AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಡಾ ಕಚೇರಿ ಮೇಲಿನ ಇಡಿ ದಾಳಿಯ ಸ್ಫೋಟಕ ಮಾಹಿತಿ: ಆಯುಕ್ತರಿಗೆ ಕೇಳಿದ 41 ಪ್ರಶ್ನೆಗಳು ಯಾವ್ಯಾವು?

ಮುಡಾದಲ್ಲಿನ ಮನಿ ಲಾಂಡರಿಂಗ್ ತನಿಖೆ ಬಗ್ಗೆ ಮುಡಾ ಆಯುಕ್ತ ರಘುನಂದನ್​ಗೆ ಇಡಿ ಪತ್ರ ಬರೆದಿದ್ದು, ಬರೋಬ್ಬರಿ 41 ಪ್ರಶ್ನೆಗಳನ್ನು ಹೇಳಿದೆ. ಇಡಿ ಮುಡಾ ಕಮಿಷನರ್​ಗೆ ಕೇಳಿದ 41 ಪ್ರಶ್ನೆಗಳು ಯಾವ್ಯಾವು? ಟಿವಿ9ನಲ್ಲಿ ಇಡಿ ಬರೆದ ಪತ್ರದ EXCLUSIVE ಡಿಟೇಲ್ ಇಲ್ಲಿದೆ ನೋಡಿ.

ಮುಡಾ ಕಚೇರಿ ಮೇಲಿನ ಇಡಿ ದಾಳಿಯ ಸ್ಫೋಟಕ ಮಾಹಿತಿ: ಆಯುಕ್ತರಿಗೆ ಕೇಳಿದ 41 ಪ್ರಶ್ನೆಗಳು ಯಾವ್ಯಾವು?
ಇಡಿ, ಮುಡಾ
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on: Oct 18, 2024 | 9:29 PM

ಮೈಸೂರು, (ಅಕ್ಟೋಬರ್ 18): ಮುಡಾ ಹಗರಣ ತೆರೆಮರೆಗೆ ಸರಿದಿದೆ ಎನ್ನುವಾಗಲೇ ಮೈಸೂರಿನ ಮುಡಾ ಕಚೇರಿ ಮೇಲೆ ಇಂದು (ಅಕ್ಟೋಬರ್ 18) ಇಡಿ ದಾಳಿ ಮಾಡಿದೆ. ಸಿಆರ್‌ಪಿಎಫ್‌ ಭದ್ರತೆಯೊಂದಿಗೆ ದಾಳಿ ಮಾಡಿದ್ದ 20 ಕ್ಕೂ ಹೆಚ್ಚು ಅಧಿಕಾರಿಗಳು, ಸಿಎಂ ಪತ್ನಿ ಪಡೆದಿದ್ದ 14 ಸೈಟ್‌ಗಳ ಸಂಬಂಧ ಇಂಚಿಂಚೂ ಮಾಹಿತಿ ಕಲೆಹಾಕಿದ್ದಾರೆ. ಈ ಸಂಬಂಧ ಮುಡಾ ಅಧಿಕಾರಿಗಳಿಗೆ ಬರೋಬ್ಬರಿ 41 ಪ್ರಶ್ನೆ ಕೇಳಿ ಶಾಕ್‌ ಕೊಟ್ಟಿದ್ದಾರೆ. ಸಿಎಂ ಪತ್ನಿ ಪಡೆದಿದ್ದ 14 ಸೈಟ್ ರಹಸ್ಯವನ್ನು ಕೆದಕಿದೆ. ಅಲ್ಲದೇ ಮುಡಾ ಆಯುಕ್ತರಿಗೆ ಒಂದಲ್ಲ ಎರಡಲ್ಲ ಬರೋಬ್ಬರಿ 41 ಪ್ರಶ್ನೆಗಳನ್ನು ಕೇಳಿದೆ. ಆ 41 ಪ್ರಶ್ನೆಗಳು ಟಿವಿ9ಗೆ EXCLUSIVE ಲಭ್ಯವಾಗಿದ್ದು, ಅವು ಈಕೆಳಗಿನಂತಿದೆ ನೋಡಿ.

ಇದನ್ನೂ ಓದಿ:  ಮುಡಾ ಬುಡಕ್ಕೆ ಇಡಿ: ಸಿಎಂ ಪತ್ನಿ ಪಡೆದಿದ್ದ 14 ಸೈಟ್ ರಹಸ್ಯ ಕೆದಕಿದ ಅಧಿಕಾರಿಗಳು

ಮುಡಾಗೆ ED ಪ್ರಶ್ನೆಗಳ ಸುರಿಮಳೆ!

  1.  ಕೆಸರೆ ಗ್ರಾಮದ ಸರ್ವೆ ನಂ.464ರ 3.16 ಎಕರೆ ಜಮೀನಿಗೆ ಭೂಮಾಲೀಕ ಪರಿಹಾರ ಕೋರಿದ್ರಾ?
  2.  ಜಮೀನು ಮಾಲೀಕ ನಾನೇ ಎಂದು ದೇವರಾಜು ಮುಡಾಗೆ ದಾಖಲೆ ನೀಡಿದ್ದರಾ?
  3.  ಸರ್ವೆ ನಂಬರ್‌ 464ನ ಎಲ್ಲಾ ಜಮೀನು ಡಿನೋಟಿಫೈ ಮಾಡಿದ್ರಾ? ಬೇರೆ ಜಮೀನನ್ನೂ ಮಾಡಿದ್ರಾ?
  4.  ಸರ್ವೆ ನಂ.464ರ ಜಮೀನು ಡಿನೋಟಿಫಿಕೇಷನ್‌ ಮಾಡಿದ್ದಕ್ಕೆ ಕಾರಣಗಳೇನು?
  5.  ಡಿನೋಟಿಫಿಕೇಷನ್‌ ನಂತರ ಸರ್ವೆ ನಂ.464ರ ಜಮೀನು ಮತ್ತೆ ಸ್ವಾಧೀನ ಮಾಡಿದ್ರಾ?
  6.  ಡಿನೋಟಿಫಿಕೇಷನ್‌ ಆದ ಜಮೀನು ಸ್ವಾಧೀನಕ್ಕೆ ಅನುಮತಿ ನೀಡಿದ್ದು ಯಾರು?
  7.  ಭೂಸ್ವಾಧೀನ ಆಗಿದ್ರೆ ಯಾರಿಂದ ಜಮೀನು ಭೂಸ್ವಾಧೀನ ಮಾಡಿಕೊಂಡಿದ್ದೀರಿ?
  8.  ಸರ್ವೆ ನಂ.464ರ3 ಎಕರೆ 16 ಗುಂಟೆ ಜಮೀನಿನ ಪರಿಹಾರ ಮೊತ್ತ ಹೇಗೆ ನಿಗದಿಪಡಿಸಿದ್ರಿ?
  9.  ಪಾರ್ವತಿಗೆ 2017ರಲ್ಲಿ ಪರ್ಯಾಯ ಸೈಟ್‌ ನೀಡಿದ ನಿರ್ಧಾರವೇಕೆ?
  10.  ದೇವನೂರು ಬಡಾವಣೆಯಲ್ಲಿ ಎಷ್ಟು ಸೈಟ್‌ ರಚಿಸಿದ್ರಿ? ಎಷ್ಟು ಸೈಟ್‌ ಅಲಾಟ್‌ ಮಾಡಿದ್ರಿ? ಎಷ್ಟು ಜಮೀನು ಬಾಕಿ ಇದೆ?
  11.  ಬದಲಿ ನಿವೇಶನಕ್ಕೆ ಪ್ರಸ್ತತ ಇರುವ ಪರಿಹಾರದ ಮೊತ್ತವೇನು?
  12.  ಸರ್ವೆ ನಂ 462& 464ರ ಸ್ಕೆಚ್ ನ ನಕಲು ಕಾಪಿ ಎಲ್ಲಿದೆ?
  13.  ಸರ್ವೆ ನಂ 462& 464ರಲ್ಲಿ ನಿವೇಶನಗಳ ನಿರ್ಮಾಣ ಆಗಿದ್ಯಾ?
  14. ಜಮೀನಿನ ಜಾಗದಲ್ಲಿ ಇತರೆ ಮೂಲಸೌಕರ್ಯ ಒದಗಿಸಲಾಗಿದ್ಯಾ? ಇದಕ್ಕೆ ಸಂಬಂಧಿಸಿದ ನಕಲು ಪ್ರತಿಗಳನ್ನ ನಮಗೆ ಒದಗಿಸಬಹುದೇ?
  15.  ಸರ್ವೆ ನಂ.464ರಲ್ಲಿ 19 ಜನರಿಗೆ ನೀಡಿರುವ ಸೈಟ್ ಹಂಚಿಕೆ ಪತ್ರ ನೀಡಿ
  16.  ಈ 19 ಜನರ ಬಳಿ ಏನಾದರೂ ಹಣ ಪಡೆದುಕೊಳ್ಳಲಾಗಿದ್ಯಾ?
  17.  ಈ ಸೈಟ್ ಹಂಚಿಕೆಗಳ ಪ್ರಸ್ತುತ ಸ್ಥಿತಿ ಹೇಗಿದೆ? 1996ರಲ್ಲಿ ದೇವರಾಜು ಸಲ್ಲಿಸಿರೋ ಪ್ರತಿಯನ್ನ ನೀಡಿ
  18. ದೇವರಾಜು ನೀಡಿದ ಪ್ರತಿಯನ್ನ ಯಾವ ರೀತಿ ಸ್ವೀಕರಿಸಿದ್ರಿ? ದೇವರಾಜು ಸಲ್ಲಿಸಿರೋ ಇನ್ನಿತರ ಬೇರೆ ದಾಖಲೆಗಳಿದ್ದರೂ ನೀಡಿ
  19.  ದೇವರಾಜು ಸಲ್ಲಿಸಿದ ಮನವಿ ಮೇರೆಗೆ ಏನಾದ್ರೂ ಪ್ರಕ್ರಿಯೆ ನಡೆದಿದ್ಯಾ?
  20.  ಸರ್ವೆ ನಂ.464 ಡಿನೋಟಿಫಿಕೇಷನ್ ಪ್ರತಿಯನ್ನ ನಮಗೆ ಸಲ್ಲಿಸಿ
  21. ಈ ಸರ್ವೆ ನಂಬರ್ ಎಲ್ಲಾ ಡಿನೋಟಿಫಿಕೇಷನ್ ದಾಖಲೆ ಕೊಡಿ. ಬೇರೆ ಇತರೆ ಭೂಮಿಗಳ ಡಿನೋಟಿಫಿಕೇಷನ್ ದಾಖಲೆ ಇದ್ದರೂ ಸಲ್ಲಿಸಿ. ಡಿನೋಟಿಫಿಕೇಷನ್ ಮಾಡಲು ಕಾರಣವೇನು ಎಂಬ ದಾಖಲೆನ್ನ ನೀಡಿ
  22.  ಡಿನೋಟಿಫಿಕೇಷನ್ ನಂತರವೂ ಭೂಸ್ವಾಧೀನ ಮಾಡಲಾಗಿದ್ಯಾ? ಈ ಕುರಿತು ಸಂಬಂಧ ಪಟ್ಟ ದಾಖಲೆಯನ್ನ ನಮಗೆ ನೀಡಿ
  23.  ಸರ್ವೆ ನಂ.464ರ ಭೂಸ್ವಾಧೀನ ಕುರಿತ ಅಧಿಸೂಚನೆ ಪ್ರತಿ ನೀಡಿ
  24.  ಡಿನೋಟಿಫೈ ಆದ ಭೂಮಿಯನ್ನ ಭೂಸ್ವಾಧೀನ ಮಾಡಲು ಕಾರಣವೇನು? ಭೂಸ್ವಾಧೀನ ಮಾಡಲು ಅನುಮತಿ ನೀಡಿದ್ದು ಯಾರು? ಭೂಸ್ವಾಧೀನಕ್ಕೆ ಸಂಬಂಧಪಟ್ಟ ಎಲ್ಲಾ ದಾಖಲೆಯನ್ನ ಸಲ್ಲಿಸಿ

ಸಿಎಂ ಪತ್ನಿ ಬಗ್ಗೆ ED ಪ್ರಶ್ನೆಗಳು!

  1.  50:50 ಸೈಟ್‌ ಸ್ಕೀಂನಿಂದಾಗಿ ಭೂಮಿ ಕಳೆದುಕೊಂಡ ಎಷ್ಟು ಜನರಿಗೆ ಪರಿಹಾರವನ್ನ ನೀಡಿದ್ದೀರಿ?
  2.  ಪರಿಹಾರ ನೀಡಿದ್ರೆ, ಅವರ ಹೆಸರು, ವಿಳಾಸ, ಎಷ್ಟು ಜಮೀನು, ಸರ್ವೆ ನಂಬರ್, ಗ್ರಾಮ, ದಿನಾಂಕ, ನಿಗದಿಯಾದ ಪರಿಹಾರ ಮೊತ್ತವೆಷ್ಟು?
  3.  ಬದಲಿ ನಿವೇಶನಗಳ ನಂಬರ್, ಸರ್ವೆ ನಂಬರ್, ಲೇಔಟ್, ಜಾಗ ಇತ್ಯಾದಿಗಳ ಸಂಪೂರ್ಣ ವಿವರಗಳೇನು?
  4. 3 ಎಕರೆ 16 ಗುಂಟೆ ಜಮೀನು ಭೂಸ್ವಾಧೀನಕ್ಕೆ ಪರಿಹಾರವಾಗಿ ಪಾರ್ವತಿ ಅವರಿಗೆ ವಿಜಯನಗರದಲ್ಲಿ ಬದಲಿ ನಿವೇಶನ ನೀಡಲು ಅನುಮತಿ ಪಡೆದಿದ್ರಾ?
  5.  ಪರ್ಯಾಯ ಸೈಟ್‌ ನೀಡಲು ಅನುಮತಿ ಪಡೆದಿದ್ರೆ ಅನುಮತಿ ಕೊಟ್ಟವರು ಯಾರು?
  6.  ಪಾರ್ವತಿ ಅವರಿಗೆ ನೀಡಿರುವ 14 ಬದಲಿ ನಿವೇಶನಗಳ ದಾಖಲೆಗಳನ್ನ ಕೊಡಿ.
  7.  ಲೇಔಟ್ ಹೆಸರು, ಸರ್ವೆ ನಂಬರ್, ಸೈಟ್‌ನ ವಿಸ್ತೀರ್ಣ, ಸ್ಕೆಚ್‌, ಸೈಟ್‌ನ ಮಾದರಿ, ವಸತಿ/ಕಾರ್ನರ್‌/ಕಮರ್ಷಿಯಲ್‌ ಸೈಟ್‌.
  8.  ಪಾರ್ವತಿ ಅವರಿಗೆ 14 ಬದಲಿ ಸೈಟ್‌ ನೀಡಲು ಅನುಸರಿಸಿದ ಮಾನದಂಡವೇನು?
  9.  ಈ 14 ಬದಲಿ ನಿವೇಶನಗಳನ್ನ ನೀಡಲು ಏನಾದ್ರೂ ಅರ್ಜಿ ಸ್ವೀಕರಿಸಿದ್ರಾ?

ಮುಡಾ ಆಯುಕ್ತರಿಗೆ ಕೇಳಿದ ಪ್ರಶ್ನೆಗಳಾವುವು?

  1. ದೇವನೂರು ಬಡಾವಣೆ ರಚನೆಗಾಗಿ ಭೂಸ್ವಾಧೀನ ಸಂಬಂಧ 1992 ಸೆಪ್ಟೆಂಬರ್ 18ರಂದು ಮೊದಲು ಹೊರಡಿಸಿದ ನೋಟಿಫಿಕೇಷನ್‌ ದಾಖಲೆಯ ನಕಲು ಪ್ರತಿ. (ವಿಶೇಷವಾಗಿ ಕೆಸರೆ ಗ್ರಾಮದ ಭೂಸ್ವಾಧೀನಕ್ಕೆ ಸಂಬಂಧಿಸಿದ ಪ್ರಕಟಣೆ.
  2.  ದೇವನೂರು ಬಡಾವಣೆ ರಚನೆಗಾಗಿ ಭೂಸ್ವಾಧೀನ ಸಂಬಂಧ 1997 ಆಗಸ್ಟ್ 20ರಂದು ಹೊರಡಿಸಿದ ಅಂತಿಮ ನೋಟಿಫಿಕೇಷನ್‌ ದಾಖಲೆಯ ನಕಲು ಪ್ರತಿ. ಭೂಸ್ವಾಧೀನಕ್ಕೆ ಯಾವ ರೀತಿಯ ನೀತಿ, ನಿಯಮ, ನಿಬಂಧನೆಗಳನ್ನ ಅನುಸರಿಸಿದ್ದೀರಿ. ಮತ್ತು ನೋಟಿಫಿಕೇಷನ್‌ ಆಗಿರುವ ಭೂಮಿಯನ್ನ ಮಾರಾಟ, ಖರೀದಿ ಅಥವಾ ವರ್ಗಾವಣೆ ಮಾಡಲು ಅವಕಾಶವಿದ್ಯಾ ಎಂಬುದನ್ನ ಸ್ಪಷ್ಟಪಡಿಸಿ.
  3.  ದೇವನೂರು ಬಡಾವಣೆ ನಿರ್ಮಾಣಕ್ಕಾಗಿ ಭೂಮಿ ಸ್ವಾಧೀನಪಡಿಸಿಕೊಳ್ಳಲು ಗುರುತಿಸಿದ ಜಮೀನಿನ ಸ್ಕೆಚ್‌ನ ನಕಲು ಪ್ರತಿ. ಸರ್ವೆ ನಂಬರ್‌ 462 ಮತ್ತು 464 ಎರಡನ್ನೂ ಸ್ಪಷ್ಟವಾಗಿ ಗುರುತಿಸಿ.
  4.  ಕೆಸರೆ ಗ್ರಾಮದ ಸರ್ವೆ ನಂಬರ್ 462 ಮತ್ತು 464ರಲ್ಲಿ ಭೂಸ್ವಾಧೀನಕ್ಕಾಗಿ ನಡೆಸಿದ ಸರ್ವೆ ವರದಿಯ ನಕಲು ಪ್ರತಿ.
  5. ಕೆಸರೆ ಗ್ರಾಮದ ಸರ್ವೆ ನಂಬರ್ 462 ಮತ್ತು 464ರ ಭೂಮಿ ಸ್ವಾಧೀನ ಮಾಡಿಕೊಳ್ಳಲು ಅನುಸರಿಸಿದ ಪ್ರಕ್ರಿಯೆಯ ದಾಖಲೆಗಳ ನಕಲು ಪ್ರತಿ.
  6.  ಭೂಸ್ವಾಧೀನಕ್ಕೆ 1997 ಆಗಸ್ಟ್ 20ರಂದು ಹೊರಡಿಸಿದ ಅಂತಿಮ ನೋಟಿಫಿಕೇಷನ್‌ ಬಳಿಕ ಪರಿಹಾರದ ಮೊತ್ತ ನಿಗದಿಪಡಿಸಲು ಅನುಸರಿಸಿದ ನಿಯಮ, ನಿಬಂಧನೆಗಳೇನು? ಕೆಸರೆ ಗ್ರಾಮದಲ್ಲಿ ಸ್ವಾಧೀನಪಡಿಸಿಕೊಂಡ ಸರ್ವೆ ನಂಬರ್ 462 ಮತ್ತು 464ಭೂಮಿಗೆ ಪರಿಹಾರ ಮೊತ್ತ ನಿಗದಿಪಡಿಸಿದ ಕುರಿತ ದಾಖಲೆಗಳ ನಕಲು ಪ್ರತಿ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
Pahalgam Attack: ಪ್ರವಾಸಿಗರೊಬ್ಬರ ಕ್ಯಾಮರಾದಲ್ಲಿ ದಾಳಿ ಭೀಕರ ದೃಶ್ಯ!
Pahalgam Attack: ಪ್ರವಾಸಿಗರೊಬ್ಬರ ಕ್ಯಾಮರಾದಲ್ಲಿ ದಾಳಿ ಭೀಕರ ದೃಶ್ಯ!
ಸಿಎಂ ವರ್ತನೆಯಿಂದ ಅಧಿಕಾರಿ ಮಾನಸಿಕ ಕ್ಷೋಭೆಗೊಳಗಾಗಿರುತ್ತಾರೆ: ಶೆಟ್ಟರ್
ಸಿಎಂ ವರ್ತನೆಯಿಂದ ಅಧಿಕಾರಿ ಮಾನಸಿಕ ಕ್ಷೋಭೆಗೊಳಗಾಗಿರುತ್ತಾರೆ: ಶೆಟ್ಟರ್
ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಮುಸ್ಲಿಮರ ಓಟಿಗೆ ಮಾರಿಕೊಂಡ ಕಾಂಗ್ರೆಸ್ ಸರ್ಕಾರ: ತೇಜಸ್ವಿ ಸೂರ್ಯ ವಾಗ್ದಾಳಿ
ಮುಸ್ಲಿಮರ ಓಟಿಗೆ ಮಾರಿಕೊಂಡ ಕಾಂಗ್ರೆಸ್ ಸರ್ಕಾರ: ತೇಜಸ್ವಿ ಸೂರ್ಯ ವಾಗ್ದಾಳಿ
ಮಂಜುನಾಥ್, ಭರತ್ ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ ಸೇವೆ: ತೇಜಸ್ವಿ ಸೂರ್ಯ
ಮಂಜುನಾಥ್, ಭರತ್ ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ ಸೇವೆ: ತೇಜಸ್ವಿ ಸೂರ್ಯ
ಯತ್ನಾಳ್ ವಿರುದ್ಧ ಮುಸ್ಲಿಮರ ಪ್ರತಿಭಟನೆಯಲ್ಲಿ ಹಿಂದೂ ಸ್ವಾಮೀಜಿಗಳು!
ಯತ್ನಾಳ್ ವಿರುದ್ಧ ಮುಸ್ಲಿಮರ ಪ್ರತಿಭಟನೆಯಲ್ಲಿ ಹಿಂದೂ ಸ್ವಾಮೀಜಿಗಳು!