AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಸದ ಮುನಿಸ್ವಾಮಿ ಮತ್ತು ವೆಂಕಟೇಶ್ ಮೌರ್ಯ ಬಿಜೆಪಿ ಎಸ್​ಸಿ ಮೋರ್ಚಾ ಪ್ರಭಾರಿಗಳಾಗಿ ನೇಮಕ

ಕೋಲಾರ ಲೋಕಸಭಾ ಕ್ಷೇತ್ರದ ಸಂಸದರಾದ ಸಿಎಸ್ ಮುನಿಸ್ವಾಮಿ ರವರನ್ನು ಕೇರಳ ರಾಜ್ಯ ಬಿಜೆಪಿ ಎಸ್ ಸಿ ಮೋರ್ಚಾ ಪ್ರಭಾರಿ ಯನ್ನಾಗಿ ನೇಮಿಸಲಾಗಿದೆ.ಕರ್ನಾಟಕ ಎಸ್ಸಿ ಮೋರ್ಚಾ ಪ್ರಭಾರಿಯಾಗಿ ತೆಲಂಗಾಣದ ಎಂ .ಕುಮಾರ್ ಅವರನ್ನು ನೇಮಕ ಮಾಡಿ ಜೆ.ಪಿ ನಡ್ಡಾ ಆದೇಶ ಹೊರಡಿಸಿದ್ದಾರೆ.

ಸಂಸದ ಮುನಿಸ್ವಾಮಿ ಮತ್ತು ವೆಂಕಟೇಶ್ ಮೌರ್ಯ ಬಿಜೆಪಿ ಎಸ್​ಸಿ ಮೋರ್ಚಾ ಪ್ರಭಾರಿಗಳಾಗಿ ನೇಮಕ
ವೆಂಕಟೇಶ್ ಮೌರ್ಯ ಮತ್ತು ಸಂಸದ ಮುನಿಸ್ವಾಮಿ ಬಿಜೆಪಿ ಎಸ್​ಸಿ ಮೋರ್ಚಾ ಪ್ರಭಾರಿಗಳಾಗಿ ನೇಮಕ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Jul 31, 2021 | 3:35 PM

ದೆಹಲಿ: ಎಲ್ಲಾ ರಾಜ್ಯಗಳ ಪರಿಶಿಷ್ಟ ಜಾತಿಗಳ ಮೋರ್ಚಾಗಳಿಗೆ ಬಿಜೆಪಿ ಪ್ರಭಾರಿಗಳನ್ನು ನೇಮಕ ಮಾಡಲಾಗಿದೆ. ಬಿಜೆಪಿ ರಾಷ್ಟ್ರಾಧ್ಯಕ್ಷ ರಾದ ಜೆ ಪಿ ನಡ್ಡಾ , ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಎಸ್ಸಿ ಮೋರ್ಚಾದ (SC) ರಾಷ್ಟ್ರೀಯ ಪ್ರಭಾರಿ ಸಿ ಟಿ ರವಿ , ಎಸ್ಸಿ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ಲಾಲ್ ಲಾಲ್ ಸಿಂಗ್ ಆರ್ಯ ಪ್ರಭಾರಿಗಳನ್ನು ನೇಮಿಸಿದ್ದಾರೆ.

ಕರ್ನಾಟಕ ಇಬ್ಬರು ನಾಯಕರಿಗೆ ಬೇರೆ ರಾಜ್ಯದ ಪ್ರಭಾರಿಗಳಾಗಿ ಕೆಲಸ ಮಾಡುವ ಅವಕಾಶವನ್ನು ಬಿಜೆಪಿ ನೀಡಿದೆ. ನೇಮಕಾತಿಯಲ್ಲಿ ಸತತವಾಗಿ ಮೂರನೇ ಬಾರಿ ಬಿಜೆಪಿ ಎಸ್​ಸಿ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯರಾಗಿರುವ ಹಾಗೂ ಕಳೆದ ಮೋದಿ ಸರ್ಕಾರದಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ಡಾ. ಅಂಬೇಡ್ಕರ್ ಫೌಂಡೇಶನ್ ಸದಸ್ಯರಾಗಿದ್ದ ಡಾ. ವೆಂಕಟೇಶ್ ಮೌರ್ಯ ರವರನ್ನು ತಮಿಳುನಾಡು ರಾಜ್ಯ ಬಿಜೆಪಿ ಎಸ್​ಸಿ ಮೋರ್ಚಾದ ಪ್ರಭಾರಿ ಗಳನ್ನಾಗಿ ಗೊಳಿಸಲಾಗಿದೆ.

ಕೋಲಾರ ಲೋಕಸಭಾ ಕ್ಷೇತ್ರದ ಸಂಸದರಾದ ಸಿಎಸ್ ಮುನಿಸ್ವಾಮಿ ರವರನ್ನು ಕೇರಳ ರಾಜ್ಯ ಬಿಜೆಪಿ ಎಸ್ ಸಿ ಮೋರ್ಚಾ ಪ್ರಭಾರಿ ಯನ್ನಾಗಿ ನೇಮಿಸಲಾಗಿದೆ.ಕರ್ನಾಟಕ ಎಸ್ಸಿ ಮೋರ್ಚಾ ಪ್ರಭಾರಿಯಾಗಿ ತೆಲಂಗಾಣದ ಎಂ .ಕುಮಾರ್ ಅವರನ್ನು ನೇಮಕ ಮಾಡಿ ಜೆ.ಪಿ ನಡ್ಡಾ (JP Nadda) ಆದೇಶ ಹೊರಡಿಸಿದ್ದಾರೆ.

ವೆಂಕಟೇಶ್ ಮೌರ್ಯ ರವರು 2014ರ ಜಮ್ಮುಕಾಶ್ಮೀರ ಚುನಾವಣೆ, 2015 ದೆಹಲಿ ಚುನಾವಣೆ, ಉತ್ತರ ಪ್ರದೇಶ ಚುನಾವಣೆ, ಹರಿಯಾಣ ಚುನಾವಣೆ, ಹಾಗೂ ಕಳೆದ ತಮಿಳುನಾಡು ಚುನಾವಣೆಗಳ ಚುನಾವಣಾ ಪ್ರಚಾರದಲ್ಲಿ ಕೆಲಸ ಮಾಡಿದ್ದರು ಸಂಘಟನೆ ಬಗ್ಗೆ ತಿಳಿಸುವಂತಹ ಕಾರ್ಯಕರ್ತರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿಮಾಲಯ ಪರಿವಾರ ಸಂಘಟನೆ ಹಾಗೂ ಸಿಂಧೂ ದರ್ಶನ ಯಾತ್ರಾ ಸಮಿತಿಯ ಕರ್ನಾಟಕ ರಾಜ್ಯ ಅಧ್ಯಕ್ಷರಾಗಿಯೂ ತೊಡಗಿಸಿಕೊಂಡಿದ್ದಾರೆ.

ಹರೀಶ್, ಟಿವಿ9 , ನವದೆಹಲಿ

(mp muniswamy and venkatesh maurya appointed to bjp sc morcha)

Published On - 3:29 pm, Sat, 31 July 21

ಸಿಯಾಲ್​ಕೋಟ್ ತೊರೆಯುತ್ತಿರುವ ಪಾಕ್ ಜನ, ಕಾಲ್ತುಳಿದಂಥಾ ಸ್ಥಿತಿ
ಸಿಯಾಲ್​ಕೋಟ್ ತೊರೆಯುತ್ತಿರುವ ಪಾಕ್ ಜನ, ಕಾಲ್ತುಳಿದಂಥಾ ಸ್ಥಿತಿ
ವಿಡಿಯೋ: ಭೀಕರ ದಾಳಿಗೆ ಛಿದ್ರ ಛಿದ್ರವಾಗಿ ಹಾರಿದ ಪಾಕ್ ಸೈನಿಕರ ಮೃತದೇಹ
ವಿಡಿಯೋ: ಭೀಕರ ದಾಳಿಗೆ ಛಿದ್ರ ಛಿದ್ರವಾಗಿ ಹಾರಿದ ಪಾಕ್ ಸೈನಿಕರ ಮೃತದೇಹ
ಕರುಂಗಲಿ ಮಾಲೆಯ ಹಿಂದಿನ ರಹಸ್ಯ ಹಾಗೂ ಅದರ ಮಹತ್ವ ತಿಳಿಯಿರಿ
ಕರುಂಗಲಿ ಮಾಲೆಯ ಹಿಂದಿನ ರಹಸ್ಯ ಹಾಗೂ ಅದರ ಮಹತ್ವ ತಿಳಿಯಿರಿ
Daily horoscope: ಮಿಥುನ ರಾಶಿಯವರಿಗೆ ಐದು ಗ್ರಹಗಳ ಶುಭಫಲ
Daily horoscope: ಮಿಥುನ ರಾಶಿಯವರಿಗೆ ಐದು ಗ್ರಹಗಳ ಶುಭಫಲ
ದೆಹಲಿಯ ಅಕ್ಷರಧಾಮದಲ್ಲಿ ಮಾಕ್ ಡ್ರಿಲ್; ಮತ್ತೆ ಹೊತ್ತಿದ ದೀಪಗಳು
ದೆಹಲಿಯ ಅಕ್ಷರಧಾಮದಲ್ಲಿ ಮಾಕ್ ಡ್ರಿಲ್; ಮತ್ತೆ ಹೊತ್ತಿದ ದೀಪಗಳು
ನಗರದ ಹಲವಾರು ಏರಿಯಾಗಳ ನಿವಾಸಿಗಳಿಗೆ ಸೈರನ್ ಕೇಳಿಸಿಲ್ಲ
ನಗರದ ಹಲವಾರು ಏರಿಯಾಗಳ ನಿವಾಸಿಗಳಿಗೆ ಸೈರನ್ ಕೇಳಿಸಿಲ್ಲ
ಮಗಳ ಸಿನಿಮಾ ಪಯಣಕ್ಕೆ ದರ್ಶನ್, ಸುದೀಪ್ ಬೆಂಬಲ ನೆನೆದ ನಟ ಪ್ರೇಮ್
ಮಗಳ ಸಿನಿಮಾ ಪಯಣಕ್ಕೆ ದರ್ಶನ್, ಸುದೀಪ್ ಬೆಂಬಲ ನೆನೆದ ನಟ ಪ್ರೇಮ್
ಭಾರತದ ದಾಳಿಗೆ ಬಲಿಯಾದ ಉಗ್ರರಿಗೆ ಪಾಕಿಸ್ತಾನದ ಧ್ವಜ ಹೊದಿಸಿ ಅಂತ್ಯಕ್ರಿಯೆ
ಭಾರತದ ದಾಳಿಗೆ ಬಲಿಯಾದ ಉಗ್ರರಿಗೆ ಪಾಕಿಸ್ತಾನದ ಧ್ವಜ ಹೊದಿಸಿ ಅಂತ್ಯಕ್ರಿಯೆ
ರಾಜತಾಂತ್ರಿಕವಾಗಿಯೂ ಭಾರತ ಪಾಕಿಸ್ತಾನದ ವಿರುದ್ಧ ಗೆದ್ದಿದೆ: ಡಾ ಮಂಜುನಾಥ್
ರಾಜತಾಂತ್ರಿಕವಾಗಿಯೂ ಭಾರತ ಪಾಕಿಸ್ತಾನದ ವಿರುದ್ಧ ಗೆದ್ದಿದೆ: ಡಾ ಮಂಜುನಾಥ್
ಬೆಂಗಳೂರಿನಲ್ಲಿ ಬ್ಲ್ಯಾಕ್ ಔಟ್: ಕಗ್ಗತ್ತಲಾದ ರಾಜಧಾನಿ, ವಿಡಿಯೋ ನೋಡಿ
ಬೆಂಗಳೂರಿನಲ್ಲಿ ಬ್ಲ್ಯಾಕ್ ಔಟ್: ಕಗ್ಗತ್ತಲಾದ ರಾಜಧಾನಿ, ವಿಡಿಯೋ ನೋಡಿ