ಕಾಂಗ್ರೆಸ್ಸನ್ನ ಶಿವಕುಮಾರೇ ಮುನ್ನಡೆಸಲಿ ಅಂದ್ರು ಸಿದ್ದರಾಮಯ್ಯ ಪುತ್ರ ಯತೀಂದ್ರ 

ಮೈಸೂರು: ತಿಹಾರ್ ಜೈಲಿನಿಂದ ಕರ್ನಾಟಕಕ್ಕೆ ವಾಪಸ್ ಆದ ಮೇಲೆ ಡಿ.ಕೆ.ಶಿವಕುಮಾರ್​ಗೆ ಎಲ್ಲೆಲ್ಲೂ ಭರ್ಜರಿ ಸ್ವಾಗತ, ಸನ್ಮಾನಗಳು ದೊರಕಿದ್ದವು. ಇಂದು ಮೈಸೂರಿನಲ್ಲೂ ಡಿಕೆಶಿಗೆ ಕಾಂಗ್ರೆಸ್​ ವತಿಯಿಂದ ಭರ್ಜರಿ ಸನ್ಮಾನ ಕಾರ್ಯಕ್ರಮ ನಡೆಯಿತು. ಕಾಂಗ್ರೆಸ್ ನಾಯಕರನ್ನು ಬೇಕಂತಲೇ ಟಾರ್ಗೆಟ್ ಮಾಡಲಾಗುತ್ತಿದೆ. ಕೆಲ ಸಂಸ್ಥೆಗಳನ್ನು ಬಿಜೆಪಿ ರಾಜಕೀಯ ಲಾಭಕ್ಕೆ ದುರ್ಬಳಕೆ ಮಾಡಿಕೊಂಡಿದೆ. ಹಬ್ಬ ಮಾಡಲು ಬಿಡದೆ ಡಿ.ಕೆ.ಶಿವಕುಮಾರ್​ ಅವರಿಗೂ ಇದೇ ರೀತಿ ಮಾಡಲಾಯ್ತು. ಡಿ.ಕೆ.ಶಿವಕುಮಾರ್ ಕಾಂಗ್ರೆಸ್​ ಪಕ್ಷವನ್ನು ಮುನ್ನಡೆಸಲಿ, ಅವರ ಜೊತೆ ನಾವು ಇರುತ್ತೇವೆ ಎಂದು ಡಿಕೆಶಿಗೆ ಮಾಜಿ ಸಿಎಂ ಸಿದ್ದರಾಮಯ್ಯ […]

ಕಾಂಗ್ರೆಸ್ಸನ್ನ ಶಿವಕುಮಾರೇ ಮುನ್ನಡೆಸಲಿ ಅಂದ್ರು ಸಿದ್ದರಾಮಯ್ಯ ಪುತ್ರ ಯತೀಂದ್ರ 
sadhu srinath

|

Nov 07, 2019 | 3:44 PM

ಮೈಸೂರು: ತಿಹಾರ್ ಜೈಲಿನಿಂದ ಕರ್ನಾಟಕಕ್ಕೆ ವಾಪಸ್ ಆದ ಮೇಲೆ ಡಿ.ಕೆ.ಶಿವಕುಮಾರ್​ಗೆ ಎಲ್ಲೆಲ್ಲೂ ಭರ್ಜರಿ ಸ್ವಾಗತ, ಸನ್ಮಾನಗಳು ದೊರಕಿದ್ದವು. ಇಂದು ಮೈಸೂರಿನಲ್ಲೂ ಡಿಕೆಶಿಗೆ ಕಾಂಗ್ರೆಸ್​ ವತಿಯಿಂದ ಭರ್ಜರಿ ಸನ್ಮಾನ ಕಾರ್ಯಕ್ರಮ ನಡೆಯಿತು.

ಕಾಂಗ್ರೆಸ್ ನಾಯಕರನ್ನು ಬೇಕಂತಲೇ ಟಾರ್ಗೆಟ್ ಮಾಡಲಾಗುತ್ತಿದೆ. ಕೆಲ ಸಂಸ್ಥೆಗಳನ್ನು ಬಿಜೆಪಿ ರಾಜಕೀಯ ಲಾಭಕ್ಕೆ ದುರ್ಬಳಕೆ ಮಾಡಿಕೊಂಡಿದೆ. ಹಬ್ಬ ಮಾಡಲು ಬಿಡದೆ ಡಿ.ಕೆ.ಶಿವಕುಮಾರ್​ ಅವರಿಗೂ ಇದೇ ರೀತಿ ಮಾಡಲಾಯ್ತು. ಡಿ.ಕೆ.ಶಿವಕುಮಾರ್ ಕಾಂಗ್ರೆಸ್​ ಪಕ್ಷವನ್ನು ಮುನ್ನಡೆಸಲಿ, ಅವರ ಜೊತೆ ನಾವು ಇರುತ್ತೇವೆ ಎಂದು ಡಿಕೆಶಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

ಡಿಕೆಶಿ ಸಿಎಂ ಆಗಬೇಕು: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕು, ಡಿ.ಕೆ.ಶಿವಕುಮಾರ್ ಸಿಎಂ ಆಗಬೇಕು. ಡಿಕೆಶಿ ಅಜಾತಶತ್ರು, ಆದರೂ ಎಲ್ಲಾ ಕಷ್ಟ ಅವರಿಗೆ ಬರುತ್ತೆ. ಯಾವುದೇ ಸಂದರ್ಭದಲ್ಲೂ ನಾವು ನಿಮ್ಮ ಜೊತೆ ಇರುತ್ತೇವೆ ಎಂದು ಶಾಸಕ ತನ್ವೀರ್ ಸೇಠ್ ಭರವಸೆ ನೀಡಿದ್ದಾರೆ.

ಡಿಕೆಶಿ ದೇವರಂತೆ ಕಂಡರು: ನಮ್ಮ ತಂದೆ ಚಿಕ್ಕಮಾದು ಗೆಲ್ಲಲು ಡಿಕೆಶಿ ಕಾರಣ. ಡಿಕೆಶಿ ಎಡಗೈಯಲ್ಲಿ ಸಹಾಯ ಮಾಡಿದ್ರು, ಬಲಗೈಗೆ ಗೊತ್ತಾಗುವುದಿಲ್ಲ ಎಂದು ಶಾಸಕ ಅನಿಲ್ ಚಿಕ್ಕಮಾದು ಹೇಳಿದರು. ಅವರು ಯಾವ ಖಾತೆ ಕೊಟ್ಟರು ನಿಭಾಯಿಸುವ ಪ್ರಭಾವಿ. ಇಂಧನ ಇಲಾಖೆ ನಿಭಾಯಿಸುವ ಸಂಧರ್ಭದಲ್ಲಿ ಅವರು ಪವರ್ ಸ್ಟಾರ್ ಆಗಿದ್ದರು. ನಾನು ವಿಧಾನಸಭೆ ಪ್ರವೇಶಿಸುವ ಮುನ್ನ ಪಂಚೆ ಶಲ್ಯ ಹಾಕಿ ಕುಳಿತಿದ್ದ ಡಿಕೆಶಿ ದೇವರಂತೆ ಕಂಡಿದ್ದರು. ಅವರ ಕಾಲಿಗೆ ಬಿದ್ದು ನಮಸ್ಕಾರ ಮಾಡಿ ನಾನು ವಿಧಾನಸಭೆ ಒಳ ಪ್ರವೇಶಿಸಿದೆ ಎಂದರು.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada