Atta Price: ಚಪಾತಿ, ಪೂರಿ, ಉಪ್ಪಿಟ್ಟಿನ ಮೇಲೂ ರಷ್ಯಾ- ಉಕ್ರೇನ್ ಯುದ್ಧದ ಎಫೆಕ್ಟ್; ಅಡುಗೆ ಎಣ್ಣೆ ಜತೆಗೆ ಎಲ್ಲವೂ ಮೇಲೇರಿದೆ

ರಷ್ಯಾ- ಉಕ್ರೇನ್ ಬಿಕ್ಕಟ್ಟು ಭಾರತದಲ್ಲಿ ಕುಟುಂಬಗಳ ಬಜೆಟ್ ಮೇಲೆ ಹೇಗೆ ಪರಿಣಾಮ ಬೀರುತ್ತಿದೆ ಎಂಬುದನ್ನು ತಿಳಿಸುವಂಥ ಲೇಖನ ಇಲ್ಲಿದೆ.

Atta Price: ಚಪಾತಿ, ಪೂರಿ, ಉಪ್ಪಿಟ್ಟಿನ ಮೇಲೂ ರಷ್ಯಾ- ಉಕ್ರೇನ್ ಯುದ್ಧದ ಎಫೆಕ್ಟ್; ಅಡುಗೆ ಎಣ್ಣೆ ಜತೆಗೆ ಎಲ್ಲವೂ ಮೇಲೇರಿದೆ
ವರ್ತಕ ಬಿಎಸ್​ ವಿಶ್ವನಾಥ್
Follow us
TV9 Web
| Updated By: Digi Tech Desk

Updated on:May 09, 2022 | 12:34 PM

2022ರ ಏಪ್ರಿಲ್​ನಲ್ಲಿ ಗೋಧಿ (Wheat) ಹಿಟ್ಟಿನ ತಿಂಗಳ ಸರಾಸರಿ ಚಿಲ್ಲರೆ ಮಾರಾಟ ಬೆಲೆ 12 ವರ್ಷಗಳಲ್ಲಿ ಗರಿಷ್ಠ ಮಟ್ಟಕ್ಕೆ ಏರಿ, ಕೇಜಿಗೆ 32.38 ರೂಪಾಯಿ ತಲುಪಿತ್ತು. ದೇಶದಲ್ಲಿ ಗೋಧಿ ಉತ್ಪಾದನೆಯಲ್ಲಿ ಇಳಿಕೆ ದಾಖಲಿಸಿ, ದಾಸ್ತಾನು ಕೂಡ ಕಡಿಮೆಯಾದ ಮೇಲೆ ಹೀಗೆ ಗೋಧಿ ಹಿಟ್ಟಿನ ಬೆಲೆಯಲ್ಲಿ 2010ರ ಜನವರಿ ನಂತರ ಇಂಥದ್ದೊಂದು ಏರಿಕೆ ಕಂಡುಬಂತು. ಕಾರ್ಯ ನಿರ್ವಹಣೆ ಮತ್ತು ಕಾರ್ಯತಂತ್ರ ಅಗತ್ಯಕ್ಕಿಂತ ಭಾರತದ ಗೋಧಿ ದಾಸ್ತಾನು ಮಹತ್ತರವಾಗಿ ಹೆಚ್ಚಾಗಿದೆ. ಮತ್ತು ಮುಖ್ಯವಾಗಿ ಈ ಕಾರಣಕ್ಕೆ ಬೆಲೆ ಗಗನಕ್ಕೆ ಏರಿದೆ. ಒಟ್ಟಾರೆಯಾಗಿ 2022-23ರಲ್ಲಿ ಭಾರತದಲ್ಲಿ ಗೋಧಿ ಉತ್ಪಾದನೆಯು 1050 ಎಲ್​ಎಂಟಿ ಮುಟ್ಟುವ ಅಂದಾಜಿದೆ.

ಭಾರತದಲ್ಲಿ ಗೋಧಿ ಹಿಟ್ಟಿನ ಬೆಲೆ ಹೆಚ್ಚಾಗಲು ಕಾರಣಗಳು ಇಲ್ಲಿವೆ: – 2022ರ ಮಾರ್ಚ್​ಗೆ ಕೊನೆಯಾದ ವರ್ಷಕ್ಕೆ ಭಾರತ 70 ಎಲ್​ಎಂಟಿ ಗೋಧಿ ರಫ್ತು ಮಾಡಿದೆ. ಇನ್ನು ಪ್ರಸಕ್ತ ಹಣಕಾಸು ವರ್ಷ (2022-23) ರಷ್ಯಾ-ಉಕ್ರೇನ್ ಬಿಕ್ಕಟ್ಟು ಜಾಗತಿಕವಾಗಿ ಪೂರೈಕೆ ಕೊರತೆ ಸೃಷ್ಟಿಸಿರುವುದರಿಂದ ರಫ್ತು ಹೆಚ್ಚಾಗುವ ಸಾಧ್ಯತೆ ಇದೆ.

– ಜಾಗತಿಕವಾಗಿಯೇ ಗೋಧಿ ಹಿಟ್ಟು ಬೆಲೆಯಲ್ಲಿ ಏರಿಕೆ ಆಗಿದೆ. ಮತ್ತು ಏಪ್ರಿಲ್​ನಲ್ಲಿ ಭಾರತ ಅತಿ ಹೆಚ್ಚಿನ ಏರಿಕೆ ಕಂಡಿದೆ. 2022ರ ಮಾರ್ಚ್ ತಿಂಗಳಲ್ಲಿ ಗೋಧಿಯ ಚಿಲ್ಲರೆ ಮಾರಾಟ ಬೆಲೆ ಅಲ್ಪ ಪ್ರಮಾಣದಲ್ಲಿ ಏರಿಕೆ ಆಗಿ, ಕೇಜಿಗೆ 28.67 ರೂಪಾಯಿ ಮುಟ್ಟಿತ್ತು. ವರ್ಷದ ಹಿಂದೆ, ಅಂದರೆ 2021ರ ಮಾರ್ಚ್​ನಲ್ಲಿ ಇದು 27.90 ರೂಪಾಯಿ ಇತ್ತು.

– ಇನ್ನು 2022ರ ಮಾರ್ಚ್​ಗೆ ಗೋಧಿ ಹಿಟ್ಟಿನ ರೀಟೇಲ್ ಮಾರಾಟ ದರ ಅಲ್ಪ ಪ್ರಮಾಣದಲ್ಲಿ ಹೆಚ್ಚಳವಾಗಿ ಕೇಜಿಗೆ 32.03 ರೂಪಾಯಿ ಮುಟ್ಟಿತು. ವರ್ಷದ ಹಿಂದೆ, 2021ರ ಮಾರ್ಚ್​ನಲ್ಲಿ ಕೇಜಿಗೆ 31.77 ರೂಪಾಯಿ ಇತ್ತು.

– ಎಎನ್​ಐ ಸುದ್ದಿ ಸಂಸ್ಥೆಗೆ ಮೂಲಗಳು ತಿಳಿಸಿರುವಂತೆ, ದೇಶೀಯ ಗೋಧಿ ಬೆಲೆ ಹಾಗೂ ಈಗಿನ ಋತುವಿನಲ್ಲಿ ಆಗುತ್ತಿರುವ ಖರೀದಿ ಎರಡನ್ನೂ ಸರ್ಕಾರ ನಿಗಾ ಮಾಡುತ್ತಿದೆ. ಯಾವುದೇ ಕೊರತೆಯನ್ನು ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ ಅಡಿಯಲ್ಲಿ ಗೋಧಿ ಮಾರಾಟದ ಮೂಲಕ ನೀಗಿಸಲಾಗುವುದು.

– ಎಲ್ಲ ಕಲ್ಯಾಣ ಯೋಜನೆಗಳ ಅಡಿಯಲ್ಲಿ ಗೋಧಿ ಪೂರೈಸಿದ ನಂತರ 100 ಎಲ್​ಎಂಟಿ ಬಾಕಿ ದಾಸ್ತಾನು 2022-23ರ ವರ್ಷದಲ್ಲಿ ಇರುವ ನಿರೀಕ್ಷೆ ಸರ್ಕಾರಕ್ಕೆ ಇದೆ ಎಂದು ಮೂಲಗಳು ತಿಳಿಸಿವೆ.

ಬನಶಂಕರಿ 3ನೇ ಹಂತದಲ್ಲಿ ಎಸ್​ಎಸ್​ವಿ ಪ್ರಾವಿಷನ್ ಸ್ಟೋರ್ಸ್ ಹೆಸರಿನ ಮಳಿಗೆ ನಡೆಸುವ ಬಿ.ಎಸ್​.ವಿಶ್ವನಾಥ್ ಬೆಲೆ ಏರಿಕೆ ಬಗ್ಗೆ ಟಿವಿ9 ಕನ್ನಡ ಡಿಜಿಟಲ್ ಜತೆ ಮಾತನಾಡಿ, ಅಡುಗೆ ಎಣ್ಣೆ ಬೆಲೆ ಏರಿಕೆ ಆಗುತ್ತಲೇ ರವೆ, ಮೈದಾ ಹಿಟ್ಟು ಬೇರೆ ಬೇರೆ ವಸ್ತುಗಳ ಬೆಲೆಯೂ ಏರಿಕೆ ಆಗಿದೆ. ಕಳೆದ ಕೆಲವು ದಿನಗಳಿಂದಲೇ ಆಗಿರುವಂಥ ಬೆಲೆ ಏರಿಕೆ ಇದು ಎಂದು ಹೇಳಿದರು. ಆದರೆ ಈ ರೀತಿ ಏರಿಕೆ ಆಗುವುದಕ್ಕೆ ತಮಗೆ ಕಾರಣ ಗೊತ್ತಿಲ್ಲ ಅಂತಲೂ ತಿಳಿಸಿದರು.

ಹೆಚ್ಚಿನ ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: Edible Oil: ಏಪ್ರಿಲ್ 28ರಿಂದ ಇಂಡೋನೇಷ್ಯಾ ನಿಲ್ಲಿಸಲಿದೆ ತಾಳೆ ಎಣ್ಣೆ ರಫ್ತು; ಭಾರತದಲ್ಲಿ ಗ್ರಾಹಕರಿಗೆ ತಟ್ಟಲಿದೆ ಬೆಲೆ ಏರಿಕೆ ಬಿಸಿ

Published On - 12:28 pm, Mon, 9 May 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ