ವಿದ್ಯುತ್​ ತಂತಿ ತುಳಿದು ತಾಯಿ-ಮಗು ಸಾವು ಪ್ರಕರಣ; ತನಿಖಾ ವರದಿಯಲ್ಲಿ ಸತ್ಯಾಂಶ ಬಯಲು, ಜಾರ್ಜ್ ರಾಜೀನಾಮೆಗೆ ಆರ್ ಅಶೋಕ್ ಒತ್ತಾಯ

|

Updated on: Feb 08, 2024 | 10:41 AM

ಈ ಹಿಂದೆ ಇಂಧನ ಸಚಿವ ಕೆ.ಜೆ. ಜಾರ್ಜ್ (KJ George) ಅವರು ವಿದ್ಯುತ್ ಸ್ಪರ್ಶದಿಂದ ಸಂಭವಿಸಿದ ತಾಯಿ-ಮಗು ಸಾವಿಗೆ ಇಲಿ ಕಾರಣ ಎಂದು ಹೇಳಿದ್ದರು. ಸದ್ಯ ಈಗ ತನಿಖಾ ವರದಿ ಸತ್ಯ ಬಯಲು ಮಾಡಿದ್ದು ವಿಪಕ್ಷ ನಾಯಕ ಆರ್​ ಅಶೋಕ್ ಅವರು ಎಕ್ಸ್ ಖಾತೆ ಮೂಲಕ ಟ್ವೀಟ್ ಮಾಡಿ ಸಚಿವ ಜಾರ್ಜ್ ವಿರುದ್ಧ ಕಿಡಿಕಾರಿದ್ದಾರೆ. ಸಿಎಂ ಸಿದ್ದರಾಮಯ್ಯ ನವರು ಈ ಕೂಡಲೇ ಸಚಿವ ಕೆ.ಜೆ.ಜಾರ್ಜ್ ಅವರ ರಾಜೀನಾಮೆ ಪಡೆದುಕೊಂಡು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆರ್.ಅಶೋಕ್ ಟ್ವೀಟ್ ಮಾಡಿದ್ದಾರೆ.

ವಿದ್ಯುತ್​ ತಂತಿ ತುಳಿದು ತಾಯಿ-ಮಗು ಸಾವು ಪ್ರಕರಣ; ತನಿಖಾ ವರದಿಯಲ್ಲಿ ಸತ್ಯಾಂಶ ಬಯಲು, ಜಾರ್ಜ್ ರಾಜೀನಾಮೆಗೆ ಆರ್ ಅಶೋಕ್ ಒತ್ತಾಯ
ಆರ್​ ಅಶೋಕ
Follow us on

ಬೆಂಗಳೂರು, ಫೆ.08: ಕಳೆದ ವರ್ಷ ನವೆಂಬರ್‌ನಲ್ಲಿ ವೈಟ್​ಫೀಲ್ಡ್​​​ನ ಕಾಡುಗೋಡಿಯಲ್ಲಿ ಪಾದಾಚಾರಿ ಮಾರ್ಗದಲ್ಲಿ ವಿದ್ಯುತ್ ತಂತಿ ತುಳಿದು ತಾಯಿ–ಮಗು ಮೃತಪಟ್ಟ ದುರ್ಘಟನೆ ನಡೆದಿತ್ತು. ಈ ಘಟನೆಯ ತನಿಖೆ ನಡೆಸಿದ ತಜ್ಞರ ಸಮಿತಿ ಈ ಘಟನೆಗೆ ತಾಂತ್ರಿಕ ಲೋಪಗಳೇ ಕಾರಣ ಎಂದು ವರದಿ ನೀಡಿದ್ದಾರೆ. ಈ ಹಿಂದೆ ಇಂಧನ ಸಚಿವ ಕೆ.ಜೆ. ಜಾರ್ಜ್ (KJ George) ಅವರು ವಿದ್ಯುತ್ ಸ್ಪರ್ಶದಿಂದ ಸಂಭವಿಸಿದ ತಾಯಿ-ಮಗು ಸಾವಿಗೆ ಇಲಿ ಕಾರಣ. ಹೆಗ್ಗಣ ವೈರ್‌ ಕಡಿದು ತಂತಿ ತುಂಡಾಗಿ ಬೀಳುವಂತೆ ಮಾಡಿದೆ ಎಂದು ಹೇಳಿದ್ದರು. ಸದ್ಯ ಈಗ ತನಿಖೆ ವರದಿ ಸತ್ಯ ಬಯಲು ಮಾಡಿದ್ದು ವಿಪಕ್ಷ ನಾಯಕ ಆರ್​ ಅಶೋಕ್ (R Ashok)​ ಅವರು ಎಕ್ಸ್ ಖಾತೆ ಮೂಲಕ ಟ್ವೀಟ್ ಮಾಡಿ ಸಚಿವ ಜಾರ್ಜ್ ವಿರುದ್ಧ ಕಿಡಿಕಾರಿದ್ದಾರೆ.

ಔದುಂಬರ ಹೋಮ್ಸ್ ಅಪಾರ್ಟ್ಮೆಂಟ್‌ನಲ್ಲಿ ಖಾಸಗಿ ಟ್ರಾನ್ಸ್‌ಫಾರ್ಮರ್ ಅನ್ನು ಹಾಕಿಕೊಳ್ಳಲಾಗಿದ್ದು, ಅದರಲ್ಲಿ ಇಲಿ ಹೋಗಿ ಹಾಳು ಮಾಡಿದ್ದರಿಂದ ಟ್ರಿಪ್‌ ಆಗಿ ಈ ಅವಘಡ ಉಂಟಾಗಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಇಂತಹ ವಿದ್ಯುತ್ ಅವಘಡ ಸಂಭವಿಸಬಾರದಿತ್ತು ಎಂದು ಈ ಹಿಂದೆ ಸಚಿವ ಕೆ.ಜೆ. ಜಾರ್ಜ್ ವಿಷಾದ ವ್ಯಕ್ತಪಡಿಸಿದ್ದರು. ಹಾಘೂ ತನಿಖೆಗಾಗಿ 4 ಕಮಿಟಿಗಳನ್ನು ಮಾಡಿದ್ದೇವೆ. ಅಲ್ಲಿನ 5 ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲಾಗಿದೆ ಎಂದು ತಿಳಿಸಿದ್ದರು. ಸದ್ಯ ಈಗ ತನಿಖೆ ಮುಗಿದಿದ್ದು ಅವಘಡಕ್ಕೆ ಕಾರಣವೇನೆಂಬ ಮಾಹಿತಿ ಹೊರ ಬಿದ್ದಿದೆ. ತಜ್ಞರ ಸಮಿತಿಯ ವರದಿಯಲ್ಲಿ ಇಲಿಯ ವಿಷಯವೇ ಪ್ರಸ್ತಾಪವಾಗಿಲ್ಲ. ವರದಿಯಲ್ಲಿ ನಿಯಮಿತ ನಿರ್ವಹಣೆ ಕೊರತೆ, ತಾಂತ್ರಿಕ ಲೋಪಗಳು ಮತ್ತು ಬೆಸ್ಕಾಂ ಅಧಿಕಾರಿಗಳು ತಾಂತ್ರಿಕ ನಿಯಮಗಳನ್ನು ಉಲ್ಲಂಘಿಸಿರು ವುದನ್ನು ಪ್ರಮುಖವಾಗಿ ಉಲ್ಲೇಖಿಸಲಾಗಿದೆ. ಹೀಗಾಗಿ ಆರ್. ಅಶೋಕ್​ ಅವರು ಎಕ್ಸ್ ಮೂಲಕ ಟ್ವೀಟ್ ಮಾಡಿ ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ: ವಿದ್ಯುತ್​ ತಂತಿ ತುಳಿದು ತಾಯಿ-ಮಗು ಸಾವು: ಜನರ ಕಣ್ಣಿಗೆ ಮಂಕು ಬೂದಿ ಎರಚಿತೆ ಬೆಸ್ಕಾಂ? ಲೋಕಾಯುಕ್ತ ತನಿಖೆಯಲ್ಲಿ ಸತ್ಯಾಂಶ ಬಯಲು

ಆರ್.ಅಶೋಕ್ ಅವರ ಟ್ವೀಟ್ ಹೀಗಿದೆ

ಬೆಂಗಳೂರಿನಲ್ಲಿ ಕಳೆದ ನವೆಂಬರ್ ನಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ತಾಯಿ-ಮಗು ಮೃತಪಟ್ಟ ಪ್ರಕರಣಕ್ಕೆ ‘ಇಲಿ’ ಕಾರಣ ಎಂಬ ಬೇಜವಾಬ್ದಾರಿ ಹೇಳಿಕೆ ನೀಡಿದ್ದ ಸಚಿವ ಜಾರ್ಜ್ ಅವರ ಹೊಣೆಗೇಡಿತನ ಈಗ ತನಿಖಾ ವರದಿಯಲ್ಲಿ ಬಯಲಾಗಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಸಾಮಾನ್ಯ ಜನರ ಜೀವಕ್ಕೆ ಬೆಲೆಯೇ ಇಲ್ಲದಂತಾಗಿದ್ದು, ಸಿಎಂ ಸಿದ್ದರಾಮಯ್ಯ ನವರು ಈ ಕೂಡಲೇ ಸಚಿವ ಕೆ.ಜೆ.ಜಾರ್ಜ್ ಅವರ ರಾಜೀನಾಮೆ ಪಡೆದುಕೊಂಡು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆರ್.ಅಶೋಕ್ ಟ್ವೀಟ್ ಮಾಡಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 10:40 am, Thu, 8 February 24