ಗ್ರಾಮ ಪಂಚಾಯತಿ ಚುನಾವಣೆ: ಶತಾಯುಷಿ ಮಹಿಳೆಯರಿಂದ ಮತ ಚಲಾವಣೆ.. ಊರುಗೋಲಾದ ಸಂಬಂಧಿಕರು!

ಮತಚಲಾಯಿಸಲು ಮತಗಟ್ಟೆಯತ್ತ ಶತಾಯುಷಿ ವೃದ್ಧೆಯರು ತಮ್ಮ ಕುಟುಂಬದ ಸದಸ್ಯರ ಸಹಾಯದಿಂದ ಆಗಮಿಸಿ ಮತ ಚಲಾಯಿಸಿದ್ದಾರೆ. ನಡೆಯಲಾಗದಿದ್ದರು ಸಹಾಯ ಪಡೆದು ತಮ್ಮ ಹಕ್ಕನ್ನು ಚಲಾಯಿಸಿ ಯುವಕರಿಗೆ ಮಾದರಿಯಾಗಿದ್ದಾರೆ.

ಗ್ರಾಮ ಪಂಚಾಯತಿ ಚುನಾವಣೆ: ಶತಾಯುಷಿ ಮಹಿಳೆಯರಿಂದ ಮತ ಚಲಾವಣೆ.. ಊರುಗೋಲಾದ ಸಂಬಂಧಿಕರು!
ಶತಾಯುಷಿ ವೃದ್ಧೆಯರಿಂದ ಮತ ಚಲಾವಣೆ
Ayesha Banu

| Edited By: sadhu srinath

Dec 22, 2020 | 1:06 PM

ಚಾಮರಾಜನಗರ: ರಾಜ್ಯದಲ್ಲಿ ಮೊದಲ ಹಂತದ ಗ್ರಾಮ ಪಂಚಾಯತಿ ಚುನಾವಣೆ ಮತದಾನ ಚುರುಕುಗೊಂಡಿದೆ. ಮತ ಚಲಾಯಿಸಲು ಮತಗಟ್ಟೆಯತ್ತ ಶತಾಯುಷಿ ವೃದ್ಧೆಯರು ತಮ್ಮ ಕುಟುಂಬದ ಸದಸ್ಯರ ಸಹಾಯದಿಂದ ಆಗಮಿಸಿ ಮತ ಚಲಾಯಿಸಿದ್ದಾರೆ. ನಡೆಯಲಾಗದಿದ್ದರೂ ಸಂಬಂಧಿಕರನ್ನು ಊರುಗೋಲಾಗಿಸಿಕೊಂಡು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.

101 ವರ್ಷದ ಶತಾಯುಷಿ ವೃದ್ಧೆಯಿಂದ ಮತದಾನ 101 ವರ್ಷದ ಶತಾಯುಷಿ ವೃದ್ಧೆ ಮುದ್ದಮ್ಮ ಚಾಮರಾಜನಗರ ವಿಧಾನ ಸಭಾ ವ್ಯಾಪ್ತಿಯ ಮಲ್ಲಯ್ಯನಪುರ ಗ್ರಾಮದ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದ್ದಾರೆ. ವೃದ್ಧೆಯನ್ನು ವ್ಹೀಲ್ ಚೇರ್ ಮೇಲೆ ಕರೆದು ಕೊಂಡು ಬಂದು ಮತ ಚಲಾಯಿಸಲು ಸಂಬಂಧಿಕರು ಸಹಾಯ ಮಾಡಿದ್ದಾರೆ.

ಮತ ಹಾರಿ ಮಾದರಿಯಾದ ಅಜ್ಜಿ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕನ್ನೇಹಳ್ಳಿಯ ಮತ ಕೇಂದ್ರಕ್ಕೆ ಆಗಮಿಸಿ ಶತಾಯುಷಿ ಅಜ್ಜಿಯೊಬ್ಬರು ಮತ ಹಾಕಿದ್ದಾರೆ. ತಮ್ಮ ಕುಟುಂಬ ಸದಸ್ಯರ ಜೊತೆ ಅಜ್ಜಿ ಜಾನಕಿ ಮಾಸ್ಕ್ ಹಾಕಿಕೊಂಡು ಮತಗಟ್ಟೆಗೆ ನಡೆದುಕೊಂಡು ಬಂದು ಮತ ಚಲಾಯಿಸಿದ್ದಾರೆ. ನೂರು ವರ್ಷ ದಾಟಿದ್ರೂ ಮತ ಚಲಾಯಿಸಿ ಯುವಕರಿಗೆ ಮಾದರಿಯಾದ ಅಜ್ಜಿ.

ಯಾರ ಸಹಾಯವಿಲ್ಲದೆ ಮತಗಟ್ಟೆಗೆ ಬಂದು ಮತ ಹಾಕಿದ ಅಜ್ಜಿ ಇನ್ನು ಕೋಲಾರದಲ್ಲಿ 90 ವರ್ಷದ ವೃದ್ಧೆಯೊಬ್ಬರು ಉತ್ಸಾಹದಿಂದ ಬಂದು ಮತ ಚಲಾಯಿಸಿದ್ದಾರೆ. 90 ವರ್ಷದ ಸಾಕಮ್ಮ ಯಾರ ಸಹಾಯವಿಲ್ಲದೆ ಕೋಲಾರ ತಾಲೂಕಿನ ಛತ್ರಕೋಡಿಹಳ್ಳಿ ಗ್ರಾಮದ‌ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದ್ದಾರೆ. ಈ ವೇಳೆ ಅಭ್ಯರ್ಥಿಗಳು ಮತದಾರರಿಗೆ ಎಲೆ ಅಡಿಕೆ ಹಂಚಿದ್ರು.

ಮೈ ಕೊರೆಯುವ ಚಳಿಯಲ್ಲಿ ನಡುಗುತ್ತಲೇ ಮತದಾನ ಮಾಡಿದ್ರು ಬಾಗಲಕೋಟೆ ಜಿಲ್ಲೆಯ ತುಮ್ಮರಮಟ್ಟಿ ಗ್ರಾಮದ ಮತಗಟ್ಟೆಗೆ ಹಿರಿಯ ಅಜ್ಜಿ ಸೋಮವ್ವಳಿ ಆಗಮಿಸಿ ಮತ ಚಲಾಯಿಸಿದ್ದಾರೆ. ಮೊಮ್ಮಗನ ಜೊತೆ ಬಂದ ಅಜ್ಜಿ ಚಳಿಗೆ ಗಡಗಡ ನಡುಗುತ್ತಲೇ ತಮ್ಮ ಕರ್ತವ್ಯವನ್ನು ನಿಭಾಯಿಸಿದ್ದಾರೆ.

ಚಿತ್ರದುರ್ಗದಲ್ಲೂ ಇದೇ ರೀತಿ ಮಠದಕುರುಬರಹಟ್ಟಿ ಮತಗಟ್ಟೆಗೆ 95ವರ್ಷದ ತಿಪ್ಪಮ್ಮ ಆಗಮಿಸಿ ಮತ ಚಲಾಯಿಸಿದ್ದಾರೆ. ಅಜ್ಜಿಯನ್ನು ಮೊಮ್ಮಗ ಎತ್ತಿಕೊಂಡು ಬಂದು ಮತ ಚಲಾಯಿಸಲು ಸಹಾಯ ಮಾಡಿದ್ದಾನೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada