Mysore Zoo: ಉಕ್ರೇನ್​ನಲ್ಲಿದ್ದ ಬ್ಲ್ಯಾಕ್​ ಪ್ಯಾಂಥರ್, ಜಾಗ್ವಾರ್​ಗೆ ಮೈಸೂರು ಮೃಗಾಲಯದಲ್ಲಿ ಆಶ್ರಯ

ಮೃಗಾಲಯದಲ್ಲಿ ಇರಿಸಿ ಈ ಪ್ರಾಣಿಗಳನ್ನು ಸಾಕಲು ಅವಕಾಶ ಕೊಡಬೇಕು ಎಂಬ ಅವರ ಕೋರಿಕೆಗೆ ಕೇಂದ್ರ ಅರಣ್ಯ ಇಲಾಖೆ ಸಮ್ಮತಿಸಿದೆ.

Mysore Zoo: ಉಕ್ರೇನ್​ನಲ್ಲಿದ್ದ ಬ್ಲ್ಯಾಕ್​ ಪ್ಯಾಂಥರ್, ಜಾಗ್ವಾರ್​ಗೆ ಮೈಸೂರು ಮೃಗಾಲಯದಲ್ಲಿ ಆಶ್ರಯ
ಬ್ಲ್ಯಾಕ್ ಪ್ಯಾಂಥರ್ (ಸಂಗ್ರಹ ಚಿತ್ರ)
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:May 10, 2022 | 2:40 PM

ಮೈಸೂರು: ರಷ್ಯಾ ದಾಳಿಯಿಂದ ಸಂಕಷ್ಟ ಎದುರಿಸುತ್ತಿರುವ ಉಕ್ರೇನ್​ ದೇಶದಿಂದ 50 ಲಕ್ಷಕ್ಕೂ ಹೆಚ್ಚು ಜನರು ಹೊರಗೆ ಬಂದಿದ್ದಾರೆ. ದೇಶ ತೊರೆಯಲೇಬೇಕಾದ ಅನಿವಾರ್ಯ ಪರಿಸ್ಥಿತಿಯಲ್ಲಿರುವ ಸಾಕಷ್ಟು ಜನರಿಗೆ ತಾವು ಮುದ್ದಿನಿಂದ ಸಾಕಿರುವ ಪ್ರಾಣಿಗಳನ್ನು ಏನು ಮಾಡಬೇಕು ಎಂದು ತಿಳಿಯುತ್ತಿಲ್ಲ. ಆದರೆ ಕೆಲವರು ಮಾತ್ರ ತಾವು ವಲಸೆ ಹೋಗುವ ದೇಶಗಳಿಗೆ ಕೊಂಡೊಯ್ಯುತ್ತಿದ್ದಾರೆ. ತಮ್ಮ ಮನೆಗಳಲ್ಲಿಯೇ ಮುದ್ದಿನ ಪ್ರಾಣಿಗಳನ್ನು ಬಿಟ್ಟು ಬಂದವರ ಸಂಖ್ಯೆಯೂ ಕಡಿಮೆಯಿಲ್ಲ. ವಲಸೆ ಹೋಗುವವರಿಗೆ ಆಶ್ರಯ ಕೊಡುತ್ತಿರುವ ಹಲವು ದೇಶಗಳು ಸಾಕು ಪ್ರಾಣಿಗಳನ್ನೂ ಸ್ವೀಕರಿಸಲು ಮುಂದಾಗಿವೆ.

ಉಕ್ರೇನ್-ರಷ್ಯಾ ಸಂಘರ್ಷದಲ್ಲಿ ಸಿಲುಕಿರು ಭಾರತೀಯ ಮೂಲದ ವೈದ್ಯ ಡಾ.ಗಿರಿಕುಮಾರ್, ಬ್ಲ್ಯಾಕ್ ಪ್ಯಾಂಥರ್ (ಕರಿಚಿರತೆ) ಮತ್ತು ಜಾಗ್ವಾರ್ ಸಾಕಿದ್ದರು. ಉಕ್ರೇನ್​ನಲ್ಲಿ ತಮ್ಮ ಮನೆಯ ನೆಲಮಹಡಿಯಲ್ಲಿ ಈ ಪ್ರಾಣಿಗಳನ್ನು ಸಾಕಿಕೊಂಡಿದ್ದ ಗಿರಿಕುಮಾರ್ ರಷ್ಯಾ ದಾಳಿಯ ನಂತರ ಭಾರತಕ್ಕೆ ಬರಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಭಾರತದಲ್ಲಿ ಮನೆಗಳಲ್ಲಿ ಕಾಡುಪ್ರಾಣಿಗಳನ್ನು ಸಾಕಲು ಸರ್ಕಾರ ಅನುಮತಿ ಕೊಡುವುದಿಲ್ಲ. ಹೀಗಾಗಿ ಅವರು, ತಮ್ಮ ಬ್ಲ್ಯಾಕ್​ ಪ್ಯಾಂಥರ್ ಮತ್ತು ಜಾಗ್ವಾರ್​ಗಳನ್ನು ಸಾಕುವಂತೆ ಕೇಂದ್ರ ಮೃಗಾಲಯ ಪ್ರಾಧಿಕಾರಕ್ಕೆ ಮನವಿ ಮಾಡಿದ್ದರು.

ಮೃಗಾಲಯದಲ್ಲಿ ಇರಿಸಿ ಈ ಪ್ರಾಣಿಗಳನ್ನು ಸಾಕಲು ಅವಕಾಶ ಕೊಡಬೇಕು ಎಂಬ ಅವರ ಕೋರಿಕೆಗೆ ಕೇಂದ್ರ ಅರಣ್ಯ ಇಲಾಖೆ ಸಮ್ಮತಿಸಿದೆ. 2019ರಲ್ಲೇ ಜಾಗ್ವಾರ್ ತರಿಸಿಕೊಳ್ಳಲು ಮೈಸೂರು ಮೃಗಾಲಯ ಅನುಮತಿ ಕೋರಿತ್ತು. ‘ಬ್ಲ್ಯಾಕ್ ಪ್ಯಾಂಥರ್ ಹಾಗೂ ಜಾಗ್ವಾರ್ ಸಾಕಲು ನಮ್ಮ ಮೃಗಾಲಯದಲ್ಲಿ ಪ್ರಶಸ್ತ ವಾತಾವರಣ ಇದೆ. ನಮ್ಮ ಮೃಗಾಯಲಕ್ಕೆ ಈ ಪ್ರಾಣಿಗಳನ್ನು ತರಿಸಿಕೊಟ್ಟರೆ ಚೆನ್ನಾಗಿ ಬೆಳೆಸುತ್ತೇವೆ’ ಎಂದು ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಮಹದೇವ ಸ್ವಾಮಿ ಹೇಳಿದ್ದಾರೆ.

ಇದನ್ನೂ ಓದಿ: ಉಕ್ರೇನ್ ಯುದ್ಧ: ವಿಜಯ ದಿನದ ಭಾಷಣದಲ್ಲಿ ಕೆಲವು ಸುಳಿವು ನೀಡಿದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್

ಇದನ್ನೂ ಓದಿ: Atta Price: ಚಪಾತಿ, ಪೂರಿ, ಉಪ್ಪಿಟ್ಟಿನ ಮೇಲೂ ರಷ್ಯಾ- ಉಕ್ರೇನ್ ಯುದ್ಧದ ಎಫೆಕ್ಟ್; ಅಡುಗೆ ಎಣ್ಣೆ ಜತೆಗೆ ಎಲ್ಲವೂ ಮೇಲೇರಿದೆ

Published On - 2:40 pm, Tue, 10 May 22

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್