ಕೋಡಿಹಳ್ಳಿ ಚಂದ್ರಶೇಖರ್ ಸಂಘಟಿತ ದಲ್ಲಾಳಿಗಳ ಮುಖ್ಯಸ್ಥ, ಆತ ಒಬ್ಬ ನಾಲಾಯಕ್ -ರೇಣುಕಾಚಾರ್ಯ

| Updated By: KUSHAL V

Updated on: Dec 13, 2020 | 4:41 PM

ಕೋಡಿಹಳ್ಳಿ ಚಂದ್ರಶೇಖರ್ ಸಂಘಟಿತ ದಲ್ಲಾಳಿಗಳ ಮುಖ್ಯಸ್ಥ. ಈತನಿಂದ ಸಾರಿಗೆ ನೌಕರರ ಸಮಸ್ಯೆ ಬಗೆಹರಿಯಲ್ಲ. ಅವರದ್ದೇನಿದ್ದರೂ ಬೆಂಕಿ ಹಚ್ಚುವ ಕೆಲಸ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಹಾಗೂ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.

ಕೋಡಿಹಳ್ಳಿ ಚಂದ್ರಶೇಖರ್ ಸಂಘಟಿತ ದಲ್ಲಾಳಿಗಳ ಮುಖ್ಯಸ್ಥ, ಆತ ಒಬ್ಬ ನಾಲಾಯಕ್ -ರೇಣುಕಾಚಾರ್ಯ
ಶಾಸಕ M.P.ರೇಣುಕಾಚಾರ್ಯ
Follow us on

ದಾವಣಗೆರೆ: ಕೋಡಿಹಳ್ಳಿ ಚಂದ್ರಶೇಖರ್ ಸಂಘಟಿತ ದಲ್ಲಾಳಿಗಳ ಮುಖ್ಯಸ್ಥ. ಈತನಿಂದ ಸಾರಿಗೆ ನೌಕರರ ಸಮಸ್ಯೆ ಬಗೆಹರಿಯಲ್ಲ. ಅವರದ್ದೇನಿದ್ದರೂ ಬೆಂಕಿ ಹಚ್ಚುವ ಕೆಲಸ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಹಾಗೂ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.

ಚಂದ್ರಶೇಖರ್ ಸಮಸ್ಯೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಕೋಡಿಹಳ್ಳಿಯಿಂದ ಸಮಸ್ಯೆ ಪರಿಹಾರ ಆಗಲ್ಲ. ಬೇಕಿದ್ದರೆ ಸಾರಿಗೆ ನೌಕರರು ಬಂದು ಸರ್ಕಾರದ ಜೊತೆ ಮಾತಾಡಲಿ. ಸಾರಿಗೆ ಸಿಬ್ಬಂದಿಗೂ ಕೋಡಿಹಳ್ಳಿ ಚಂದ್ರಶೇಖರ್‌ಗೂ ಏನು ಸಂಬಂಧ. ಆತ ಒಬ್ಬ ನಾಲಾಯಕ್​ ಎಂದು ರೇಣುಕಾಚಾರ್ಯ ಕಿಡಿಕಾರಿದ್ದಾರೆ.

ಎಸ್ಮಾ ಯಾವಾಗ ಜಾರಿ ಮಾಡ್ತೀರಿ ಸಿಎಂ ಸಾಹೇಬ್ರೇ?.. ನಮ್ಮನ್ನೆಲ್ಲಾ ಯಾವ ಜೈಲಿಗೆ ಕಳಿಸ್ತೀರಿ? -BSYಗೆ ಕೋಡಿಹಳ್ಳಿ ಸವಾಲ್​

Published On - 4:35 pm, Sun, 13 December 20