ಕಿದ್ವಾಯಿ ಆಸ್ಪತ್ರೆಯಲ್ಲಿ ಕೆಟ್ಟುನಿಂತ MRI ಸ್ಕ್ಯಾನಿಂಗ್ ಮಷಿನ್, ಡಯಾಗ್ನೋಸ್ ಮಾಡಿಸಿಕೊಳ್ಳಲಾಗದೆ ರೋಗಿಗಳ ಪರದಾಟ

ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ MRI ಸ್ಕ್ಯಾನಿಂಗ್ ಮಷಿನ್ ಹಾಳಾಗಿ 15 ದಿನ ಕಳೆದರೂ ಇನ್ನು ಮಷಿನ್ ಸರಿಯಾಗಿಲ್ಲ. MRI ಸ್ಕ್ಯಾನಿಂಗ್ ರಿಪೋರ್ಟ್ ಕೈ ಸೇರದೆ ವೈದ್ಯರು ಡಯಾಗ್ನೋಸ್ ಮಾಡಲಾಗದೆ ರೋಗಿಗಳನ್ನು ವಾಪಸ್ ಕಳಿಸುತ್ತಿದ್ದಾರೆ. ಖಾಸಗಿಯಲ್ಲಿ MRI ಸ್ಕ್ಯಾನಿಂಗ್ ಮಾಡಿಸಲು ಕನಿಷ್ಠ 10 ಸಾವಿರ ಬೇಕು. 10 ಸಾವಿರ ಖರ್ಚು ಮಾಡಿ MRI ಸ್ಕ್ಯಾನಿಂಗ್ ಮಾಡಿಸಲಾಗದೆ ರೋಗಿಗಳು ಪರದಾಡುತ್ತಿದ್ದಾರೆ.

ಕಿದ್ವಾಯಿ ಆಸ್ಪತ್ರೆಯಲ್ಲಿ ಕೆಟ್ಟುನಿಂತ MRI ಸ್ಕ್ಯಾನಿಂಗ್ ಮಷಿನ್, ಡಯಾಗ್ನೋಸ್ ಮಾಡಿಸಿಕೊಳ್ಳಲಾಗದೆ ರೋಗಿಗಳ ಪರದಾಟ
ಕಿದ್ವಾಯಿ ಆಸ್ಪತ್ರೆ
Follow us
Vinay Kashappanavar
| Updated By: ಆಯೇಷಾ ಬಾನು

Updated on: Jan 31, 2024 | 12:35 PM

ಬೆಂಗಳೂರು, ಜ.31: ಸಿಲಿಕಾನ್ ಸಿಟಿಯ ಪ್ರತಿಷ್ಠಿತ ಕ್ಯಾನ್ಸರ್ ಕಿದ್ವಾಯಿ ಆಸ್ಪತ್ರೆ ಅವ್ಯವಸ್ಥೆಯ ಆಗರವಾಗಿದೆ. MRI ಸ್ಕ್ಯಾನಿಂಗ್ ಮಷಿನ್ ಹಾಳಾಗಿದ್ದು ರೋಗಿಗಳು ಪ್ರತಿ ನಿತ್ಯ ಪರದಾಡುವಂತಹ ಪರಿಸ್ಥಿತಿ ಇದೆ. ರಾಜ್ಯದ ಪ್ರಮುಖ ಸರಕಾರಿ ಕ್ಯಾನ್ಸರ್‌ ಆಸ್ಪತ್ರೆಯಾಗಿರುವ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಗೆ (Kidwai Memorial Institute of Oncology Cancer Research and Training Centre) ಚಿಕಿತ್ಸೆಗಾಗಿ ಪ್ರತಿ ದಿನ ಸಾವಿರಾರು ರೋಗಿಗಳು ಬರುತ್ತಾರೆ. ಆದರೆ ಕಳೆದ 15 ದಿನಗಳಿಂದ ಚಿಕಿತ್ಸೆಗೆ ಬರುವ ರೋಗಿಗಳಿಗೆ ಸಂಕಷ್ಟ ಎದುರಾಗಿದೆ.

ಕಿದ್ವಾಯಿ ಆಸ್ಪತ್ರೆಯಲ್ಲಿ MRI ಸ್ಕ್ಯಾನಿಂಗ್ ಮಷಿನ್ ಹಾಳಾಗಿ 15 ದಿನ ಕಳೆದರೂ ಇನ್ನು ಮಷಿನ್ ಸರಿಯಾಗಿಲ್ಲ. ಖಾಸಗಿಯಲ್ಲಿ MRI ಸ್ಕ್ಯಾನಿಂಗ್ ಮಾಡಿಸಲು ಕನಿಷ್ಠ 10 ಸಾವಿರ ಬೇಕು. 10 ಸಾವಿರ ಖರ್ಚು ಮಾಡಿ MRI ಸ್ಕ್ಯಾನಿಂಗ್ ಮಾಡಿಸಲಾಗದೆ ರೋಗಿಗಳು ಪರದಾಡುತ್ತಿದ್ದಾರೆ. ಬಡ ರೋಗಿಗಳು ಚಿಕಿತ್ಸೆ ಪಡೆಯದೇ ವಾಪಸ್ ಮನೆಗೆ ಹೋಗುತ್ತಿದ್ದಾರೆ. ನಿತ್ಯ ರೋಗಿಗಳು ನೂರಾರು ಕೀಲೋ ಮೀಟರ್ ದೂರದಿಂದ ಚಿಕಿತ್ಸೆಗೆ ಬಂದು ವಾಪಸ್ ಹೋಗ್ತಾ ಇದ್ದಾರೆ. ರೋಗಿಗಳು ಪರದಾಡುತ್ತಿದ್ದರೂ ಕಿದ್ವಾಯಿ ಆಸ್ಪತ್ರೆ ನಿರ್ಲಕ್ಷ್ಯ ತೋರಿದೆ.

ಇದನ್ನೂ ಓದಿ: ಕೆರಗೋಡುವಿನ ಎಲ್ಲ ಮನೆಗಳ ಮೇಲೆ ಹನುಮ ಧ್ವಜ ಹಾರುತ್ತೆ, ಸರ್ಕಾರಕ್ಕೆ ತಾಕತ್ತಿದ್ದರೆ ತಡೆಯಲಿ: ಮಂಡ್ಯ ಬಿಜೆಪಿ ಘಟಕ ಅಧ್ಯಕ್ಷ

MRI ಸ್ಕ್ಯಾನಿಂಗ್ ಸರಿಪಡಿಸದೆ ಆಡಳಿತ ಮಂಡಳಿ ನಿರ್ಲಕ್ಷ್ಯ ವಹಿಸಿದೆ. MRI ಸ್ಕ್ಯಾನಿಂಗ್ ರಿಪೋರ್ಟ್ ಕೈ ಸೇರದೆ ವೈದ್ಯರು ಡಯಾಗ್ನೋಸ್ ಮಾಡಲಾಗದೆ ರೋಗಿಗಳನ್ನು ವಾಪಸ್ ಕಳಿಸುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿ MRI ಸ್ಕ್ಯಾನಿಂಗ್​ಗೆ ಸಾವಿರಾರು ರೂಪಾಯಿ ಹಣ ಖರ್ಚು ಮಾಡುವ ದುಸ್ಥಿತಿ ಇದೆ. ಇನ್ನು ಮತ್ತೊಂದೆಡೆ MRI ಸ್ಕ್ಯಾನಿಂಗ್ ಖಾಸಗಿ ಹೊರ ಗುತ್ತಿಗೆಗೆ ನೀಡಲು ಪ್ಲಾನ್ ಇದೆ ಎನ್ನಲಾಗುತ್ತಿದೆ. ಖಾಸಗಿ ಹೊರ ಗುತ್ತಿಗೆ ನೀಡುವ ಹುನ್ನಾರ ಕೂಡ ನಡೆದಿರುವ ಆರೋಪ ಕೇಳಿ ಬಂದಿದೆ. ಹೀಗಾಗಿ ಕೆಟ್ಟ ಮಷಿನ್ ಸರಿಪಡಿಸದೇ ನಿರ್ಲಕ್ಷ್ಯ ತೋರಲಾಗುತ್ತಿದೆ ಎಂಬ ಮಾತುಗಳು ಕೇಳಿ ಬಂದಿವೆ.

ಇನ್ನು ಈ ಘಟನೆ ಸಂಬಂಧ ಕಿದ್ವಾಯಿ ಆಸ್ಪತ್ರೆ ನಿರ್ದೇಶಕ ಡಾ. ಲೋಕೇಶ್ ಪ್ರತಿಕ್ರಿಯೆ ನೀಡಿದ್ದಾರೆ. ಸರ್ಕಾರದ ಮುಂದೆ ಹೊಸ ಮಷಿನ್​ಗೆ ಪ್ರಸ್ತಾವನೆ ಇಟ್ಟಿದ್ದೇವೆ. ಮಷಿನ್ ಹಳೆಯದಾಗಿದೆ. ಸರ್ಕಾರದ ಅನುಮತಿಗೆ ಕಾಯುತ್ತಿದ್ದೇವೆ. ಕ್ಯಾಬಿನೆಟ್ ನಿಂದ ಅಪ್ರೂವಲ್ ಸಿಗಬೇಕಿದೆ. ಖಾಸಗಿ ಸಹಭಾಗಿತ್ವಕ್ಕೆ ಕೊಡುವ ಚಿಂತನೆ ಇಲ್ಲ. ಆಸ್ಪತ್ರೆಯಿಂದಲೇ ನಿಭಾಯಿಸುತ್ತೇವೆ. ಈಗಿನ ಮಷಿನ್ ಬದಲಾಯಿಸಿ ಟೆಂಡರ್ ಕರೆಯಲು ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಆದಷ್ಟು ಬೇಗ ಸಮಸ್ಯೆ ಸರಿಯಾಗಲಿದೆ ಎಂದು ತಿಳಿಸಿದರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ