ಒಬ್ಬರ ಬೈಕ್ ದಾಖಲಾತಿ ಮತ್ತೊಬ್ಬರ ಹೆಸರಿಗೆ, ಬೈಕ್ ಕಳ್ಳತನ ಪ್ರಕರಣದಿಂದ ಬಯಲಿಗೆ ಬಿದ್ದ ದಾವಣಗೆರೆ RTO ಸಿಬ್ಬಂದಿ
ಬೈಕ್ ಕಳ್ಳತನ ಪ್ರಕರಣದಿಂದ ದಾವಣಗೆರೆ RTO ಕಚೇರಿ ಸಿಬ್ಬಂದಿಯ ಬ್ರಹ್ಮಾಂಡ ಭ್ರಷ್ಟಾಚಾರ ಬಯಲಾಗಿದೆ. ಒಬ್ಬರ ಬೈಕ್ ಗಳನ್ನ ಇನ್ನೊಬ್ಬರ ಹೆಸರಿಗೆ ಮಾಡಿಕೊಡುತ್ತಿದ್ದ ದಂಧೆ ಬಯಲಿಗೆ ಬಂದಿದೆ.
ದಾವಣಗೆರೆ, (ಆಗಸ್ಟ್, 02): ಜಿಲ್ಲೆಯ ಹೊನ್ನಾಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪತ್ತೆಯಾದ ಬೈಕ್(bike) ಕಳ್ಳತನ ಪ್ರಕರಣದಿಂದ ದಾವಣಗೆರೆ ಆರ್ಟಿಓ ಕಚೇರಿಯ ಬ್ರಹ್ಮಾಂಡ ಭ್ರಷ್ಟಾಚಾರ ಬಟಾಬಯಲಾಗಿದೆ. ಹೌದು…ನಕಲಿ ದಾಖಲೆ ಸೃಷ್ಟಿಸಿ ಒಬ್ಬರ ಬೈಕ್ ಗಳನ್ನ ಇನ್ನೊಬ್ಬರ ಹೆಸರಿಗೆ ಮಾಡಿಕೊಡುತ್ತಿದ್ದ ದಂಧೆ ಬಯಲಿಗೆ ಬಂದಿದೆ. ಬೈಕ್ ಕಳ್ಳತನ ಪ್ರಕರಣದಿಂದ ಈ ಜಾಲ ಪತ್ತೆಯಾಗಿದ್ದು ಈ ಸಂಬಂಧ ದಾವಣಗೆರೆ(ಧಅವಅನಅಗೆರೆ) ಆರ್ ಟಿ ಓ ಕಚೇರಿಯ ಸಿಬ್ಬಂದಿ ಪ್ರದೀಪ, ಜಗದೀಶ, ಶಶಿಕುಮಾರ ಹಾಗೂ ವಸಂತಕುಮಾರ ಎನ್ನುವವರನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: ಅಡಿಕೆ ತೋಟ ನಾಶ ಮಾಡಿದ ದುಷ್ಕರ್ಮಿಗಳು, ವೈಷಮ್ಯಕ್ಕೆ 10 ವರ್ಷದಿಂದ ಪೋಷಣೆ ಮಾಡಿದ ಮರಗಳು ಸರ್ವನಾಶ
ಮೂಲ ಮಾಲೀಕರ ಬದಲು ಬ್ರೋಕರ್ ಸಹಿ ಮಾಡಿಸಿ ಬೇರೆಯವರ ಹೆಸರಿಗೆ ಬೈಕ್ ದಾಖಲು ಮಾಡಿಕೊಟ್ಟಿದ್ದಾರೆ. ಆರ್ ಟಿ ಓ ಎಜೆಂಟ್ ರಸೂಲ್ ಎಂಬಾತನಿಂದ ಸಹಿ ಪಡೆದು ಬೈಕ್ ಗಳ ದಾಖಲಾತಿ ಬದಲಿಸಿದ್ದಾರೆ. ಹೊನ್ನಾಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪತ್ತೆಯಾದ ಬೈಕ್ ಕಳ್ಳತನ ಪ್ರಕರಣದಿಂದ ಸಿಬ್ಬಂದಿಯ ಕರ್ಮಕಾಂಡ ಬಯಲಿಗೆ ಬಂದಿದೆ. ಈ ಸಂಬಂಧ ಆರ್ ಟಿಓ ಕಚೇರಿಯ ಹತ್ತು ಜನ ಸಿಬ್ಬಂದಿ ವಿರುದ್ಧ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ ಮಾಹಿತಿ ನೀಡಿದ್ದಾರೆ.
ಇನ್ನಷ್ಟು ದಾವಣೆಗರೆ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ