ಮುರುಘಾಮಠ ಕೇವಲ ವೀರಶೈವ ಲಿಂಗಾಯತ ಸಮಾಜಕ್ಕೆ ಸೀಮಿತ ಅಲ್ಲ: ಅನ್ಯವರ್ಗದವರಿಗೂ ಅವಕಾಶ ಕೊಡಿ: ಬಿ.ಕಾಂತರಾಜ್

ಮಠಕ್ಕೆ ನಿರಂತರವಾಗಿ ಒಂದೇ ಸಮುದಾಯದ ಸ್ವಾಮೀಜಿ ನೇಮಕ ಏಕೆ? ಬೇರೆ ಶೂದ್ರ ಸಮುದಾಯದವರು ಏಕೆ ಸ್ವಾಮೀಜಿ ಆಗಬಾರದು. ಸರ್ವ ಸಮಾಜದವರನ್ನು ಒಳಗೊಂಡ 'ಶ್ರೀ ಮುರುಘಾ ಪರಂಪರೆ ಕಲ್ಯಾಣ ಸಮಿತಿ' ರಚಿಸಿ ಹೋರಾಡುತ್ತೇವೆ.

ಮುರುಘಾಮಠ ಕೇವಲ ವೀರಶೈವ ಲಿಂಗಾಯತ ಸಮಾಜಕ್ಕೆ ಸೀಮಿತ ಅಲ್ಲ: ಅನ್ಯವರ್ಗದವರಿಗೂ ಅವಕಾಶ ಕೊಡಿ: ಬಿ.ಕಾಂತರಾಜ್
ನಗರಸಭೆ ಮಾಜಿ ಅಧ್ಯಕ್ಷ ಬಿ.ಕಾಂತರಾಜ್ ಪತ್ರಿಕಾಗೋಷ್ಠಿ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Oct 01, 2022 | 10:27 AM

ಚಿತ್ರದುರ್ಗ: ಮುರುಘಾಮಠ ಶೂನ್ಯ ಪೀಠ ಪರಂಪರೆಯ ಮಠ. ಕೇವಲ ವೀರಶೈವ ಲಿಂಗಾಯತ ಸಮಾಜಕ್ಕೆ ಸೀಮಿತ ಬೇಡ. ನಮ್ಮ ನಾಯಕ ಸಮುದಾಯದವರಿಗೂ ಅವಕಾಶ ನೀಡಿ ಎಂದು ನಾಯಕ ಸಮುದಾಯದ ಮುಖಂಡ ಹಾಗೂ ನಗರಸಭೆ ಮಾಜಿ ಅಧ್ಯಕ್ಷ ಬಿ.ಕಾಂತರಾಜ್ ಹೇಳಿದರು. ಮುರುಘಾಮಠ ಸರ್ವ ಸಮುದಾಯದ ಭಕ್ತರನ್ನು ಹೊಂದಿದೆ. ಶೂದ್ರ ಸಮಾಜದ ಅಲ್ಲಮಪ್ರಭು ಶೂನ್ಯ ಪೀಠದ ಪ್ರಥಮ ಅಧ್ಯಕ್ಷರಾಗಿದ್ದರು. ವೀರಶೈವ ಲಿಂಗಾಯತ ಸಮಾಜದವರಿಂದ ಮುರುಘಾ ಮಠ ವಶಕ್ಕೆ ಪಡೆಯಲು ಹೊರಟಿದ್ದಾರೆ. ಸರ್ಕಾರ ಮತ್ತು ನ್ಯಾಯಾಲಯ ಇದಕ್ಕೆ‌ ಮನ್ನಣೆ ನೀಡಬಾರದು. ಹೊಸ ಸ್ವಾಮೀಜಿ ನೇಮಕಕ್ಕೆ ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ. ಮುರುಘಾಮಠವನ್ನು ಭರಮಣ್ಣ ಮಠ ಕಟ್ಟಿಸಿಕೊಟ್ಟಿದ್ದಾರೆ. ಕೆಲವರು ಸಂದರ್ಭ ಸೃಷ್ಟಿಸಿ ಸ್ವಾಮೀಜಿ ಬದಲಾವಣೆಗೆ ಹೊರಟಿದ್ದಾರೆ. ಹಿಂದುಳಿದ, ದಲಿತ ಸಮುದಾಯದವರಿಗೆ ಸ್ವಾಮೀಜಿ ಮಾಡಬೇಕು. ಇಲ್ಲವೆಂದರೆ ‘ಶ್ರೀಮುರುಘಾ ಪರಂಪರೆ ಕಲ್ಯಾಣ ಸಮಿತಿ’ ರಚಿಸಿ ಹೋರಾಡುತ್ತೇವೆ ಎಂದು ಬಿ.ಕಾಂತರಾಜ್ ಎಚ್ಚರಿಕೆ ನೀಡಿದರು.

ಒಂದೇ ಸಮುದಾಯದ ಸ್ವಾಮೀಜಿ ನೇಮಕ ಏಕೆ?

ಮಠಕ್ಕೆ ನಿರಂತರವಾಗಿ ಒಂದೇ ಸಮುದಾಯದ ಸ್ವಾಮೀಜಿ ನೇಮಕ ಏಕೆ? ಬೇರೆ ಶೂದ್ರ ಸಮುದಾಯದವರು ಏಕೆ ಸ್ವಾಮೀಜಿ ಆಗಬಾರದು. ಸರ್ವ ಸಮಾಜದವರನ್ನು ಒಳಗೊಂಡ ‘ಶ್ರೀ ಮುರುಘಾ ಪರಂಪರೆ ಕಲ್ಯಾಣ ಸಮಿತಿ’ ರಚಿಸಿ ಹೋರಾಡುತ್ತೇವೆ. ಮುರುಘಾಶ್ರೀ ಬದಲಾಯಿಸಬೇಕು ಎಂಬುದು ನಮ್ಮ ಅಭಿಪ್ರಾಯ ಅಲ್ಲ. ಕೆಲವರು ಸಂದರ್ಭ ಸೃಷ್ಠಿಸಿ ಸ್ವಾಮೀಜಿ ಬದಲಾವಣೆಗೆ ಹೊರಟಿದ್ದಾರೆ. ಹೊಸ ಸ್ವಾಮೀಜಿ ಮಾಡುವುದಾದರೆ ಶೂದ್ರ ಸಮುದಾಯದವರಿಗೆ ಮಾಡಬೇಕು. ಹಿಂದುಳಿದ, ದಲಿತ ಸಮುದಾಯದವರಿಗೆ ಸ್ವಾಮೀಜಿ ಮಾಡಬೇಕು. ಬಸವತತ್ವ ಪಾಲಿಸಿ ನಿಜವಾದ ಬಸವತತ್ವ ಅನುಸರಿಸಿ ಎಂದು ಬಿ.ಕಾಂತರಾಜ್ ಕಿಡಿಕಾರಿದರು.

ಸರ್ಕಾರಕ್ಕೆ ಮನವಿ ಸಲ್ಲಿಸಲು ಭಕ್ತರ ಸಭೆ ನಿರ್ಧಾರ

ಪೊಕ್ಸೋ ಪ್ರಕರಣದಲ್ಲಿ ಜೈಲು ಸೇರಿರುವ ಮುರುಘಾ ಮಠದ ಹಾಲಿ ಪೀಠಾಧ್ಯಕ್ಷ ಶಿವಮೂರ್ತಿ ಮುರುಘಾ ಶರಣರನ್ನು ಪದಚ್ಯುತಿಗೊಳಿಸಿ, ಹೊಸ ಪೂರ್ಣಕಾಲೀನ ಪೀಠಾಧ್ಯಕ್ಷರನ್ನು ಸರ್ಕಾರವೇ ಆಯ್ಕೆ ಮಾಡಬೇಕು ಎಂದು ಮನವಿ ಸಲ್ಲಿಸಲು ಮಾಜಿ ಸಚಿವ ಏಕಾಂತಯ್ಯ ನೇತೃತ್ವದಲ್ಲಿ ಸೆ. 29 ರಂದು ನಡೆದಿದ್ದ ಸಭೆ ನಿರ್ಧರಿಸಿತ್ತು. ಪ್ರಸ್ತುತ ಮುರುಘಾ ಶರಣರು ನ್ಯಾಯಾಂಗ ಬಂಧನದಲ್ಲಿದ್ದಾರೆ. ಪೀಠಾಧ್ಯಕ್ಷರ ಕರ್ತವ್ಯ ನಿರ್ವಹಿಸಲು ಸಾಧ್ಯವಾಗದ ಸ್ಥಿತಿಯಿದೆ. ಮಠದ ಧಾರ್ಮಿಕ, ಆಡಳಿತಾತ್ಮಕ ಚಟುವಟಿಕೆಗೆ ಅಡೆತಡೆ ಆಗಿದೆ. ಇಂಥ ಸಂದರ್ಭದಲ್ಲಿ ಹೊಸ ಪೀಠಾಧ್ಯಕ್ಷರ ನೇಮಕ ಅಗತ್ಯವಾಗಿದೆ. ಸರ್ಕಾರವು ಇದನ್ನು ವಿಶೇಷ ಸಂದರ್ಭ ಎಂದು ಪರಿಗಣಿಸಿ ಕ್ರಮಕೈಗೊಳ್ಳಬೇಕು ಎಂದು ಸಭೆಯಲ್ಲಿ ಹಲವು ಅಭಿಪ್ರಾಯಪಟ್ಟಿದ್ದರು.

ಸಭೆಯ ನಂತರ ಮಾತನಾಡಿದ್ದ ಏಕಾಂತಯ್ಯ, ಸರ್ಕಾರ ಮತ್ತು ನ್ಯಾಯಾಲಯಕ್ಕೆ ಹೊಸ ಪೀಠಾಧ್ಯಕ್ಷೆ ಬಗ್ಗೆ ತೀರ್ಮಾನ ಮಾಡಲು ಅಧಿಕಾರವಿದೆ. ಕಾನೂನಾತ್ಮಕ ಅಥವಾ ಆಡಳಿತಾತ್ಮಕ ಕ್ರಮ ಕೈಗೊಳ್ಳಬೇಕು. ಮುಖ್ಯಮಂತ್ರಿಯನ್ನು ಮುಖತಃ ಭೇಟಿ ಮಾಡಿ ಪರಿಸ್ಥಿತಿ ವಿವರಿಸಲು ತೀರ್ಮಾನಿಸಿದ್ದೇವೆ. ಈಗಿನ ಪೀಠಾದ್ಯಕ್ಷರನ್ನು ವಜಾಗೊಳಿಸಿ ಹೊಸಬರನ್ನು ನೇಮಿಸಬೇಕು ಎಂದು ಆಗ್ರಹಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:23 am, Sat, 1 October 22

ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ