13 ಬಜೆಟ್ ಮಂಡಿಸಿರುವ ಸಿದ್ದರಾಮಯ್ಯ ಅವರೇ ಬಿಟ್ಕಾಯಿನ್ ಅಂದ್ರೇನು, ವ್ಯವಹಾರ ಹೇಗೆ ನಡೆಯುತ್ತೆ ತಿಳಿಸಿ -ಸಂಸದ ಪ್ರತಾಪ್ ಸವಾಲು
Bitcoin: ‘ಹದಿಮೂರು ಬಾರಿ ರಾಜ್ಯ ಬಜೆಟ್ ಮಂಡಿಸಿರುವ ಹಿರಿಯ ಅರ್ಥಶಾಸ್ತ್ರಜ್ಞ ಸಿದ್ದರಾಮಯ್ಯ ಅವರೇ ಬಿಟ್ ಕಾಯಿನ್ ಅಂದ್ರೇನು, ಅದರ ವ್ಯವಹಾರ ಹೇಗೆ ನಡೆಯುತ್ತೆ ಎಂಬುದನ್ನು ಮೊದಲು ತಿಳಿಸಿ’ ಎಂದು ಸಂಸದ ಪ್ರತಾಪ್ ಸಿಂಹ ಸವಾಲು ಹಾಕಿದ್ದಾರೆ.
ಮೈಸೂರು: ರಾಜ್ಯದಲ್ಲಿ ಬಿಟ್ಕಾಯಿನ್ ವ್ಯವಹಾರ ಇತ್ತೀಚೆಗೆ ಭಾರೀ ಸದ್ದು ಮಾಡುತ್ತಿದೆ. ಅದರಲ್ಲೂ ಆಡಳಿತಾರೂಢ ಬಿಜೆಪಿ ಮತ್ತು ವಿಪಕ್ಷವಾದ ಕಾಂಗ್ರೆಸ್ ನಾಯಕರುಗಳ ಮಧ್ಯೆ ವಾಗ್ಬಾಣಗಳ ಸುರಿಮಳೆಗೆ ಕಾರಣವಾಗಿದೆ. ಈ ಮಧ್ಯೆ, ‘ಹದಿಮೂರು ಬಾರಿ ರಾಜ್ಯ ಬಜೆಟ್ ಮಂಡಿಸಿರುವ ಹಿರಿಯ ಅರ್ಥಶಾಸ್ತ್ರಜ್ಞ ಸಿದ್ದರಾಮಯ್ಯ ಅವರೇ ಬಿಟ್ ಕಾಯಿನ್ ಅಂದ್ರೇನು, ಅದರ ವ್ಯವಹಾರ ಹೇಗೆ ನಡೆಯುತ್ತೆ ಎಂಬುದನ್ನು ಮೊದಲು ತಿಳಿಸಿ’ ಎಂದು ಸಂಸದ ಪ್ರತಾಪ್ ಸಿಂಹ ಸವಾಲು ಹಾಕಿದ್ದಾರೆ.
ಬಿಟ್ ಕಾಯಿನ್ ಹಗರಣದ ಚಾರ್ಜ್‌ಶೀಟ್‌ನಲ್ಲಿ ಕಾಂಗ್ರೆಸ್ ನಾಯಕರ ಮಕ್ಕಳ ಹೆಸರು ಉಲ್ಲೇಖವಾಗಿದೆ. ಬಿಜೆಪಿ ವಿರುದ್ಧ ಆರೋಪಿಸಿ ಕಾಂಗ್ರೆಸ್‌ನವರೇಕೆ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ? ಅವರಿವರ ಹೆಸರನ್ನು ಯಾಕೆ ತೇಲಿ ಬಿಡುತ್ತಿದ್ದೀರಾ? ಬಿಟ್ ಕಾಯಿನ್ ಅಂದ್ರೇನು, ಅದರ ವ್ಯವಹಾರ ಹೇಗೆ? ಇದರ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ವಿವರಿಸಲಿ. ಅಸಲಿಗೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೇ ಇದು ಬೆಳಕಿಗೆ ಬಂದಿತ್ತು ಎಂದು ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಸಿಎಂ ಬೊಮ್ಮಾಯಿ ಒನಕೆ ಓಬ್ಬವ ಜಯಂತಿ ಮಾಡ್ತಿದ್ದಾರೆ. ಸಿದ್ದರಾಮಯ್ಯನವರೇ ನೀಮ್ಮ ಸಾಧನೆ ಏನು ಗೊತ್ತಾ?
ಸಿಎಂ ಬೊಮ್ಮಾಯಿ ಒನಕೆ ಓಬ್ಬವ ಜಯಂತಿ ಮಾಡ್ತಿದ್ದಾರೆ. ಸಿದ್ದರಾಮಯ್ಯನವರೇ ನೀವು ಮಾಡಿದ ಸಾಧನೆ ಏನು? ವೀರ ವನಿತೆ ಓಬವ್ವನನ್ನ ಹೈದರಾಲಿ ಮೋಸದಿಂದ ಕೊಂದ. ಹೈದರಾಲಿಯ ಮಗನ ಜಯಂತಿಯನ್ನ ನೀವು ಮಾಡಿದ್ರಿ! ಮದಕರಿ ನಾಯಕನಿಗೆ ವಿಷ ಹಾಕಿ ಕೊಂದ, ಮೈಸೂರು ಮಹಾರಾಜರಿಗೆ ಮೋಸ ಮಾಡಿದ ಟಿಪ್ಪುವಿನ ಜಯಂತಿ ಮಾಡಿದ್ದು ನಿಮ್ಮ ಸಾಧನೆ. ನಿಮ್ಮಿಂದ ಸಿಎಂ ಅಭಿವೃದ್ಧಿ ಪಾಠ ಕಲಿಯಬೇಕಾಗಿಲ್ಲ ಎಂದು ಮೈಸೂರಿನಲ್ಲಿ ಬಿಜೆಪಿ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದರು.
ಸೋಲಿಸಿದವರನ್ನೇ ಹೊಗಳುವ ಪರಿಸ್ಥಿತಿ ನಿಮಗೆ ಬಂದಿದೆ. ಬೈಎಲೆಕ್ಷನ್ ಸೋಲಿಗೆ ಬೇರೆ ಬೇರೆ ಕಾರಣವಿರುತ್ತವೆ. ರಾಜಕೀಯದ ಏಟು, ಒಳ ಏಟು, ತಂತ್ರ ಎಲ್ಲವೂ ಇರುತ್ತೆ. ನಂಜನಗೂಡು ಮತ್ತು ಗುಂಡ್ಲುಪೇಟೆ ಬೈಎಲೆಕ್ಷನ್ ಗೆದ್ದ ಕಾಂಗ್ರೆಸ್ ಮುಂದಿನ ಚುನಾವಣೆಯಲ್ಲಿ ಏನಾಯ್ತು? ಏನಾದ್ರಿ? ಬೊಮ್ಮಾಯಿ 2023ಕ್ಕೂ ಮುಖ್ಯಮಂತ್ರಿ ಆಗೋದು ಖಚಿತ. ಬೊಮ್ಮಾಯಿ ಮೇಲೆ ಇಲ್ಲಸಲ್ಲದ ಆರೋಪ ಮಾಡ್ತಿದ್ದಾರೆ. ಮೊದಲು ಈ ರೀತಿ ತಂತ್ರಗಾರಿಕೆಯನ್ನ ಮಾಡೋದು ಬಿಡಿ ಎಂದು ಸಿದ್ದರಾಮಯ್ಯ ವಿರುದ್ಧ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದರು.
Also Read: ಬಿಟ್ಕಾಯಿನ್ ಅಂದ್ರೆ ಏನು ಅಂತಾನೆ ನನಗೂ ಗೊತ್ತಿಲ್ಲ, ನನ್ನ ಮಗ ದರ್ಶನನಿಗೂ ಗೊತ್ತಿಲ್ಲ: ರುದ್ರಪ್ಪ ಲಮಾಣಿ
(mysore mp pratap simha challenges siddaramaiah to describe Bitcoin transaction in detail)
Published On - 11:24 am, Thu, 11 November 21