AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

700 ಕಿ.ಮೀ.ದೂರದ ಊರಿಗೆ ವಿಶೇಷಚೇತನನನ್ನು ಕಳುಹಿಸಿಕೊಟ್ಟ ತಹಶೀಲ್ದಾರ್; ಲಾಕ್​ಡೌನ್ ನಡುವೆಯೂ ಮನವಿಗೆ ಸ್ಪಂದನೆ

ನಂಜನಗೂಡು ತಾಲೂಕಿನ ನಿರಾಶ್ರಿತರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದ ನೀಲಕಂಠ ಅವರು ತಮ್ಮ ಹುಟ್ಟೂರು ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿಗೆ ಕಳಿಸಿಕೊಡುವಂತೆ ಮನವಿ ಮಾಡಿದ್ದಾರೆ. ಹೀಗಾಗಿ ಮೀರಾ ಕಂಪನಿ ಸಹಾಯದಿಂದ ಕಾರು ಬುಕ್ ಮಾಡಿ ತಹಶೀಲ್ದಾರ್ ಮಸ್ಕಿಗೆ ಈ ವಿಶೇಷಚೇತನ ವ್ಯಕ್ತಿಯನ್ನು ಕಳುಹಿಸಿಕೊಟ್ಟಿದ್ದಾರೆ.

700 ಕಿ.ಮೀ.ದೂರದ ಊರಿಗೆ ವಿಶೇಷಚೇತನನನ್ನು ಕಳುಹಿಸಿಕೊಟ್ಟ ತಹಶೀಲ್ದಾರ್; ಲಾಕ್​ಡೌನ್ ನಡುವೆಯೂ ಮನವಿಗೆ ಸ್ಪಂದನೆ
700 ಕಿ.ಮೀ.ದೂರದ ಊರಿಗೆ ವಿಶೇಷಚೇತನ ವ್ಯಕ್ತಿಯನ್ನು ಕಳುಹಿಸಿಕೊಟ್ಟ ತಹಶೀಲ್ದಾರ್
TV9 Web
| Updated By: preethi shettigar|

Updated on:Jun 04, 2021 | 9:51 AM

Share

ಮೈಸೂರು: ಲಾಕ್​ಡೌನ್​ನಿಂದಾಗಿ ಒಂದು ಊರಿನಿಂದ ಮತ್ತೊಂದು ಊರಿಗೆ ಈಗ ಹೋಗುವುದು ಅಸಾಧ್ಯವಾದ ಮಾತು. ಆದರೆ ಮೈಸೂರು ಜಿಲ್ಲೆಯಲ್ಲಿದ್ದ ವಿಶೇಷಚೇತನರೊಬ್ಬರು ತಮ್ಮ ಹುಟ್ಟೂರಿಗೆ ಕಳುಹಿಸಿಕೊಡುವಂತೆ ತಹಶೀಲ್ದಾರರಿಗೆ ಮನವಿ ಮಾಡಿದ್ದಾರೆ. ಮನವಿಗೆ ಸ್ಪಂದಿಸಿದ ತಹಶೀಲ್ದಾರ್ ಮೋಹನ್ ಕುಮಾರಿ, 700 ಕಿ.ಮೀ.ದೂರದ ಊರಿಗೆ ವಿಶೇಷಚೇತನರೊಬ್ಬರನ್ನು ಕಳುಹಿಸಿಕೊಟ್ಟಿದ್ದಾರೆ.

ನಂಜನಗೂಡು ತಾಲೂಕಿನ ನಿರಾಶ್ರಿತರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದ ನೀಲಕಂಠ ಅವರು ತಮ್ಮ ಹುಟ್ಟೂರು ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿಗೆ ಕಳಿಸಿಕೊಡುವಂತೆ ಮನವಿ ಮಾಡಿದ್ದಾರೆ. ಹೀಗಾಗಿ ಮೀರಾ ಕಂಪನಿ ಸಹಾಯದಿಂದ ಕಾರು ಬುಕ್ ಮಾಡಿ ತಹಶೀಲ್ದಾರ್ ಮಸ್ಕಿಗೆ ಈ ವಿಶೇಷಚೇತನ ವ್ಯಕ್ತಿಯನ್ನು ಕಳುಹಿಸಿಕೊಟ್ಟಿದ್ದಾರೆ.

ನಿವೃತ್ತ ಚಾಲಕನನ್ನು ಕೂರಿಸಿಕೊಂಡು ಕಾರು ಚಾಲನೆ ಮೇ 31 ಸರ್ಕಾರದ ನಾನಾ ಇಲಾಖೆಗಳಲ್ಲಿ ಅನೇಕ ಅಧಿಕಾರಿಗಳು, ಸಿಬ್ಬಂದಿಗೆ ತಮ್ಮ ಸೇವಾವಧಿಯ ಕೊನೆಯ ದಿನ. ಅದು ಇಲಾಖೆ ಮತ್ತು ಸಿಬ್ಬಂದಿಗೆ ಅತ್ಯಂತ ಮಹತ್ವದ ದಿನ. ಅನೇಕ ನೆನಪುಗಳ ಮೆರವಣಿಗೆಯಾಗುವ ದಿನ ಅದು. ಯಾವುದೇ ಸಿಬ್ಬಂದಿಗೆ ಆ ದಿನ ಅತ್ಯಂತ ಮಹತ್ವದ, ಹೃದಯಸ್ಪರ್ಶಿ ದಿನವಾಗಲಿ ಎಂದು ಬಯಸುವುದು ಸಹಜ. ಅದಕ್ಕೆ ತಕ್ಕಂತೆ ನಿನ್ನೆ ಇಲ್ಲೊಂದು ಹೃದಯಸ್ಪರ್ಶಿ ಘಟನೆ ನಡೆದಿದೆ.

ತಮ್ಮ ವಾಹನದ ಚಾಲಕ ನಿವೃತ್ತಿಯಾದ ಹಿನ್ನೆಲೆಯಲ್ಲಿ ಕೊಪ್ಪಳದ ತಹಶೀಲ್ದಾರ್ ವಿಶೇಷ ಗೌರವದೊಂದಿಗೆ ಆತನಿಗೆ ಬೀಳ್ಕೊಡಿಗೆ ಕೊಟ್ಟಿದ್ದಾರೆ. ಕೊಪ್ಪಳ ಜಿಲ್ಲೆ ಕುಷ್ಟಗಿ ತಹಶೀಲ್ದಾರ್ ಸಿದ್ದೇಶ್ ನಿವೃತ್ತಿಯಾದ ಚಾಲಕನನ್ನು ವಾಹನದಲ್ಲಿ ಕೂರಿಸಿಕೊಂಡು ವಾಹನ ಚಲಾಯಿಸುವ ಮೂಲಕ ಹೃದಯಸ್ಪರ್ಶಿ ಕೊಡುಗೆ ನೀಡಿದ್ದಾರೆ.

ಇಲಾಖೆಯ ವಾಹನದಲ್ಲಿ ನಿವೃತ್ತ ಚಾಲಕ ರಾಜೇಸಾಬ್ ಅವರನ್ನು ಕೂರಿಸಿಕೊಂಡು ಸ್ವತಃ ತಹಶೀಲ್ದಾರ್ ಸಿದ್ದೇಶ್ ಅವರು ಚಾಲಕನ ಮನೆಯವರೆಗೂ ತೆರಳಿ, ಡ್ರಾಪ್ ಮಾಡಿದ್ದಾರೆ. ತಾನೇ ವಾಹನ ಡ್ರೈವ್ ಮಾಡಿ ನಿವೃತ್ತ ಚಾಲಕನಿಗೆ ಅಪರೂಪದ ಕೊಡುಗೆ ನೀಡಿದ್ದಾರೆ. ಸದ್ಯ ತಹಶೀಲ್ದಾರ್ ಸಿದ್ದೇಶ್ ವಾಹನ ಚಲಾಯಿಸೋ ದೃಶ್ಯಗಳು ವೈರಲ್ ಆಗಿವೆ.

ಇದನ್ನೂ ಓದಿ:

ನಿವೃತ್ತ ಚಾಲಕನನ್ನು ಕೂರಿಸಿಕೊಂಡು ಕಾರು ಚಾಲನೆ; ಹೃದಯಸ್ಪರ್ಶಿ ಕೊಡುಗೆ ನೀಡಿದ ಕೊಪ್ಪಳ ತಹಶೀಲ್ದಾರ್

ವ್ಯಕ್ತಿ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದ 18 ಜನರಿಗೆ ಸೋಂಕು, ವಲಸಿಗರಿಂದಲೇ ಕೊರೊನಾ ಹರಡುತ್ತಿದೆ ಎಂಬ ಶಂಕೆ ವ್ಯಕ್ತಪಡಿಸಿದ ತಹಶೀಲ್ದಾರ್

Published On - 9:49 am, Fri, 4 June 21

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ