ಹಾವೇರಿಗೆ ಹೊಸ ಜೋಡೆತ್ತುಗಳ ಪರಿಚಯಿಸಿದ ಯಡಿಯೂರಪ್ಪ

ಹಾವೇರಿ: ಜೋಡೆತ್ತು ಎಂದಾಕ್ಷಣ ನೆನಪಾಗೋದು ಸ್ಯಾಂಡಲ್​ವುಡ್​ನ ದರ್ಶನ್ ಮತ್ತು ಯಶ್. ಲೋಕಸಭಾ ಚುನಾವಣೆ ವೇಳೆ ಮಂಡ್ಯ ಅಖಾಡದಲ್ಲಿ ಸುಮಲತಾ ಪರ ಪ್ರಚಾರಕ್ಕೆ ನಿಂತ ಈ ನಟರು ಜೋಡೆತ್ತು ಎಂದೇ ಖ್ಯಾತಿಯಾದರು. ಅದೇ ಸಮಯದಲ್ಲಿ ರಾಜಕೀಯ ನಾಯಕರ ಪೈಕಿ ಹೆಚ್.​ಡಿ.ಕುಮಾರಸ್ವಾಮಿ ಮತ್ತು ಡಿ.ಕೆ.ಶಿವಕುಮಾರ್ ತಮ್ಮನ್ನು ತಾವೇ ಜೋಡೆತ್ತು ಎಂದು ಕರೆದುಕೊಂಡರು. ಆದ್ರೆ ಇದೀಗ ಮುಖ್ಯಮಂತ್ರಿ ಬಿ.ಎಸ್.​ಯಡಿಯೂರಪ್ಪ ಸಹ ಜಿಲ್ಲೆಯಿಂದ ಹೊಸ ಜೋಡೆತ್ತುಗಳನ್ನು ಪರಿಚಯಿಸಿದ್ದಾರೆ. ಜೋಡೆತ್ತು ರೀತಿ ಕೆಲಸ ಮಾಡ್ತಾರೆ: ಅನರ್ಹ ಶಾಸಕ ಬಿ.ಸಿ.ಪಾಟೀಲ್ ಮತ್ತು ಯು.ಬಿ.ಬಣಕಾರ ಒಂದಾದ್ಮೇಲೆ ಹಾವೇರಿಗೆ […]

ಹಾವೇರಿಗೆ ಹೊಸ ಜೋಡೆತ್ತುಗಳ ಪರಿಚಯಿಸಿದ ಯಡಿಯೂರಪ್ಪ
sadhu srinath

|

Nov 07, 2019 | 6:12 PM

ಹಾವೇರಿ: ಜೋಡೆತ್ತು ಎಂದಾಕ್ಷಣ ನೆನಪಾಗೋದು ಸ್ಯಾಂಡಲ್​ವುಡ್​ನ ದರ್ಶನ್ ಮತ್ತು ಯಶ್. ಲೋಕಸಭಾ ಚುನಾವಣೆ ವೇಳೆ ಮಂಡ್ಯ ಅಖಾಡದಲ್ಲಿ ಸುಮಲತಾ ಪರ ಪ್ರಚಾರಕ್ಕೆ ನಿಂತ ಈ ನಟರು ಜೋಡೆತ್ತು ಎಂದೇ ಖ್ಯಾತಿಯಾದರು. ಅದೇ ಸಮಯದಲ್ಲಿ ರಾಜಕೀಯ ನಾಯಕರ ಪೈಕಿ ಹೆಚ್.​ಡಿ.ಕುಮಾರಸ್ವಾಮಿ ಮತ್ತು ಡಿ.ಕೆ.ಶಿವಕುಮಾರ್ ತಮ್ಮನ್ನು ತಾವೇ ಜೋಡೆತ್ತು ಎಂದು ಕರೆದುಕೊಂಡರು. ಆದ್ರೆ ಇದೀಗ ಮುಖ್ಯಮಂತ್ರಿ ಬಿ.ಎಸ್.​ಯಡಿಯೂರಪ್ಪ ಸಹ ಜಿಲ್ಲೆಯಿಂದ ಹೊಸ ಜೋಡೆತ್ತುಗಳನ್ನು ಪರಿಚಯಿಸಿದ್ದಾರೆ.

ಜೋಡೆತ್ತು ರೀತಿ ಕೆಲಸ ಮಾಡ್ತಾರೆ: ಅನರ್ಹ ಶಾಸಕ ಬಿ.ಸಿ.ಪಾಟೀಲ್ ಮತ್ತು ಯು.ಬಿ.ಬಣಕಾರ ಒಂದಾದ್ಮೇಲೆ ಹಾವೇರಿಗೆ ನಾನು ಬರುವ ಅವಶ್ಯಕತೆ ಇಲ್ಲ. ಬಣಕಾರ ತಲೆ ತಗ್ಗಿಸೋ ಕೆಲಸ ಮಾಡಲು ಬಿಡೋದಿಲ್ಲ. ಈ ಇಬ್ಬರೂ ನನ್ನೆರಡು ಕಣ್ಣುಗಳು. ಜೋಡೆತ್ತು ರೀತಿಯಲ್ಲಿ ಇಬ್ಬರೂ ಕೆಲಸ ಮಾಡ್ತಾರೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಕೆಲವೇ ದಿನಗಳಲ್ಲಿ ಜಿಲ್ಲೆಗೆ 100 ಕೋಟಿ : ಹಿರೇಕೆರೂರಿನ ಕ್ರೀಡಾಂಗಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಮತ್ತು ಶಿಲಾನ್ಯಾಸ ನೆರವೇರಿಸಿದ ಸಿಎಂ ಯಡಿಯೂರಪ್ಪ, ಯಾವುದೇ ತಾಲೂಕಿಗೆ ಕೊಡದಷ್ಟು ಅನುದಾನವನ್ನು ಹಿರೇಕೆರೂರಿಗೆ ಕೊಟ್ಟಿದ್ದೇನೆ ಎಂದರು. U.B.ಬಣಕಾರ, ಬಿ.ಸಿ.ಪಾಟೀಲ್​ ಆಸೆಯಂತೆ ಹಿರೇಕೆರೂರು ಪಟ್ಟಣವನ್ನ ಮಾದರಿ ಕ್ಷೇತ್ರವಾಗಿ ಮಾಡುತ್ತೇವೆ. ಮುಂದಿನ ಬಜೆಟ್​ನಲ್ಲಿ ತಾಲೂಕಿನ ಎಲ್ಲ ಬೇಡಿಕೆ ಈಡೇರಿಸುವೆ. ಕೇಂದ್ರ ಮತ್ತು ಎನ್​ಡಿಆರ್​ಎಫ್ ನಿಯಮ ಪಕ್ಕಕ್ಕಿಟ್ಟು ಮನೆ ನಿರ್ಮಾಣಕ್ಕೆ 5 ಲಕ್ಷ ಕೊಡುತ್ತೇನೆ. ನನ್ನ ಜೊತೆ ನಮ್ಮ ಸಚಿವರೂ ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ. ಕೆಲವೇ ದಿನಗಳಲ್ಲಿ ಜಿಲ್ಲೆಗೆ 100 ಕೋಟಿ ಹಣ ಕೊಡುತ್ತೇನೆ ಎಂದು ಬಿಎಸ್​ವೈ ಭರವಸೆ ನೀಡಿದರು.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada