ಮೈಸೂರು: ಸಿಐಪಿಇಟಿಗೆ 1.25 ಕೋಟಿ ರೂ. ವಂಚನೆ ಪ್ರಕರಣ; ಇಡಿಯಿಂದ ಹೆಚ್ಎನ್ ಅರವಿಂದ, ಪತ್ನಿ ಬಿಂದು ಬಂಧನ
ಪ್ರತ್ಯೇಕ ಕೇಸ್ ದಾಖಲಿಸಿಕೊಂಡಿದ್ದ ಜಾರಿ ನಿರ್ದೇಶನಾಲಯ (ಇಡಿ) ಪದೇಪದೆ ವಿಚಾರಣೆಗೆ ಗೈರಾದ ಹಿನ್ನೆಲೆಯಲ್ಲಿ ಎನ್ಬಿಡಬ್ಲೂ ಜಾರಿ ಮಾಡಿತ್ತು. ಸದ್ಯ ನ್ಯಾಯಾಲಯ ಜಾಮೀನು ರಹಿತ ವಾರಂಟ್ ಜಾರಿ ಮಾಡಿದ್ದು, ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಂಪತಿಯನ್ನು ಬಂಧಿಸಿದ್ದಾರೆ.
ಮೈಸೂರು: ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಪ್ಲಾಸ್ಟಿಕ್ಸ್ ಇಂಜಿನಿಯರಿಂಗ್ & ಟೆಕ್ನಾಲಜಿಗೆ (CIPET) 1.25 ಕೋಟಿ ರೂಪಾಯಿ ವಂಚನೆ(Fraud) ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೈಸೂರಿನ ಸಿಐಪಿಇಟಿಯಲ್ಲಿ ಟೆಕ್ನಿಶಿಯನ್ ಆಗಿದ್ದ ದಂಪತಿಯನ್ನು ಇಡಿ(ED) ಬಂಧಿಸಿದ್ದಾರೆ. ಹೆಚ್.ಎನ್.ಅರವಿಂದ ಮತ್ತು ಆತನ ಪತ್ನಿ ಬಿಂದುವನ್ನು ಇಡಿ ಬಂಧಿಸಿದ್ದಾರೆ. ಸಿಐಪಿಇಟಿಗೆ ಸೇರಿದ 1.25 ಕೋಟಿ ರೂಪಾಯಿಯನ್ನು ಅಕ್ರಮವಾಗಿ ಬಳಕೆ ಮಾಡಿದ್ದರು. ಅಲ್ಲದೇ ವಂಚಿಸಿದ ಹಣದಲ್ಲಿ ಸ್ಥಿರಾಸ್ತಿ, ಚರಾಸ್ತಿ ಖರೀದಿಸಿದ್ದರು.
ವಂಚನೆ ಬಗ್ಗೆ 2009ರಲ್ಲಿ ಸಿಬಿಐ ಕೇಸ್ ದಾಖಲಿಸಿಕೊಂಡಿದ್ದರು. ಹಣ ಅಕ್ರಮ ವರ್ಗಾವಣೆ ಹಿನ್ನೆಲೆಯಲ್ಲಿ ಪಿಎಮ್ಎಲ್ಎ ಅಡಿ ಕೇಸ್ ಹಾಕಲಾಗಿತ್ತು. ಪ್ರತ್ಯೇಕ ಕೇಸ್ ದಾಖಲಿಸಿಕೊಂಡಿದ್ದ ಜಾರಿ ನಿರ್ದೇಶನಾಲಯ (ಇಡಿ) ಪದೇಪದೆ ವಿಚಾರಣೆಗೆ ಗೈರಾದ ಹಿನ್ನೆಲೆಯಲ್ಲಿ ಎನ್ಬಿಡಬ್ಲೂ ಜಾರಿ ಮಾಡಿತ್ತು. ಸದ್ಯ ನ್ಯಾಯಾಲಯ ಜಾಮೀನು ರಹಿತ ವಾರಂಟ್ ಜಾರಿ ಮಾಡಿದ್ದು, ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಂಪತಿಯನ್ನು ಬಂಧಿಸಿದ್ದಾರೆ.
ಶಿವಮೊಗ್ಗದಲ್ಲಿ ನಿಷೇಧಾಜ್ಞೆ ನಡುವೆ ಹಲ್ಲೆ ನಡೆಸಿದ್ದ ಇಬ್ಬರ ಬಂಧನ
ನಗರದಲ್ಲಿ ನಿಷೇಧಾಜ್ಞೆ ನಡುವೆ ಹಲ್ಲೆ ನಡೆಸಿದ್ದ ಇಬ್ಬರ ಬಂಧನವಾಗಿದೆ. ಸಲ್ಮಾನ್, ಸೈಯದ್ ಸುಬಾನ್ನನ್ನು ಪೊಲೀಸರು ಬಂಧಿಸಿದ್ದಾರೆ. ಗೋಪಾಳ ಬಡಾವಣೆಯ ಪದ್ಮಾ ಟಾಕೀಸ್ ಬಳಿ ವೆಂಕಟೇಶ್ ಮೇಲೆ ಮೂವರು ಸೇರಿ ಕಲ್ಲಿನಿಂದ ಹಲ್ಲೆಗೈದಿದ್ದರು. ನಿಷೇಧಾಜ್ಞೆ ನಡುವೆ ಹಲ್ಲೆ ನಡೆದಿದ್ದರಿಂದ ಆತಂಕ ಮನೆಮಾಡಿತ್ತು. ನಿನ್ನೆ ರಾತ್ರಿಯಿಂದ ಶಿವಮೊಗ್ಗದಲ್ಲಿ ಬಿಗುವಿನ ವಾತಾವರಣವಿತ್ತು. ಕ್ಷಿಪ್ರ ಕಾರ್ಯಾಚರಣೆ ನಡೆಸಿ ತುಂಗಾನಗರ ಠಾಣೆ ಪೊಲೀಸರು ಸಲ್ಮಾನ್, ಸೈಯದ್ ಎಂಬ ಇಬ್ಬರನ್ನು ಬಂಧಿಸಿದ್ದಾರೆ.
ಘಟನೆ ವಿವರ ಫೆಬ್ರವರಿ 20 ರ ರಾತ್ರಿ ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದ ಬಳಿಕ ಶಿವಮೊಗ್ಗ ನಗರ ಹೊತ್ತಿ ಉರಿದಿತ್ತು. ನಗರದಲ್ಲಿ ಫೆಬ್ರವರಿ 20 ರಿಂದ ಮಾರ್ಚ್ 4 ರ ವರೆಗೂ ಜಿಲ್ಲಾಡಳಿತ ನಿಷೇಧಾಜ್ಞೆ ಜಾರಿ ಮಾಡಿತ್ತು. ಜಿಲ್ಲೆಯಲ್ಲಿ ಪೊಲೀಸ್ ಬಂದೋಬಸ್ತ್ ಜೋರಾಗಿತ್ತು. ಆದ್ರೆ, ಇಷ್ಟೆಲ್ಲಾ ಬಂದೋಬಸ್ತ್ ಇದ್ರೂ ನಿನ್ನೆ ರಾತ್ರಿ 8 ಗಂಟೆ ಸುಮಾರಿಗೆ ಕಿಡಿಗೇಡಿಗಳು ಅಟ್ಟಹಾಸ ಮೆರೆದಿದ್ದಾರೆ. ಶಿವಮೊಗ್ಗದ ಗೋಪಾಳದ ಪದ್ಮಾ ಟಾಕೀಸ್ ಬಳಿ ವೆಂಕಟೇಶ್ ಎಂಬ ವ್ಯಕ್ತಿ ಮೇಲೆ ನಾಲ್ವರು ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿ ಪರಾರಿ ಆಗಿದ್ದರು. ನಾಯಿ ತೆಗೆದುಕೊಂಡು ವಾಕಿಂಗ್ ಹೋಗಿದ್ದ ವೇಳೆ ಈ ಘಟನೆ ನಡೆದಿದ್ದು, ನಾಲ್ವರು ಕಿಡಿಗೇಡಿಗಳು ಮತ್ತು ವೆಂಕಟೇಶ್ ನಡುವೆ ಸಿಲ್ಲಿ ವಿಚಾರಕ್ಕೆ ವಾಗ್ವಾದವಾಗಿದೆ. ಈ ನಡುವೆ ಆಕ್ರೋಶಗೊಂಡ ನಾಲ್ವರು ದುಷ್ಕರ್ಮಿಗಳು ವೆಂಕಟೇಶ್ ಮೇಲೆ ಕಲ್ಲುಗಳಿಂದ ದಾಳಿ ಮಾಡಿದ್ದಾರೆ. ಪರಿಣಾಮ ಗಂಭೀರವಾಗಿ ಗಾಯಗೊಂಡ ವೆಂಕಟೇಶ್ನನ್ನು ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವಿಷ್ಯ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ಸಂಸದ ಬಿ.ವೈ.ರಾಘವೇಂದ್ರ ಭೇಟಿ ನೀಡಿ ಗಾಯಾಳು ಆರೋಗ್ಯ ವಿಚಾರಿಸಿ, ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದರು.
ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ ಪ್ರಕರಣ; ದಾವೂದ್ ಇಬ್ರಾಹಿಂ ಸಹೋದರ ಇಕ್ಬಾಲ್ ಕಸ್ಕರ್ ಇಡಿ ವಶಕ್ಕೆ
Shivamogga Voilence: ಶಿವಮೊಗ್ಗದಲ್ಲಿ ನಿಷೇಧಾಜ್ಞೆ ನಡುವೆ ಹಲ್ಲೆ ನಡೆಸಿದ್ದ ಇಬ್ಬರ ಬಂಧನ
Published On - 10:27 pm, Fri, 4 March 22