ರಾಜೀನಾಮೆ ನೀಡಿರುವ ಮೈಸೂರು ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಪರ ಜನಪ್ರತಿನಿಧಿಗಳ ಬ್ಯಾಟಿಂಗ್

ರಾಜೀನಾಮೆ ನೀಡಿರುವ ಮೈಸೂರು ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಪರ ಜನಪ್ರತಿನಿಧಿಗಳ ಬ್ಯಾಟಿಂಗ್
ಮೈಸೂರು ಪಾಲಿಕೆ ಆಯುಕ್ತೆ ಶಿಲ್ಪಾನಾಗ್

ಮಹಾನಗರ ಪಾಲಿಕೆಯ ಆಯುಕ್ತೆ ಶಿಲ್ಪಾ ನಾಗ್ ರಾಜಿನಾಮೆ ವಾಪಸ್ಸು ಪಡೆಯಬೇಕೆಂದು ಆಗ್ರಹಿಸಿ ಮೈಸೂರು ನಗರದ ಜನಪ್ರತಿನಿಧಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಹಾಕುತ್ತಿದ್ದಾರೆ. ಪತ್ರಿಕಾ ಹೇಳಿಕೆಗಳನ್ನು ಬಿಡುಗಡೆ ಮಾಡುವುದರ ಜೊತೆಗೆ ಮುಖ್ಯಮಂತ್ರಿ, ಪ್ರಧಾನ ಮಂತ್ರಿಗೂ ಪತ್ರ ಬರೆಯುತ್ತಿದ್ದಾರೆ.

TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

Jun 03, 2021 | 10:19 PM

ಮೈಸೂರು: ಮಹಾನಗರ ಪಾಲಿಕೆಯ ಆಯುಕ್ತೆ ಶಿಲ್ಪಾ ನಾಗ್ ರಾಜಿನಾಮೆ ವಾಪಸ್ಸು ಪಡೆಯಬೇಕೆಂದು ಆಗ್ರಹಿಸಿ ಮೈಸೂರು ನಗರದ ಜನಪ್ರತಿನಿಧಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಹಾಕುತ್ತಿದ್ದಾರೆ. ಪತ್ರಿಕಾ ಹೇಳಿಕೆಗಳನ್ನು ಬಿಡುಗಡೆ ಮಾಡುವುದರ ಜೊತೆಗೆ ಮುಖ್ಯಮಂತ್ರಿ, ಪ್ರಧಾನ ಮಂತ್ರಿಗೂ ಪತ್ರ ಬರೆಯುತ್ತಿದ್ದಾರೆ. ವಾರ್ಡ್​ ನಂ 28ರ ಸದಸ್ಯೆ ಡಾ. ಅಶ್ವಿನಿ ಶರತ್‌ ಮನವಿ ಮಾಡಿದ್ದಾರೆ. ಶಿಲ್ಪಾನಾಗ್​ ರಾಜೀನಾಮೆ ಹಿಂಪಡೆಯಲು ಎಲ್ಲರೂ ಒತ್ತಾಯಿಸೋಣ ಎಂದು ಹೇಳಿರುವ ಅವರು ಸತ್ಯಮೇವ ಜಯತೇ ಫಲಕ ಹಿಡಿದ ವಿಡಿಯೊ ಪೋಸ್ಟ್ ಮಾಡಿದ್ದಾರೆ.

ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಮೈಸೂರು ಪಾಲಿಕೆ‌ ಶಿಲ್ಪಾನಾಗ್ ಪರ ಮೈಸೂರು ಮುಡಾ ಅಧ್ಯಕ್ಷ ರಾಜೀವ್ ಮಾತನಾಡಿದ್ದಾರೆ. ‘ಶಿಲ್ಪಾನಾಗ್ ದಕ್ಷ ಅಧಿಕಾರಿಯಾಗಿದ್ದರು. ಕೋವಿಡ್ ಮಿತ್ರ, ರಿವರ್ಸ್ ಐಸೋಲೇಷನ್, ಕೋವಿಡ್ ವಾರ್‌ರೂಂ ಹೀಗೆ ಹಲವು ಕಾರ್ಯಕ್ರಮ ರೂಪಿಸಿದ್ದರು’ ಎಂದು ರಾಜೀವ್ ಹೇಳಿದ್ದಾರೆ.

‘ನಾನು ಐಎಎಸ್ ಅಧಿಕಾರಿ ಎನ್ನುವ ಭ್ರಮೆ ಶಿಲ್ಪಾನಾಗ್ ಅವರಿಗೆ ಇರಲಿಲ್ಲ. ಸಾಮಾನ್ಯರಂತೆ ಪ್ರತಿಯೊಂದನ್ನೂ ಅವಲೋಕಿಸಿ ಕೆಲಸ ಮಾಡುತ್ತಿದ್ದರು. ಅವರ ರಾಜೀನಾಮೆಯನ್ನು ಅಂಗೀಕರಿಸಬಾರದು. ಶಿಲ್ಪಾನಾಗ್ ಅವರು ಸಹ ತಮ್ಮ ನಿರ್ಧಾರದಿಂದ ಹಿಂದೆ ಸರಿಯಬೇಕು’ ಎಂದು ಮುಡಾ ಅಧ್ಯಕ್ಷ ರಾಜೀವ್ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ.

ಪ್ರಧಾನಿಗೆ ಎಸ್​.ಎ.ರಾಮದಾಸ್ ಪತ್ರ ಮೈಸೂರು ನಗರಪಾಲಿಕೆ ಆಯುಕ್ತೆ ಶಿಲ್ಪಾನಾಗ್ ರಾಜೀನಾಮೆ ಕುರಿತು ಪ್ರಧಾನಿ ಮೋದಿಗೆ ಶಾಸಕ ಎಸ್.ಎ.ರಾಮದಾಸ್​ ಪತ್ರ ಬರೆದಿದ್ದಾರೆ. ಶಿಲ್ಪಾನಾಗ್​ ಅವರ ರಾಜೀನಾಮೆ ನೀಡಬಾರದು ಎಂದು ಒತ್ತಾಯಿಸಿ, ಶಿಲ್ಪಾನಾಗ್​ರವರ ಕಾರ್ಯವೈಖರಿಯನ್ನು ತಮ್ಮ ಪತ್ರದಲ್ಲಿ ವಿವರಿಸಿದ್ದಾರೆ.

‘ಮೈಸೂರಿಗೆ ಬಂದ ಮೇಲೆ ಶಿಲ್ಪಾನಾಗ್​ ಒಳ್ಳೆ ಕೆಲಸ ಮಾಡಿದ್ದಾರೆ’ ಎಂದು ಹೇಳಿರುವ ಅವರು, ಶಿಲ್ಪಾನಾಗ್​ ಜಾರಿಗೆ ತಂದ ಹೊಸ ಯೋಜನೆಗಳ ಮಾಹಿತಿ ಸಹಿತ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮುಖ್ಯ ಕಾರ್ಯದರ್ಶಿ ರವಿಕುಮಾರ್​ ಅವರಿಗೆ ಪತ್ರದ ಪ್ರತಿ ರವಾನಿಸಿದ್ದಾರೆ.

(Mysore Representative Reporting Corporation Commissioner Shilpa Nag)

ಇದನ್ನೂ ಓದಿ: ಮೈಸೂರು ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಪರ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ

ಇದನ್ನೂ ಓದಿ: ರೋಹಿಣಿ ಸಿಂಧೂರಿ ಅಂತಹ ದುರಹಂಕಾರಿ ಜಿಲ್ಲಾಧಿಕಾರಿ ಯಾರಿಗೂ ಸಿಗುವುದು ಬೇಡ -ಪಾಲಿಕೆ ಆಯುಕ್ತೆ ಶಿಲ್ಪಾನಾಗ್, ಕೆಲಸಕ್ಕೆ ಗುಡ್​ಬೈ

Follow us on

Most Read Stories

Click on your DTH Provider to Add TV9 Kannada