ಮೈಸೂರು, ಆ.17: ನಗರದ ಹೂಟಗಳ್ಳಿಯ (Hutagalli) ಕೆಎಚ್ಬಿ ಕಾಲೋನಿಯಲ್ಲಿ ದುಷ್ಕರ್ಮಿಗಳು ಹಾಡಹಗಲೇ ಚಿನ್ನದ ವ್ಯಾಪಾರಿ ಮೇಲೆ ಚಾಕು ಇರಿದ ಘಟನೆ ನಡೆದಿದೆ. ಈ ವೇಳೆ ಬಾಬುರಾವ್ ಪತ್ನಿ ಕಮಲಬಾಯಿ(52) ಅವರಿಗೆ ಗಾಯವಾಗಿದೆ. ಗೃಹಪ್ರವೇಶಕ್ಕೆ ಆಹ್ವಾನ ಪತ್ರ ನೀಡುವ ನೆಪದಲ್ಲಿ ಬಂದ ಅಪರಿಚಿತರಿಬ್ಬರು. ಚಿನ್ನದ ವ್ಯಾಪಾರಿ ಬಾಬುರಾವ್ರನ್ನು ನಿಮ್ಮ ಪುತ್ರ ಹರೀಶ್ ಎಲ್ಲಿ ಎಂದು ಕೇಳಿದ್ದಾರೆ. ಬಾಬುರಾವ್ ಹರೀಶ್ ಮನೇಲಿ ಇಲ್ಲ ಎಂದಿದ್ದಾರೆ. ಈ ವೇಳೆ ಕುಪಿತಗೊಂಡ ಅಪರಿಚಿತರಿಬ್ಬರು ಬಾಬುರಾವ್ ಮತ್ತು ಪತ್ನಿ ಕಮಲಬಾಯಿಗೆ ಚಾಕುವಿನಿಂದ ಇರಿದು, ಬಳಿಕ ಅಲ್ಲಿಂದ ಪರಾರಿಯಾಗಿದ್ದಾರೆ. ಸ್ಥಳಕ್ಕೆ ವಿಜಯನಗರ ಠಾಣೆ ಪೋಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೆಂಗಳೂರು ಗ್ರಾಮಾಂತರ: ಜೈಲಿನಲ್ಲಿ ಶಿಕ್ಷಣ ಪಡೆದು ಲೇಖಕನಾಗಿದ್ದ ವ್ಯಕ್ತಿ. ಇಂದು(ಆ.17) ರಸ್ತೆ ಬದಿಯ ಹಳ್ಳಕ್ಕೆ ಕಾರು ಉರುಳಿ ಬಿದ್ದು ಅಪಘಾತದಲ್ಲಿ ಸಾವನ್ನಪ್ಪಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಲಿಂಗನಹಳ್ಳಿ ಬಳಿ ನಡೆದಿದೆ. ಯಲ್ಲಪ್ಪ ಮೃತ ವ್ಯಕ್ತಿ. ಇತ ದೊಡ್ಡಬಳ್ಳಾಪುರ ನಗರ ನಿವಾಸಿಯಾಗಿದ್ದು, ಚಿಕ್ಕ ವಯಸ್ಸಿನಲ್ಲಿ ಅಪರಾಧ ಮಾಡಿ ಜೈಲು ಸೇರಿದ್ದ. ಬಳಿಕ ಜೈಲಿನಿಂದ ಬಿಡುಗಡೆಯಾದ ನಂತರ ಜೈಲು ಜೀವಗಳು ಎಂಬ ಪುಸ್ತಕ ಬರೆದಿದ್ದ. ಜೊತೆಗೆ ಸಮಾಜ ಸೇವೆಯಲ್ಲೂ ತೊಡಗಿದ್ದ. ಆದ್ರೆ, ಮುಂಜಾನೆ ಕಾರಿನಲ್ಲಿ ಬರುತ್ತಿದ್ದ ವೇಳೆ ಅಪಘಾತವಾಗಿ ಸಾವನ್ನಪ್ಪಿದ್ದಾನೆ. ಈ ಕುರಿತು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕೋಲಾರ: ಅಪರಿಚಿತ ವ್ಯಕ್ತಿಯೋರ್ವ ವೃದ್ದನ ತಲೆಗೆ ಕಲ್ಲಿನಿಂದ ಹೊಡೆದು ಕೊಲೆ ಮಾಡಿದ ಕೋಲಾರ ಜಿಲ್ಲೆಯ ಕೆಜಿಎಫ್ನ ಅಂಬೇಡ್ಕರ್ ನಗರದಲ್ಲಿ ನಡೆದಿದೆ. ಮೇಜರ್(65) ಕೊಲೆಯಾದ ವೃದ್ದ. ಇತ ಹಣ್ಣಿನ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಈ ವೇಳೆ ಏಕಾಎಕಿ ಬಂದು, ತಲೆಗೆ ಕಲ್ಲಿನಿಂದ ಹೊಡೆದು ಭೀಕರವಾಗಿ ಕೊಲೆ ಮಾಡಿದ್ದಾನೆ. ಇನ್ನು ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಕುರಿತು ರಾಬರ್ಟ್ ಸನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:37 pm, Thu, 17 August 23