ಮಿಂಟೋ ಆಸ್ಪತ್ರೆ ವೈದ್ಯರ ಪ್ರತಿಭಟನೆ: ಹಲವು ಜಿಲ್ಲೆಗಳಲ್ಲಿ ಇಂದು ಒಪಿಡಿ ಬಂದ್
ಬೆಂಗಳೂರು: ಕರವೇ ಹಲ್ಲೆ ಮಾಡಿದೆ ಎಂದು ಆರೋಪಿಸಿ ಕಳೆದ ಒಂದು ವಾರದಿಂದ ವೈದ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ. ವೈದ್ಯರ ಪ್ರತಿಭಟನೆಯಿಂದ ರೋಗಿಗಳು ಸಾಕಷ್ಟು ತೊಂದ್ರೆ ಅನುಭವಿಸುತ್ತಿದ್ದಾರೆ. ಇದನ್ನ ಅರಿತ ಕರವೇ ಮಹತ್ವದ ನಿರ್ಧಾರ ಕೈಗೊಂಡಿದೆ. ಪೊಲೀಸರಿಗೆ ಶರಣಾಗಲಿರುವ ಕರವೇ ಕಾರ್ಯಕರ್ತರು! ಮಿಂಟೋ ಆಸ್ಪತ್ರೆಯಲ್ಲಿ ಕರ್ತವ್ಯ ನಿರತ ವೈದ್ಯರ ಮೇಲೆ ಕರವೇ ಕಾರ್ಯಕರ್ತರು ಹಲ್ಲೆ ನೆಡೆಸಿದ್ದಾರೆ ಎಂದು ಒಂದು ವಾರದಿಂದ ವೈದ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಹಲ್ಲೆ ಮಾಡಿದವರನ್ನ ಬಂಧಿಸಬೇಕು ಇಲ್ಲವಾದ್ರೆ ನಾವು ಪ್ರತಿಭಟನೆ ವಾಪಾಸ್ ಪಡೆಯಲ್ಲ ಅಂತ ವೈದ್ಯರು ಪಟ್ಟು […]
ಬೆಂಗಳೂರು: ಕರವೇ ಹಲ್ಲೆ ಮಾಡಿದೆ ಎಂದು ಆರೋಪಿಸಿ ಕಳೆದ ಒಂದು ವಾರದಿಂದ ವೈದ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ. ವೈದ್ಯರ ಪ್ರತಿಭಟನೆಯಿಂದ ರೋಗಿಗಳು ಸಾಕಷ್ಟು ತೊಂದ್ರೆ ಅನುಭವಿಸುತ್ತಿದ್ದಾರೆ. ಇದನ್ನ ಅರಿತ ಕರವೇ ಮಹತ್ವದ ನಿರ್ಧಾರ ಕೈಗೊಂಡಿದೆ.
ಪೊಲೀಸರಿಗೆ ಶರಣಾಗಲಿರುವ ಕರವೇ ಕಾರ್ಯಕರ್ತರು! ಮಿಂಟೋ ಆಸ್ಪತ್ರೆಯಲ್ಲಿ ಕರ್ತವ್ಯ ನಿರತ ವೈದ್ಯರ ಮೇಲೆ ಕರವೇ ಕಾರ್ಯಕರ್ತರು ಹಲ್ಲೆ ನೆಡೆಸಿದ್ದಾರೆ ಎಂದು ಒಂದು ವಾರದಿಂದ ವೈದ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಹಲ್ಲೆ ಮಾಡಿದವರನ್ನ ಬಂಧಿಸಬೇಕು ಇಲ್ಲವಾದ್ರೆ ನಾವು ಪ್ರತಿಭಟನೆ ವಾಪಾಸ್ ಪಡೆಯಲ್ಲ ಅಂತ ವೈದ್ಯರು ಪಟ್ಟು ಹಿಡಿದು ಕುಳಿತ್ತಿದ್ದಾರೆ. ಇದರಿಂದ ರೋಗಿಗಳು ಸಾಕಷ್ಟು ತೊಂದ್ರೆ ಅನುಭವಿಸುತ್ತಿದ್ದು, ಪ್ರತಿಭಟನೆಯ ಕಾವು ಜಾಸ್ತಿಯಾಗುತ್ತಿದ್ದಂತೆ ಕರವೇ ಸಂಘಟನೆ ಎಚ್ಚೆತ್ತುಕೊಂಡಿದೆ..
ವೈದ್ಯರ ಪ್ರತಿಭಟನೆಯಿಂದ ರೋಗಿಗಳಿಗೆ ತೊಂದ್ರೆ ಆಗುತ್ತಿರವುದನ್ನ ಕರವೇ ಗಮನಿಸಿದೆ. ನಿನ್ನೆ ರಾಜ್ಯಾಧ್ಯಕ್ಷ ಅಧ್ಯಕ್ಷ ಟಿ.ಎ ನಾರಾಯಣ ಗೌಡ ನೇತೃತ್ವದಲ್ಲಿ ಸಭೆ ಸೇರಿದ ಕಾರ್ಯಕರ್ತರು ಇವತ್ತು ಪೊಲೀಸರ ಮುಂದೆ ಶರಣಾಗಲು ನಿರ್ಧರಿಸಿದ್ದಾರೆ. ಇಂದು ಬೆಳಗ್ಗೆ ದಕ್ಷಿಣ ವಿಭಾಗದ ಡಿಸಿಪಿ ಮುಂದೆ ಕರವೇ ಮಹಿಳಾ ಘಟಕದ ಅಧ್ಯಕ್ಷೆ ಆಶ್ವಿನಿ ಗೌಡ ಸೇರಿ 15 ಕ್ಕೂ ಹೆಚ್ಚು ಕರವೇ ಕಾರ್ಯಕರ್ತರು ಶರಣಾಗಲಿದ್ದಾರೆ. ವೈದ್ಯರ ಪ್ರತಿಭಟನೆಗೆ ಹೆದರಿ ಅಲ್ಲ ಸಾರ್ವಜನಿಕರ ಹಿತದೃಷ್ಟಿಯಿಂದ ಹಾಗೂ ರೋಗಿಗಳಿಗೆ ತೊಂದರೆಯಾಗಬಾರದು ಎಂದು ಈ ನಿರ್ಧಾರ ಕೈಗೊಂಡಿರುವುದಾಗಿ ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡ ಸ್ಪಷ್ಟಪಡಿಸಿದ್ದಾರೆ..
ಬಹುತೇಕ ಜಿಲ್ಲೆಗಳಲ್ಲಿ ಒಪಿಡಿ ಬಂದ್: ಆದರೆ ಮಿಂಟೋ ಆಸ್ಪತ್ರೆ ವೈದ್ಯರು ಕರವೇ ಕಾರ್ಯಕರ್ತರು ಬಂಧನಕ್ಕೆ ಅಗ್ರಹಿಸಿ ಧರಣಿ ನಡೆಸುತ್ತಿದ್ದಾರೆ. ಇಂದು ಖಾಸಗಿ ಆಸ್ಪತ್ರೆಗಳ ಒಪಿಡಿ ಬಂದ್ ಮಾಡುವುದಾಗಿ ತಿಳಿಸಿದ್ದಾರೆ. ಕರವೇ ಕಾರ್ಯಕರ್ತರು ಶರಣಾದ ಬಳಿಕ ಧರಣಿ ಹಿಂಪಡೆಲು ನಿರ್ಧಾರಿಸಿದ್ದೇವೆ. ಅಲ್ಲಿಯವರೆಗೂ ಎಂದಿನಂತೆ ಎಲ್ಲಾ ಆಸ್ಪತ್ರೆಯ ಒಪಿಡಿ ಬಂದ್ ಎಂದು ಐಎಂಎ ಕಾರ್ಯದರ್ಶಿ ಶ್ರೀನಿವಾಸ್ ಸ್ಪಷ್ಟನೆ ನೀಡಿದ್ದಾರೆ.
ಬಂಧನಕ್ಕೆ ಆಗ್ರಹಿಸಿ ನಡೆಯುತ್ತಿರುವ ವೈದ್ಯರ ಧರಣಿಗೆ ಖಾಸಗಿ ಆಸ್ಪತ್ರೆಗಳಿಂದ ಬೆಂಬಲ ವ್ಯಕ್ತವಾಗಿದೆ. ಹಾವೇರಿ, ಕೊಪ್ಪಳ, ದಾವಣಗೆರೆ, ಚಿತ್ರದುರ್ಗದಲ್ಲಿ ಗದಗ, ಹಾಸನ, ಧಾರವಾಡ, ಯಾದಗಿರಿ ಬಳ್ಳಾರಿ ವಿಜಯಪುರ, ಚಿಕ್ಕಬಳ್ಳಾಪುರ ಸೇರಿದಂತೆ ಹಲವೆಡೆ ಒಪಿಡಿ ಬಂದ್ ಮಾಡಿ ವ್ಯಾಪಕ ಬೆಂಬಲ ನೀಡಲಾಗಿದೆ.
Published On - 9:30 am, Fri, 8 November 19