Janaspandana Live: ವಿಧಾನಸೌಧದ ಮುಂದೆ ಇಂದು ಸಿಎಂ ಜನಸ್ಪಂದನ, ನೇರ ಪ್ರಸಾರ ಇಲ್ಲಿದೆ ನೋಡಿ
ಇಂದು ವಿಧಾನಸೌಧದ ಆವರಣದಲ್ಲೇ ರಾಜ್ಯಮಟ್ಟದ ಜನಸ್ಪಂದನ ಕಾರ್ಯಕ್ರಮ ನಡೆಯುತ್ತಿದೆ. ಬೆಳಗ್ಗೆ 10 ರಿಂದ ಸಂಜೆ 6 ಗಂಟೆ ತನಕ ಜನಸ್ಪಂದನ ನಡೆಯಲಿದೆ. ಸಾರ್ವಜನಿಕರು ತಮ್ಮ ಗುರುತಿನ ಚೀಟಿಯೊಂದಿಗೆ ನೋಂದಣಿ ಮಾಡಿಕೊಳ್ಳಬೇಕು.ಸಮಸ್ಯೆಗೆ ತಕ್ಕಂತೆ ಇಲಾಖೆಯ ಕೌಂಟರ್ ನಂಬರ್ ಹೇಳಲಾಗುತ್ತೆ. ಅದೇ ಕೌಂಟರ್ ಬಳಿ ಹೋಗಿ ಮನವಿ ಸಲ್ಲಿಸಬೇಕು. ಇದಕ್ಕಾಗಿ 36 ಇಲಾಖೆಗಳ ಕೌಂಟರ್ ತೆರೆಯಲಾಗಿದೆ.
ಬೆಂಗಳೂರು, ಫೆ.08: ಮನೆ ಇಲ್ಲ, ರೇಷನ್‌ಕಾರ್ಡ್ ಇಲ್ಲ, ಕೆಲಸ ಇಲ್ಲ, ಚಿಕಿತ್ಸೆಗೆ ಹಣ ಇಲ್ಲ, ವರ್ಗಾವಣೆ ಆಗ್ತಿಲ್ಲ. ಹೀಗೆ ನೂರಾರು ಸಮಸ್ಯೆ ಹೊಂದಿರೋ ಜನ ಹತ್ತಾರು ಭಾರಿ ಅಧಿಕಾರಿಗಳ ಬಳಿ ಅಲೆದಾಡಿ ಹತಾಸೆ ಗೊಂಡಿರ್ತಾರೆ. ಸಿಎಂ ಬಳಿಯೇ ದೂರು ಸಲ್ಲಿಸಬೇಕು ಅಂದುಕೊಂಡಿರ್ತಾರೆ. ಅಂತವರಿಗೆ ಸಿಎಂ ಸಿದ್ದರಾಮಯ್ಯ (Siddaramaiah) ಅವಕಾಶ ಕಲ್ಪಿಸಿದ್ದಾರೆ. ಕಳೆದ ಸೆಪ್ಟೆಂಬರ್‌ನಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ಜನಸ್ಪಂದನ (JanaSpandana) ನಡೆಸಿದ್ದ ಸಿಎಂ, ಸಾವಿರಾರು ಜನರ ಅಹವಾಲು ಸ್ವೀಕರಿಸಿ ಪರಿಹರಿಸಿದ್ರು. ಇಂದು ವಿಧಾನಸೌಧದ ಆವರಣದಲ್ಲೇ ರಾಜ್ಯಮಟ್ಟದ ಜನಸ್ಪಂದನ ಕಾರ್ಯಕ್ರಮ ನಡೆಯುತ್ತಿದೆ. ಬೆಳಗ್ಗೆ 10 ರಿಂದ ಸಂಜೆ 6 ಗಂಟೆ ತನಕ ಜನಸ್ಪಂದನ ನಡೆಯಲಿದೆ. 10 ಸಾವಿರ ಜನರಕ್ಕೆ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. ಗ್ರ್ಯಾಂಡ್ ಸ್ಟೆಪ್ ಮುಂಭಾಗ ಜರ್ಮನ್ ಟೆಂಟ್ ಹಾಕಲಾಗಿದೆ. ಜನಸ್ಪಂದನ ನೇರ ಪ್ರಸಾರ ಇಲ್ಲಿದೆ.
ಜನಸ್ಪಂದನಕ್ಕೆ ಅರ್ಜಿ ಸಲ್ಲಿಕೆ ಹೇಗೆ?
ಸಾರ್ವಜನಿಕರು ತಮ್ಮ ಗುರುತಿನ ಚೀಟಿಯೊಂದಿಗೆ ನೋಂದಣಿ ಮಾಡಿಕೊಳ್ಳಬೇಕು. ಆಧಾರ್, ವೋಟರ್ ಐಡಿ, ರೇಷನ್‌ಕಾರ್ಡ್ ಸೇರಿದಂತೆ ಸರ್ಕಾರದ ಯಾವುದಾದ್ರೂ ಗುರುತಿನ ಚೀಟಿ ತೋರಿಸಬೇಕು. ಇನ್ನು ಸಮಸ್ಯೆಗೆ ತಕ್ಕಂತೆ ಇಲಾಖೆಯ ಕೌಂಟರ್ ನಂಬರ್ ಹೇಳಲಾಗುತ್ತೆ. ಅದೇ ಕೌಂಟರ್ ಬಳಿ ಹೋಗಿ ಮನವಿ ಸಲ್ಲಿಸಬೇಕು. ಇದಕ್ಕಾಗಿ 36 ಇಲಾಖೆಗಳ ಕೌಂಟರ್ ತೆರೆಯಲಾಗಿದೆ. ಇಲ್ಲಿ ಇಲಾಖೆಯ ಹಿರಿಯ ಅಧಿಕಾರಿಗಳಿಂದಲೇ ಮನವಿ ಸ್ವೀಕರಿಸಲಿದ್ದಾರೆ. ಬಳಿಕ ಕೌಂಟರ್‌ಗೆ ತೆರಳಿ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅರ್ಜಿ ಸ್ವೀಕರಿಸಲಿದ್ದಾರೆ. ಇನ್ನೂ ಆನ್‌ಲೈನ್‌ನಲ್ಲೂ ಅರ್ಜಿ ಸಲ್ಲಿಕೆಗೆ ಅವಕಾಶ ಇದ್ದು, 1902 ಸಂಖ್ಯೆಗೆ ಕರೆ ಮಾಡಿ ಅರ್ಜಿ ಸಲ್ಲಿಕೆ ಮಾಡಬಹುದು.
ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ