ಕಾಂಗ್ರೆಸ್ ‌ಮುಖಂಡನ‌ ಹತ್ಯೆ ಕೇಸ್​ಗೆ ಟ್ವಿಸ್ಟ್: ಆಸ್ತಿಗಾಗಿ ಸೊಸೆಯಿಂದಲೇ ಮಾವನ ಕೊಲೆ; ಪ್ರಿಯತಮನಿಗೆ ಸುಪಾರಿ ಕೊಡಿಸಿ ಕೃತ್ಯ

| Updated By: ganapathi bhat

Updated on: Apr 14, 2022 | 3:47 PM

ಕನಕಪುರ ತಾಲೂಕಿನ ಸೊಂಟನಹಳ್ಳಿ ನಿವಾಸಿ ನವೀನ್ ಎಂಬಾತನಿಗೆ ಸುಪಾರಿ ನೀಡಿ ಕೊಲೆ ಮಾಡಿಸಲಾಗಿದೆ ಎಂದು ತಿಳಿದುಬಂದಿದೆ. ಈ ಹಿಂದೆ ನವೀನ್ ಹಾಗೂ ಚೈತ್ರಾ ಲವ್ ಮಾಡುತ್ತಿದ್ದರು. ಬಳಿಕ ಗಂಟಪ್ಪ ಮಗ ನಂದೀಶ್​ನನ್ನ ಮದುವೆಯಾಗಿದ್ದಳು.

ಕಾಂಗ್ರೆಸ್ ‌ಮುಖಂಡನ‌ ಹತ್ಯೆ ಕೇಸ್​ಗೆ ಟ್ವಿಸ್ಟ್: ಆಸ್ತಿಗಾಗಿ ಸೊಸೆಯಿಂದಲೇ ಮಾವನ ಕೊಲೆ; ಪ್ರಿಯತಮನಿಗೆ ಸುಪಾರಿ ಕೊಡಿಸಿ ಕೃತ್ಯ
ಪ್ರಾತಿನಿಧಿಕ ಚಿತ್ರ
Follow us on

ರಾಯಚೂರು: ಟಿಪ್ಪರ್ ಹರಿದು ಮನೆ ಮುಂದೆ ಮಲಗಿದ್ದ ವ್ಯಕ್ತಿ ದುರ್ಮರಣವನ್ನಪ್ಪಿದ ಃಟನೆ ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಲಿಂಗದಹಳ್ಳಿ ಎಂಬಲ್ಲಿ ನಡೆದಿದೆ. ಲಿಂಗದಹಳ್ಳಿಯಲ್ಲಿ ಟಿಪ್ಪರ್ ಹರಿದು ಮಾರುತಿ (19) ಸಾವನ್ನಪ್ಪಿದ್ದಾರೆ. ಬೇಸಿಗೆ ಹಿನ್ನೆಲೆಯಲ್ಲಿ ಮಾರುತಿ ಮನೆ ಮುಂಭಾಗ ಮಲಗಿದ್ದರು. ಮಾರುತಿ ಮನೆಯ ಎದುರೇ ಅಕ್ರಮ ಮರಳು ಸಂಗ್ರಹಣೆ ಮಾಡಲಾಗಿದ್ದು ಮಂಜುನಾಥ್, ಹನುಮಂತ ಎಂಬುವರ ವಿರುದ್ಧ ಆರೋಪ ಮಾಡಲಾಗಿತ್ತು. ನಿತ್ಯ ರಾತ್ರಿಯಾಗುತ್ತಿದ್ದಂತೆ ಅಕ್ರಮವಾಗಿ ಮರಳು ವಿಲೇವಾರಿ ಮಾಡುತ್ತಿದ್ದರು. ಇದೇ ರೀತಿ ನಿನ್ನೆ ಮರಳು ಸಾಗಣೆ ಮಾಡುವಾಗ ಘಟನೆ ಸಂಭವಿಸಿದೆ. ಹೊರಗಡೆ ಮಲಗಿದ್ದ ಮಾರುತಿ ಮೇಲೆ ಟಿಪ್ಪರ್ ಹರಿದಿದೆ. ಜಾಲಹಳ್ಳಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಚಿತ್ರದುರ್ಗ: ಶೀಲಶಂಕಿಸಿ ಪತಿಯಿಂದಲೇ ಪತ್ನಿಯ ಹತ್ಯೆ 

ಸೋಮಗುದ್ದು ಗ್ರಾಮದಲ್ಲಿ ಪತಿಯಿಂದಲೇ ಪತ್ನಿಯ ಹತ್ಯೆ ಮಾಡಿದ ದಾರುಣ ಘಟನೆ ಸಂಭವಿಸಿದೆ. ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಸೋಮಗುದ್ದು ಗ್ರಾಮದಲ್ಲಿ ಮಚ್ಚಿನಿಂದ ಕೊಚ್ಚಿ ಪತ್ನಿ ನೇತ್ರಾವತಿ (30) ಬರ್ಬರ ಹತ್ಯೆ ಮಾಡಲಾಗಿದೆ. ಆರೋಪಿ ಪತಿ ದ್ಯಾಮಣ್ಣ ಚಳ್ಳಕೆರೆ ಠಾಣೆ ಪೊಲೀಸರ ವಶಕ್ಕೆ ಪಡೆಯಲಾಗಿದೆ. ಪತ್ನಿ ನೇತ್ರಾವತಿ ಶೀಲ ಶಂಕಿಸಿ ದ್ಯಾಮಣ್ಣ ಹತ್ಯೆಗೈದಿರುವ ಬಗ್ಗೆ ತಿಳಿದುಬಂದಿದೆ. ಚಳ್ಳಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ರಾಮನಗರ: ಕಾಂಗ್ರೆಸ್ ‌ಮುಖಂಡನ‌ ಹತ್ಯೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್; ಸೊಸೆಯಿಂದಲೇ ಮಾವನ ಕೊಲೆ

ಕಾಂಗ್ರೆಸ್ ‌ಮುಖಂಡನ‌ ಹತ್ಯೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ಲಭಿಸಿದೆ. ಮಾವ ಗಂಟಪ್ಪ ಹತ್ಯೆಗೆ ಸೊಸೆ ಚೈತ್ರಾ ಸುಪಾರಿ ನೀಡಿದ್ದ ಬಗ್ಗೆ ತಿಳಿದುಬಂದಿದೆ. ಒಂದೂವರೆ ತಿಂಗಳ ಬಳಿಕ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಫೆ.25 ರಂದು ‘ಕೈ’ ಮುಖಂಡ ಗಂಟಪ್ಪ (54) ಕೊಲೆಯಾಗಿತ್ತು. ರಾಮನಗರ ತಾಲೂಕಿನ ಬಾನಂದೂರು ಬಳಿ ನಡೆದಿದ್ದ ಹತ್ಯೆ ನಡೆದಿತ್ತು. ಮಾವನ ಹತ್ಯೆಗೆ ಪ್ರಿಯತಮ ನವೀನ್​ಗೆ ಸೊಸೆ ಚೈತ್ರಾ ಸುಪಾರಿ ನೀಡಿದ್ದಳು. ಆಸ್ತಿಯಲ್ಲಿ ಪಾಲು ಕೊಟ್ಟಿಲ್ಲ ಎಂದು ಸುಪಾರಿ ನೀಡಿದ್ದಳು. ಕನಕಪುರ ತಾಲೂಕಿನ ಸೊಂಟನಹಳ್ಳಿ ನಿವಾಸಿ ನವೀನ್ ಎಂಬಾತನಿಗೆ ಸುಪಾರಿ ನೀಡಿ ಕೊಲೆ ಮಾಡಿಸಲಾಗಿದೆ ಎಂದು ತಿಳಿದುಬಂದಿದೆ. ಈ ಹಿಂದೆ ನವೀನ್ ಹಾಗೂ ಚೈತ್ರಾ ಲವ್ ಮಾಡುತ್ತಿದ್ದರು. ಬಳಿಕ ಗಂಟಪ್ಪ ಮಗ ನಂದೀಶ್​ನನ್ನ ಮದುವೆಯಾಗಿದ್ದಳು. ಬಿಡದಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ಇತರ ಅಪರಾಧ ಸುದ್ದಿಗಳು

ಬೆಂಗಳೂರು: ವಲಯ NCB ಅಧಿಕಾರಿಗಳ ಕಾರ್ಯಾಚರಣೆಯಲ್ಲಿ ಡ್ರಗ್ಸ್ ಸಾಗಿಸ್ತಿದ್ದ ಉತ್ತರ ಪ್ರದೇಶದ ಆರೋಪಿಗಳು ಇಬ್ಬರ ಬಂಧನ ಮಾಡಲಾಗಿದೆ. ಬೆಂಗಳೂರಿನ ಯಶವಂತಪುರ ರೈಲ್ವೆ ನಿಲ್ದಾಣದ ಬಳಿ ಬಂಧಿಸಲಾಗಿದೆ. 3.16 ಕೆಜಿ ಹ್ಯಾಶಿಶ್ ಆಯಿಲ್ ಅನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಲಖನೌನಿಂದ ಬೆಂಗಳೂರಿಗೆ ಡ್ರಗ್ಸ್ ಸಾಗಿಸುತ್ತಿದ್ದ ಆರೋಪಿಗಳು ಸೆರೆ ಸಿಕ್ಕಿದ್ದಾರೆ.

ಬೆಂಗಳೂರು: ಬಾಡಿಗೆಗೆ ಸಿಲಿಂಡರ್ ಪಡೆದು ಮಾರಾಟ ಮಾಡುತ್ತಿದ್ದ ಮೂವರ ಬಂಧನ ಮಾಡಲಾಗಿದೆ. ಅಮೃತಹಳ್ಳಿ ಪೊಲೀಸರಿಂದ ಸುಹೇಲ್ ಅಹ್ಮದ್, ಸೈಯದ್ ಪಾಷಾ, ಗಣೇಶ್ ಅಲಿಯಾಸ್ ಷಣ್ಮುಖ ಎಂಬವರನ್ನು ಬಂಧಿಸಲಾಗಿದೆ. ಬಂಧಿತರಿಂದ ಮೂರು ವಾಹನಗಳು, 100 ಸಿಲಿಂಡರ್​​ಗಳು ವಶಕ್ಕೆ ಪಡೆಯಲಾಗಿದೆ.

ಬೆಂಗಳೂರು: ವಿಲ್ಸನ್ ಗಾರ್ಡನ್ ಕ್ಲಬ್‌ನಲ್ಲಿ ಇಸ್ಪೀಟ್ ಆಡುತ್ತಿದ್ದ 11 ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರ ಬಳಿಯಿದ್ದ 5.75 ಲಕ್ಷ ರೂಪಾಯಿ ಜಪ್ತಿ ಮಾಡಲಾಗಿದೆ. ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ನೆಲಮಂಗಲ: 8ನೇ ಮೈಲಿ ಬಳಿ ರಾತ್ರಿ ತಾಂತ್ರಿಕ ಕಾರಣದಿಂದ ರಸ್ತೆ ಮಧ್ಯೆ BMTC ಬಸ್ ಕೆಟ್ಟು ನಿಂತ ಘಟನೆ ಸಂಭವಿಸಿದೆ. ರಸ್ತೆ ಮಧ್ಯೆ ಬಸ್ ನಿಲ್ಲಿಸಿದ್ದಕ್ಕೆ ಕೆರಳಿದ ಪುಂಡರಿಂದ ನಿರ್ವಾಹಕನಿಗೆ ಹಲ್ಲೆ ಮಾಡಲಾಗಿದೆ. ನಿರ್ವಾಹಕ ಸತೀಶ್​ಗೆ ಸಣ್ಣಪುಟ್ಟ ಗಾಯ ಆಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಧಾರವಾಡ: ಹುಬ್ಬಳ್ಳಿಯ ವಿದ್ಯಾನಗರದ ವಿದ್ಯಾವಿಹಾರ ಕಾಲೋನಿಯಲ್ಲಿ ಕಾರಿನ ಗಾಜು ಒಡೆದು ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಕಳ್ಳತನ ಮಾಡಿದ ಘಟನೆ ಸಂಭವಿಸಿದೆ, ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಇದನ್ನೂ ಓದಿ: Crime News: ಐಪಿಎಲ್ ಬೆಟ್ಟಿಂಗ್ ದಾಳಿ ವೇಳೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಓಡುವಾಗ ಬಿದ್ದು ವ್ಯಕ್ತಿ ಸಾವು

ಇದನ್ನೂ ಓದಿ: Crime News: ಶಿವನೂರ ಗ್ರಾಮದಲ್ಲಿ ಬಂದರು ಬಾಗಿಲು ಕದಿಯುತ್ತಿದ್ದ ಕಳ್ಳನನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು

Published On - 3:46 pm, Thu, 14 April 22