AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗದ್ದೆಗಿಳಿದು ಕೃಷಿಕರಾದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್​ ಕಟೀಲ್ ಅವರು ಮಂಗಳವಾರ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ನೈತಾಡಿ ಗ್ರಾಮದ ಗದ್ದೆಯಲ್ಲಿ ಭತ್ತದ ನಾಟಿ ಕೆಲಸ ಮಾಡಿದರು. ರಾಜಕೀಯ ಜಂಜಾಟ ಬಿಟ್ಟು ಗದ್ದೆಗಿಳಿದು ಕೃಷಿಕರಾದರು.

ಗದ್ದೆಗಿಳಿದು ಕೃಷಿಕರಾದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್
ಪುತ್ತೂರು ತಾಲೂಕಿನ ನೈತಾಡಿ ಗ್ರಾಮದ ಗದ್ದೆಯಲ್ಲಿ ಭತ್ತ ನಾಟಿ ಮಾಡಿದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jul 13, 2021 | 9:10 PM

ಮಂಗಳೂರು: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್​ ಕಟೀಲ್ ಅವರು ಮಂಗಳವಾರ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ನೈತಾಡಿ ಗ್ರಾಮದ ಗದ್ದೆಯಲ್ಲಿ ಭತ್ತದ ನಾಟಿ ಕೆಲಸ ಮಾಡಿದರು. ರಾಜಕೀಯ ಜಂಜಾಟ ಬಿಟ್ಟು ಗದ್ದೆಗಿಳಿದು ಕೃಷಿಕರಾದರು. ಸುರಿಯುವ ಮಳೆಯ ಮಧ್ಯೆಯೇ ನೈತಾಡಿ ಗದ್ದೆಯಲ್ಲಿ ನಳಿನ್ ಕೃಷಿ ಕಾರ್ಯ ನಡೆಸಿದರು.

ಸ್ವತಃ ತಾವೇ ಟ್ರ್ಯಾಕ್ಟರ್ ಓಡಿಸಿ ಭತ್ತದ ನಾಟಿ ಮಾಡಿದರು. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಹಡೀಲು ಬಿದ್ದ ಗದ್ದೆಯಲ್ಲಿ ಭತ್ತ ಬೆಳೆಯಲು ಪ್ರೋತ್ಸಾಹಿಸುವ ಸಲುವಾಗಿ ನಳಿನ್ ಕೃಷಿ ಕಾರ್ಯ ನಿರ್ವಹಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಆಶಯದಂತೆ ಹಡೀಲು ಗದ್ದೆಯಲ್ಲಿ ಕೃಷಿ ಕಾರ್ಯಕ್ಕೆ ನಳಿನ್ ಮುಂದಾದರು. ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ನೇತೃತ್ವದಲ್ಲಿ ಈ ಕಾರ್ಯ ನಡೆಯಿತು.

ಹಡಿಲು ಭೂಮಿ ಕೃಷಿ ಪ್ರಕ್ರಿಯೆ ಉಡುಪಿಯಲ್ಲಿ ಮತ್ತೆ ಆರಂಭ ಒಂದು ಕಾಲಕ್ಕೆ ಉಡುಪಿಯಲ್ಲಿ ಕೃಷಿಯೇ ಜೀವನ ಪದ್ಧತಿಯಾಗಿತ್ತು. ಆದರೆ ಕಾಲಕ್ರಮೇಣ ಭತ್ತ ಬೆಳೆಯುವುದು ಬಿಟ್ಟು ಇಲ್ಲಿನ ಜನ ಇತರ ವಾಣಿಜ್ಯ ಚುಟವಟಿಕೆಗಳಲ್ಲೇ ಆಸಕ್ತರಾದರು. ಪರಿಣಾಮ ಜಿಲ್ಲೆಯಲ್ಲಿ ಹೆಕ್ಟೇರುಗಟ್ಟಲೆ ಭೂಮಿ ಕೃಷಿ ಮಾಡದೆ ಖಾಲಿ ಬಿದ್ದಿದೆ. ಆದರೆ ಮತ್ತೆ ಈ ಭಾಗದಲ್ಲಿ ಕೃಷಿ ಮಾಡಲು ಉತ್ಸಾಹ ತೋರಿದ್ದು, ಹೊಸತೊಂದು ಕೃಷಿಕ್ರಾಂತಿಗೆ ಇಲ್ಲಿನ ಜನ ಸಿದ್ಧರಾಗಿದ್ದಾರೆ. ವಿಧಾನಸಭಾ ಕ್ಷೇತ್ರದಲ್ಲಿ ಯಾವುದೇ ಕೃಷಿಭೂಮಿ ಹಡಿಲು ಬೀಳಬಾರದು ಎಂಬ ಕಾಳಜಿಯಿಂದ ಇಲ್ಲಿನ ಶಾಸಕ ರಘುಪತಿ ಭಟ್ ಅವರೇ ಸತಃ ಈ ಕಾರ್ಯಕ್ಕೆ ಮುಂದಾಗಿದ್ದು, ಖಾಲಿಬಿಟ್ಟ ಕೃಷಿ ಭೂಮಿಯಲ್ಲಿ ಭತ್ತ ಬಿತ್ತನೆ ಮಾಡಲು ತಯಾರಿ ನಡೆಸಿದ್ದಾರೆ.

ಲಾಕ್​ಡೌನ್ ಸಂದರ್ಭದಲ್ಲಿ ಜನರು ಕೆಲಸ ಇಲ್ಲದೆ ಮನೆಯಲ್ಲಿ ಕುಳಿತಿದ್ದಾರೆ. ಮತ್ತೆ ಕೃಷಿಯತ್ತ ಮುಖ ಮಾಡಲು ಇದು ಸರಿಯಾದ ಸಮಯ. ಹಾಗಾಗಿಯೇ ತನ್ನ ವಿಧಾನಸಭಾ ಕ್ಷೇತ್ರದ ನಗರಸಭಾ ವ್ಯಾಪ್ತಿಯ 35 ವಾರ್ಡ್ ಮತ್ತು ನಗರ ಸಭೆಗೆ ಹೊಂದಿಕೊಂಡಿರುವ 19 ಗ್ರಾಮ ಪಂಚಾಯತಿಗಳಲ್ಲಿ ಹಡಿಲು ಭೂಮಿ ಕೃಷಿ ಸಾಗುವಳಿ ಚಳುವಳಿ ನಡೆಸಲು ಮುಂದಾಗಿದ್ದೇವೆ ಎಂದು ಶಾಸಕ ಕೆ.ರಘುಪತಿ ಭಟ್ ತಿಳಿಸಿದ್ದಾರೆ.

(BJP State President Nalin Kumar Kateel Plants Paddy in Puttur)

ಇದನ್ನೂ ಓದಿ: ಹಡಿಲು ಭೂಮಿಯಲ್ಲಿ ಚೆಂಡು ಹೂ ಬೆಳೆದು ಭರಪೂರ ಫಸಲು ಪಡೆದ ಕಾರ್ಕಳದ ರೈತ; ಲಾಕ್​ಡೌನ್​ನಿಂದ ಕಂಗಾಲು

ಇದನ್ನೂ ಓದಿ: ಹಡಿಲು ಭೂಮಿ ಕೃಷಿ ಪ್ರಕ್ರಿಯೆ ಉಡುಪಿಯಲ್ಲಿ ಮತ್ತೆ ಆರಂಭ; 2000 ಎಕರೆಯಲ್ಲಿ ಭತ್ತ ಭಿತ್ತನೆಗೆ ಸಿದ್ಧತೆ