಡಿ ಗೇಟ್ ಬಳಿ ಪೊಲೀಸರು ಇವರನ್ನ ಬಂದಿಸಿದ್ದಾರೆ.

ಒಂದು ನೋಟು ಕೊಟ್ರೆ ಮೂರು ಪಟ್ಟು ಹಣ ವಾಪಸ್; ಮೋಸದ ಜಾಲ ಮಾಡುತ್ತಿದ್ದದ್ದೇನು? ಪೊಲೀಸರ ಬಲೆಗೆ ಸಿಕ್ಕಿ ಬಿದ್ದದ್ದು ಹೇಗೆ? ಇಲ್ಲಿದೆ ವಿವರ
ಸಾಂದರ್ಭಿಕ ಚಿತ್ರ
Follow us on

ನೆಲಮಂಗಲ: ನೀವು ಸೈಟ್, ಮನೆ ಕೊಳ್ಳಬೇಕೇ ನಮ್ಮತ್ರ ಬನ್ನಿ ನಿಮ್ಮ ಹಣಕ್ಕೆ ಮೂರು ಪಟ್ಟು ಹಣ ಮಾಡಿಕೊಡುತ್ತೀವಿ. ಹೀಗೊಂದು ಮೋಸದ ಜಾಲ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದೆ. ಮೋಸ ಹೋಗುವವರು ಇರೋವರೆಗೂ ಮೋಸ ಮಾಡೋರು ಇದ್ದೇ ಇರ್ತಾರೆ ಅನ್ನೋ ವಾಡಿಕೆ ಇದೆ, ಆದ್ರೆ ಈ ಪ್ರಕರಣದಲ್ಲಿ ಮೋಸ ಮಾಡಲು ಬಂದಿದ್ದವರು ಖಾಕಿ ಕೆಡ್ಡಾಗೆ ಬಿದ್ದಿದ್ದಾರೆ, ಮನಿ ಡಬ್ಲಿಂಗ್ ಹೆಸರಲ್ಲಿ ವಂಚಿಸಲು ಯತ್ನಿಸಿದ್ದ ಮೊವರು ಜೈಲು ಪಾಲಾಗಿದ್ದಾರೆ.

ಮನಿ ಡಬ್ಲಿಂಗ್ ಮಾಡುತ್ತೇವೆ ಎಂದು ವಂಚನೆಗೆ ಸಿದ್ದವಾಗಿದ್ದ ಮೂರು ಜನ ಐನಾತಿಗಳ ಗುಂಪು ನೆಲಮಂಗಲ ಗ್ರಾಮಾಂತರ ಪೊಲೀಸರಿಗೆ ಸೆರೆ ಸಿಕ್ಕಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಮಲ್ಲರಬಾಣವಾಡಿ ಗೇಟ್ ಬಳಿ ಪೊಲೀಸರು ಇವರನ್ನ ಬಂದಿಸಿದ್ದು ಬಂದಿತರನ್ನ ಬಳ್ಳಾರಿ ಮೂಲದ ಖಾನ್ ಹುಸೇನ್, ರಾಜಶೇಖರ್ ಹಾಗೂ ರಾಯಚೂರು ಮೂಲದ ಗೌಸ್ ಸಾಬ್ ಎಂದು ಗುರುತಿಸಲಾಗಿದ್ದು, ಬಂದಿತರಿಂದ 12 ಸಾವಿರ ನಗದು, ರಾಸಾಯನಿಕ ದ್ರವಣ, ಕಪ್ಪು ಬಣ್ಣದ ಶಾಹಿ ಸೇರಿದಂತೆ ಪೇಪರ್ ಬಂಡಲ್ ವಶಕ್ಕೆ ಪಡೆದಿದ್ದಾರೆ.

ವಕೀಲರು ತೋಡಿದ ಖೆಡ್ಡಾ; ವಂಚಕರನ್ನು ಪತ್ತೆಹಚ್ಚಿದ್ದು ಹೀಗೆ
ಮನಿ ಡಬ್ಲಿಂಗ್ ಮಾಡುತ್ತಿದ್ದ ಈ ಮೂವರ ಜಾಲ ಪತ್ತೆ ಹಚ್ಚಿದ ನೆಲಮಂಗಲದ ವಕೀಲ ಮಂಜುನಾಥ್ ತಮ್ಮ ಸ್ವಲ್ಪ ಹಣವನ್ನ ಡಬ್ಲಿಂಗ್ ಮಾಡಲು ಸ್ವಲ್ಪ ಕೊಡುತ್ತಾರೆ, ಆಗ ಅವರು ಅನುಸರಿಸುತ್ತಿದ್ದ ಮಾರ್ಗವನ್ನ ನೋಡಿ ಅಸಲಿ ನಕಲಿ ಆಟದ ಬಗ್ಗೆ ತಿಳಿದು ಇವರನ್ನು ಹೇಗಾದರು ಮಾಡಿ ಖಾಕಿ ಬಲೆಗೆ ಸಿಲುಕಿಸಬೇಕು ಎಂದು ತಮ್ಮದೇ ಆದ ಮತ್ತೊಂದು ತಂಡವನ್ನ ರಚಿಸಿ ಮನಿ ಡಬ್ಲಿಂಗ್ ಅವಶ್ಯಕತೆ ಇರುವವರ ಸೋಗಿನಲ್ಲಿ ದಂಧೆಕೋರರನ್ನ ಸಂಪರ್ಕಿಸಿದ್ದಾರೆ.

ಹೊರ ಜಿಲ್ಲೆಯಲ್ಲಿದ್ದ ದಂದೆಕೋರರನ್ನ ಫೋನ್ ಮೂಲಕ ಸಂಪರ್ಕಿಸಿ ಬೆಂಗಳೂರಿಗೆ ಕರೆಸಿಕೊಂಡಿದ್ದು ದಂಧೆಕೋರರು ಬೆಂಗಳೂರು ಉತ್ತರ ತಾಲೂಕಿನ ಮಾಕಳಿ ಗ್ರಾಮದಲ್ಲಿನ ಲಾಡ್ಜ್‌ವೊಂದರಲ್ಲಿ ನೆಲೆಸಿದ್ದರು. ನಮ್ಮ ಬಳಿ ಹಣ ಇದೆ ಡಬ್ಲಿಂಗ್ ಮಾಡಿ ಕೊಡಿ ಎಂದು ನೆಲಮಂಗಲದ ಮಲ್ಲರಬಾಣವಾಡಿ ಬಳಿ ದಂಧೆಕೋರರನ್ನು ಕರೆಸಿಕೊಂಡು ಊಟ, ತಿಂಡಿ ಜೋತೆಗೆ ಮದ್ಯಪಾನದ ವ್ಯವಸ್ಥೆ ಮಾಡಿಕೊಂಡು ಪ್ರಯೋಗಿಕವಾಗಿ ಎರಡು ಸಾವಿರ ರೂಪಾಯಿ ಮುಖಬೆಲೆಯ ಒಂದು ನೋಟನ್ನು ದಂಧೆಕೋರರಿಗೆ ನೀಡಿದ್ದು ಅದಕ್ಕೆ ರಾಸಾಯನಿಕ ಬೆರೆಸಿ, ಸ್ಥಳದಲ್ಲಿದ್ದ ವಕೀಲರ ವ್ಯಕ್ತಿಯ ಗಮನ ಬೇರೆಡೆ ಸೆಳೆದು ಇವರು ಕೊಟ್ಟ ಹಣಕ್ಕೆ ಪ್ರತಿಯಾಗಿ ಅವರು 2000 ಮುಖ ಬೆಲೆಯ ಮೂರು ನೋಟುಗಳು ಅಂದರೆ 6000 ರೂಪಾಯಿ ಮೌಲ್ಯದ ನೋಟುಗಳನ್ನ ಇವರ ಕೈಗಿಟ್ಟು ಇದನ್ನ ನೀವು ಬ್ಯಾಂಕ್‌ನಲ್ಲಿ ಬೇಕಾದರು ಚಲಾಯಿಸಬಹುದು ಎಂದಿದ್ದಾರೆ.

ಈ ಚಾಲಾಕಿ ವಿದ್ಯೆ ಬಗ್ಗೆ ತಿಳಿದ ವಕೀಲರು ಮೊದಲೇ ಜನ ನಿಯೋಜಿಸಿದ್ದರು. ನಮ್ಮ ಬಳಿ ಕೋಟಿ ಹಣ ಇದೆ. ಅದನ್ನು ತರುತ್ತೇನೆ ಇಲ್ಲೇ ಇರಿ ಎಂದು ಹೋಗಿ ನಿಗದಿಯಂತೆ ಪೊಲೀಸರನ್ನ ಕರೆಸಿ ಹಿಡಿದುಕೊಟ್ಟಿದ್ದಾರೆ. ಇನ್ನೂ ಖಚಿತ ಮಾಹಿತಿ ಮೇರೆಗೆ ಆರೋಪಿಗಳನ್ನ ಬಂಧಿಸಿದ ನೆಲಮಂಗಲ ಗ್ರಾಮಾಂತರ ಪೊಲೀಸರು ಹೆಚ್ಚಿನ ವಿಚಾರಣೆ ಮಾಡಿದಾಗ ಆರೋಪಿಗಳು ಸಿರಗುಪ್ಪ, ಇಳಕಲ್, ಕೌಲ್ ಬಜಾರ್, ತುಮಕೂರು ನಗರ – ಗ್ರಾಮಾಂತರ ಠಾಣೆಗಳು ಸೇರಿದಂತೆ ಐದಕ್ಕೂ ಹೆಚ್ಚು ಠಾಣೆಗಳ ಹಲವು ಪ್ರಕರಣಗಳಲ್ಲಿ ಭಾಗಿಯಾಹಿರುವುದು ತಿಳಿದು ಬಂದಿದ್ದು, ಬಂದಿತರಿಂದ 12 ಸಾವಿರಕ್ಕೂ ಹೆಚ್ಚು ನಗದು, ರಾಸಾಯನಿಕ ದ್ರಾವಣ, ಕಪ್ಪು ಬಣ್ಣದ ಶಾಹಿ ಸೇರಿದಂತೆ ಪೇಪರ್ ಬಂಡಲ್ ವಶಕ್ಕೆ ಪಡೆದಿದ್ದಾರೆ.

ಇವರ ಸುಳಿಗೆ ಸಿಕ್ಕಿ ಬೀಳೋರು ಯಾರು?
ಹೆಚ್ಚಿನ ಹಣದ ಅವಶ್ಯಕತೆ ಇರುವವರು, ಸಾಲದ ಸುಳಿಯಲ್ಲಿ‌ ಸಿಲುಕಿರುವವರನ್ನು ಟಾರ್ಗೆಟ್ ಮಾಡುವ ಈ ಗ್ಯಾಂಗ್ ಪರಿಚಯಸ್ಥರಿಂದಲೇ ವಂಚನೆಯ ಜಾಲ ಸೃಷ್ಟಿಸುತ್ತಾರೆ. ಮಾತುಕತೆ ವೇಳೆ ಕಪೋಲ ಕಲ್ಪಿತವಾದ ನೈಜ್ಯತೆಯ ಕಣ್ಣು ಕಟ್ಟುವಂತೆ ಕತೆಗಳನ್ನ ಹೆಣೆಯುತ್ತಾ ಮನಿ ಡಬ್ಲಿಂಗ್ ಮಾಡುವವರ ಬಳಿ ಯಾವುದಾದರು ಮುಖ ಬೆಲೆಯ ಒಂದು ನೋಟನ್ನು ಪಡೆದುಕೊಳ್ಳುತ್ತಾರೆ.

ಇವರಿಂದ ಪಡೆದ ನೋಟಿಗೆ ಮೊದಲಿಗೆ ವೈದ್ಯಕೀಯ ಉಪಕರಣದ ಟಿಂಚರ್ ಲೇಪಿಸಿ ನಂತರ ಪೇಪರ್ ಅಂಟಿಸುವ ಗಂ ಲೇಪಿಸುತ್ತಾರೆ. ಇದರ ಮೇಲೆ‌ ಕಪ್ಪು ಬಣ್ಣದ ಇಂಕ್ ಬಳಿದು ನೋಟನ್ನು ಚಾಪೆ ಮಾದರಿ ಸುತ್ತುತ್ತಾರೆ, ಇದನ್ನ ಕೆಲ ಕಾಲ ಬೆಂಕಿಯಲ್ಲಿ ಕಾಯಿಸಬೇಕು ಎಂದು ಒಂದು ಸಣ್ಣ ಬೆಂಕಿಯ ಜ್ವಾಲೆ ಬಳಿ ಸುತ್ತಿದ ನೋಟನ್ನು ಕಾಯಿಸುತ್ತಿರುತ್ತಾರೆ ಕೆಲ ನಿಮಿಷಗಳ‌ ಬಳಿಕ‌ ಆ ನೋಟಿನ ಮೇಲೆ ನಿಂಬೆ ರಸ ಸುರಿದಾಗ ಬಣ್ಣವೆಲ್ಲಾ ಮಾಸಿಹೋಗಿ ಒಂದು ನೋಟು ನೀಡಿರುವ ವ್ಯಕ್ತಿ ಯಾವ ಮುಖ ಬೆಲೆಯ ನೋಟು ನೀಡಿರುತ್ತಾರೋ ಅದೇ ಮುಖ ಬೆಲೆಯ ಮೂರು ನೋಟುಗಳನ್ನ ಅವರ ಕೈಗೆ ಇಡುತ್ತಾರೆ.

ಒಂದು ನೋಟು ಮೂರು ನೋಟು ಆಗೋದು ಹೇಗೆ ಗೊತ್ತಾ?
ಕೃತ್ಯ ಎಸಗುವ ಮೊದಲೇ ದಂಧೆಕೋರರು ಕೆಲ ನೋಟುಗಳನ್ನ ಸಿದ್ದಪಡಿಸಿಕೊಂಡು ಒಂದು ಸುರುಳಿಯ ಬಣ್ಣವನ್ನು ತೆಗೆದರೆ ಮೂರು ನೋಟುಗಳು ಬರುವಂತೆ ಸಿದ್ದಪಡಿಸಿರುತ್ತಾರೆ. ಗ್ರಾಹಕರು ಕೊಟ್ಟ ಒಂದು ನೋಟನ್ನು ಬೆಂಕಿಯಲ್ಲಿ ಕಾಯಿಸುವ ಸೋಗಿನಲ್ಲಿ ಅವರ ಬಳಿ‌ ಇಲ್ಲಸಲ್ಲದ ಕಥೆ ಹೇಳುತ್ತಾ ಅವರ ಘಮನ ಬೇರೆಡೆ ಸೆಳೆದು ತಾವು ಮೊದಲೇ ಸಿದ್ದಪಡಿಸಿದ ನೋಟುಗಳ ಸುರುಳಿಯನ್ನ‌ಕೈಗೆತ್ತಿಕೊಳ್ಳುತ್ತಾರೆ. ಅದನ್ನ ಒಂದು ತಟ್ಟೆಯಲ್ಲಿ ಇಟ್ಟು ನಿಂಬೆಹಣ್ಣಿನ ರಸ ಸುರಿಯುತ್ತಾರೆ, ಈ ವೇಳೆಗೆ ಅವರ ಸುರುಳಿಯಲ್ಲಿ ಮೂರು ನೋಟುಗಳು ಕಾಣಸಿಗುತ್ತವೆ. ಈ ರೀತಿ ಕಣ್ಣ ಮುಂದೆಯೆ ಒಂದು ನೋಟು ಮೂರು ಆಗುವುದನ್ನು ಕಾಣುವ ಗ್ರಾಹಕರು ಹೆಚ್ಚಿನ ಹಣದಾಸೆಗೆ ಬಲಿಯಾಗುತ್ತಾರೆ.

ತಾವೆ ಸಿದ್ದಪಡಿಸಿದ ಸೂತ್ರದಂತೆ ಗ್ರಾಹಕರನ್ನು ಹಳ್ಳಕ್ಕೆ ತಳ್ಳುವ ದಂದೆಕೋರರು ಇಷ್ಟು ಕಡಿಮೆ ಹಣಕ್ಕೆ ಏನು ಆಗುತ್ತೆ, ನೀವೆ ಕಣ್ಣಾರೆ ನೋಡಿದಿರಲ್ಲ ನಮ್ಮಲ್ಲಿ ಮೋಸ ವಂಚನೆ ಏನಿಲ್ಲ. ನಿಮ್ಮ‌ ಹಣ ಡಬಲ್‌ ಮಾಡುವ ವಿದ್ಯೆ ನಮ್ಮಲ್ಲಿ‌ ಇದೆ, ಅದನ್ನ ನಿಮ್ಮಂತಹ ಕಷ್ಟದಲ್ಲಿ‌ಸಿಲುಕಿರುವವರ ಉಪಯೋಗಕ್ಕೆ‌ ಬಳಸುತ್ತೇವೆ ಎಂದು ನಯವಾಗಿ ನಂಬಿಸುತ್ತಾರೆ.‌ ಮೀಟರ್ ಬಡ್ಡಿಗಾದರು ಸಾಲ ತೆಗೆದುಕೊಂಡು ಬನ್ನಿ, ಇಲ್ಲಿ ಬರುವ ಹಣದಲ್ಲಿ ಬಡ್ಡಿ ಸಮೇತ ಅಸಲು ತೀರಿಸಿ ಉಳಿಕೆ‌ ಹಣದಲ್ಲಿ ಎಂಜಾಯ್ ಮಾಡಿ ಎಂದು ನಯವಾಗಿ ವಂಚಿಸುತ್ತಾರೆ. ಇವರ ಮಾಯಾಜಾಲದ ಅರಿವಿಲ್ಲ ಅಮಾಯಕರು ಮನಿ ಡಬ್ಲಿಂಗ್ ಆಸೆಗೆ ಸಾಲ ಸೋಲ ಮಾಡಿ ಇವರು ಹೇಳಿದ ಜಾಗಕ್ಕೆ ಹಣ ತಂದು‌ ಕೊಡುತ್ತಾರೆ, ಈ ವೇಳೆ ಯಾವುದೋ ಒಂದು ಮಾರ್ಗದಲ್ಲಿ ಹಣ ಕೊಟ್ಟವರಿಗೆ ಹೇಮಾರಿಸುವ ದಂಧೆಕೋರರು ಹಣ ದೋಚಿ ಎಸ್ಕೇಪ್ ಆಗುತ್ತಾರೆ.

ಹಣ ಕಳಕೊಂಡ ಸಂತ್ರಸ್ತರು ಮತ್ತೊಬ್ಬರನ್ನ ಈ ಮಾಯಜಾಲಕ್ಕೆ ಹುಡುಕಿ ಕೊಟ್ರೆ ಅದರಲ್ಲಿ ಬಂದ ಸ್ವಲ್ಪ ಹಣ ಇವರ ಕೈಗೆ ಸಿಗುತ್ತೆ ಇಲ್ಲವಾದ್ರೆ ಇಲ್ಲ. ಮೋಸ ಹೋದವರು ಒಂದು ವೇಳೆ ಪೋಲಿಸ್ ಗೆ ಹಿಡಿದುಕೊಟ್ರೆ ಹಾಗೂ ಕೇಸ್ ಆಗಿ ಜೈಲು ಸವಾರದೊಳಗೆ ಬೇಲ್ ಪಡೆದು ಕೇವಲ ವಾರದೊಳಗೆ ಈಚೆ ಬಂದು ಮತ್ತೆ ತಮ್ಮ ಹಳೆ ಚಾಳಿ ಮುಂದುವರಿಸುತ್ತಾರೆ, ಅದ್ದರಿಂದ ಜನರೆ ಇಂತಹ ಮಾಯಜಾಲಕ್ಕೆ ಸಿಲುಕದೆ ಎಚ್ಚರಿಕೆಯಿಂದ ಇದ್ರೆ ಒಳ್ಳೆಯದು.

ಇದನ್ನೂ ಓದಿ: ದರ್ಶನ್ ಹೆಸರಿನಲ್ಲಿ ವಂಚನೆ ಪ್ರಕರಣ: ಆರೋಪಿ ಅರುಣಾ ಕುಮಾರಿ ಪುರಾಣ ಬಿಚ್ಚಿಟ್ಟ ನಾಗವರ್ಧನ್, ನಾಗೇಂದ್ರ ಪ್ರಸಾದ್

ನಟ ದರ್ಶನ್ ಹೆಸರಿನಲ್ಲಿ ವಂಚನೆ ಪ್ರಕರಣ: ಅರುಣಾ ಕುಮಾರಿ ಫೇಕ್ ಐಡಿ ಬಗ್ಗೆ ಕೆನರಾ ಬ್ಯಾಂಕ್ ಅಧಿಕಾರಿಗಳಿಂದ ಮಾಹಿತಿ