ಮುರುಘಾ ಮಠದ ಆವರಣದಲ್ಲಿನ ವಸತಿ ಶಾಲೆಯಲ್ಲಿ ಹೆಣ್ಣು ಮಗು ಪತ್ತೆ: ಟೀಸ್ಟಾಲ್ ಮಹಿಳೆ ಹೇಳಿದ್ದೇನು ನೋಡಿ

ಮುರುಘಾ ಮಠದ ಆವರಣದಲ್ಲಿರುವ ವಸತಿ ಶಾಲೆಯಲ್ಲಿ ಹೆಣ್ಣು ಮಗು ಪತ್ತೆಯಾಗಿದ್ದು, ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ಈ ಸಂಬಂಧ ಮಠದ ಎದುರಿನ ಟೀಸ್ಟಾಲ್ ಮಹಿಳೆ ಫೈರೋಜಾ ಹೇಳಿಕೆ ನೀಡಿದ್ದು, ಮಠದ ಮುಂದಿನ ರಸ್ತೆ ಬಳಿ ನಾಲ್ಕೂವರೆ ವರ್ಷದ ಹಿಂದೆ ನಾಲ್ಕು ದಿನದ ಮಗು ಪತ್ತೆ ಆಗಿತ್ತು ಎಂದಿದ್ದಾರೆ.

ಮುರುಘಾ ಮಠದ ಆವರಣದಲ್ಲಿನ ವಸತಿ ಶಾಲೆಯಲ್ಲಿ ಹೆಣ್ಣು ಮಗು ಪತ್ತೆ: ಟೀಸ್ಟಾಲ್ ಮಹಿಳೆ ಹೇಳಿದ್ದೇನು ನೋಡಿ
ಮುರುಘಾ ಮಠದ ಆವರಣದಲ್ಲಿನ ವಸತಿ ಶಾಲೆಯಲ್ಲಿ ಹೆಣ್ಣು ಮಗು ಪತ್ತೆ
Follow us
TV9 Web
| Updated By: Rakesh Nayak Manchi

Updated on:Oct 15, 2022 | 11:05 AM

ಚಿತ್ರದುರ್ಗ: ಮುರುಘಾ ಮಠದ ಆವರಣದಲ್ಲಿರುವ ವಸತಿ ಶಾಲೆಯಲ್ಲಿ ನಾಲ್ಕೂವರೆ ವರ್ಷದ ಚಿಗುರು ಎಂಬ ಹೆಸರಿನ ಹೆಣ್ಣು ಮಗು ಪತ್ತೆಯಾಗಿದ್ದು, ಈ ಕುರಿತಾಗಿ ಅನೇಕ ಅನುಮಾನಗಳು ಹುಟ್ಟುಕೊಂಡಿವೆ. ಈ ಬಗ್ಗೆ ಹೇಳಿಕೆ ನೀಡಿದ ಮುರುಘಾಮಠದ ಎದುರಿನ ಟೀಸ್ಟಾಲ್ ಮಹಿಳೆ ಫೈರೋಜಾ, ಮಠದ ಮುಂದಿನ ರಸ್ತೆ ಬಳಿ ನಾಲ್ಕೂವರೆ ವರ್ಷದ ಹಿಂದೆ ನಾಲ್ಕು ದಿನದ ಮಗು ಪತ್ತೆ ಆಗಿತ್ತು. ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕೆ ಹೋಗಿ ನೋಡಿದಾಗ ಮಗುವನ್ನು ಮಠಕ್ಕೆ್ ನೀಡುವಂತೆ ಬರೆದ ಪತ್ರ ಸಿಕ್ಕತು. ಪುಟ್ಟ ಮಗುವಿದ್ದ ಬಟ್ಟೆಯಲ್ಲಿ ಇರುವೆ ಸೇರಿಕೊಂಡಿದ್ದವು. ಅದನ್ನು ತಂದು ಸ್ನಾನ ಮಾಡಿಸಿ ಹಾಲು ಕುಡಿಸಿದ್ದೆ. ಅಷ್ಟರಲ್ಲೇ ಮಠದ ಸೆಕುರಿಟಿ ಪತ್ರವನ್ನು ಒಯ್ದು ಮುರುಘಾಶ್ರೀಗೆ ತೋರಿಸಿದ್ದರು.. ಬಳಿಕ ಮಠದ ಭದ್ರತಾ ಸಿಬ್ಬಂದಿ ಬಂದು ಮಗುವನ್ನು ತೆಗೆದುಕೊಂಡು ಹೋದರು. ಪಕ್ಕದ ಗ್ರಾಮದವರು ಬಂದು ಮಗು ನಮಗೆ ಕೊಡಬೇಕಿತ್ತು ಎಂದು ಕೇಳಿದ್ದರು. ನಾನು ಮಠಕ್ಕೆ ಹೋಗಿ ಮುರುಘಾಶ್ರೀಗೆ ಕೇಳಿ ಎಂದು ಹೇಳಿದ್ದೆ. ಮಠಕ್ಕೆ ಹೋದವರಿಗೆ ನಿಮ್ಮ ಆಸ್ತಿ ಮಗುವಿನ ಹೆಸರಿಗೆ ಮಾಡಿ ಎಂದು ಮುರುಘಾಶ್ರೀ ಹೇಳಿದ್ದರು. ಆಗಿನಿಂದ ಮಗು ಮಠದಲ್ಲಿ ಚೆನ್ನಾಗಿಯೇ ಬೆಳೆಯುತ್ತಿದೆ. ಆಗಾಗ ಮಗು ಕಂಡು ನಾನು ಮುದ್ದಾಡಿದ್ದೇನೆ ಎಂದು ಹೇಳಿದ್ದಾರೆ.

3ನೇ ಆರೋಪಿಗೆ ಮಧ್ಯಂತರ ಜಾಮೀನು

ಲೈಂಗಿಕ ಕಿರುಕುಳ ಪ್ರಕರಣದಲ್ಲಿ 3ನೇ ಆರೋಪಿಯಾಗಿರುವ ಮಠದ ಉತ್ತರಾಧಿಕಾರಿ ಮರಿಸ್ವಾಮಿಗೆ ಬಾಲ ನ್ಯಾಯ ಮಂಡಳಿಯಿಂದ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಪ್ರಕರಣ ದಾಖಲಾಗುತ್ತಿದ್ದಂತೆ ನಾಪತ್ತೆ ಆಗಿದ್ದ ಮರಿಸ್ವಾಮಿ ಪೊಲೀಸರ ಕೈಗೆ ಸಿಗದೆ ಶುಕ್ರವಾರ ಬಾಲ ನ್ಯಾಯಮಂಡಳಿಗೆ ಶರಣಾಗಿದ್ದ. ಆದರೆ ಇಂದು ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಅದಾಗ್ಯೂ ಅಕ್ಟೋಬರ್ 13ಕ್ಕೆ ಮತ್ತೊಂದು ದೂರು ದಾಖಲಾಗಿತ್ತು. ಈ ಪ್ರಕರಣದಲ್ಲೂ ಮರಿಸ್ವಾಮಿ 3ನೇ ಆರೋಪಿಯಾಗಿದ್ದಾನೆ. ಹೀಗಾಗಿ ಒಂದನೇ ಮತ್ತು ಎರಡನೇ ಪ್ರಕರಣದಲ್ಲಿ ಮರಿಸ್ವಾಮಿಯನ್ನು ಬಂಧಿಸುವಲ್ಲಿ ಚಿತ್ರದುರ್ಗ ಪೊಲೀಸರು ವಿಫಲರಾಗಿದ್ದಾರೆ.

ಒಂದನೇ ಪ್ರಕರಣದಲ್ಲಿ A1 ಮುರುಘಾಶ್ರೀ, A2 ಲೇಡಿ ವಾರ್ಡನ್ ಮಾತ್ರ ಬಂಧನವಾಗಿದೆ. 2ನೇ ಪ್ರಕರಣದಲ್ಲಿ  7 ಮಂದಿ ಆರೋಪಿಗಳ ಪೈಕಿ A1 ಮುರುಘಾಶ್ರೀ, A2ಲೇಡಿ ವಾರ್ಡನ್ ನ್ಯಾಯಂಗ ಬಂಧನದಲ್ಲಿದ್ದಾರೆ. ಉಳಿದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ.

ಲೈಂಗಿಕ ದೌರ್ಜನ್ಯ ನಡೆದಿಲ್ಲ

ಮುರುಘಾ ಶ್ರೀಗಳ ವಿರುದ್ಧ ಶುಕ್ರವಾರ ಮತ್ತೊಂದು ದೂರು ದಾಖಲಾಗಿತ್ತು. ತನ್ನ ಇಬ್ಬರು ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಆರೋಪಿಸಿ ಮಠದ ಅಡುಗೆ ಸಹಾಯಕಿ ದೂರು ದಾಖಲಿಸಿದ್ದರು. ಈ ಬಗ್ಗೆ ಸಿಡಬ್ಲೂಸಿ ಆಪ್ತ ಸಮಾಲೋಚನೆ ನಡೆಸಿದಾಗ ಲೈಂಗಿಕ ದೌರ್ಜನ್ಯ ನಡೆದಿಲ್ಲ ಎಂದು ಮಾಹಿತಿ ತಿಳಿದುಬಂದಿದೆ. ಈ ಬಗ್ಗೆ ಟಿವಿ9ಗೆ ಸಿಡಬ್ಲೂಸಿ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಮಹಿಳೆ ನೀಡಿದ ದೂರಿನಲ್ಲಿ ಒಟ್ಟು ನಾಲ್ವರು ಬಾಲಕಿಯರ ಬಗ್ಗೆ ಪ್ರಸ್ತಾಪವಾಗಿತ್ತು. ಹೀಗಾಗಿ ನಮ್ಮ ಮಕ್ಕಳ ಬಗ್ಗೆ ದೂರು ನೀಡಲು ಅಡುಗೆ ಸಹಾಯಕಿ ಯಾರು ಎಂದು ಸಿಡಬ್ಲೂಸಿ ಅಧಿಕಾರಿಗಳಿಗೆ ಪೋಷಕರ ಪ್ರಶ್ನಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಹೊಸ ಪೀಠಾದ್ಯಕ್ಷರ ಪಟ್ಟಕ್ಕೆ ಚಿಂತನೆ

ಚಿತ್ರದುರ್ಗದ ಮುರುಘಾಶ್ರೀ ವಿರುದ್ಧ ಫೋಕ್ಸೋ ಪ್ರಕರಣ ದಾಖಲಾದ ಹಿನ್ನೆಲೆ ಮುರುಘಾಶ್ರೀ ಪೀಠ ತ್ಯಾಗಕ್ಕೆ ಒತ್ತಡ ಹೆಚ್ಚಾಗುತ್ತಿದೆ. ವೀರಶೈವ ಲಿಂಗಾಯತ ಸಮುದಾಯದ ಮುಖಂಡರು ಶುಕ್ರವಾರ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗಿ ಸರ್ಕಾರದಿಂದ ಶ್ರೀಗಳನ್ನು ವಜಾಗೊಳಿಸಿ ಹೊಸ ಪೀಠಾದ್ಯಕ್ಷರ ನೇಮಕಕ್ಕೆ ಮನವಿ ಮಾಡಿದ್ದಾರೆ. ಅಲ್ಲದೆ ವೀರಶೈವ ಲಿಂಗಾಯತ ಸಮಾಜದಿಂದ ಹೊಸ ಪೀಠಾದ್ಯಕ್ಷರ ಪಟ್ಟಕ್ಕೆ ಚಿಂತನೆಯೂ ನಡೆಯುತ್ತಿದೆ. ಬೆಂಗಳೂರಿನ ಸರ್ಪಭೂಷಣ ಮಠದ ಮಲ್ಲಿಕಾರ್ಜುನ ದೇವರು, ಹೆಬ್ಬಾಳ ಮಠದ ಮಹಾಂತ ರುದ್ರೇಶ್ವರ ಶ್ರೀ, ದಾವಣಗೆರೆ ವಿರಕ್ತ ಮಠದ ಬಸವಪ್ರಭು ಶ್ರೀ,ಯಾದಗಿರಿ ಜಿಲ್ಲೆ ಗುರುಮಠಕಲ್ ಮಠದ ಶಾಂತವೀರ ಶ್ರೀ, ಬೆಳಗಾವಿಯ ಅಥಣಿ ಮಠದ ಶಿವಬಸವ ಶ್ರೀ, ಇಳಕಲ್ ಮಠದ ಸಿದ್ಧರಾಮ ಶ್ರೀ ಸೇರಿ ಅನೇಕರ ಹೆಸರು ಮುನ್ನೆಲೆಗೆ ಬರುತ್ತಿವೆ.

ಮುರುಘಾಮಠದಲ್ಲಿದ್ದ 47 ಫೋಟೋಗಳು ಕಳ್ಳತನ

ಚಿತ್ರದುರ್ಗದ ಮುರುಘಾಮಠದ ಮುರುಘಾ ಸ್ವಾಮೀಜಿ ಗಣ್ಯರ ಜತೆಗಿದ್ದ ಫೋಟೋ ಕಳ್ಳತನವಾಗಿವೆ. ಅ.5ರಂದು ಮುರುಘಾಮಠದಲ್ಲಿದ್ದ 47 ಫೋಟೋಗಳು ಕಳ್ಳತನವಾಗಿತ್ತು. ಈ ಹಿನ್ನೆಲೆ ಮಠದ ಬಳಿ ಸಿಸಿ ಕ್ಯಾಮರಾ ಅಳವಡಿಕೆ ಮಾಡಲಾಗಿದೆ. ಗಲಾಟೆ, ಗದ್ದಲ, ಕಳ್ಳತನ ಸಾಧ್ಯತೆ ಹಿನ್ನೆಲೆ ಭದ್ರತೆ ದೃಷ್ಟಿಯಿಂದ ಮಠದ ಮುಖ್ಯ ದ್ವಾರ, ಆವರಣದಲ್ಲಿ ಸಿಸಿ ಕ್ಯಾಮರಾ ಅಳವಡಿಕೆ ಮಾಡಲಾಗಿದೆ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:01 am, Sat, 15 October 22

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ